ಪ್ರವೀಣಕುಮಾರ್ ಗೋಣಿ
ಉಕ್ಕಲಾಡುವ ಭಾವಗಳ
ತೊರೆಗೆ ಹರಿದು ಸಾಗುವ
ಹರಿವಿಲ್ಲದಾಗಿರಲು
ಹಾಡೊಂದು ಮೂಡಿತಾದರೂ ಹೇಗೆ ?
ಸಾಗಬೇಕೆನ್ನುವ ದಾರಿಗಳೆಲ್ಲ
ಮುಂದೆ ಹಾದಿಯಿಲ್ಲದಂತೆ
ಕಂದಕವೇ ನಿಲ್ಲುತ್ತಿರಲು
ಮುನ್ನುಗ್ಗುವ ಹುಕಿ ಮೊಳೆಯುವುದಾದರೂ ಹೇಗೆ ?
ಮಗ್ಗುಲು ಬದಲಿಸದೆ ಅದೆಷ್ಟು
ಕಾಲ ಹೀಗೆ ಇದ್ದೀತು ಈ ಬದುಕು ! ಎನ್ನುವ
ಆಶಾವಾದವನ್ನೇ ಹೃದಯಕ್ಕೆ
ಧಾರೆಯೆರೆದಾಗಲೂ ಮತ್ತೆ
ಮತ್ತೆ ನಿರಾಸೆಯ ಕಾರ್ಮೋಡ
ಆವರಿಸುತ್ತಿರಲು ಹರುಷವದು
ಸ್ಪುರಿಸಿತಾದರೂ ಹೇಗೆ ?
ಬೋಳಾದ ಮರಗಳೆಲ್ಲ
ವಸಂತದ ಬರುವೆಗೆ ಕಾಯ್ವಂತೆ
ಮೂಡುವ ನವ ಸಂವತ್ಸರದೊಟ್ಟಿಗೆ
ಹೊಸ ಹಾದಿ ತೆರೆದೀತು
ಹೊಸಕನಸಿನೆಡೆಗೆ ಬದುಕು
ನೆಗೆದೀತು ಎನ್ನುವ ಕಾಂಕ್ಷೆಯೊಳಗೆ
ಮುಳುಗಿರಲು ಕಾಲ ಹೇಗೆ ತಾನೇ
ನಮ್ಮವಸರಕೆ ಸಾಗೀತು ?
ತೊರೆಗೆ ಹರಿದು ಸಾಗುವ
ಹರಿವಿಲ್ಲದಾಗಿರಲು
ಹಾಡೊಂದು ಮೂಡಿತಾದರೂ ಹೇಗೆ ?
ಸಾಗಬೇಕೆನ್ನುವ ದಾರಿಗಳೆಲ್ಲ
ಮುಂದೆ ಹಾದಿಯಿಲ್ಲದಂತೆ
ಕಂದಕವೇ ನಿಲ್ಲುತ್ತಿರಲು
ಮುನ್ನುಗ್ಗುವ ಹುಕಿ ಮೊಳೆಯುವುದಾದರೂ ಹೇಗೆ ?
ಮಗ್ಗುಲು ಬದಲಿಸದೆ ಅದೆಷ್ಟು
ಕಾಲ ಹೀಗೆ ಇದ್ದೀತು ಈ ಬದುಕು ! ಎನ್ನುವ
ಆಶಾವಾದವನ್ನೇ ಹೃದಯಕ್ಕೆ
ಧಾರೆಯೆರೆದಾಗಲೂ ಮತ್ತೆ
ಮತ್ತೆ ನಿರಾಸೆಯ ಕಾರ್ಮೋಡ
ಆವರಿಸುತ್ತಿರಲು ಹರುಷವದು
ಸ್ಪುರಿಸಿತಾದರೂ ಹೇಗೆ ?
ಬೋಳಾದ ಮರಗಳೆಲ್ಲ
ವಸಂತದ ಬರುವೆಗೆ ಕಾಯ್ವಂತೆ
ಮೂಡುವ ನವ ಸಂವತ್ಸರದೊಟ್ಟಿಗೆ
ಹೊಸ ಹಾದಿ ತೆರೆದೀತು
ಹೊಸಕನಸಿನೆಡೆಗೆ ಬದುಕು
ನೆಗೆದೀತು ಎನ್ನುವ ಕಾಂಕ್ಷೆಯೊಳಗೆ
ಮುಳುಗಿರಲು ಕಾಲ ಹೇಗೆ ತಾನೇ
ನಮ್ಮವಸರಕೆ ಸಾಗೀತು ?
ಪ್ರವೀಣಕುಮಾರ್ ಗೋಣಿಯವರ ಇತರೆ ಕವಿತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment