ಕು.ಸ.ಮಧುಸೂದನರಂಗೇನಹಳ್ಳಿ
ದೇಶವೆನ್ನೋದು
ಕಲ್ಲು ಮಣ್ಣಿನ ಭೂಮಿ ಮಾತ್ರವಾಗಿದ್ದಾಗ
ಬಣ್ಣದ ಭೂಪಟದಲ್ಲಿ ಬರೆದ ಕಲ್ಪನೆಯ ಗಡಿಗಳು
ಮಾತ್ರವಾದಾಗ
ಅದನ್ನು ಆರಾಧಿಸುವವರು ಭಕ್ತರಾಗುತ್ತಾರೆ
ಅಲ್ಲಗೆಳೆಯುವವರು ದ್ರೋಹಿಗಳಾಗುತ್ತಾರೆ.
ದೇಶವೆನ್ನುವುದು ರಕ್ತಮಾಂಸಗಳಿಂದ ಮಾಡಿದ ಮನುಷ್ಯರ
ಆತ್ಮದಿಂದಾಗಿದ್ದೆಂದು ಬಾವಿಸಿ
ಮತ್ತವರ ಸುಖದು:ಖ ನೋವು ನಲಿವುಗಳು
ಎಲ್ಲರದೂ ಆದಾಗ ಮಾತ್ರ
ದೇಶದೊಳಗೆ ದ್ವೇಷವಿಲ್ಲವಾಗಿ
ದೇಶವಾಸಿಗಳು ಮಾತ್ರ ಉಳಿಯುತ್ತಾರೆ
ಆಗ ದೇಶದ್ರೋಹದ ಬಗ್ಗೆಯಾಗಲಿ ದೇಶಭಕ್ತಿಯ ಬಗ್ಗೆಯಾಗಲಿ
ಮಾತಾಡುವ ಅಗತ್ಯವಿರುವುದಿಲ್ಲ.
No comments:
Post a Comment