ಕೆ.ಜಿ .ಸರೋಜಾ ನಾಗರಾಜ್ ಪಾಂಡೊಮಟ್ಟಿ
ಮತ್ತೇರಿಸುವ ನಿನ್ನ ಮಾತಿನಲ್ಲಿ
ಇಂದೇಕೆ ಈ ಗಮಲು ಅಮಲಿನಲ್ಲಿ ..
ಕಾಡುವುದಿದ್ದರೆ ಈ ರಾತ್ರಿ ಕಾಡಿಬಿಡು
ಸಮಯ ಕ್ಷಣ ಕ್ಷಣಕ್ಕೂ ಕಮ್ಮಿಯಾಗುತ್ತಿದೆ ..
ಸಂಬಂಧದ ಕೊಂಡಿ ಕಳಚುತ್ತಾ ಇದೆ ಎಂದಾಗ ನನ್ನಲ್ಲಿ
ಸ್ಪಷ್ಟವಾಗಿ ಕಂಡಿದ್ದು ನಿನ್ನ ಹೃದಯ ಸಾರಾಯಿಯಲ್ಲಿ .
ನಶೆ ದುರ್ಬಲತೆ ಎನ್ನುವುದಾದರೇ
ಪ್ರೀತಿ ಗುಲಾಮಗಿರಿಗೇ ದಾರಿ ಎನ್ನುವುದೇ ತತ್ವವಾದರೇ ..
ಪ್ರೀತಿ ತುಂಬಿಕೊಂಡ ನಿಶೆ ನಿನಗಾಗಿ
ಕಾಯುತ್ತಿದೆ ಕಣ್ಣಲ್ಲಿ ಅರಳಿದ ಕನಸ ಗಮ್ಮತ್ತಿಗಾಗಿ ..
ಮುಂಗೋಪದ ಮಾಲಿಷ್ ಕೊಡಬೇಡ
ಈ ರಾತ್ರಿಯನ್ನು ನನ್ನ ಹೆಸರಿಗೆ ನೀ ಬರೆಯಬೇಡ !
Simply superb..Very good composition..super like
ReplyDeleteCommented by Leelavathi prabhakar Hegde👆👆👆
ReplyDeleteಕವಿತೆ ರಸಾತ್ಮಕವಾಗಿದೆ. ಓದಲು ಕುತೂಹಲ ಎನಿಸುತ್ತದೆ
ReplyDeleteಕವನ ಬಹಳ ಸುಂದರ. ಆದರೆ ಪದಗಳ ಜೋಡಣೆ ಇನ್ನು ಆಳವಾಗಿ ಇದ್ದರೆ ಚಂದ..
ReplyDeleteಕವನ ಎಲ್ಲೋ ಕರೆದುಕೊಂಡು ಹೋಗುತ್ತದೆ. ಸುಂದರ ವಿಹಾರ.👌
ReplyDelete