ಪ್ರವೀಣಕುಮಾರ್ ಗೋಣಿ
ನಿಗಿ ನಿಗಿ ನಿಡುಸೊಯ್ಯುವ
ಸಂಕಟಕ್ಕೆ ಮೌನವೊಂದೇ
ಸಾಂತ್ವನದ ಸಾನಿಧ್ಯ
ಕೊಡುವಾಗ ಮತ್ಯಾಕೆ
ಬೇಕಾಗಿತು ಮಾತಿನಾ ಗೊಡವೆ ?
ಎದೆಯ ಹೊಲದ ಮೇಲೆ
ನರಳಿಕೆಯ ಗರಿಕೆಯೇ
ಪೊಗಸ್ತಾಗಿ ಹಬ್ಬಿರಲು
ಹರುಷದ ಹೂವರಳಿಸುವ
ಕಾಯಕವದು ಅದೆಷ್ಟು ಯಾತನೆಯದು
ಬಲ್ಲವರಷ್ಟೇ ಬಲ್ಲರು !
ಮಗ್ಗುಲು ಬದಲಿಸುವ
ಬದುಕಿಗಾಗೇ ಕಾಯ್ದು
ಕುಳಿತವನ ಹೃದಯದ
ಸಹನದೆದುರು ಮತ್ತೊಂದು
ತಾಳ್ಮೆ ಇರಲಾರದೇನೋ ?
ಭಯ ಅರಳಿಸುವ
ಬವಣೆಗಳ ಮರೆಯುತ್ತ
ಅಭಯ ಚಾಚುವ
ಅಗೋಚರ ಹಸ್ತಗಳ ಹುಡುಕುತ್ತ
ಸಾಗುವ ಹಾದಿಯೇ
ಬದುಕು ಎನಿಸಿಬಿಡುವುದು ಅದೆಷ್ಟೋ ಸಲ !
ಪ್ರವೀಣಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment