Jun 29, 2019

ಗೋರಿಯ ಮೇಲೆ.

ಕು.ಸ.ಮಧುಸೂದನ ರಂಗೇನಹಳ್ಳಿ 
ಬರುತ್ತೇನೆಂದಿದ್ದೆ ಬರಲಿಲ್ಲ 
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ 
ಹಗಲ ಬೇಗೆಯಲಿ ಅಸ್ವಸ್ಥನಂತೆ. 

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ 
ಬೀಸಿಬಂದ ಗಾಳಿ ನನ್ನ ವಾಸನೆ ಹೊತ್ತು ತರಲಿಲ್ಲ 
ಹಗಲ ಬೆನ್ನೇರಿ ಬಂದಿರುಳಿಗೆ 
ಉಸಿರು ನೀಳವಾಯಿತು

Jun 28, 2019

ಒಂದು ಬೊಗಸೆ ಪ್ರೀತಿ - 20

ಡಾ. ಅಶೋಕ್.‌ ಕೆ. ಆರ್.‌
‘ಶಶಿ ವಿಷಯ ಶಶಿಯತ್ರಾನೇ ಮಾತನಾಡಿದ್ರೆ ಚೆಂದ ಅಲ್ವ. ಕೊನೇಪಕ್ಷ ಅವನು ಇದ್ದಾಗಲಾದರೂ ಮಾತನಾಡಬೇಕು. ಅವನಿಲ್ಲದೆ ಇದ್ದಾಗ ಮಾತನಾಡುವುದು ಸರಿಯಲ್ಲವೇನೋ’ ತಾಳ್ಮೆಯ ಪ್ರತಿರೂಪದಂತೆ ಮಾತನಾಡುತ್ತಿರುವ ಅಪ್ಪನ ದನಿ ಯಾವಾಗ ದಿಕ್ಕು ತಪ್ಪಿ ರೇಗುವಿಕೆಯಾಗಿ ಅಸಭ್ಯವಾಗಿ ಪರಿವರ್ತಿತವಾಗುತ್ತದೋ ಎಂಬ ಭಯ ನನಗೆ. 

“ನಿನಗೆ ಗೊತ್ತಾ ಹುಡುಗಿ ಯಾರು ಅಂತ?” 

‘ಮ್. ಗೊತ್ತು’ 

“ನೋಡಿದ್ದೀಯಾ?” 

‘ಮ್’ 

“ಮಾತನಾಡಿದ್ದೀಯ?” 

‘ಮ್’ 

“ನಿಮ್ಮಮ್ಮನಿಗೆ ಗೊತ್ತಾ?” 

‘ಮ್’ 

“ಎಲ್ಲರಿಗೂ ಗೊತ್ತು. ನಾನೊಬ್ನೇ ಬೇವರ್ಸಿ ಈ ಮನೇಲಿ” 

‘ಮತ್ತೆ ಶುರು ಮಾಡಬೇಡಿ ಅಪ್ಪ’ 

“ಸಾರಿ. ಯಾರು ಹುಡುಗಿ?” 

‘ನೀವೇಗಿದ್ರೂ ಮದುವೆಗೆ ಒಪ್ಪಲ್ಲ ಅಂದ ಮೇಲೆ ಹುಡುಗಿ ಯಾರಾದ್ರೇನು ಬಿಡಿ ಅಪ್ಪ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಏಕಕಾಲಕ್ಕೆ ಚುನಾವಣೆ' ಬಾಜಪದ ಹಳೆಯಜೆಂಡಾ

ಕು.ಸ.ಮಧುಸೂದನ ರಂಗೇನಹಳ್ಳಿ 
ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುವುದರೊಂದಿಗೆ ಬಾಜಪದ ಹಳೆಯ ಗುಪ್ತ ಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ. 

ಬಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರದಾನಮಂತ್ರಿಗಳಾದ ಕೆಲವೆ ತಿಂಗಳಲ್ಲಿ ಕೇಂದ್ರ ಕಾನೂನು ಸಚಿವಾಲಯ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತವೆಂಬ ಸಲಹೆನೀಡಿತ್ತು. ನಂತರದ ಕೆಲವೆ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸಹ ಕಾನೂನು ಇಲಾಖೆಯ ಈ ಸೂಚನೆಗೆ ಸಹಮತ ಸೂಚಿಸುತ್ತ, ಸರಕಾರ ಕಾನೂನು ತಿದ್ದುಪಡಿ ಮಾಡಿ ಹಸಿರು ನಿಶಾನೆ ತೋರಿಸಿದಲ್ಲಿ ತನಗೇನು ಅಭ್ಯಂತರವಿಲ್ಲವೆಂದು ಹೇಳಿತ್ತು. ನಂತರದಲ್ಲಿ ಪ್ರದಾನಿಯವರು ಸಹ ಏಕಕಾಲಕ್ಕೆ ಚುನಾವಣೆ ನಡೆಸಲು ತಾವು ಇಚ್ಚಿಸುವುದಾಗಿ ಸಾರ್ವಜನಿಕವಾಗಿ ಹೇಳುವುದರೊಂದಿಗೆ ಒಂದಷ್ಟು ಚರ್ಚೆಗೆ ನಾಂದಿ ಹಾಡಿದ್ದರು. 

Jun 14, 2019

ಈ ಸೂರ್ಯಾಸ್ತದೊಳಗೆ

ಕು.ಸ.ಮಧುಸೂದನನಾಯರ್
ನೀಲಿ ಹೂವಿನಂತೆ ನಳನಳಿಸಿ 
ಬೆಳದಿಂಗಳ ನಗುವ ಚೆಲ್ಲಿದವಳು 
ನಕ್ಷತ್ರ ಕಣ್ಣುಗಳಲಿ ಬೆಳದಿಂಗಳ ಬೆಳಕ 
ಹರಡಿದಾಗ ಅವನ ಕತ್ತಲ ಜಗಕೆ ಹಗಲು 
ಬಂದಂತಾಗಿ 
ಸಾವಿರ ಕನಸುಗಳು ಸೃಷ್ಠಿಯಾದವು 
ಕನಸುಗಳೊಳಗೆ ಅವಳ 
ಕೆನ್ನೆ ಗಲ್ಲ ತುಟಿಕಟಿಗಳ 
ಗಲ್ಲ ಕುತ್ತಿಗೆಯ ಇಳಿಜಾರು 
ಗರಿಗೆದರಿದವು, 

Jun 12, 2019

ಒಂದು ಬೊಗಸೆ ಪ್ರೀತಿ - 19


ಡಾ. ಅಶೋಕ್.‌ ಕೆ. ಆರ್.‌
‘ಅಡುಗೆ ಏನು ಮಾಡ್ಲಿ? ಮಧ್ಯಾಹ್ನ ಡ್ಯೂಟಿ ಇದೆ ನನಗೆ’ 

“ನನಗೇನೂ ತಿನ್ನೋ ಹಂಗೇ ಇಲ್ಲ. ಬೆಳಿಗ್ಗ ಹತ್ತಕ್ಕೆ ತಿಂಡಿ ತಿಂದಿದ್ದು. ದೋಸೆ ಕಾಲ್ ಸೂಪು ಕೈಮ ಗೊಜ್ಜು. ನಿನಗೆ ಏನು ಬೇಕ ಮಾಡ್ಕೊ. ಇಲ್ಲ ಪಾರ್ಸಲ್ ತಂದುಬಿಡ್ಲಾ?” 

‘ನೋಡ್ದಾ! ನನಗೂ ಎರಡು ಕೈಮ ಉಂಡೆ ತಂದಿದ್ರೆ ಬೇಡ ಅಂತಿದ್ನಾ?! ನನ್ನೊಬ್ಬಳಿಗೇ ಇನ್ನೇನು ಪಾರ್ಸಲ್ ತರ್ತೀರಾ ಬಿಡಿ. ಫ್ರಿಜ್ಜಲ್ಲಿ ಚಪಾತಿ ಹಿಟ್ಟಿರಬೇಕು. ಎರಡು ಚಪಾತಿ ಹಾಕ್ಕೋತೀನಿ. ನಿಮಗೂ ಹಾಕಿಡ್ಲಾ?’ 

“ಎರಡು ಹಾಕಿಡು. ಹಂಗೇ ಮೊಟ್ಟೆಯಿದ್ರೆ ಎರಡು ಆಮ್ಲೆಟ್ ಮಾಡು” 

‘ಎರಡು ಸಲ ಮಾಡಿದ್ದಕ್ಕೆ ಎರಡು ಚಪಾತಿ ಎರಡು ಮೊಟ್ಟೇನಾ?’ ನಗುತ್ತಾ ಕೇಳಿದೆ. ಅವರೂ ನಕ್ಕರು. 

ಊಟ ಮುಗಿಸಿ ಡ್ಯೂಟಿಗೆ ಹೊರಟಾಗ ರಾಜಿ ಮಲಗೇ ಇದ್ದರು. ಏಳಿಸುವ ಮನಸ್ಸಾಗಲಿಲ್ಲ. ಬಾಗಿಲು ಲಾಕ್ ಮಾಡಿಕೊಂಡು ಹೊರಟೆ. ಕಾರು ಓಡಿಸುತ್ತಾ ಆಸ್ಪತ್ರೆಯ ಕಡೆಗೆ ಹೊರಟರೆ ಕಣ್ಣಲ್ಲಿ ತೆಳ್ಳನೆಯ ನೀರಿನ ಪರದೆ. ಸೆಕ್ಸ್ ಮಾಡುವಾಗ ರಾಜೀವನ ಜಾಗದಲ್ಲಿ ಸಾಗರನನ್ನು ನೆನಪಿಸಿಕೊಂಡಿದ್ದು ಬೇಸರ, ಮುಜುಗರ, ಖುಷಿ, ದ್ವಂದ್ವದ ಮಿಶ್ರಭಾವವಗಳನ್ನು ಸ್ಪುರಿಸಿತು. ರಾಜೀವ್ ಅಷ್ಟೊಂದು ಪ್ರೀತಿಯಿಂದ, ಉತ್ಸುಕತೆಯಿಂದ ಸೆಕ್ಸ್ ಮಾಡೋದೇ ಅಪರೂಪ. ಇಂಥ ಅಪರೂಪದ ದಿನದಲ್ಲಿ ಸಾಗರನನ್ನು ಕಲ್ಪಿಸಿಕೊಂಡುಬಿಟ್ಟೆನಲ್ಲಾ? ಇದು ಸರಿಯಾ? ರಾಜಿಯಲ್ಲಿ ಉತ್ಕಟತೆ ಇಲ್ಲದಿದ್ದಾಗ ಸಾಗರನನ್ನು ನೆನಪಿಸಿಕೊಳ್ಳೋದು ಕೂಡ ತಪ್ಪೇ ಅಲ್ಲವಾ? ಗಂಡನ ಜೊತೆ ಸಮಾಗಮದಲ್ಲಿದ್ದಾಗ ಬೇರೊಬ್ಬ ಮನದಲ್ಲಿ ಮೂಡಿಬಿಟ್ಟಿದ್ದು ಇದೇ ಮೊದಲು. ಅಪ್ಪಿತಪ್ಪಿ ಕೂಡ ಪುರೋಷತ್ತಮ ಒಮ್ಮೆಯೂ ನೆನಪಾಗಿರಲಿಲ್ಲ. ಇವತ್ಯಾಕೆ ಈ ರೀತಿ ಆಗಿಹೋಯಿತು ಅನ್ನೋ ಕಾರಣಕ್ಕೆ ಮುಜುಗರ. ಆ ಕ್ಷಣದಲ್ಲಿ ಸಾಗರನ ನೆನಪಾಗಿದ್ದಕ್ಕೆ ಒಂದರೆ ಕ್ಷಣವಾದರ ಖುಷಿಯಾಗದೆ ಇರಲಿಲ್ಲ. ಇದು ಸರಿಯಾ? ಆತನ ನೆನಪಾಗಿದ್ದಾದರೂ ಯಾಕೆ? ಪ್ರಶ್ನೆಗಳಿಗೆ ಉತ್ತರ ಮೂಡುವ ಮೊದಲು ಕಾರು ಆಸ್ಪತ್ರೆಯ ಬಳಿ ಬಂದಿತ್ತ. ಪ್ರಶ್ನೆಗಳನ್ನೆಲ್ಲಾ ಕಾರಿನಲ್ಲೇ ಬಿಟ್ಟು ಆಸ್ಪತ್ರೆಯಲ್ಲಿದ್ದ ರೋಗಿಗಳೆಡೆಗೆ ಗಮನ ಹರಿಸಿದೆ. ಮನಸ್ಸು ಮತ್ತಷ್ಟು ಗೊಂದಲಗೊಳ್ಳದಿರಲೆಂಬ ಕಾರಣಕ್ಕೋ ಏನೋ ಅಂದು ವಿಪರೀತ ರೋಗಿಗಳು. ‘ಏನ್ ಮಾಡ್ತಿದ್ದೆ?’ ಎಂದು ಸಾಗರನಿಗೊಂದು ಮೆಸೇಜು ಕಳಿಸಲೂ ಪುರುಸೊತ್ತಾಗಲಿಲ್ಲ. ಎಂಟು ಘಂಟೆಗೆ ಕೆಲಸ ಮುಗಿಸಿ ಕಾರು ಹತ್ತಿದೊಡನೆ ಮಧ್ಯಾಹ್ನ ಬಿಟ್ಟು ಹೋಗಿದ್ದ ಪ್ರಶ್ನೆಗಳು ಕಾರಿನೊಳಗೆಲ್ಲ ಕುಣಿದು ಕುಪ್ಪಳಿಸಿ ರೊಳ್ಳೆ ತೆಗೆದು ಗಬ್ಬೆಬ್ಬಿಸಿದವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೂರೂ ಕಾಲಕ್ಕೆ.....


ಪಲ್ಲವಿ
ನಿನ್ನೆಗೆ
ನೆನಪುಗಳಿವೆ
ನಾಲಿಗೆ ಚಾಚಿ ಹಿಂಬಾಲಿಸುವ ನಿಯತ್ತಿನ ನಾಯಿಯಂತೆ

ನಾಳೆಗೆ 
ಕನಸುಗಳಿವೆ
ಹೊಳೆದಡದಲ್ಲಿ ಕೂತವನು ಗಾಳಕ್ಕೆಸಿಗಿಸಿಟ್ಟ ಎರೆಹುಳುವಿನಂತೆ

ಇವತ್ತಿಗೆ
ನೆನಪು ಕನಸುಗಳ ನಡುವಣದ ನಿಜವಿದೆ
ಕಣ್ಣೆದುರಿದ್ದರೂ ಕೈಗೆಟುಕದ ಕನ್ನಡಿಯೊಳಗಣ ಗಂಟಿನಂತೆ.
ದಿವ್ಯ ಪಲ್ಲವಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಊರೆಂದರೆ ಹೀಗೇನೆ!

ಕು.ಸ.ಮಧುಸೂದನ ರಂಗೇನಹಳ್ಳಿ 
ಊರೆಂದರೆ ಹೀಗೆ 
ಮನೆಗಳ ಸಾಲುಗಳು 
ಅವುಗಳ ಕಾಯಲು ನಾಯಿಗಳು 
ವಾಕಿಂಗ್ ಕರೆದುಕೊಂಡು ಹೋಗುವ ಕೈಗಳು 
ಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರು 
ತಮಗು ಅದೇ ಬೇಕೆಂದು ಹಟ ಹಿಡಿಯುವ ಮಕ್ಕಳು 
ಇದನೆಲ್ಲ ಕವಿತೆಯಾಗಿಸುವ ಹೆಂಗರುಳಿನ ಕವಿಗಳು 
ಒಳ್ಳೆಯವರ ನಡುವೆಯೂ ಒಂದಿಬ್ಬರಾದರೂ ಕಳ್ಳರು 
ಹಿಡಿಯಲಷ್ಟು ಪೋಲೀಸರು 

Jun 10, 2019

ಬರುತ್ತೇನೆಂದು ಬರಲಿಲ್ಲ

ಕು.ಸ.ಮದುಸೂದನರಂಗೇನಹಳ್ಳಿ
ಬರುತ್ತೇನೆಂದಿದ್ದೆ ಬರಲಿಲ್ಲ
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ
ಹಗಲ ಭೇಗೆಯಲಿ ಅಸ್ವಸ್ಥನಂತೆ.

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ
ಬೀಸಿಬಂದ ಗಾಳಿ ನಿನ್ನ ವಾಸನೆ ಹೊತ್ತು ತರಲಿಲ್ಲ.

Jun 3, 2019

ಒಂದು ಬೊಗಸೆ ಪ್ರೀತಿ - 18

ಡಾ. ಅಶೋಕ್.‌ ಕೆ. ಆರ್.‌
ಸಾಗರನ ಜೊತೆ ಪುರುಷೋತ್ತಮನ ಕತೆಯ ಮೊದಮೊದಲ ಭಾಗವನ್ನೇಳಿ ಮಲಗಿದಾಗ ಘಂಟೆ ಮೂರಾಗಿತ್ತು. ಬೆಳಿಗ್ಗೆ ಹತ್ತರವರೆಗೂ ನಿದ್ರೆ ಮಾಡಿದೆ. ಪೂರ್ತಿ ನಿದ್ರೆಯೂ ಅಲ್ಲ, ಪೂರ್ತಿ ಎಚ್ಚರವೂ ಅಲ್ಲ. ಪುರುಷೋತ್ತಮನ ನೆನಪುಗಳು ಕನಸಾಗಿ ಕಾಡುತ್ತಿದ್ದವು. ಹೆಸರಿಗೆ ಏಳು ಘಂಟೆಯಷ್ಟು ನಿದ್ರೆ ಮಾಡಿ ಎದ್ದಿದ್ದರೂ ಮನಸ್ಸಿಗೆ ಮತ್ತು ದೇಹಕ್ಕೆ ಉತ್ಸಾಹವಿರಲಿಲ್ಲ. ಎದ್ದ ತಕ್ಷಣ ಮೊಬೈಲು ನೋಡಿದೆ. ನಿನ್ನೆ ಮಿಸ್ಡ್ ಯು ಕಣೇ ಅಂದಿದ್ದಕ್ಕೇನಾದರೂ ಮತ್ತೆ ಹತ್ತದಿನೈದು ತಪ್ಪೊಪ್ಪಿಗೆಯ ಮೆಸೇಜು ಬಂದಿರುತ್ತವೆ ಸಾಗರನಿಂದ ಎಂದುಕೊಂಡಿದ್ದೆ. ಪುಣ್ಯಕ್ಕೆ ಬಂದಿರಲಿಲ್ಲ. ರಾಜಿಯ ಮಿಸ್ಡ್ ಕಾಲ್ ಇತ್ತು. ಎಂಟರ ಸುಮಾರಿಗೆ ಫೋನ್ ಮಾಡಿದ್ದರು. ಕರೆ ತೆಗೆಯದ ಕಾರಣ ಮೆಸೇಜು ಮಾಡಿದ್ದರು. “ಗುಡ್ ಮಾರ್ನಿಂಗ್ ಡಾರ್ಲಿಂಗ್. ಸುಮಾರು ಹನ್ನೊಂದು ಘಂಟೆಗೆ ಮನೆಗೆ ಬರುತ್ತೇನೆ” ಅಂತ. ‘ಸರಿ’ ಎಂದು ಪ್ರತಿಕ್ರಯಿಸಿ ಹಾಸಿಗೆ ಬಿಟ್ಟೆದ್ದೆ. 

ಸ್ನಾನ ಮಾಡಿ ಒಂದೆರಡು ರೊಟ್ಟಿ ಹಾಕಿಕೊಂಡು ಉಪ್ಸಾರು ಖಾರದಲ್ಲಿ ತಿಂದು ಮುಗಿಸುವಷ್ಟರಲ್ಲಿ ರಾಜಿ ಬಂದರು. ನಿನ್ನೆ ರಾತ್ರಿಯ ಕುಡಿತದ ಸಂಕೇತ ಅವರ ಕಣ್ಣಿನಲ್ಲಿ ಧಾರಾಳವಾಗಿ ಕಾಣುತ್ತಿತ್ತು. ಅವರು ಕುಡಿದು ಬಂದಿದ್ದಕ್ಕೆ ಬೇಜಾರಲ್ಲ, ನನ್ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ತಿರುಗಾಡಿಕೊಂಡು ಬಂದುಬಿಟ್ಟರಲ್ಲ ಅಂತ ಹೊಟ್ಟೆಉರಿ! ಮುಖ ಊದಿಸಿಕೊಂಡೇ ಕುಳಿತಿದ್ದೆ. ಅವರು ಕೇಳಿದ್ದಕ್ಕೆಲ್ಲ ಹಾ ಹೂ ಅಷ್ಟೇ ನನ್ನ ಉತ್ತರ. ಟ್ರಿಪ್ ಹೇಗಿತ್ತು ಎಲ್ಲೆಲ್ಲಿ ಹೋಗಿದ್ರಿ ಅನ್ನೋ ಪ್ರಶ್ನೆ ನಾಲಗೆ ತುದಿಯವರೆಗೆ ಬರೋದು, ಕಷ್ಟಪಟ್ಟು ತಡೆದುಕೊಳ್ಳುತ್ತಿದ್ದೆ. ರಾಜಿಗೂ ಅದೆಲ್ಲ ಅರ್ಥವಾಗಿಬಿಡುತ್ತದೆ! ಮುಗುಳ್ನಗುತ್ತ ಸ್ನಾನ ಮಾಡಿ ಹೊರಬಂದು ಸೋಫಾದ ಮೇಲೆ ಮಲಗಿ ಪೇಪರ್ ಓದುತ್ತಿದ್ದವಳ ಮೇಲೆ ಮಲಗಿ ತುಟಿಗೆ ತುಟಿ ಒತ್ತಿ ಒಂದು ದೀರ್ಘ ಚುಂಬನ ಕೊಟ್ಟು ತಲೆ ಮೇಲೆತ್ತಿದರು. ಇದು ಅವರು ಇತ್ತೀಚೆಗೆ ಕಂಡುಕೊಂಡಿರುವ ಸಮಾಧಾನ ಮಂತ್ರ! ಅವರಿಗೆ ಹಣೆಗೆ ಕೆನ್ನೆಗೆ ಮುತ್ತು ಕೊಡುವುದಿಷ್ಟ. ನನಗೆ ತುಟಿಗೆ ತುಟಿ ಸೇರಿಸುವುದಿಷ್ಟ. ನಾನವರ ಮೇಲೆ ಕೋಪಗೊಂಡಿದ್ದಾಗ ಅವರಿಗಷ್ಟೇನು ಇಷ್ಟವಿಲ್ಲದಿದ್ದರೂ ತುಟಿಗೆ ತುಟಿ ಒತ್ತಿಬಿಡುತ್ತಾರೆ! ನಾನು ಕರಗಿಬಿಡುತ್ತೇನೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.