Nov 4, 2018

ಧಗಧಗಿಸುವೊಂದು ಮದ್ಯಾಹ್ನ!


ಕು.ಸ.ಮಧುಸೂದನ್

ನಕ್ಷತ್ರಗಳು ಬೂದಿಯಾಗಿ
ಚಂದ್ರ ಕರಗಿ
ಸೂರ್ಯ ನಿಗಿನಿಗಿ ಕೆಂಡವಾಗಿ

ತೆಂಗಿನ ಮರಕೆ ಬಡಿದು ಸಿಡಿಲು
ನಾಲ್ಕಂಕಣದ ಮನೆತೊಲೆಗಳಿಗೆ ಗೆದ್ದಲು
ನೆಲ ಮಾಳಿಗೆಯೊಲು ಹೂತಿಟ್ಟ ಹೆಣಗಳು ತೂಗಿ

ಹುಳು ಬಿದ್ದು ಅನ್ನದ ತಟ್ಟೆಯೊಳಗೆ
ಹದ್ದುಗಳು ಹಣಕುತ್ತ ಅಮೃತದ 
ಬಟ್ಟಲೊಳಗೆ ಬಾಗಿ
ಕು.ಸ.ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಪಿಂಡಕ್ಕೆ ಗೋಗರೆಯುತ್ತ ಕಾಗೆಗಳು
ಹುಟ್ಟಿದ ಮಗುವಿಗೆ ನಾಲ್ಕು ಕೈ ನಾಲ್ಕು ಕಾಲು
ನೆತ್ತಿಯ ಮೇಲೊಂದು ಕಣ್ಣಿರಲಾಗಿ

ನೀರಿರದ ನದಿಗಳು
ಮುಟ್ಟಿನ ಸ್ರಾವ ನಿಂತ ಕೆರೆಕೊಳ್ಳಗಳು
ಕಡಲೊಳಗೆ ತೇಲುತ್ತ ರುಂಡಮುಂಡಗಳು ಸಾಲಾಗಿ

ಹಸುವಿಗೆ ಹುಲಿಗಳ ಉಗುರು
ಹರಿಣಿಗೆ ಸಿಂಹದ ಬಾಯಿ
ಬಂದು ಕುದುರೆಗೆ ಕೋಡು------ ಹೀಗಿರಲಾಗಿ

ಹಾಲು ಕುಡಿದ ಹಸುಗೂಸಿನ ಕಣ್ಣೊಳಗೆ ವಿಷಪ್ರಾಶನದ ನೀಲಿ ಬಣ್ಣ
ಮದ್ಯಾಹ್ನದ ಸೂರ್ಯನಿಗೆ ಶಿವನಿತ್ತ ಮೂರನೇ ಕಣ್ಣ!

No comments:

Post a Comment