ಕು.ಸ.ಮಧುಸೂದನರಂಗೇನಹಳ್ಳಿ
ಬೆಳಕಿನಲಿ ಬೆತ್ತಲಾಗಲು ನಾಚಿದವರೆಲ್ಲ
ಕಾಯುತ್ತಿದ್ದಾರೆ ಕತ್ತಲಿಗಾಗಿ
ಕಟ್ಟಿದ ಕೋಟೆಗಳ ಕೆಡವಿ
ಎತ್ತರಿಸಿದ್ದ ಗೋಡೆಗಳ ಒಡೆದು
ಇದ್ದಬದ್ದಬಾಗಿಲು ಕಿಟಿಕಿಗಳನ್ನು ತೆಗೆದೆಸೆದರು
ಬೆಳಗುತ್ತಿದ್ದ ಸೂರ್ಯನಿಗೆ ಠಾರು ಬಳಿದರು
ತಮ್ಮ ನಿರ್ವೀಯತೆಯ ಪ್ರಕಟಗೊಳಿಸಿದ
ಹಗಲನ್ನು ಧಿಕ್ಕರಿಸಿ ಪಶ್ಚಿಮದಲ್ಲಿ ನಿಂತು
ಕಾಯುತ್ತ ಕೂತರು ಜಗದ ಕೊನೆಯ ಸೂರ್ಯಾಸ್ತಕ್ಕೆ
ಅದೇನು ರೋಗವೋ ಏನೊ ಅವತ್ತು ಎಂದಿನಂತೆ
ಗಡಿಯಾರ ಓಡಿದಂತೆ ಕಾಣಲಿಲ್ಲ
ಕಡಲತಡಿಯಲ್ಲಿ ಕಾದವರು ಅಲ್ಲೇ ಬೇರು ಬಿಟ್ಟು
ಕಾಯುತ್ತ ತೂಕಡಿಸುತ್ತಿರಲು
ಅದ್ಯಾವ ಮಾಯದಲ್ಲೋ ಅವರ ಬೆನ್ನ ಹಿಂದಿನ ಪೂರ್ವದಲ್ಲಿ
ಮತ್ತೊಂದು ಹಗಲು ಕೊಡೆ ಬಿಚ್ಚಿ
ಹೆಡೆಯಾಡಿಸುತ್ತಿತ್ತು
ಪಶ್ಚಿಮ ಮತ್ತೆ ಪೂರ್ವದತ್ತ ಮುಖ ಮಾಡಿ
ನಿಲ್ಲಬೇಕಾಯಿತು.
ಬೆಳಕಿನಲಿ ಬೆತ್ತಲಾಗಲು ನಾಚಿದವರೆಲ್ಲ
ಕಾಯುತ್ತಿದ್ದಾರೆ ಕತ್ತಲಿಗಾಗಿ
ಕಟ್ಟಿದ ಕೋಟೆಗಳ ಕೆಡವಿ
ಎತ್ತರಿಸಿದ್ದ ಗೋಡೆಗಳ ಒಡೆದು
ಇದ್ದಬದ್ದಬಾಗಿಲು ಕಿಟಿಕಿಗಳನ್ನು ತೆಗೆದೆಸೆದರು
ಬೆಳಗುತ್ತಿದ್ದ ಸೂರ್ಯನಿಗೆ ಠಾರು ಬಳಿದರು
ತಮ್ಮ ನಿರ್ವೀಯತೆಯ ಪ್ರಕಟಗೊಳಿಸಿದ
ಹಗಲನ್ನು ಧಿಕ್ಕರಿಸಿ ಪಶ್ಚಿಮದಲ್ಲಿ ನಿಂತು
ಕಾಯುತ್ತ ಕೂತರು ಜಗದ ಕೊನೆಯ ಸೂರ್ಯಾಸ್ತಕ್ಕೆ
ಅದೇನು ರೋಗವೋ ಏನೊ ಅವತ್ತು ಎಂದಿನಂತೆ
ಗಡಿಯಾರ ಓಡಿದಂತೆ ಕಾಣಲಿಲ್ಲ
ಕಡಲತಡಿಯಲ್ಲಿ ಕಾದವರು ಅಲ್ಲೇ ಬೇರು ಬಿಟ್ಟು
ಕಾಯುತ್ತ ತೂಕಡಿಸುತ್ತಿರಲು
ಅದ್ಯಾವ ಮಾಯದಲ್ಲೋ ಅವರ ಬೆನ್ನ ಹಿಂದಿನ ಪೂರ್ವದಲ್ಲಿ
ಮತ್ತೊಂದು ಹಗಲು ಕೊಡೆ ಬಿಚ್ಚಿ
ಹೆಡೆಯಾಡಿಸುತ್ತಿತ್ತು
ಪಶ್ಚಿಮ ಮತ್ತೆ ಪೂರ್ವದತ್ತ ಮುಖ ಮಾಡಿ
ನಿಲ್ಲಬೇಕಾಯಿತು.
No comments:
Post a Comment