ಪ್ರವೀಣಕುಮಾರ್ ಗೋಣಿ
ಸುಮ್ಮನೆ ನೀರಾಡುವ
ಕಂಗಳ ಹಸಿಯಲ್ಲಿ ನಿನ್ನ ಕಂಡೆ
ನಕ್ಕು ಹಗುರಾದಾಗ
ಸ್ಪುರಿಸಿದ ಸಮಾಧಾನದಲ್ಲಿ ನಿನ್ನ ಕಂಡೆ .
ಸಾಕೆನಿಸಿದ ಬದುಕ ಜಂಜಾಟದಲ್ಲೂ
ಸೋಕಿದ ಸಂಕಟದೊಳಗೂ ನೀನೇ ಕಂಡೆ
ಮುಸುಕು ಸರಿಸಿ ಅರಳಿದ
ಸಂಭ್ರಮದ ಸಡಗರದಲ್ಲೂ ನಿನ್ನನೇ ಕಂಡೆ .
ನೀನಿತ್ತ ಕಾಯದೊಳಗಿನ
ಅರಿವ ಬಿಸಿಗೆ ಮೈಯೊಡ್ಡಿ
ಕುಳಿತಾಗಲೂ ಬರೀ ನೀನೇ ಕಂಡೆ
ನಿನ್ನ ಹೊರತು ಬೇರೇನಿಲ್ಲದ
ನಿರಾಡಂಬರದಲ್ಲೊ ಆಡಂಬರದಿಂದಿರುವ
ಸಾಕ್ಷಿತ್ವದ ಪ್ರಭೆಯಲ್ಲೂ ಬರೀ ನೀನೇ ಕಂಡೆ .
No comments:
Post a Comment