ಡಾ. ಅಶೋಕ್. ಕೆ. ಆರ್.
“ಧರಣಿ….ಏ….ಧರಣಿ” ದೂರದಿಗಂತದಲ್ಲಿ ಕೇಳಿಸುತ್ತಿದ್ದ ಅಮ್ಮನ ದನಿ. ಅಮ್ಮ ನನ್ನಿಂದ ದೂರಾಗುತ್ತಿದ್ದರೋ ನಾ ಅಮ್ಮನಿಂದ ದೂರಾಗುತ್ತಿದ್ದೆನೋ ತಿಳಿಯದೆ ಎಲ್ಲವೂ ಗೊಂದಲಮಯ. ರಾಧ ಎಲ್ಲಿ ಕಾಣಿಸುತ್ತಲೇ ಇಲ್ಲವಲ್ಲ.
“ಧರಣಿ……ಧರಣಿ” ಅಮ್ಮನ ದನಿ ಇನ್ನಷ್ಟು ಜೋರಾಯಿತು. ಇಲ್ಲ…….ನಾ ಅಮ್ಮನಿಂದ ಅಮ್ಮ ನನ್ನಿಂದ ದೂರಾಗುತ್ತಿಲ್ಲ ಹತ್ತಿರವಾಗುತ್ತಿದ್ದೇವೆಂಬುದರಿವಾಗಿ ಒಂದಷ್ಟು ಸಮಾಧಾನ. ಧರಣಿ ಧರಣಿ….. ಅಮ್ಮನ ಕೂಗು ಮಾತ್ರ ನಿಲ್ಲುತ್ತಲೇ ಇಲ್ಲ. ಇದ್ಯಾಕೆ ಅಮ್ಮ ಹೀಗೆ ಒಂದೇ ಸಮನೆ ಕೂಗುತ್ತಿದ್ದಾರೆ? ಅಪ್ಪನಿಗೇನಾದರೂ ಆಯಿತಾ? ಅಮ್ಮನಿಗೇ ಏನಾದರಾಯಿತಾ? ಅಥವಾ ರಾಧ…… ʼಅಯ್ಯೋ ರಾಧʼ ಎಂದು ಬೆಚ್ಚಿಬಿದ್ದವಳ ಬೆನ್ನ ಮೇಲೊಂದು ಬಲವಾದ ಹೊಡೆತ ಬಿತ್ತು. ʼಅಯ್ಯೋ ಅಮ್ಮʼ ಎಂದು ಕೂಗಿಕೊಳ್ಳುತ್ತಾ ಕಣ್ಣು ತೆರೆದು ಅಗಲಿಸಿ ನೋಡಿದರೆ ಕಂಡಿದ್ದು ನಮ್ಮ ಮನೆಯ ಡೈನಿಂಗ್ ಟೇಬಲ್ಲು. ಟೇಬಲ್ಲಿನ ಮೇಲಿದ್ದ ತಟ್ಟೆ, ತಟ್ಟೆಯೊಳಗೆ ಮುಕ್ಕಾಲು ಚಪಾತಿ ಒಂದು ಸೌಟಿನಷ್ಟು ಬೆಂಡೆಕಾಯಿ ಪಲ್ಯ, ನನ್ನ ಕೈಯೊಳಗೆ ಚಪಾತಿಯ ಒಂದು ತುಂಡು, ಎದುರಿಗೆ ನಗಾಡುತ್ತಾ ಕುಳಿತಿದ್ದ ಅಪ್ಪ.
“ನಿಂಗೇನೇ ಬಂದು ದೊಡ್ರೋಗ. ಊಟ ಮಾಡ್ತಾ ಮಾಡ್ತಾನೇ ನಿದ್ರೆ ಹೋಗಿದ್ದೀಯಲ್ಲ” ಅಮ್ಮನ ನಗೆಮಿಶ್ರಿತ ಮಾತು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.