ಕು.ಸ.ಮಧುಸೂದನ
ಸಂಜೆ ಹುಯ್ಯುವ ಬಿಸಿಲು ಮಳೆ
ಕೃತಕವೆನಿಸಿ
ಕಾಮನಬಿಲ್ಲೂ ಕ್ಷಣಭಂಗುರವೆನಿಸಿ
ತಳಮಳಿಸಿದ ಮನಸು
ಹೊಕ್ಕುಳಾದಳದೊಳಗೆಲ್ಲೊ
ಕಡೆಗೋಲು
ಮಜ್ಜಿಗೆ ಕಡೆದಂತಾಗಿ
ಬಿಟ್ಟ ಉಸಿರು ನೀಳವಾಗಿ ಎದೆಬಡಿತ ಜೋರಾಗಿ
ನಿಂತರೆ ಸಾಕು ಮಳೆ
ಬಂದರೆ ಮತ್ತೆ ರವಷ್ಟು ಬಿಸಿಲು
ಮೈಕಾಯಿಸಿಕೊಳ್ಳಬೇಕು.
ಸ್ಖಲಿಸಿಕೊಳ್ಳದೆ
ಬಸುರಾಗದೆ
ಹಡೆಯಲಾಗದೆ
ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು
ಉಳಿಸಿಕೊಳ್ಳಬೇಕು.
ಮರುಹಗಲು ಬರುವ ಬಿಸಿಲಿರದ
ಭೋರ್ಗರೆಯುವ ಬಿರು ಮಳೆಗೆ
ಸಂಕೋಚವಿರದೆ ತುಂಬಿಸಿಕೊಳ್ಳಬೇಕು
ಹಡೆಯುವ ಸಡಗರಕೆ ಸಾಕ್ಷಿಯಾಗಲು….
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment