ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....
ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....
ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ
ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,
ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,