Oct 13, 2019

ಒಂದು ಬೊಗಸೆ ಪ್ರೀತಿ - 35

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಆರೂವರೆಗೆದ್ದು ಮೊಬೈಲ್ ನೋಡಿದಾಗ ಸಾಗರನ ಮೆಸೇಜು ಕಂಡಿತು. ಐದೂವರೆಯಷ್ಟೊತ್ತಿಗೆ "ಗುಡ್ ಮಾರ್ನಿಂಗ್. ತಲುಪಿದೆ" ಅಂತ ಮೆಸೇಜು ಮಾಡಿದ್ದ. ಪ್ರತಿಯಾಗಿ 'ಗುಡ್ ಮಾರ್ನಿಂಗ್' ಅಂತ ಕಳಿಸಿ ತಿಂಡಿ ಮಾಡಲು ಮೇಲೆದ್ದೆ. ರಾಜೀವ ತಿಂಡಿ ತಿಂದುಕೊಂಡು ಏಳೂಕಾಲಷ್ಟೊತ್ತಿಗೆ ಹೊರಟರು. ಆಗಲೇ ಫೋನ್ ಮಾಡುವ ಸಾಗರನಿಗೆ ಎಂದುಕೊಂಡವಳಿಗೆ ನಾನಿನ್ನೂ ಸ್ನಾನ ಕೂಡ ಮಾಡಿಲ್ಲ ಎನ್ನುವುದು ನೆನಪಾಯಿತು. ದಡಬಡಾಯಿಸಿ ಸ್ನಾನ ಮಾಡಿಕೊಂಡು ಹೊರಬಂದು ಸಾಗರನಿಗೆ ಫೋನ್ ಮಾಡಿದೆ. ಮೊದಲ ರಿಂಗಿಗೇ ಫೋನೆತ್ತಿಕೊಂಡ. 

'ಏನ್ ಮಾಡ್ತಿದ್ಯೋ'

“ಏನಿಲ್ಲ. ನಿನ್ನ ಫೋನಿಗೇ ಕಾಯ್ತಿದ್ದೆ"

'ಅಲ್ಲ ಫ್ರೆಂಡ್ ಮುಂದೇನೇ ಮಾತಾಡಿದ್ರೆ ಯಾರಂತ ಕೇಳೋಲ್ವ'

“ಹ ಹ. ರೂಮಿನೊರಗಿದ್ದೀನಿ ಹೇಳು"

'ಹೇಳೋಕೇನಿದೆಯೋ ಗೂಬೆ. ಒಂಟಿಕೊಪ್ಪಲು ದೇವಸ್ಥಾನದ ಹತ್ತಿರ ಬಂದು ಫೋನ್ ಮಾಡು. ಗಾಡೀಲ್ ಬರ್ತೀಯಾ ಹೆಂಗೆ?'

“ಹು ಕಣೆ. ಬೈಕಿದೆ ಫ್ರೆಂಡ್ದು"

'ಸರಿ ಬಂದ್ ಫೋನ್ ಮಾಡು. ದೇವಸ್ಥಾನದಿಂದ ದಾರಿ ಹೇಳ್ತೀನಿ'

ಫೋನಿಟ್ಟು ಕನ್ನಡಿಯ ಎದುರಿಗೆ ನಿಂತೆ. ಸುತ್ತಿಕೊಂಡಿದ್ದ ಟವಲನ್ನು ತೆಗೆದುಹಾಕಿದೆ. ಅಲ್ಲಲ್ಲಿ ಇನ್ನೂ ನೀರಿತ್ತು, ಬಿಸಿಯಿತ್ತು. ಚೆಂದ ಒರೆಸಿಕೊಂಡು ಹಾಗೇ ದೇಹವನ್ನು ನೋಡ್ತಾ ನಿಂತುಕೊಂಡೆ. ಅಯ್ಯಪ್ಪ ಎಷ್ಟು ದೊಡ್ಡದಿದೆ ನನ್ನ ಮೊಲೆಗಳು ಎಂದು ನನಗೇ ಅನ್ನಿಸಿತು. ಎದುರು ಹೋಗುವ ಗಂಡಸರೆಲ್ಲ ಒಮ್ಮೆ ಅದರತ್ತ ನೋಡದೇ ಇರೋದಿಲ್ಲ. ಎಷ್ಟು ಮುಜುಗರವಾಗ್ತದೆ ಆಗ. ಇಷ್ಟವಾದವರು ನೋಡ್ದಾಗ ಖುಷಿಯಾಗೋದೂ ಹೌದು. ಇವತ್ತಿಗೆ ಈ ಬೆತ್ತಲನ್ನು ನೋಡಿದವರ ಸಂಖೈ ಮೂರು ಎಂಬ ಯೋಚನೆ ಬಂದು ಬೆಚ್ಚಿ ಬಿದ್ದೆ. ಇದೆಂತ ಯೋಚನೆ? ಪುರುಷೋತ್ತಮನ ಎದುರಿಗೆ ಯಾವತ್ತಿಗೂ ಪೂರ್ತಿ ಬೆತ್ತಲಾಗಿರಲಿಲ್ಲ. ಅವನಾಗೇ ಕೇಳಿಕೊಂಡಿದ್ದಾಗಲೂ ಆಗಿರಲಿಲ್ಲ. 'ಹೆಂಗಿದ್ರೂ ಸೆಕ್ಸ್ ಮಾಡಲ್ಲವಲ್ಲ ಮತ್ಯಾಕೆ ಪೂರ್ತಿ ಬೆತ್ತಲಾಗೋದು ಅನ್ನುತ್ತಿದ್ದೆ' ಸುಮ್ಮನಾಗುತ್ತಿದ್ದ. ರಾಜೀವನೊಡನೆ ಶುರುವಿನಲ್ಲಿದ್ದಷ್ಟು ದೇಹದುಡುಕಾಟ ಈಗಿಲ್ಲ. ಮದುವೆಯಾಗಿ ಸುಮಾರು ವರುಷಗಳು ಉರುಳಿ ಹೋದ ಮೇಲೆ ಎಲ್ಲರ ಸಂಸಾರದಲ್ಲೂ ಹೀಗೆಯೋ ಏನೋ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ದಿನಾ ನೋಡ್ತಿದ್ದಾಗ ದೇಹದ ಕುರಿತ ಆಸಕ್ತಿ ಹೋಗಿಬಿಡ್ತದೇನೋ. ನಂಗೇನೋ ರಾಜೀವನ ಕುರಿತು ಆಸಕ್ತಿ ಕುಂದಿಲ್ಲ ಆದರೆ ಅವರಿಗೇ ಯಾಕೋ ನನ್ನ ಮೇಲೆ ಹೆಚ್ಚಿನ ಆಸಕ್ತಿಯಿಲ್ಲ ಇತ್ತೀಚೆಗೆ. ಹೊಟ್ಟೆ ಚೂರ್ ಜಾಸ್ತೀನೇ ಆಚೆಗೆ ಇಣುಕ್ತಿದೆ ಅಲ್ವ? ಇದೂ ಕೂಡ ಅವರ ನಿರಾಸಕ್ತಿಗೆ ಕಾರಣವಿರಬಹುದು. ಅವರಿಗೂ ಇದೆಯಲ್ಲ, ಇದಕ್ಕಿಂತ ಜಾಸ್ತಿ ಹೊಟ್ಟೆ ಎಂದು ನಗು ಬಂತು. ಅರೆರೆ....ಇದೇನು ಮಾಡ್ತಿದ್ದೀನಿ ನಾನು. ಇನ್ನೇನ್ ಹತ್ತು ನಿಮಿಷಕ್ಕೆಲ್ಲ ಸಾಗರ ದೇವಸ್ಥಾನದ ಬಳಿಗೆ ಬಂದುಬಿಡುತ್ತಾನೆ. ಅಲ್ಲಿಂದ ನಮ್ಮ ಮನೆಗೆ ಇನ್ನೊಂದತ್ತು ನಿಮಿಷ ಅಷ್ಟೇ. ಮೊದಲು ರೆಡಿಯಾಗಬೇಕು ಎಂದುಕೊಳ್ಳುತ್ತಾ ಕಪಾಟಿನ ಬಾಗಿಲು ತೆಗೆದೆ. ಯಾವ ಸೀರೆ ಎಂದು ಹುಡುಕುತ್ತಿದ್ದೆ. ಕೆಂಪು ಬಣ್ಣದ ವಿವಿಧ ವರ್ಣಗಳ ಮೂರು ಸೀರೆಯಿತ್ತು. ಒಂದು ರಾಜೀವ ಮದುವೆಯಾದ ಹೊಸತರಲ್ಲಿ ಕೊಡಿಸಿದ ರೇಷ್ಮೆ ಸೀರೆ. ರೇಷ್ಮೆ ಸೀರೆಯ ನೆರಿಗೆಯನ್ನಿಡಿದು ಉಡುವಷ್ಟು ಪುರುಸೊತ್ತಿಲ್ಲ ಈಗ. ಇನ್ನೆರಡು ಅಮ್ಮ ಕೊಡಿಸಿದ್ದ ಫ್ಯಾನ್ಸಿ ಸೀರೆಗಳು. ಒಂದು ಕೆಂಪು ಗುಲಾಬಿ ಬಣ್ಣದ್ದು, ಇನ್ನೊಂದು ರಕ್ತ ಕೆಂಪು ಬಣ್ಣದ್ದು. ಕೆಂಪು ಗುಲಾಬಿ ಬಣ್ಣದ್ದನ್ನೇ ಕೈಗೆತ್ತಿಕೊಂಡೆ. ಹಾಟ್ ಹಾಟಾಗಿ ಕಾಣಿಸ್ಲಾ ಎಂದೊಂದು ನಗು ಮಿಂಚಿ ಮರೆಯಾಯಿತು. ಬೇಡ ಇದು ಮೊದಲ ಭೇಟಿ ಅಲ್ವ ಻ಅಂತಂದುಕೊಳ್ಳುತ್ತಾ ಸೊಂಟದ ಚೂರೂ ಕಾಣದಂತೆ ಸೀರೆ ಧರಿಸಿದೆ. ನಂಗೇ ನನ್ನ ಮೇಲೆ ಮುದ್ದಾಗುವಷ್ಟು ಚೆಂದ ಕಾಣ್ತಿದ್ದೆ. ತುಟಿಗೆ ತೆಳುವಾಗೊಂದು ಲಿಪ್ ಬಾಮಿನ ಲೇಪ ಹಾಕಿಕೊಂಡು ಮುಖಕ್ಕೊಂದಷ್ಟು ಕ್ರೀಮು ಹಚ್ಚಿಕೊಂಡು ಕಣ್ಣಿಗೆ ಚೂರೇ ಚೂರು ಕಂಡೂ ಕಾಣದಂತೆ ಕಾಡಿಗೆ ಹಚ್ಚಿಕೊಳ್ಳುವಾಗ ಫೋನು ರಿಂಗಾಯಿತು. ಅರೆ ಇಷ್ಟು ಬೇಗ ಬಂದುಬಿಟ್ನ ಎಂದುಕೊಳ್ಳುತ್ತಾ ಕರೆ ಸ್ವೀಕರಿಸಿದೆ. "ದೇವಸ್ಥಾನದ ಹತ್ರ ಇದ್ದೀನೆ. ಇಲ್ಲಿಂದ ಎಲ್ಲಿಗೆ ಬರ್ಲಿ?”

'ಕಾಳಿದಾಸ ರೋಡ್ ಕಡೆ ಒಂದರ್ಧ ಕಿಲೋಮೀಟ್ರು ಬಾ. ಗಾಡಿ ಓಡಿಸ್ತಾ ಇರು ಹಂಗೇ ಅಡ್ರೆಸ್ ಹೇಳ್ತೀನಿ'

“ಸರಿ"

'ಒಂದರ್ಧ ಕಿಲೋಮೀಟ್ರಷ್ಟು ಬಂದ್ರೆ ಎಡಗಡೆಗೆ ತೇಜು ಮೆಸ್ ಸಿಗ್ತದೆ'

“ಹು. ಗೊತ್ತು ತೇಜು ಮೆಸ್ಸು. ಸಿಕ್ತು"

'ಅದಾದ ಮೇಲೆ ಫಸ್ಟ್ ಅಲ್ಲ ಸೆಕೆಂಡ್ ಕ್ರಾಸಲ್ಲಿ ಎಡಕ್ಕೆ ತಿರುಕ್ಕೊ' ಟೆನ್ಶನ್ ಆಗಬೇಡ ಅಂತ ಅವನಿಗೆ ನಿನ್ನೆಯಿಂದ ಉಪದೇಶ ಕೊಟ್ಟವಳಿಗೇ ಈಗ್ಯಾಕೋ ಟೆನ್ಶನ್ ಆಗ್ತಿತ್ತು. ಎದೆ ಬಡಿತ ಜೋರಾಗಿತ್ತು.

“ತಿರುಗ್ದೆ"

'ಸೀದಾ ಬರ್ತಾಯಿರು. ಮುಕ್ಕಾಲು ಕಿಲೋಮೀಟ್ರು ಒಂದು ಕಿಲೋಮೀಟ್ರು ಬರ್ತಿದ್ದ ಹಾಗೆ ಟಾರ್ ರೋಡ್ ಮುಗಿದು ಹೊಸದಾಗಿ ಜಲ್ಲಿ ಹಾಕಿರೋ ರಸ್ತೆ ಸಿಗ್ತದೆ' ಅವನು ಹೇಗೆ ಮಾತನಾಡಿಸಬಹುದು? ಮೊದಲ ಮಾತೇನಿರಬಹುದು. ಫೋನಿನಲ್ಲಿ ಮುಖ ಕಾಣದೆ ಮಾತಾಡೋಕು, ದನಿಗಳ ಏರಿಳತವನ್ನೂ ಅರಿಯದೆ ಮೆಸೇಜು ಮಾಡೋದಿಕ್ಕೂ ಎದುರಾ ಬದುರು ಸಿಕ್ಕಾಗ ವರ್ತಿಸೋದಕ್ಕೂ ವ್ಯತ್ಯಾಸವಿರ್ತದಾ? 

“ಸಿಕ್ತು ಜಲ್ಲಿ ರೋಡು"

'ಹು. ಆ ರೋಡಲ್ ಹಂಗೇ ಮುಂದೆ ಬಂದ್ರೆ ಎಡಗಡೆಗೆ ಎಸ್.ಕೆ. ಟೈಲರ್ಸ್ ಅಂತ ಒಂದ್ ಅಂಗಡಿ ಬಲಗಡೆಗೆ ಇದೆ, ಕಾರ್ನರಲ್ಲಿ. ಆ ಅಂಗಡಿ ಹತ್ರ ಬಲಕ್ಕೆ ತಿರುಗು' ಎದುರಾ ಎದುರು ಸಿಕ್ಕಾಗ ಬಹುವಚನ ಉಪಯೋಗಿಸಿಬಿಡ್ತಾನ ಇವನು? ಹಾಲಲ್ ಕೂತು ಒಂದ್ ಕಾಫಿ ಕುಡಿದು ಹೊರಟುಬಿಡ್ತಾನ? ಎಂತೆಂತದೋ ಯೋಚನೆಗಳು.

“ತಿರುಗಿದೆ"

'ಮುಂದೆ ಬಂದು ಕರೆಕ್ಟಾಗಿ ಮೂರನೇ ಲೆಫ್ಟು. ಲೆಫ್ಟು ತಿರುಗಿದ ಮೇಲೆ ಬಲಭಾಗದಲ್ಲಿ ಮೂರನೇ ಮನೆ. ಸಿಂಗಲ್ ಹೌಸು. ತಿಳಿ ಹಸಿರು ಬಣ್ಣದ್ದು. ಮನೆ ಮುಂದೆ ನನ್ನ ಕೆಂಪು ಬಣ್ಣದ ಕಾರಿದೆ ನೋಡು' 

“ಹು. ಸಿಕ್ತು"

'ಸರಿ ಬಾ' ಫೋನ್ ಕಟ್ ಮಾಡಿ ಅಷ್ಟೊತ್ತಿನ ಯೋಚನೆಗಳನ್ನೆಲ್ಲ ಬದಿಗೆ ಸರಿಸಿ ಮತ್ತೊಮ್ಮೆ ಕನ್ನಡಿ ನೋಡಿಕೊಂಡೆ. ಅಯ್ಯೋ ಧರಣಿ, ಎಷ್ಟ್ ಚೆಂದ ಕಾಣ್ತಿದ್ದೀಯೆ...... ನನಗೆ ನಾನೇ ನೆಟಿಕೆ ಮುರಿದುಕೊಂಡೆ. ಗೇಟು ಸದ್ದಾಯಿತು. ಮತ್ತೊಂದು ಸಲ ಸೆರಗು ನೆರಿಗೆ ಸರಿ ಇದೆಯಾ ಎಂದು ನೋಡಿಕೊಂಡು ಹಾಲಿಗೆ ಬರುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಅವನ ಮನದಲ್ಲಿ ಎಷ್ಟೆಲ್ಲ ಯೋಚನೆಗಳು ತುಂಬಿರಬಹುದು ಎಂದುಕೊಳ್ಳುತ್ತಾ ಬಾಗಿಲು ತೆಗೆದೆ. 
* * *
ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.  ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಕಾದಂಬರಿಯ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ. 

ಅಲ್ಲಿ ನಿಂತಿದ್ದ ನನ್ನ ಸಾಗರ. ಮುಖದಲ್ಲೊಂದು ಮುಗುಳ್ನಗೆಯನ್ನೊತ್ತುಕೊಂಡು. ಇದೇನು ಕನಸೋ ನನಸೋ ಅರಿಯದವಳಿಗೆ ಮಾತು ಮೂಡಲಿಲ್ಲ. ಮುಖದ ಮೇಲೆ ಇಷ್ಟಗಲ ನಗು ಮೂಡಿರಬೇಕು.

“ಈ ಸ್ಮೈಲ್ನಾ ಇಷ್ಟು ಹತ್ತಿರದಿಂದ ನೋಡೋಕೆ ಇಷ್ಟು ವರ್ಷ ಬೇಕಾಯ್ತು ನೋಡೆ" ಅಬ್ಬಾ ಸಾಗರನ ಮೊದಲ ಮಾತುಗಳನ್ನು ಕೇಳಿ ಅವನ ಮೇಲಿದ್ದ ಪ್ರೀತಿ ನೂರ್ಮಡಿಯಾಯಿತು. 

'ಥ್ಯಾಂಕ್ಸ್ ಕಣೋ. ಬಾ ಒಳಗೆ' ಎಂದಷ್ಟೆ ಹೇಳಲು ನನಗೆ ಸಾಧ್ಯವಾಗಿದ್ದು. 

ಅವನು ದೊಡ್ಡ ಸೋಫಾದ ಒಂದು ಬದಿಯಲ್ಲಿ ಕುಳಿತ, ಮತ್ತೊಂದು ಬದಿಯಲ್ಲಿ ನಾನು. ಅಷ್ಟ್ ದೂರಕ್ಕೂ ಸಿಗರೇಟಿನ ವಾಸನೆ ರಾಚುತ್ತಿತ್ತು. 

'ಎಷ್ಟ್ ಸಿಗರೇಟ್ ಸೇದಿದ್ಯೋ'

"ಬೆಳಿಗ್ಗೆಯಿಂದ ಒಂದ್ಮೂರು"

'ಕಡಿಮೆ ಮಾಡೋ'

"ಹು. ಮಾಡುವ"

'ಮತ್ತೆ ಇನ್ನೇನಪ್ಪ ಸಮಾಚಾರ'

"ಇನ್ನೇನಿದೆ. ಎಲ್ಲಾ ಸಮಾಚಾರಾನೂ ಮೆಸೇಜು ಫೋನಲ್ಲೇ ಮುಗಿಸಿಬಿಟ್ಟಿದ್ದೀವಲ್ಲ"

'ಅಲ್ವ' ಎಂದ್ಹೇಳಿ ನಕ್ಕೆ. ಮೊದಲ ಭೇಟಿಯ ಮೊದಲ ಕ್ಷಣಗಳು. ಇಬ್ಬರಲ್ಲೂ ಮಾತುಗಳು ಸಲೀಸಾಗಿ ಮೂಡಿ ಬರುತ್ತಿರಲಿಲ್ಲ. ಇನ್ನೊಂದಷ್ಟು ಹೊತ್ತು ಕಳೀಬೇಕು.

'ನಿನ್ನ ಫ್ರೆಂಡಿಗೆ ಎಲ್ಲಿಗೋಗ್ತಿದ್ದೀನಿ ಅಂತ ಹೇಳಿ ಬಂದೆ'

“ನಮ್ ನೆಂಟ್ರು ಮನೆಗೆ ಅಂತೇಳಿದೆ"

'ಓಹೋ ನೆಂಟ್ರು ಹುಡುಗೀನಾ ನಾನು' ಹುಸಿಕೋಪದಿಂದ ಕೇಳಿದೆ.

“ಮ್. ಹತ್ತಿರದ ನೆಂಟ್ರಾಗಿದ್ರೆ ಚೆನ್ನಾಗಿತ್ತು" ಅವನ ಭಾರದ ದನಿ ಕೇಳಿದವಳಿಗೆ ಕಣ್ಣಲ್ಲಿ ನೀರು ತುಂಬುವುದೊಂದು ಬಾಕಿ. ಮೇಕಪ್ಪು ಕರಗಿ ಹೋಗ್ತದೆ ಅನ್ನೋ ಎಚ್ಚರದಿಂದ ತಡೆದುಕೊಂಡೆ.

'ತಿಂಡಿ ತಿಂದ್ಯೇನೋ' ತಿಂದ್ಕೊಂಡ್ ಬಂದೆ ಅಂತ ತಲೆಯಾಡಿಸಿದ. 

'ಕಾಫಿ ಕುಡೀತಿಯ ಟೀನಾ'

“ಯಾವ್ದಾದ್ರೂ ಆಗ್ತದೆ"

'ನಂಗ್ ಟೀ ಚೆನ್ನಾಗಿ ಮಾಡೋಕೆ ಬರಲ್ವೋ'

“ಮತ್ತಿನ್ಯಾಕೆ ಕೇಳ್ದೆ! ಕಾಫೀನೇ ಮಾಡು. ಸ್ವಲ್ಪ ಸಾಕು. ಯಾಕೋ ಚೂರು ಗ್ಯಾಸ್ಟ್ರೈಟೀಸು"

'ಸಿಗರೇಟ್ ಮೇಲೆ ಸಿಗರೇಟ್ ಸೇದಿದ್ರೆ ಇನ್ನೇನಾಗ್ತದೆ ಹೇಳು' ಎಂದು ನಗುತ್ತಾ ಅಡುಗೆ ಮನೆಗೆ ಹೋದೆ. ಫ್ರಿಜ್ಜಿನಲ್ಲಿದ್ದ ಹಾಲು ಹೊರತೆಗೆದು ಕಾಯಿಸಲಿಟ್ಟೆ. ಹಾಲಿನ ಪಾತ್ರೆಯ ಹೊರಮೈಯಲ್ಲಿದ್ದ ತೇವವಾರುತ್ತಿತ್ತು. ಇಬ್ಬರಿಗೂ ಮಾತಿನ ಕೊರತೆ ಕಾಣ್ತಿದೆಯಲ್ಲ, ಮೊದಲ ಭೇಟಿಯಲ್ವ ಅದಕ್ಕಿರಬಹುದು. 'ಬಾರೋ ಇಲ್ಲೇ. ಅಲ್ಲೇನ್ ಮಾಡ್ತಿದ್ದಿ' ಎಂದೆ. ಹೇಳಿ ಮುಗಿದಿರಲಿಲ್ಲ ಅಷ್ಟೊತ್ತಿಗೆ ಅಡುಗೆಮನೆಯೊಳಗೆ ಕಾಲಿರಿಸಿದ. 

'ನೋಡಪ್ಪ ಇದೇ ನಮ್ ಮನೆ. ಎಲ್ಲಾ ಪುಟ್ಟ ಪುಟ್ಟದು' ಎಂದಿದ್ದಕ್ಕೊಮ್ಮೆ ಮೃದುವಾಗಿ ನಕ್ಕು ಬಾಗಿಲು ಮತ್ತು ಫ್ರಿಜ್ಜಿನ ನಡುವಿದ್ದ ಗೋಡೆಗೆ ಒರಗಿ ಕೈಕಟ್ಟಿಕೊಂಡು ವಿಧೇಯ ವಿದ್ಯಾರ್ಥಿಯಂತೆ ನಿಂತ. ಇದ್ದಿದ್ದೇ ಒಂದೂವರೆ ಲೋಟದಷ್ಟು ಹಾಲು ಬೇಗನೇ ಕಾದಿತ್ತು. ಕಾಫಿ ಪುಡಿ ಸಕ್ಕರೆ ಹಾಕಿ ಅವನಿಗೊಂದು ಲೋಟ ನಾನರ್ಧ ತೆಗೆದುಕೊಂಡೆ. 'ನಡಿ ಹೋಗುವ ಹಾಲಿಗೆ' ಎಂದೆ. 

“ಬೇಡ. ಇಲ್ಲೇ ಕುಡಿಯುವ. ಸೈಡ್ ಆ್ಯಂಗಲ್ಲಿಂದ ಚೆನ್ನಾಗಿ ಕಾಣ್ತಿದ್ದಿ" ಎಂದ. 

'ಯಾಕೆ ಎದ್ರುಗಡೆಯಿಂದ ಕೆಟ್ಟದಾಗಿ ಕಾಣ್ತೀನಾ?' ಹುಸಿಮುನಿಸು ಪ್ರದರ್ಶಿಸುತ್ತಾ ಕಾಫಿ ಕುಡಿದು ಮುಗಿಸಿ ಅವನ ಎದುರಿಗೆ ನಿಂತೆ. ಅರ್ಧ ಅಡಿ ಅಂತರವಿತ್ತು. ಎಡಗೈಯಲ್ಲಿ ಕಾಫಿ ಲೋಟವಿಟ್ಟುಕೊಂಡಿದ್ದ. ಗಷ್ಟವಷ್ಟೇ ಮಿಕ್ಕಿತ್ತು. ಅವನ ಕೈಯಿಂದ ಲೋಟ ತೆಗೆದುಕೊಂಡು ಫ್ರಿಜ್ಜಿನ ಮೇಲಿಟ್ಟು ಅವನೆರಡೂ ಕೈಗಳನ್ನು ಹಿಡಿದುಕೊಂಡೆ. ಇಬ್ಬರ ಬೆರಳುಗಳೂ ಒಂದಷ್ಟು ಸಮಯ ಮಾತನಾಡಿಕೊಂಡವು. ನಿಧಾನಕ್ಕೆ ನಮ್ಮಿಬ್ಬರ ನಡುವಿನ ಅಂತರ ಕುಗ್ಗುತ್ತಿತ್ತು, ಅವನೇ ನನ್ನನ್ನು ಅವನೆಡೆಗೆ ಎಳೆದುಕೊಳ್ಳುತ್ತಿದ್ದ, ಅರಿವಿಗೇ ಬರದಂತೆ ನಿಧಾನಗತಿಯಲ್ಲಿ ಎಳೆದುಕೊಳ್ಳುತ್ತಿದ್ದ. ಎಷ್ಟು ಚೆಂದ ಇವನು ಎಂದುಕೊಳ್ಳುತ್ತಿದ್ದಂತೆಯೇ ನನ್ನ ಹಣೆಯ ಮೇಲೆ ಅವನ ತುಟಿಯಿತ್ತು. ಗಟ್ಟಿಯಾಗಿ ತಬ್ಬಿಕೊಂಡೆ. ಹಿಡಿತ ಬಿಗಿಯಾಗುತ್ತಲೇ. 

“ಅಯ್ಯೋ ನಿನ್ನ. ಇಲ್ಲೇ ನನ್ನ ಉಸಿರುಗಟ್ಟಿಸಿ ಸಾಯಿಸ......” ಅವನ ಮಾತು ಮುಗಿಯುವ ಮುನ್ನ ನನ್ನ ತುಟಿಗಳಿಂದ ಻ಅವನ ಬಾಯಿ ಮುಚ್ಚಿದೆ. ಎರಡು ನಿಮಿಷಗಳ ಸಿಹಿಚುಂಬನ. ಅವನೆದೆ ಬಡಿತ ಜೋರಾಗಿತ್ತು. ಎದೆಯ ಮೇಲೊಂದು ಮುತ್ತು ಕೊಡುತ್ತಾ 'ನಿಂಗ್ ಇಷ್ಟವಿಲ್ಲ ಅಂದ್ರೆ ಬೇಡ್ವೋ' ಎಂದೆ. 

“ನಾನೆಲ್ಲಿ ಬೇಡ ಅಂದ್ನೆ ಧರು" ಎಂದ್ಹೇಳುತ್ತಾ ಗಟ್ಟಿ ತಬ್ಬಿಕೊಂಡ. ಒಬ್ಬರನ್ನೊಬ್ಬರು ತಬ್ಬಿಕೊಂಡೇ ಹಾಲಿಗೆ ಬಂದು ಸೋಫಾದ ಮೇಲೆ ಕುಳಿತೆವು. 

“ನಾವ್ ತಪ್ ಮಾಡ್ತಿದ್ದೀವೇನೆ" ಕತ್ತಿನಲ್ಲಿದ್ದ ನನ್ನ ಸರವನ್ನು ಹಿಡಿದು ಆಟವಾಡುತ್ತಾ ಕೇಳಿದ. ಬೆಳಿಗ್ಗೆಯೇ ತಾಳಿಯನ್ನು ತೆಗೆದಿಟ್ಟು ಕಳೆದ ವರ್ಷ ತೆಗೆದುಕೊಂಡಿದ್ದ ಈ ಪುಟ್ಟ ಸರವನ್ನು ಹಾಕಿಕೊಂಡಿದ್ದೆ. ತಾಳಿ ನೋಡಿ ಸಾಗರ ಡಿಪ್ರೆಸ್ ಆಗೋದು ನನಗಿಷ್ಟವಿರಲಿಲ್ಲ. 

'ಸೀರಿಯಸ್ಲಿ ನನಗ್ ಗೊತ್ತಿಲ್ವೋ' ಇದು ತಪ್ಪಾ ಸರಿಯಾ ಎಂದು ಯೋಚನೆಯೂ ನನ್ನಲ್ಲಿ ಸುಳಿದಿರಲಿಲ್ಲ. 'ಕೆಲವೊಮ್ಮೆ ಅನ್ನಿಸ್ತದೆ ನಂಗ್ಯಾಕೆ ಸಾಗರನಂತೆ ತಪ್ಪು ಸರಿಯ ಗೊಂದಲಗಳು ಕಾಡ್ತಿಲ್ಲ ಅಂತ. ಬೇಸಿಕಲಿ ನಾ ಒಳ್ಳೆ ಹುಡುಗಿ ಅಲ್ಲಾಂತ ಕಾಣ್ತದೆ ಅದಿಕ್ಕೆ ಈ ರೀತಿಯ ಗೊಂದಲಗಳು ಕಾಡೋದಿಲ್ವೋ ಏನೋ' ಎಂದಾಗ ಅವನ ಮುಖದಲ್ಲಿ ಮೂಡಿದ ಬೇಸರದ ಭಾವ ಻ಅವನ ಕೆನ್ನೆಗೊಂದು ಮುತ್ತು ಕೊಡುವಂತೆ ಮಾಡಿತು.

“ಹಂಗೆಲ್ಲ ಹೇಳಬೇಡ್ವೇ. ನೀ ಯಾವುದೇ ಗೊಂದಲಗಳಿಲ್ಲದೆ ಮುಂದುವರೀತಿದ್ದಿ, ನಾ ಎಲ್ಲಾ ರೀತಿಯ ಗೊಂದಲಗಳನ್ನಿಟ್ಟುಕೊಂಡು ಇದ್ ತಪ್ಪು ಇದ್ ತಪ್ಪು...ಸಾಗರ ನೀ ತಪ್ಪು ಮಾಡ್ತಿದ್ದಿ ಅಂತ ಸಾವಿರ ಸಲ ಹೇಳ್ಕೊಂಡು ಮುಂದುವರೀತಿದ್ದೀನಿ. ನೀನೇ ಸರಿಯಾಗಿದ್ದಿ" ಎಂದವನ ಕೆನ್ನೆಗೆ ಮತ್ತೊಂದು ಮುತ್ತು ಕೊಟ್ಟೆ. ನನ್ನ ಸೊಂಟದ ಸುತ್ತಲಿದ್ದ ಅವನ ಕೈಗಳು ನಿಧಾನಕ್ಕೆ ನನ್ನೆದೆಯ ಭಾಗದ ಮೇಲೆ ಸರಿದಾಡಿತು. “ಇದು ತುಂಬ ದೊಡ್ಡದು ಅಂತಿದ್ದೆ. ಹಂಗನ್ನಿಸುತ್ತಿಲ್ಲ" ನಗು ಮೂಡಿತು. 

'ಅದು ನಾವು ಹೆಂಗ್ ಬಟ್ಟೆ ಹಾಕೊಳ್ತೀವಿ ಅನ್ನೋದರ ಮೇಲೆ ಹೋಗ್ತದಪ್ಪ. ಚಿಕ್ಕದು ದೊಡ್ದಾಗ್ ಕಾಣ್ವಂಗು ರೆಡಿಯಾಗ್ಬೋದು ದೊಡ್ದು ಚಿಕ್ದಾಗ್ ಕಾಣ್ವಂಗು ತಯಾರಾಗ್ಬೋದು'

“ಓಹೋ! ಹಂಗ. ಎಲ್ಲಿ ನೋಡುವ" ಎಂದ್ಹೇಳುತ್ತಾ ಸೀರೆಯ ಸೆರಗನ್ನು ಬದಿಗೆ ಸರಿಸಲು ಪ್ರಯತ್ನಿಸಿದ. ಸೀರೆಗೂ ಬ್ಲೌಸಿಗೂ ಪಿನ್ನಿದ್ದುದರಿಂದ ಪೂರ್ತಿ ಸರಿಸಲಾಗಲಿಲ್ಲ. ಅವನ ಒದ್ದಾಟಕ್ಕೆ ನಗುತ್ತಾ ಪಿನ್ನು ತೆಗೆದೆ. ಸೆರಗು ಜಾರಿ ತೊಡೆಯ ಮೇಲೆ ಬಿತ್ತು. ಬಿಗಿಯಾದ ಬ್ರಾ ತೊಟ್ಟು ಅದರ ಮೇಲೆ ಬ್ಲೌಸ್ ಹಾಕಿಕೊಂಡಿದ್ದೆ. ಬ್ಲೌಸ್ ಮುಕ್ತವಾಗುತ್ತಿದ್ದಂತೆ ಕಾಣಿಸಿದ ಸೀಳು ಸಾಗರನಲ್ಲಿ ಹುಚ್ಚೆಬ್ಬಿಸಿತು. “ವಾವ್" ಎನ್ನುತ್ತಾ ಸೀಳಿಗೊಂದು ಮುತ್ತನಿಟ್ಟ. ಅವನ ಬಿಸಿಯುಸಿರು ತಾಗಿ ಅವನೆಬ್ಬಿಸಿದ ಹುಚ್ಚು ನನ್ನಲ್ಲೂ ಹರಡಿಕೊಂಡಿತು. ಬ್ಲೌಸಿನ ಗುಂಡಿಗಾತ ಕೈ ಹಾಕುತ್ತಿರುವಾಗ 'ನಡಿಯೋ ರೂಮಿಗೋಗೋಣ' ಎಂದೆ. ಎದ್ದುನಿಂತಾಗ ಕೆಳಗೆ ಬಿದ್ದ ಸೀರೆಯನ್ನು ಮೇಲೆತ್ತಿಕೊಂಡು ಎದೆಯ ಮೇಲೆ ಮುಚ್ಚಿಕೊಂಡೆ, ನಾಚಿಕೆಯಿಂದ. 

“ಇದ್ಯಾಕೆ ನಾಚ್ಕೆ" ಅಂದವನಿಗೆ 'ಇರಲ್ವಾ ಮತ್ತೆ. ಮೊದಲನೇ ಸಲ...' ಎಂದು ನಗುತ್ತಾ ರೂಮಿನೊಳಗೋದೆ. ಹಿಂದಿನಿಂದ ಬಂದು ಅಪ್ಪಿಕೊಂಡವನಿಗೆ ನನ್ನೆದೆಯ ಮೇಲೇ ಆಸೆ. ನೋವಾಗುವಷ್ಟು ಅವುಗಳನ್ನು ಮರ್ಧಿಸಿದ. ಆ ನೋವು ಅಹಿತಕರವಾಗೇನಿರಲಿಲ್ಲ. ಇಬ್ಬರಲ್ಲೂ ಆತುರವಿರಲಿಲ್ಲ. ನಿಧಾನಕ್ಕೆ ಇವತ್ತೇ ಪ್ರಪಂಚದ ಕೊನೆಯ ದಿನವೇನೋ ಎನ್ನುವಂತೆ ಒಬ್ಬರನ್ನೊಬ್ಬರ ದೇಹವನ್ನು ಆಸ್ವಾದಿಸಿಕೊಂಡು ಆರಾಧಿಸಿಕೊಂಡು ಬೆತ್ತಲಾದೆವು. ಅವನದು ಗಡುಸಾಗಿತ್ತು. ಮೆಲ್ಲನೆ ಕೈಯಲ್ಲಿ ಹಿಡಿದುಕೊಂಡೆ. “ದೊಡ್ಡದಾಗಿದೆಯಾ?”. ಈ ಗಂಡುಸ್ರದ್ದು ಇದೊಂದು ಗೋಳಪ್ಪ. ದೊಡ್ಡದಿದೆಯಾ ಉದ್ದವಿದೆಯಾ ಅನ್ನೋದೇ ಮುಖ್ಯ ಅನ್ಕೊಂಡು ಬಿಡ್ತಾರೆ. ಎರಡೂ ಎರಡೂವರೆ ಇಂಚು ಉದ್ದವಿದ್ರೆ ಸಾಕು ಅಷ್ಟಿಲ್ಲದೇ ಹೋದರೂ ಹೆಣ್ಣನ್ನು ತೃಪ್ತಿಪಡಿಸಲು ನೂರಾರು ದಾರಿಗಳಿವೆ ಅಂತೆಲ್ಲ ಯಾರಿವರಿಗೆ ತಿಳಿಹೇಳೋದು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಹು ಎಂದು ತಲೆಯಾಡಿಸಿದೆ. 

“ಮಾಡಣ್ವ" ಅಂದ. ನಂಗಿನ್ನೊಂದಷ್ಟು ಹೊತ್ತು ದೇಹದಾಟ ಮುಂದುವರಿಸಬೇಕೆಂಬ ಮನಸ್ಸಿತ್ತು. ಮೊದಲ ದಿನ ಅವನಿಷ್ಟದಂತೆ ನಡೆಯಲಿ ಎಂದುಕೊಳ್ಳುತ್ತಾ ಮಲಗಿಕೊಂಡು ಕಾಲಗಲಿಸಿದೆ. ಅವನಿಗು ಮೊದಲ ಸಲ. ಪ್ರವೇಶ ಸುಲಭವಾಗಿರಲಿಲ್ಲ. ಅವನ ಮುಂದೊಗಲು ಹಿಂದಕ್ಕೆ ಸಲೀಸಾಗಿ ಸರಿಯದೆ ನೋವಾಯಿತು, ಆ ನೋವಿಗೆ ಗಡಸುತನ ಇಳಿದುಹೋಯಿತು. “ಸಾರಿ ಕಣೆ ಆಗ್ತಿಲ್ಲ" ಎಂದ್ಹೇಳುತ್ತಾ ಎದೆಯ ಮೇಲೊರಗಿಕೊಂಡ. 

'ಛೀ! ಅದೇನೋ ಅದು ಸಾರಿ. ನಮ್ಮಿಬ್ಬರಿಗೂ ಸೆಕ್ಸ್ ಮುಖ್ಯವಲ್ಲ ಅಂತ ಗೊತ್ತಲ್ಲ. ಮೊದಲ ಸಲ ಹಿಂಗಾಗ್ತದೆ. ಸ್ನಾನ ಮಾಡಬೇಕಾದ್ರೆಲ್ಲ ಮುಂದೊಗಲನ್ನು ಹಿಂದಕ್ಕೆಳೆದುಕೊಂಡು ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲವಾ?'

“ವಾರಕ್ಕೊಂದ್ಸಲ ಮಾಡ್ತಿದ್ದೆ"

'ದಿನಾ ಮಾಡಿದ್ರೆ ಒಳ್ಳೇದಲ್ವೇನೋ? ದೊಡ್ ಡಾಕ್ಟರ್ ಬೇರೆ ಆಗ್ತಿದ್ದಿ ನಿಂಗೇ ವಿಷಯ ಗೊತ್ತಿಲ್ಲ ನೋಡು' ಅಂತ್ಹೇಳಿ ತಲೆ ಮೇಲೆ ಮೊಟಕಿದೆ. ನಗುತ್ತಾ ಎದೆಯ ಮೇಲಿಂದ ಜಾರಿಕೊಂಡು ಪಕ್ಕಕ್ಕೆ ಮಲಗಿಕೊಂಡ. ಅವನ ತೋಳನ್ನು ದಿಂಬಾಗಿಸಿಕೊಂಡು ಅವನ ಕಂಕುಳಿಗೊಂದು ಮುತ್ತನಿತ್ತೆ.

“ಸೆಕ್ಸ್ ಅಂತೂ ಆಗ್ಲಿಲ್ಲ. ಸಾರಿ"

'ಮತ್ತೆ ಸಾರಿ ಅಂತೆ ನಿನ್ನ ತಲೆ. ಆಗ್ತದೆ ಸುಮ್ನಿರು'

“ಹು. ನೋಡುವ. ನಿನ್ನ ಕತೆನಾದ್ರೂ ಮುಂದುವರಿಸೇ....” ಎಂದ. ನಿಜ್ಜ ನನಗೆ ಆ ಹಳೆಯ ಕತೆಗಳನ್ನೆಲ್ಲ ಈ ಹೊತ್ತಿನಲ್ಲಿ ನೆನಪಿಸಿಕೊಳ್ಳುವ ಇರಾದೆ ಸ್ವಲ್ಪವೂ ಇರಲಿಲ್ಲ. ಭೇಟಿಯಾದ ದಿನ ಮಿಕ್ಕಿದ್ದು ಹೇಳ್ತೇನೆ ಅಂತ ನಾ ಹೇಳಿದ್ದು. ಈಗ ಹೇಳದೇ ವಿಧಿಯಿಲ್ಲ. ಜೊತೆಗೆ ಅವ ಮತ್ತೆ ಗಡುಸಾಗಿ ಸೆಕ್ಸಿಗೆ ತಯಾರಾಗಲು ಮತ್ತಷ್ಟು ಸಮಯ ಬೇಕೇ ಬೇಕು ಎಂದುಕೊಂಡು ವಾರದ ಹಿಂದೆ ಫೋನಿನಲ್ಲಿ ನಿಲ್ಲಿಸಿದ್ದನ್ನು ಮುಂದುವರೆಸಿದೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment