ಡಾ. ಅಶೋಕ್. ಕೆ. ಆರ್.
ಸಾಗರನ ಜೊತೆ ಪುರುಷೋತ್ತಮನ ಕತೆಯ ಮೊದಮೊದಲ ಭಾಗವನ್ನೇಳಿ ಮಲಗಿದಾಗ ಘಂಟೆ ಮೂರಾಗಿತ್ತು. ಬೆಳಿಗ್ಗೆ ಹತ್ತರವರೆಗೂ ನಿದ್ರೆ ಮಾಡಿದೆ. ಪೂರ್ತಿ ನಿದ್ರೆಯೂ ಅಲ್ಲ, ಪೂರ್ತಿ ಎಚ್ಚರವೂ ಅಲ್ಲ. ಪುರುಷೋತ್ತಮನ ನೆನಪುಗಳು ಕನಸಾಗಿ ಕಾಡುತ್ತಿದ್ದವು. ಹೆಸರಿಗೆ ಏಳು ಘಂಟೆಯಷ್ಟು ನಿದ್ರೆ ಮಾಡಿ ಎದ್ದಿದ್ದರೂ ಮನಸ್ಸಿಗೆ ಮತ್ತು ದೇಹಕ್ಕೆ ಉತ್ಸಾಹವಿರಲಿಲ್ಲ. ಎದ್ದ ತಕ್ಷಣ ಮೊಬೈಲು ನೋಡಿದೆ. ನಿನ್ನೆ ಮಿಸ್ಡ್ ಯು ಕಣೇ ಅಂದಿದ್ದಕ್ಕೇನಾದರೂ ಮತ್ತೆ ಹತ್ತದಿನೈದು ತಪ್ಪೊಪ್ಪಿಗೆಯ ಮೆಸೇಜು ಬಂದಿರುತ್ತವೆ ಸಾಗರನಿಂದ ಎಂದುಕೊಂಡಿದ್ದೆ. ಪುಣ್ಯಕ್ಕೆ ಬಂದಿರಲಿಲ್ಲ. ರಾಜಿಯ ಮಿಸ್ಡ್ ಕಾಲ್ ಇತ್ತು. ಎಂಟರ ಸುಮಾರಿಗೆ ಫೋನ್ ಮಾಡಿದ್ದರು. ಕರೆ ತೆಗೆಯದ ಕಾರಣ ಮೆಸೇಜು ಮಾಡಿದ್ದರು. “ಗುಡ್ ಮಾರ್ನಿಂಗ್ ಡಾರ್ಲಿಂಗ್. ಸುಮಾರು ಹನ್ನೊಂದು ಘಂಟೆಗೆ ಮನೆಗೆ ಬರುತ್ತೇನೆ” ಅಂತ. ‘ಸರಿ’ ಎಂದು ಪ್ರತಿಕ್ರಯಿಸಿ ಹಾಸಿಗೆ ಬಿಟ್ಟೆದ್ದೆ.
ಸ್ನಾನ ಮಾಡಿ ಒಂದೆರಡು ರೊಟ್ಟಿ ಹಾಕಿಕೊಂಡು ಉಪ್ಸಾರು ಖಾರದಲ್ಲಿ ತಿಂದು ಮುಗಿಸುವಷ್ಟರಲ್ಲಿ ರಾಜಿ ಬಂದರು. ನಿನ್ನೆ ರಾತ್ರಿಯ ಕುಡಿತದ ಸಂಕೇತ ಅವರ ಕಣ್ಣಿನಲ್ಲಿ ಧಾರಾಳವಾಗಿ ಕಾಣುತ್ತಿತ್ತು. ಅವರು ಕುಡಿದು ಬಂದಿದ್ದಕ್ಕೆ ಬೇಜಾರಲ್ಲ, ನನ್ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ತಿರುಗಾಡಿಕೊಂಡು ಬಂದುಬಿಟ್ಟರಲ್ಲ ಅಂತ ಹೊಟ್ಟೆಉರಿ! ಮುಖ ಊದಿಸಿಕೊಂಡೇ ಕುಳಿತಿದ್ದೆ. ಅವರು ಕೇಳಿದ್ದಕ್ಕೆಲ್ಲ ಹಾ ಹೂ ಅಷ್ಟೇ ನನ್ನ ಉತ್ತರ. ಟ್ರಿಪ್ ಹೇಗಿತ್ತು ಎಲ್ಲೆಲ್ಲಿ ಹೋಗಿದ್ರಿ ಅನ್ನೋ ಪ್ರಶ್ನೆ ನಾಲಗೆ ತುದಿಯವರೆಗೆ ಬರೋದು, ಕಷ್ಟಪಟ್ಟು ತಡೆದುಕೊಳ್ಳುತ್ತಿದ್ದೆ. ರಾಜಿಗೂ ಅದೆಲ್ಲ ಅರ್ಥವಾಗಿಬಿಡುತ್ತದೆ! ಮುಗುಳ್ನಗುತ್ತ ಸ್ನಾನ ಮಾಡಿ ಹೊರಬಂದು ಸೋಫಾದ ಮೇಲೆ ಮಲಗಿ ಪೇಪರ್ ಓದುತ್ತಿದ್ದವಳ ಮೇಲೆ ಮಲಗಿ ತುಟಿಗೆ ತುಟಿ ಒತ್ತಿ ಒಂದು ದೀರ್ಘ ಚುಂಬನ ಕೊಟ್ಟು ತಲೆ ಮೇಲೆತ್ತಿದರು. ಇದು ಅವರು ಇತ್ತೀಚೆಗೆ ಕಂಡುಕೊಂಡಿರುವ ಸಮಾಧಾನ ಮಂತ್ರ! ಅವರಿಗೆ ಹಣೆಗೆ ಕೆನ್ನೆಗೆ ಮುತ್ತು ಕೊಡುವುದಿಷ್ಟ. ನನಗೆ ತುಟಿಗೆ ತುಟಿ ಸೇರಿಸುವುದಿಷ್ಟ. ನಾನವರ ಮೇಲೆ ಕೋಪಗೊಂಡಿದ್ದಾಗ ಅವರಿಗಷ್ಟೇನು ಇಷ್ಟವಿಲ್ಲದಿದ್ದರೂ ತುಟಿಗೆ ತುಟಿ ಒತ್ತಿಬಿಡುತ್ತಾರೆ! ನಾನು ಕರಗಿಬಿಡುತ್ತೇನೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
‘ಎದ್ದೋಗ್ರೀ. ಮೂರು ದಿನದಿಂದ ಹೆಂಡತಿ ಬದುಕಿದ್ದಾಳಾ ಸತ್ತಿದ್ದಾಳಾ ಅಂತ ವಿಚಾರಿಸಲಿಲ್ಲ. ಈಗ ಬಂದುಬಿಟ್ರು ಸಮಾಧಾನ ಮಾಡೋಕೆ’
“ಮೂರು ದಿನದಿಂದ ಮಿಸ್ ಮಾಡ್ಕೊಂಡ್ನಲ್ಲ ಡಾರ್ಲಿಂಗ್. ಅದಿಕ್ಕೇ ಈ ಮುತ್ತು” ಎನ್ನುತ್ತ ಮತ್ತೊಂದು ಮತ್ತು ಕೊಟ್ಟರು. ಅವರನ್ನು ಗಟ್ಟಿಯಾಗಿ ತಬ್ಬಿ ಹಿಡಿದೆ. ಗಡುಸಾಗಲಾರಂಭಿಸಿದ್ದರು.
‘ಅಂದ್ರು ನೀವು ಸರಿ ಇಲ್ಲ ಬಿಡಿ’
“ಯಾಕೋ?”
‘ಫ್ರೆಂಡ್ಸ್ ಜೊತೆ ಪೋಲಿ ಅಲೆಯೋಕೆ ಹೋದ್ರೆ ನನ್ನನ್ನೇ ಮರೆತುಬಿಡ್ತೀರಲ್ಲ. ಅದಕ್ಕೆ’
“ವರುಷಕ್ಕೆ ಮೂರು ದಿನ ಫ್ರೆಂಡ್ಸ್ ಜೊತೆ ಅಲೆದಿದ್ದು. ಮಿಕ್ಕ ಮುನ್ನೂರ ಅರವತ್ತೆರಡು ದಿನ ನಿನ್ನ ಜೊತೇನೆ ಇರಲ್ವ. ಅವರ ಜೊತೆ ಇದ್ದಾಗ್ಲೂ ನಿನಗೆ ಫೋನ್ ಮಾಡಿ ಮಾತಾಡ್ತಾನೇ ಇರೋದಾದ್ರೆ ಯಾಕೆ ಹೋಗ್ಬೇಕು ಹೇಳು”
‘ಮ್. ಹೋಗ್ಲಿ ಬಿಡು ಚಿನ್ನು. ಅಪ್ಪನ ಮನೆಗೂ ಹೋಗಂಗಿರಲಿಲ್ಲ. ಅವರಿಗಿನ್ನೂ ಕೋಪ ಆರಿಲ್ಲ. ಹಂಗಾಗಿ ಸ್ವಲ್ಪ ಜಾಸ್ತಿ ಬೇಜಾರು’
“ಅದು ನನಗೂ ಗೊತ್ತಲ್ವ. ಆ ಬೇಜಾರು ಕಮ್ಮಿ ಮಾಡೋಕೆ ತಾನೇ ಎರಡು ಮುತ್ತು ಕೊಟ್ಟಿದ್ದು”
‘ಕೊಡೋ ಮುತ್ಗೆಲ್ಲ ಲೆಕ್ಕ ಇಡ್ತಾರೇನ್ರೀ! ಬರೀ ಮುತ್ತು ಸಾಲಲ್ಲ ಇವತ್ತು’
“ಅದೂ ನನಗ್ಗೊತ್ತು. ಅದಿಕ್ಕೇ ಟವೆಲ್ಲು ಸುತ್ತಿಕೊಂಡು ಬಂದಿರೋದು. ಒಳಗೆ ಏನೂ ಹಾಕಿಲ್ಲ”
‘ಥೂ ಪೋಲಿ’ ಎಂದವರ ಕಿವಿ ಕಚ್ಚಿ ಟವೆಲ್ಲಿನ ಒಳಗೆ ಕೈಹಾಕಿದೆ. ಗಡುಸಾಗಿದ್ದರು. ದೇಹ ಸುಖ ಅನುಭವಿಸಿ ವಾರದ ಮೇಲಾಗಿತ್ತು. ಟವೆಲ್ಲು ಕಿತ್ತು ನೆಲಕ್ಕೆ ಬಿಸಾಕಿದೆ. ‘ಹೋಗೋಣ್ವಾ ರೂಮಿಗೆ’ ಶಿಶ್ನವನ್ನು ಸವರುತ್ತಾ ಕೇಳಿದೆ.
“ಬೇಡ ಇವತ್ತು ಹಾಲಲ್ಲೇ” ಎಂದ್ಹೇಳಿ ನೈಟಿ ಕಳಚಿ ಒಳಉಡುಪುಗಳನ್ನೆಲ್ಲ ಅಕ್ಷರಶಃ ಕಿತ್ತು ಬಿಸಾಕಿದರು. ಇಷ್ಟೊಂದು ಉತ್ಕಟತೆ ಇವರಿಗೆ ಅಪರೂಪಕ್ಕೆ ಬರುತ್ತಿತ್ತು. ಆ ಉತ್ಕಟತೆ ನನಗೆ ಖುಷಿ ನೀಡುತ್ತಿತ್ತು. ಮುಖದ ಮೇಲೆಲ್ಲ ಮುತ್ತಿನ ಮಳೆಗೆರೆದು, ತಿಂದೇ ಬಿಡುವವರಂತೆ ಮೊಲೆಯನ್ನು ಚಪ್ಪರಿಸುತ್ತ ಒಳಗೆ ಪ್ರವೇಶಿಸಿದರು. ಉತ್ಕಟತೆ ಜಾಸ್ತಿಯಾದಾಗ ಇಬ್ಬರ ಗ್ರಂಥಿಗಳೂ ಹೆಚ್ಚೆಚ್ಚು ರಸ ಸುರಿಸಿಬಿಡುತ್ತವೆ. ಒಂದೆರಡು ಸಲ ಜಾರಿ ನಂತರ ಪ್ರವೇಶ ಸಫಲವಾಯಿತು. ವೀರ್ಯ ನನ್ನ ದೇಹದೊಳಗೆ ಪ್ರವೇಶಿಸುವಷ್ಟರಲ್ಲಿ ಇಬ್ಬರೂ ಬೆವೆತಿದ್ದೆವು. ಉತ್ಕಟತೆಯ ಕಾರಣ ಮಾಮೂಲಿಗಿಂತ ಶೀಘ್ರವಾಗಿ ಮುಗಿದುಹೋಗಿತ್ತು. ರಾಜಿ ತಲೆಯನ್ನು ಮೊಲೆಗಳ ಮಧ್ಯೆ ಇಟ್ಟು ಬಿಸಿಯುಸಿರು ಬಿಡುತ್ತಿದ್ದ. ಅವರ ಬಿಸಿಯುಸಿರು ಎದೆಯನ್ನು ತಾಕುತ್ತಿದ್ದರೆ ನನ್ನ ಸುಸ್ತೆಲ್ಲ ಮಾಯವಾಗಿ ಮತ್ತೊಂದು ಸುತ್ತಿಗೆ ತತ್ ಕ್ಷಣ ಅಣಿಯಾಗಿಬಿಡುತ್ತೇನೆ ನಾನು. ಅದಿಕ್ಕೇ ರಾಜಿ ಸಮಾಗಮ ಮುಗಿದ ತಕ್ಷಣ ಮೇಲೆದ್ದು ಬಾತ್ ರೂಮಿಗೆ ಹೋಗಿಬಿಡುತ್ತಾರೆ. ಇವತ್ತು ಮಲಗಿ ಹೀಗೆ ಬಿಸಿಯುಸಿರ ಬಿಡುತ್ತಿದ್ದಾರೆಂದ ಮೇಲೆ ಇನ್ನೂ ಬಾಕಿಯಿದೆ ಎಂದರಿವಾಗಿ ‘ನಾನು ರೆಡಿ ರಾಜಿ’ ಎಂದೆ.
“ಗೊತ್ತಾಗೋಯ್ತ”
‘ಮ್’
“ನಾನಿನ್ನೂ ರೆಡಿ ಆಗಿಲ್ಲ”
‘ರೆಡಿ ಮಾಡ್ಲಾ?’
“ಮ್”
ರಾಜಿಯನ್ನು ಸೋಫಾದ ಮೇಲೆ ಕುಳ್ಳರಿಸಿ ನಾನು ನೆಲದ ಮೇಲೆ ಕುಳಿತುಕೊಂಡೆ. ಮೊದಮೊದಲು ಮುಖ ಮೈಥುನಕ್ಕೆ ನಾನು ಒಪ್ಪುತ್ತಿರಲಿಲ್ಲ. ಅಸಹ್ಯವೆನ್ನಿಸುತ್ತಿತ್ತು. ಅಸಹ್ಯಕ್ಕಿಂತ ಹೆಚ್ಚಾಗಿ ಅದು ಸಹಜ ಲೈಂಗಿಕ ಕ್ರಿಯೆಯಲ್ಲ ಎಂದೇ ನನ್ನ ಅಭಿಪ್ರಾಯವಾಗಿತ್ತು. ಮುಖ ಮೈಥುನ ಕೂಡ ಲೈಂಗಿಕ ಆಟದ ಭಾಗವೆಂದರಿವಾದ ಮೇಲೆ ನನಗೋಸ್ಕರವಲ್ಲದಿದ್ದರೂ ಅದನ್ನು ತುಂಬಾ ಇಷ್ಟಪಡುವ ರಾಜೀವನಿಗೋಸ್ಕರ ಅಭ್ಯಾಸ ಮಾಡಿಕೊಂಡೆ. ಮುಖಮೈಥುನ ಶುರುಮಾಡಿದ ಕ್ಷಣಮಾತ್ರದಲ್ಲಿ ಅವರ ಶಿಶ್ನ ಗಡುಸಾಗಿಬಿಡುತ್ತಿತ್ತು. ಈ ಸಲ ಅವರನ್ನು ಮಲಗಿಸಿ ನಾನು ಮೇಲೆ ಏರಿ ಹೋದೆ. ಈ ಭಂಗಿ ನನಗಿಷ್ಟವಾದದ್ದು. ಅವರಿಗೆ ಸ್ವಲ್ಪ ಇರಿಸುಮುರುಸು ಭಂಗಿ ಇದು. ಇವತ್ತು ಇಬ್ಬರೂ ಉತ್ಕಟತೆಯ ಉತ್ತುಂಗದಲ್ಲಿದ್ದುದರಿಂದ ಇರಿಸುಮುರುಸಾಗುವ ಪ್ರಶ್ನೆಯೇ ಇರಲಿಲ್ಲ. ಈ ಬಾರಿ ದೀರ್ಘವಾಗಿ ನಡೆಯಿತು. ಬೆವರು ಮತ್ತಷ್ಟು ಹೆಚ್ಚಾಯಿತು. ಅರ್ಧ ಹಾದಿಯಲ್ಲಿದ್ದಾಗ ಸುಖದ ಅಮಲಿನಲ್ಲಿ ಕಣ್ಣು ಮುಚ್ಚಿದಾಗ ರಾಜೀವನ ಮೇಲೆ ಏರಿರುವ ಸಂಗತಿ ಮರೆತಂತಾಗಿ ಸಾಗರನ ಜೊತೆ ಸಮಾಗಮ ನಡೆಸುತ್ತಿರುವಂತಹ ಕಲ್ಪನೆ ಮೂಡಿತು. ಆ ಕಲ್ಪನೆಯನ್ನು ಮರೆಮಾಚುವ ಪ್ರಯತ್ನ ಮಾಡಿದಾಗ ಸಾಗರ “ಮಿಸ್ಡ್ ಯೂ ಧರು” ಎಂದು ಹೇಳಿದಂತಾಯಿತು. ಬೆಚ್ಚಿ ಕಣ್ಣು ತೆರೆದಾಗ ರಾಜೀವನಿಗೆ ಸ್ಖಲನವಾಗಿತ್ತು. ಸ್ಖಲನವಾದ ನಂತರ ತಬ್ಬಿ ಮಲಗುವವಳು ಅವತ್ತು ಬಾತ್ ರೂಮಿಗೆ ಹೋಗಿಬಿಟ್ಟೆ. ಎದೆ ಬಡಿತ ಜೋರಾಗಿತ್ತು. ಕಣ್ಣಲ್ಲಿ ನೀರಿತ್ತು. ತಣ್ಣೀರಿನಲ್ಲೇ ಸ್ನಾನ ಮಾಡಿ ಹೊರಬಂದೆ. ಸ್ನಾನ ಮಾಡಬೇಕೆಂದಿರಲಿಲ್ಲ. ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬರಲಿ ಎಂದು ಸಮಯ ಕಳೆಯಲು ಸ್ನಾನ ಮಾಡಿದೆ.
‘ನೀವೂ ಸ್ನಾನ ಮಾಡ್ಕೊಳ್ರೀ’ ಎಂದೆ.
“ಏನ್ ಇವತ್ತು ಎಲ್ಲಾ ಉಲ್ಟಾ? ಮಾಮೂಲಿಯಾಗಿ ನಾನು ಸ್ನಾನಕ್ಕೆ ಓಡುತ್ತಿದ್ದೆ. ನೀನು ಬಿದ್ದುಕೊಂಡಿರುತ್ತಿದ್ದೆ. ಇವತ್ತು ನೀನು ಸ್ನಾನ ಮಾಡಿ ಬಂದಿದ್ದೀಯ. ನಾನಿನ್ನೂ ಬಿದ್ದುಕೊಂಡಿದ್ದೀನಿ. ಏಳಲೂ ಮನಸ್ಸಿಲ್ಲ”
‘ನಾನು ಮೇಲೆ ಬಂದು ಮಾಡಿದ್ದಲ್ವ. ಅದಿಕ್ಕೇ ಎಲ್ಲಾ ಉಲ್ಟ’ ಎಂದು ಹೇಳಿ ಅವರ ತಲೆಗೊಂದು ಮೊಟಕಿ ನೆಲದ ಮೇಲೆ ಬಿದ್ದಿದ್ದ ಟವೆಲ್ಲನ್ನು ಅವರ ಸೊಂಟದ ಮೇಲಾಕಿ ನನ್ನ ಬಟ್ಟೆಗಳನ್ನು ತೆಗೆದು ಒಗೆಯಲು ಹಾಕಿ ರೂಮಿಗ್ಹೋಗಿ ಬೇರೆ ಬಟ್ಟೆ ಧರಿಸಿದೆ.
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ನಿನ್ನೆ ರಾತ್ರಿಯಿಂದ ಸತತವಾಗಿ ಓದಿದೀನಿ. ಇನ್ನೂ ಎಷ್ಟು ಅಧ್ಯಾಯಗಳಿವೆ ಸರ್
ReplyDeleteಇನ್ನೂ ಬಹಳಷ್ಟು ಅಧ್ಯಾಯಗಳಿವೆ. ಸ್ವಲ್ಪ ದೊಡ್ಡ ಕಾದಂಬರಿ! ಇಷ್ಟವಾಗ್ತಿದೆ ನಿಮಗೆ ಅನ್ಕೋತೀನಿ :-)
Delete