ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.
‘ಸ್ನಾನ ಮಾಡ್ಬೇಕಾದ್ರೆ ನನಗೆ ಎದೆ ಇಟ್ಟುಕೊಂಡು ಕೂಕ್ಕೊಂಡ್ರೂ ನಿಮಗೆ ಕೇಳಲ್ವೇನೋ?’ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
“ಹ್ಹ ಹ್ಹ. ಕೆಲಸ ದುಡ್ಡು ಮನೆ ಅಪ್ಪ ಅಮ್ಮ ಮಕ್ಳು ಈ ಯಾವ ಯೋಚನೇನೂ ಇಲ್ಲದೆ ನಾನು ನಾನಾಗಿರೋದು ಸ್ನಾನ ಮಾಡುವಾಗ ಮಾತ್ರ. ಬಹುಶಃ ಕೇಳಲ್ಲ”
‘ಸರಿ ಸರಿ. ನಿಮ್ದು ಗೊತ್ತಿರೋದೇ ಅಲ್ವ. ಸಾರು ಕೆಟ್ಟೋಗಿದೆ. ಡ್ಯೂಟಿಗೆ ಹೋಗೋಕೆ ಮುಂಚೆ ಮೊಟ್ಟೆ ತಗಂಡು ಬನ್ನಿ ಅಂದೆ’
“ಛೀ ಛೀ. ಭ್ರೂಣ ಹತ್ಯೆ ಎಲ್ಲ ಮಾಡಬಾರದು. ಕೋಳೀನೇ ತಂದುಕೊಡ್ತೀನಿ. ಬಿರಿಯಾನಿ ಮಾಡಿ ಛಾಪ್ಸ್ ಗೊಜ್ಜು ಮಾಡಿಡು”
‘ಬಿರಿಯಾನಿ ಮಾಡಿದ್ರೆ ರಾತ್ರಿ ಅಷ್ಟೊತ್ತಿಗೆ ತಣ್ಣಗಾಗಿಬಿಡುತ್ತಲ್ರೀ’
“ಪರವಾಗಿಲ್ಲ ಮಾಡು. ಕೋಳಿ ಇದ್ರೆ ಬಿಸೀಗಿದ್ರೂ ಚೆಂದ, ತಣ್ಣಗಾದ್ರೂ ಚೆಂದ”. ರಾಜೀವ್ ಕೋಳಿ ತಂದುಕೊಟ್ಟು ರೆಡಿಯಾಗಿ ಹೋದರು. ಒಂದು ಪ್ಲೇಟ್ ಖಾರಾಬಾತ್ ಕಟ್ಟಿಸಿಕೊಂಡು ಬಂದಿದ್ದರು. ತಿಂಡಿ ಮಾಡೋ ತಾಪತ್ರಯಾನೂ ತಪ್ಪಿತು. ಖಾರಾಬಾತ್ ತಿಂದು ಒಂದು ಕೋಳಿ ನಿದ್ದೆ ತೆಗೆದು ಕೋಳಿ ತೊಳೆದಿಟ್ಟು ಸ್ನಾನಕ್ಕೆ ಹೋದೆ. ಅಡುಗೆ ಮಾಡಲು ಇನ್ನೂ ಸಾಕಷ್ಟು ಸಮಯವಿತ್ತು. ಅಲ್ಲೇ ಸೋಫಾದ ಮೇಲೆ ಅಡ್ಡಾಗಿ ಟಿವಿ ಆನ್ ಮಾಡಿದೆ. ಚಾರ್ಜಿಗಿಟ್ಟಿದ್ದ ಮೊಬೈಲನ್ನು ಕೈಗೆ ತೆಗೆದುಕೊಂಡೆ. ಸಾಗರನ ಮೆಸೇಜು ಬಂದಿತ್ತು! “ಯಾರಿದು?” ಎಂದು ಕಳುಹಿಸಿದ್ದ.
‘ನಿನ್ನ ಫ್ರೆಂಡು’ ಎಂದು ಮೆಸೇಜಿಸಿದೆ.
“ನನ್ನ ಫ್ರೆಂಡ್ಸು ತುಂಬಾ ಜನರಿದ್ದಾರೆ” ತಕ್ಷಣವೇ ಪ್ರತಿಕ್ರಿಯಿಸಿದ.
‘ನಿನ್ನ ಕ್ಲಾಸ್ ಮೇಟು’
“ಸ್ಕೂಲಲ್ಲಿ ಎಂಭತ್ತು ಜನ ಕ್ಲಾಸ್ ಮೇಟ್ಸು, ಪಿಯುಸಿಲಿ ನೂರು, ಮೆಡಿಕಲ್ಲಿನಲ್ಲಿ ನೂರೈವತ್ತು”
‘ಮೆಡಿಕಲ್’
“ನೂರೈವತ್ತು”
‘ನಿಜಕ್ಕೂ ನಾನ್ಯಾರು ಅಂತ ಗೊತ್ತಾಗಲಿಲ್ಲವಾ?’
“ಒಳ್ಳೇ ಕಥೆ ಕಣ್ರೀ ನಿಮ್ದು. ಮೆಸೇಜು ಮಾಡಿರೋರು ನೀವು. ಹೆಸರು ಹೇಳ್ಬೇಕಿರೋದು ನೀವು. ಬೆಳಿಗ್ಗೆ ಬೆಳಿಗ್ಗೆ ಸುಮ್ನೆ ತಲೆ ತಿನ್ತೀರಲ್ಲ”
‘ಸಾರಿ ಸಾರಿ. ಬ್ಯುಸಿ ಇದ್ಯೇನೋ ತೊಂದರೆ ಕೊಟ್ಬಿಟ್ಟೆ. ನಾನು ಧರಣಿ’
“ಓ! ಧರಣೀನ! ಸಾರಿ ಸಾರಿ. ಯಾವ್ದೋ ಮೂಡಲ್ಲಿ ಬಯ್ದುಬಿಟ್ಟೆ”
‘ನಿಜಕ್ಕೂ ನಾನು ಅಂತ ಗೊತ್ತಾಗ್ಲಿಲ್ವ’
“ಗುಡ್ ಮಾರ್ನಿಂಗ್ ಮೆಸೇಜ್ ನೋಡಿ ನೀನು ಅಂತ ಗೊತ್ತಾಗೋದೇಗೆ?”
‘ಗುಡ್ ಮಾರ್ನಿಂಗ್ ಪಕ್ಕ ಸಾರಿ ಅಂತಾನೂ ಕಳುಹಿಸಿದ್ನಲ್ಲ’
“ಹ್ಹ ಹ್ಹ. ಹೌದಲ್ಲ. ಹೊಳೀಲೇ ಇಲ್ಲ ನನಗೆ”
‘ಮತ್ತೆ ಡ್ಯೂಟಿ ಇಲ್ವಾ?’
“ಇವತ್ತು ರೌಂಡ್ಸಷ್ಟೇ ಇದ್ದದ್ದು. ನಂದೀಗ ಕೊನೇ ವರ್ಷ ಅಲ್ವಾ ಹಂಗಾಗಿ ಜಾಸ್ತಿ ಕೆಲಸ ಇರೋದಿಲ್ಲ. ಬೆಳಿಗ್ಗೆ ರೌಂಡ್ಸ್ ಮಾಡಿ ಲೈಬ್ರರಿಗೆ ಬಂದುಬಿಡ್ತೀವಿ. ಜೂನಿಯರ್ಸ್ ಮಿಕ್ಕಿದ ವಾರ್ಡ್ ಕೆಲಸವನ್ನೆಲ್ಲಾ ಮಾಡ್ಕೋತಾರೆ. ಮಧ್ಯಾಹ್ನ ಇನ್ನೊಂದು ರೌಂಡ್ ವಾರ್ಡ್ ತಿರುಗಿ ಬಂದರೆ ಮುಗೀತು”
‘ಮ್. ಲೈಬ್ರರಿಯಲ್ಲಿದ್ದ. ಓದ್ಕೋ ಓದ್ಕೋ. ಡಿಸ್ಟರ್ಬ್ ಮಾಡಲ್ಲ’
“ನೀನು ಪದೇ ಪದೇ ಈ ಡಿಸ್ಟರ್ಬ್, ತೊಂದರೆ ಅನ್ನೋ ಪದಗಳನ್ನೆಲ್ಲಾ ಜಾಸ್ತಿ ಉಪಯೋಗಿಸಬೇಡ. ಅವತ್ತೇ ಹೇಳಿದ್ನಲ್ಲ ಡಿಸ್ಟರ್ಬ್ ಆಗೋದಾದ್ರೆ ನಾನೇ ನೇರವಾಗಿ ಹೇಳ್ತೀನಿ ಅಂತ”
‘ಸಾರಿ ಸಾರಿ’
“ಈ ಪದಾನೂ ಜಾಸ್ತಿ ಉಪಯೋಗಿಸಬೇಡ!”
ಸ್ಮೈಲಿ ಕಳುಹಿಸಿದೆ.
“ಇನ್ನು ನಾಲ್ಕು ತಿಂಗಳಿಗೆ ಪರೀಕ್ಷೆ. ಓದೋದೇ ದೊಡ್ಡ ಟಾರ್ಚರ್ರು. ಎಂಬಿಬಿಎಸ್ ಸಮಯದಲ್ಲಿ ಓದುತ್ತಿದ್ದಂಗೆ ಈಗ ಆಗೋದೇ ಇಲ್ಲ. ಒಂದು ಘಂಟೆ ಪುಸ್ತಕದ ಮುಂದೆ ಕುಳಿತರೆ ತೂಕಡಿಕೆ ಬರುತ್ತೆ”
‘ಏನೋಪ್ಪ. ನನಗೆ ಅದೆಲ್ಲ ಮರೆತೇ ಹೋಗಿದೆ. ಎಂಬಿಬಿಎಸ್ ಮುಗಿದ ಮೇಲೆ ಏನನ್ನೂ ಓದಲೇ ಇಲ್ಲ. ಕೆಲಸಕ್ಕೆ ಸೇರಿ ದುಡಿಯೋದಾಯಿತು. ವಿದ್ಯಾರ್ಥಿ ಜೀವನಾನೇ ಚೆನ್ನಾಗಿತ್ತು’
“ಮ್. ನೀನ್ಯಾಕೆ ಮುಂದಕ್ಕೆ ಓದ್ಲಿಲ್ಲ”
‘ಮದುವೆ ಸ್ವಲ್ಪ ಬೇಗ ಆಗೋಯ್ತು’
“ಮದುವೆ ಆದರೆ ಏನಂತೆ? ನಮ್ಮಲ್ಲಿರೋ ಮೂರು ಜನ ಹುಡ್ಗೀರು ಮದುವೆಯಾದ ಮೇಲೆಯೇ ಸೀಟು ತೆಗೆದುಕೊಂಡು ಬಂದಿರೋದು”
‘ನನ್ನ ಸೋಮಾರೀತನಾನೂ ಕಾರಣವಿರಬೇಕು. ಜೊತೆಗೆ ಇನ್ನೂ ಹತ್ತಲವು ಕಾರಣಗಳಿವೆ. ಮುಂದ್ಯಾವತ್ತಾದರೂ ಹೇಳ್ತೀನಿ ಬಿಡು’
“ಓಕೆ” ಎಂದೊಂದು ಸ್ಮೈಲಿ ಕಳುಹಿಸಿದ.
‘ನಿನ್ನ ಮದುವೆ’ ಎಂದು ಕಣ್ಣು ಮಿಟುಕಿಸಿದೆ.
“ಅಯ್ಯೋ. ಇನ್ನೂ ಅದರ ಬಗ್ಗೆ ಯೋಚ್ನೇನೇ ಮಾಡಿಲ್ಲ. ಪಿಜಿ ಮುಗೀಬೇಕು. ಅದಾದ ನಂತರ ಸೂಪರ್ ಸ್ಪೆಷಾಲಿಟಿ ಮಾಡಬೇಕು. ಒಂದೊಳ್ಳೆ ಕೆಲಸ ಸಿಕ್ಕಿ ಕೈಯಲ್ಲೊಂದಷ್ಟು ದುಡ್ಡು ಸೇರಿದ ಮೇಲೆ ಮದುವೆ ಗಿದುವೆ ಎಲ್ಲ!”
‘ಈ ಸಂಭ್ರಮಕ್ಕೆಲ್ಲ ಎಷ್ಟು ವರುಷ ಹಿಡಿಯುತ್ತೆ!’
“ಆಗುತ್ತೆ ಇನ್ನೂ ಒಂದು ಮೂರು ನಾಲ್ಕು ವರುಷ! ಪಿಜಿ ಮಾಡಿದ್ದು ಸಾಕು ಅನ್ನಿಸಿದ್ರೆ ಕ್ಲಿನಿಕ್ ಇಟ್ಕೊಂಡು ಒಂದು ವರ್ಷದಲ್ಲೇ ಮದುವೆಯಾಗಿಬಿಡೋದು” ಕಣ್ಣು ಮಿಟುಕಿಸಿದ.
‘ನೀನು ಬಿಡಪ್ಪ ಬುದ್ಧಿವಂತ. ಸೂಪರ್ ಸ್ಪೆಷಾಲಿಟಿ ಆರಾಮಾಗಿ ಸಿಗುತ್ತೆ’
“ಸಿಕ್ಕರೆ ಒಳ್ಳೇದು. ನೀನೇನು ಬುದ್ಧಿವಂತಿಕೇಲಿ ಕಡಿಮೆ ಇರಲಿಲ್ಲ ಬಿಡು”
‘ಓ ನನ್ನ ಬಗ್ಗೇನೂ ಗೊತ್ತು ನಿನಗೆ’
“ನಿನ್ನ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಕ್ಲಾಸಲ್ಲಿ ಯಾರ್ಯಾರು ಫಸ್ಟ್ ಕ್ಲಾಸ್ ಯಾರ್ಯಾರಿಗೆ ಡಿಸ್ಟಿಂಕ್ಷನ್ ಅನ್ನೋದಂತು ಗೊತ್ತಿರೋದು. ಒಂದೋ ಎರಡು ಸಲಾನೋ ನೀನು ಡಿಸ್ಟಿಂಕ್ಷನ್ ತಗೊಂಡಿದ್ದೆ ಅಲ್ವಾ?”
ಕೊಬ್ಬು ನೋಡು ಇವನಿಗೆ. ನಿನ್ನ ಬಗ್ಗೆ ಗೊತ್ತಿತ್ತು ಅಂತ ಸುಳ್ಳಾದರೂ ಹೇಳಿದ್ದರೆ ನನಗೆ ಖುಷಿಯಾಗುತ್ತಿರಲಿಲ್ಲವಾ?
‘ಒಂದು ಸಲ ಡಿಸ್ಟಿಂಕ್ಷನ್ ಬಂದಿತ್ತು’
“ನಾನು ಮೂರು ಸಲ ಫಸ್ಟ್ ಕ್ಲಾಸು ಒಮ್ಮೆ ಜಸ್ಟ್ ಪಾಸು”
‘ಮ್’
“ಎಂಬಿಬಿಎಸ್ ಮುಗಿದ ಮೇಲೆ ಓದಿದ್ರೆ ನೀನು ಒಳ್ಳೇ ಪಿಜಿ ಸೀಟೇ ತಗೋತಿದ್ದೆ ಬಿಡು. ಈಗ್ಲೂ ಏನು ಟೈಮು ಮಿಂಚಿರೋದು. ಓದ್ಕೊಂಡ್ರೆ ಆರಾಮಾಗಿ ಸೀಟು ಸಿಗುತ್ತೆ ನಿನಗೆ”
‘ನನಗೇ ನನ್ನ ಮೇಲೆ ಅಷ್ಟು ನಂಬಿಕೆಯಿಲ್ಲ ಈಗ! ನೋಡೋಣ ಏನಾಗುತ್ತೋ ಅಂತ’
“ಪಿಜಿನೋ ಮತ್ತೊಂದೋ. ನೆಮ್ಮದಿಯಾಗಿದ್ರೆ ಆಯ್ತು”
‘ಈಗ ಸ್ವಲ್ಪ ಅಡುಗೆ ಕೆಲಸವಿದೆ. ಆಮೇಲೆ ಮೆಸೇಜ್ ಮಾಡ್ತೀನಿ’
ಏನೂ ಉತ್ತರ ಬರಲಿಲ್ಲ. ಎರಡು ನಿಮಿಷ ಕಾದು. ‘?’ ಎಂದು ಕಳುಹಿಸಿದೆ.
“ಏನು?”
‘ಮೆಸೇಜಿಗೆ ಏನೂ ರಿಪ್ಲೈ ಮಾಡಲೇ ಇಲ್ಲ’
“ಯಾವ ಮೆಸೇಜು?”
‘ಈಗ ಸ್ವಲ್ಪ ಅಡುಗೆ ಕೆಲಸವಿದೆ. ಆಮೇಲೆ ಮೆಸೇಜ್ ಮಾಡ್ತೀನಿ ಅನ್ನೋ ಮೆಸೇಜಿಗೆ’
“ಅದಕ್ಕೇನು ರಿಪ್ಲೈ ಮಾಡೋದು?”
‘ಹ್ಹ ಹ್ಹ. Informal ಸಾಗರ್! ಸರಿ ಸರಿ’ ಒಂದಿಡೀ ಸಾಲು ಸ್ಮೈಲಿ ಕಳುಹಿಸಿದೆ
ಬದಲಿಗೆ ಒಂದು ಸ್ಮೈಲಿ ಕಳುಹಿಸಿದ.
No comments:
Post a Comment