Aug 29, 2018

ಮನುಷ್ಯರ ಆತ್ಮದಿಂದಾಗುವ ದೇಶ

ಕು.ಸ.ಮಧುಸೂದನರಂಗೇನಹಳ್ಳಿ
ದೇಶವೆನ್ನೋದು
ಕಲ್ಲು ಮಣ್ಣಿನ ಭೂಮಿ ಮಾತ್ರವಾಗಿದ್ದಾಗ
ಬಣ್ಣದ ಭೂಪಟದಲ್ಲಿ ಬರೆದ ಕಲ್ಪನೆಯ ಗಡಿಗಳು 
ಮಾತ್ರವಾದಾಗ
ಅದನ್ನು ಆರಾಧಿಸುವವರು ಭಕ್ತರಾಗುತ್ತಾರೆ
ಅಲ್ಲಗೆಳೆಯುವವರು ದ್ರೋಹಿಗಳಾಗುತ್ತಾರೆ.

Aug 28, 2018

ಪ್ರೀತಿ

ಪ್ರವೀಣಕುಮಾರ್ ಗೋಣಿ
ಪ್ರೀತಿಸಿದಷ್ಟು ಪಡೆಯುತ್ತ ಹೋಗುವೆ 
ದ್ವೇಷಿಸಿದಷ್ಟು ಕಳೆದುಕೊಳ್ಳುತ್ತಾ ಸಾಗುವೆ 
ಸುಮ್ಮನೆ ಪ್ರೀತಿಸು ! ಅಕಾರಣವಾಗಿ ಪ್ರೀತಿಸು !
ಪ್ರೀತಿಯೊಂದೇ ಪವಿತ್ರವಾದುದ್ದು 
ಪರಮ ಅರಿವಿನ ಹಾದಿಯದು ಪ್ರೀತಿ .

ಪ್ರೀತಿಸುತ್ತ ಪಾಮರತೆಯು ಸರಿವುದು 
ಇರುಳು ಸರಿದು ಹಗಲು ಅರಳುವಂತೆ ,
ಪ್ರೀತಿಸುತ್ತಲೇ ಹೃದಯ ಅರಳುವುದು 
ಮೊಗ್ಗುಗಳೆಲ್ಲ ಅರಳಿ ಪರಿಮಳವ ಬೀರುವಂತೆ . 

Aug 24, 2018

‘ದುರಿತಕಾಲದ ದನಿ’ ಕವನ ಸಂಕಲನ ಬಿಡುಗಡೆ ಸಮಾರಂಭ.

ದಿನಾಂಕ 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನ ಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಬಿಡುಗಡೆಗೊಳಿಸಲಿದ್ದಾರೆ.

ಕೃತಿಯ ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ

ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾರವರು (ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು,ಬೆಂಗಳೂರು) ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇಂದ್ರಪ್ಪ, ನಿರ್ದೇಶಕರು, ಬಾಪೂಜಿ ಇಂಜಿಯರಿಂಗ್ ಕಾಲೇಜು, ದಾವಣಗೆರೆ ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ವಿವರಗಳು

Aug 19, 2018

ಪಕ್ಷಿ ಪ್ರಪಂಚ: ಕೆಂಬೂತ.

greater coucal
ಚಿತ್ರ ೧: ಎಲೆಯೊಂದಿಗೆ ಕೆಂಬೂತ.
ಕುಪ್ಪಳವೆಂದೂ ಕರೆಯಲ್ಪಡುವ ಈ ಪಕ್ಷಿ ರೆಕ್ಕೆಗೆ ಬಣ್ಣ ಬಳಿದುಕೊಂಡ ಕಾಗೆಯಂತೆ ಕಾಣಿಸುತ್ತದೆ! 

ಆಂಗ್ಲ ಹೆಸರು: Crow pheasant (ಕ್ರೋ ಫೀಸೆಂಟ್) 
Greater coucal (ಗ್ರೇಟರ್ ಕುಕೋಲ್)
Southern coucal (ಸದರ್ನ್ ಕುಕೋಲ್) 

ವೈಜ್ಞಾನಿಕ ಹೆಸರು: Centropus sinensis (ಸೆಂಟ್ರೋಪಸ್ ಸಿನೆನ್ಸಿಸ್) 

ಕಾಗೆಗಿಂತ ಕೊಂಚ ದೊಡ್ಡಕ್ಕಿರುವ ಕೆಂಬೂತಗಳನ್ನು ಅವುಗಳ ರೆಕ್ಕೆಯ ಬಣ್ಣದಿಂದ ಸುಲಭವಾಗಿ ಗುರುತಿಸಬಹುದು. ಕಪ್ಪು ತಲೆ, ಕಪ್ಪು - ಗಾಢ ನೀಲಿ/ನೇರಳೆ ಬಣ್ಣ ಮಿಶ್ರಿತ ಕತ್ತು - ಎದೆ - ದೇಹವನ್ನೊಂದಿರುವ ಕೆಂಬೂತಗಳ ರೆಕ್ಕೆಯ ಬಣ್ಣ ಕಂದು. ಅಗಲವಾದ ರೆಕ್ಕೆಗಳಿವಕ್ಕಿವೆ. ಕಪ್ಪು ಬಣ್ಣದ ಉದ್ದನೆಯ ಬಾಲದ ರೆಕ್ಕೆಗಳನ್ನಿವು ಹೊಂದಿವೆ. ಕಪ್ಪು ತಲೆಯಲ್ಲಿ ಕೆಂಪನೆಯ ಕಣ್ಣುಗಳು ಎದ್ದು ಕಾಣಿಸುತ್ತವೆ. ವಿಶಾಲ ರೆಕ್ಕೆಗಳಿದ್ದರೂ ಹಾರುವುದನ್ನು ಹೆಚ್ಚು ಇಷ್ಟಪಡದ ಪಕ್ಷಿಯಿದು. ಅಪಾಯದ ಸೂಚನೆ ಸಿಕ್ಕಾಗಷ್ಟೇ ಹಾರುತ್ತವೆ, ನಿಧಾನಗತಿಯಲ್ಲಿ. ಮಿಕ್ಕ ಸಮಯದಲ್ಲಿ ಘನ ಗಂಭೀರತೆಯಿಂದ ನಡೆದು ಹೋಗುವುದೇ ಕೆಂಬೂತಕ್ಕೆ ಪ್ರಿಯ. ನಡೆಯುವಿಕೆಯ ಮಧ್ಯೆ ಆಗಾಗ ಕುಪ್ಪಳಿಸುವುದರಿಂದ ಇದಕ್ಕೆ ಕುಪ್ಪಳವೆಂಬ ಹೆಸರು ಬಂದಿದೆ. 

Aug 14, 2018

ಏಕಕಾಲಕ್ಕೆ ಚುನಾವಣೆಗೆ ಬಾಜಪದ ಶಿಫಾರಸ್ಸು! ಯಾಕೆ ಮತ್ತು ಹೇಗೆ?

ಕು.ಸ.ಮಧುಸೂದನ ರಂಗೇನಹಳ್ಳಿ 
ಅಂತೂ ವಿವಿದ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಪಂಡಿತರುಗಳ ವಿರೋಧಗಳ ನಡುವೆಯೂ ದೇಶದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ತನ್ನ ನಿಲುವಿಗೆ ಬದ್ದವಾಗಿರುವ ಬಾಜಪ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ಇದೀಗ ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗಳ ಜೊತೆಗೆ ದೇಶದ ಇತರೆ ಹನ್ನೊಂದು ರಾಜ್ಯಗಳ ವಿದಾನಸಭೆಗಳಿಗೂ ಚುನಾವಣೆ ನಡೆಸುವ ಶಿಫಾರಸ್ಸೊಂದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುವ ಬಗ್ಗೆ ಚಿಂತಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾರವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಇನ್ನು ಕೇಂದ್ರ ಸರಕಾರ ಅಧಿಕೃತವಾಗಿ ಈ ಬಗ್ಗೆ ಚುನಾವಣಾ ಅಯೋಗಕ್ಕೆ ಶಿಫಾರಸ್ಸು ಮಾಡುವ ಸಾದ್ಯತೆ ಹೆಚ್ಚಿದೆ. 

ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ್, ಮಿಜೋರಾಂ ರಾಜ್ಯಗಳಲ್ಲಿ ಮುಂದಿನ ಮೆ ತಿಂಗಳವರೆಗು ರಾಜ್ಯಪಾಲರ ಆಡಳಿತವನ್ನು ಹೇರುವುದು. 2019ರ ಅಂತ್ಯಕ್ಕೆ ಅವಧಿ ಮುಗಿಯಲಿರುವ ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರ,ಹರಿಯಾಣ, ಜಾರ್ಖಂಡ್ ರಾಜ್ಯಗಳ ಸರಕಾರಗಳನ್ನು ಅವಧಿಗೆ ಮುಂಚಿತವಾಗಿಯೇ ವಿದಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಯ ಜೊತೆಗೆ ಸದರಿ ರಾಜ್ಯಗಳಿಗೂ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು. 2020ಕ್ಕೆ ಚುನಾವಣೆಗೆ ಹೋಗಬೇಕಿರುವ ಬಿಹಾರದಲ್ಲಿ ತಮ್ಮ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ಅವರ ಮನವೊಲಿಸಿ ಬಿಹಾರದ ವಿದಾನಸಭೆಯನ್ನೂ ಅವಧಿಗೆ ಮುನ್ನವೇ ವಿಸರ್ಜಿಸಿ ಲೋಕಸಭೆಯ ಜೊತೆಗೇನೆ ಚುನಾವಣೆಗೆ ಹೋಗುವಂತೆ ಮಾಡುವುದು. ಅಲ್ಲಿಗೆ ತಮ್ಮ ಹಿಡಿತದಲ್ಲಿರುವ ಎಂಟು ರಾಜ್ಯಗಳನ್ನು ಚುನಾವಣೆಗೆ ಸಿದ್ದಪಡಿಸಿದಂತಾಗುತ್ತದೆ. ಇದರ ಜೊತೆಗೆ ಹೇಗಿದ್ದರೂ ಮುಂದಿನ ಮೇ ತಿಂಗಳ ಹೊತ್ತಿಗೆ ಸಹಜವಾಗಿಯೆ ಚುನಾವಣೆ ನಡೆಯಬೇಕಿರುವ ಆಂದ್ರ ಪ್ರದೇಶ, ತೆಲಂಗಾಣ, ಒಡಿಶ್ಸಾ ರಾಜ್ಯಗಳೂ ಸೇರಿಕೊಂಡರೆ ದೇಶದ ಮುವತ್ತು ರಾಜ್ಯಗಳ ಪೈಕಿ ಸುಮಾರು ಹನ್ನೊಂದು ರಾಜ್ಯಗಳು ಲೋಕಸಭೆಯ ಜೊತೆಗೆಯೇ ಚುನಾವಣೆ ಎದುರಿಸುವಂತಾಗುತ್ತದೆ. ಇದು ಸದ್ಯದಲ್ಲಿ ಬಾಜಪ ಮಾಡಲಿರುವ ಶಿಫಾರಸ್ಸಿನ ಹಿಂದಿರುವ ಚಾಣಾಕ್ಷ್ಯ ನಡೆಯಾಗಿದೆ. 

Aug 12, 2018

ಪಕ್ಷಿ ಪ್ರಪಂಚ: ಬೂದು ಮಂಗಟ್ಟೆ.

ಚಿತ್ರ ೧: ಆಲದ ಮರದ ಹಣ್ಣು ಸವಿಯುತ್ತಿರುವ ಬೂದು ಮಂಗಟ್ಟೆ. 
ನಮ್ಮಲ್ಲಿ ಹೆಚ್ಚು ಕಂಡುಬರುವ ಆಕರ್ಷಕ ಬಣ್ಣಗಳಿಲ್ಲದ ಮಂಗಟ್ಟೆಗಳೆಂದರೆ ಅವು ಬೂದು ಮಂಗಟ್ಟೆಗಳು. 

ಆಂಗ್ಲ ಹೆಸರು: Indian grey hornbill (ಇಂಡಿಯನ್ ಗ್ರೇ ಹಾರ್ನ್ ಬಿಲ್) 
ವೈಜ್ಞಾನಿಕ ಹೆಸರು: Ocyceros birostris (ಒಸಿಕೆರಾಸ್ ಬಿರೋಸ್ಟ್ರಿಸ್) 

ಎತ್ತರದ ಮರಗಳಲ್ಲಿ ಜೋಡಿಯಾಗಿ ಅಥವಾ ಕೆಲವೊಮ್ಮೆ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ ಬೂದು ಮಂಗಟ್ಟೆಗಳು. ಉದ್ದ ಕೊಕ್ಕಿನ ದೊಡ್ಡ ದೇಹದ ಈ ಪಕ್ಷಿಗಳ ಗುರುತಿಸುವಿಕೆ ಕಷ್ಟವಲ್ಲ. ಹೆಸರೇ ಸೂಚಿಸುವಂತೆ ಬೂದು ಬಣ್ಣದ ಪಕ್ಷಿಯಿದು. ದೇಹದ ತುಂಬ ಬೂದು ಬಣ್ಣದ ರೆಕ್ಕೆ ಪುಕ್ಕಗಳಿವೆ. ಎದೆಯ ಭಾಗದಲ್ಲಿ ಬೂದು - ಬಿಳಿ ಮಿಶ್ರಿತ ಬಣ್ಣವಿದೆ. ಬಾಗಿದ ಉದ್ದನೆಯ ಕೊಕ್ಕಿನ ಬಣ್ಣ ಗಾಢ ಬೂದು ಬಣ್ಣದಿಂದ ಕಪ್ಪು. ಕೊಕ್ಕಿನ ತುದಿಯ ಭಾಗ ತೆಳು ಹಳದಿ. ಕೊಕ್ಕಿನ ಮೇಲೊಂದು ಪುಟ್ಟ ಕಪ್ಪನೆಯ ಶಿರಸ್ತ್ರಾಣವಿದೆ. ಕೆಂಪು ಕಣ್ಣುಗಳು ಬೂದು ದೇಹದ ಪಕ್ಷಿಯಲ್ಲಿ ಎದ್ದು ಕಾಣಿಸುತ್ತವೆ. ದೇಹದಷ್ಟೇ ಉದ್ದದ ಬಾಲದ ಗರಿಗಳು ಇವಕ್ಕಿವೆ. ದೇಹದ ಬಣ್ಣಕ್ಕಿಂತ ಕೊಂಚ ಗಾಢ ಬಣ್ಣಗಳನ್ನು ಬಾಲದಲ್ಲಿ ಕಾಣಬಹುದು. ಹೆಣ್ಣಿಗೂ ಗಂಡಿಗೂ ಇರುವ ಪ್ರಮುಖ ವ್ಯತ್ಯಾಸ ಶಿರಸ್ತ್ರಾಣದ ಗಾತ್ರ. ಹೆಣ್ಣಿನಲ್ಲಿದರ ಗಾತ್ರ ಪುಟ್ಟದು. 

ದಳದ ಅದ್ಯಕ್ಷರಾಗಿ ಹೆಚ್.ವಿಶ್ವನಾಥ್: ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುತ್ತಿರುವ ಶ್ರೀ ಹೆಚ್.ಡಿ.ದೇವೇಗೌಡರು

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಮಾಜಿ ಸಚಿವರಾದ ಶ್ರೀ ಹೆಚ್. ವಿಶ್ವನಾಥ್ ಅವರನ್ನು ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಮಾಡುವ ಮೂಲಕ ಶ್ರೀ ದೇವೇಗೌಡರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಚಾಣಾಕ್ಷ್ಯ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಆದರೆ ಅದು ಅವರದೇ ಪಕ್ಷದ ಮೈತ್ರಿ ಸರಕಾರದ ಮೇಲೆ ಬೀರಬಹುದಾದ ಪ್ರಭಾವಗಳೇನು ಎಂಬುದನ್ನು ನಾವು ಅವಲೋಕಿಸಬೇಕಾಗಿದೆ

ಇದೀಗ ಕರ್ನಾಟಕ ರಾಜ್ಯದ ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಶ್ರೀ ಹೆಚ್. ವಿಶ್ವನಾಥವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಆಂತರೀಕ ವಲಯದಲ್ಲಿ ಇದರ ಬಗ್ಗೆ ಯಾವುದೇ ಭಿನ್ನಮತದ ಮಾತುಗಳು ಕೇಳಿಬರುತ್ತಿಲ್ಲವಾದರೂ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಮಾತ್ರ ಈ ನೇಮಕದ ಹಿಂದಿನ ತಂತ್ರಗಾರಿಕೆಯ ಬಗ್ಗೆ ಪಿಸುಮಾತಿನ ಅಸಮಾದಾನಗಳು ಕೇಳಿ ಬರುತ್ತಿವೆ. ಅದರಲ್ಲೂ ಕಾಂಗ್ರೇಸ್ ಒಳಗಿನ ಸಿದ್ದರಾಮಯ್ಯನವರ ಗುಂಪಿಗೆ ಈ ನೇಮಕ ಇರುಸುಮುರುಸು ಉಂಟು ಮಾಡಿರುವುದಂತು ಸುಳ್ಳೇನಲ್ಲ.

ರಾಜಕೀಯದಲ್ಲಿ ಬಹಳಷ್ಟು ವಿದ್ಯಾಮಾನಗಳು ಸಾಮಾನ್ಯ ಜನರ ಊಹೆಗೂ ನಿಲುಕದ ರೀತಿಯಲ್ಲಿ ನಡೆದು ಹೋಗುವುದು ಸಾಮಾನ್ಯ. ಅದರಲ್ಲೂ ಇಂಡಿಯಾದ ಬಹುಪಕ್ಷೀಯ ರಾಜಕಾರಣದ ಚದುರಂಗದಾಟದಲ್ಲಿ ಮಿತ್ರರು ಶತ್ರುಗಳಾಗುವುದು, ಶತ್ರುಗಳು ಮಿತ್ರರಾಗುವುದು ತೀರಾ ಸಹಜವಾದ ಕ್ರಿಯೆಗಳು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಅವರ ಒಂದು ಕಾಲದ ಗೆಳೆಯ ಶ್ರೀ ಹೆಚ್. ವಿಶ್ವನಾಥ್ ಅವರು. 

Aug 11, 2018

ನಮ್ಮನ್ನಗಲಿದ ಸುಮತೀಂದ್ರ ನಾಡಿಗರ ನೆನಪಿನಲ್ಲಿ….

sumateendra nadig
ಸುಮತೀಂದ್ರ ನಾಡಿಗ್
ಕು.ಸ.ಮಧುಸೂದನ ರಂಗೇನಹಳ್ಳಿ 
ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು. 

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು. 

2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.

ಸ್ತ್ರೀ ಸುತ್ತ ಪುರುಷನೆಂಬ ವಿಷವರ್ತುಲ!


ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ

ಪುರುಷ ಕೇಂದ್ರಿತ ವ್ಯವಸ್ಠೆಯಲಿ
ಬದುಕ ನದಿ ಈಜುತ್ತೆನೆಂದರೆ 
ಎಲ್ಲಿ ನೋಡಿದರು ಅಲ್ಲಿ ಪುರುಷ ಮೊಸಳೆಗಳು 
ತಪ್ಪಿಸಿಕೊಂಡರೆ ಬಾ ಯಿ ತೆರೆದು 
ಪತಾಳ ಸೇರಿಸುವ ಸುಳಿ ..!

ಹರಸಾಹಸ ಮಾಡಿ ದಂಡೆಗೆ ಬಂದರೆ 
ಹೆಜ್ಜೆ ಹೆಜ್ಜೆಗೂ ಬುಸುಗುಡುವ 
ಕಾಮುಕ ಕಾಳಿಂಗಗಳು 
ಮುಂಗುಸಿಯಾದರೂ ಷಡ್ಯಂತ್ರದಲಿ 
ಮುಗಿಸಿ ಬಿಡುವ ಹುನ್ನಾರ 
ತಲುಪಬೇಕಾದ ಗುರಿ ದೂರ ಬಹುದೂರ ..!

Aug 5, 2018

ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.

ಚಿತ್ರ ೧: ಕಾವೇರಿ ತೀರದ ಕಳ್ಳಿಪೀರಗಳು.
ಡಾ. ಅಶೋಕ್. ಕೆ. ಆರ್.
ಶ್ರೀರಂಗಪಟ್ಟಣದ ನಗುವನಹಳ್ಳಿ - ಚಂದಗಾಲು ಗ್ರಾಮದಲ್ಲಿನ ಕಾವೇರಿ ನದಿ ತೀರದಲ್ಲಿ ಅತಿ ಹೆಚ್ಚು ಚಿತ್ರ ತೆಗೆಸಿಕೊಂಡಿರುವ ಖ್ಯಾತಿ ನೀಲಿಬಾಲದ ಕಳ್ಳಿಪೀರಗಳದ್ದು. 

ಆಂಗ್ಲ ಹೆಸರು: Blue tailed bee eater (ಬ್ಲೂ ಟೈಲ್ಡ್ ಬೀಈಟರ್) 

ವೈಜ್ಞಾನಿಕ ಹೆಸರು: Merops Philippinus (ಮೆರೋಪ್ಸ್ ಫಿಲಿಪ್ಪಿನಸ್) 

ಥಳ ಥಳ ಹೊಳೆಯುವ ಬಣ್ಣಗಳನ್ನೊಂದಿರುವ ಪಕ್ಷಿಗಳಿವು. ಹಸಿರು - ಹಳದಿ - ಕಿತ್ತಳೆ ಕಂದು ಬಣ್ಣಗಳನ್ನೊಂದಿವೆಯಾದರೂ ಹಸಿರು ಬಣ್ಣವೇ ಹೆಚ್ಚಿದೆ. ಕೆಂಪು ಕಣ್ಣಿನ ಸುತ್ತ ಕಪ್ಪು ಪಟ್ಟಿಯಿದೆ. ಕಣ್ಣಿನ ಮೇಲ್ಭಾಗದಲ್ಲಿ ಗಿಣಿ ಹಸಿರು ಬಣ್ಣದ ಸಣ್ಣ ಪಟ್ಟಿಯಿದೆ. ನೆತ್ತಿ ಹಸಿರು - ಕಂದು ಮಿಶ್ರಿತ ಬಣ್ಣದ್ದು. ಕಣ್ಣಿನ ಕೆಳಗೆ ಬಿಳಿ ಪಟ್ಟಿ, ಅದರ ಕೆಳಗೆ ಕೇಸರಿ ಕಂದು ಮಿಶ್ರಿತ ಬಣ್ಣದ ಪಟ್ಟಿ. ಬಿಳಿ ಮತ್ತು ಕೇಸರಿ ಕಂದು ಪಟ್ಟಿ ಪಕ್ಷಿಯ ಕತ್ತಿಗೂ ಹರಡಿಕೊಂಡಿವೆ. ದೇಹದ ಇತರೆ ಭಾಗಗಳಲ್ಲಿ ಹಳದಿ ಹಸಿರು ಬಣ್ಣದ ವಿವಿಧ ವರ್ಣಗಳಿವೆ. ಬಾಲದ ಭಾಗದಲ್ಲಿ ನೀಲಿ ಬಣ್ಣವಿರುವ ಕಾರಣ ಇವಕ್ಕೆ ನೀಲಿಬಾಲದ ಕಳ್ಳಿಪೀರಗಳೆಂದು ಹೆಸರು. ಕಿಬ್ಬೊಟ್ಟೆಯ ಭಾಗವೂ ನೀಲಿ ಬಣ್ಣವನ್ನೊಂದಿದೆ. ನೀಲಿ ಬಾಲಕ್ಕೆ ಬೂದು ಬಣ್ಣದ ಪುಕ್ಕಗಳಂಟಿಕೊಂಡಿವೆ. ಬಾಲದ ತುದಿಗೆ ಕಿರುಬಾಲಗಳಂತೆ ಎರಡು ಪುಟ್ಟ ರೆಕ್ಕೆಗಳಂಟಿಕೊಂಡಿವೆ. ಹಾರುವಾಗ ನಡುವಿನಲ್ಲೊಂದು ಅತ್ಲಾಗಿತ್ಲಾಗೊಂದೊಂದು ಬಾಲದ ರೆಕ್ಕೆಗಳನ್ನು ಗಮನಿಸಬಹುದು. ಕೊಕ್ಕು ಮತ್ತು ಕಾಲುಗಳು ಕಪ್ಪು ಬಣ್ಣದ್ದಾಗಿವೆ. 
ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ. 

Aug 3, 2018

ಯಾಕೆ ಅಲೆವೇ ನೀ ಮನವೇ ?

ಪ್ರವೀಣಕುಮಾರ್ .ಗೋಣಿ
ಪ್ರೀತಿಯೊಂದೇ ಅವನ 
ತಲುಪಲು ಇರುವ 
ಹಾದಿಯಾಗಿರುವಾಗ ಯಾಕೇ
ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

ನಿನ್ನೊಳಗೆ ಅವನೇ ಬಿತ್ತಿದ 
ಪ್ರೀತಿಯ ಬೀಜ ಇರುವಾಗ 
ಅದಕ್ಕೆ ನೀರೆರೆದು ಮರವಾಗಿ ಬೆಳೆಸೋ 
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

Aug 2, 2018

ವಿದಾಯ

ಪದ್ಮಜಾ ಜೋಯಿಸ್ 
ಅಂತಿಮವಾಗಿ ವಿದಾಯವೇ
ಬಯಸುವೆಯಾದರೇ..,.
ಇದೋ ನೀಡುತಿರುವೆ
ನಿಬಂಧನೆಗಳೊಂದಿಗೆ.,,

ಮತ್ತೆಂದೂ ನೆನೆಯದಿರು ನನ್ನ 
ನೆನೆದ ಕ್ಷಣದಲಿ ನಿನ್ನ
ಕಣ್ರೆಪ್ಪೆಗಳಲಿ ಮೂಡುವ
ನನ್ನ ಪ್ರತಿಬಿಂಬದ ಕಣ್ಣಂಚಿನ 
ಹನಿ ಕರಗಿಸಬಹುದು
ನಿನ್ನ ಕಲ್ಲು ಹೃದಯವನ್ನು ....

ಮತ್ತೇರಿಸುವ ಈ ರಾತ್ರಿ ..

ಕೆ.ಜಿ .ಸರೋಜಾ ನಾಗರಾಜ್ ಪಾಂಡೊಮಟ್ಟಿ
ಮತ್ತೇರಿಸುವ ನಿನ್ನ ಮಾತಿನಲ್ಲಿ 
ಇಂದೇಕೆ ಈ ಗಮಲು ಅಮಲಿನಲ್ಲಿ ..

ಕಾಡುವುದಿದ್ದರೆ ಈ ರಾತ್ರಿ ಕಾಡಿಬಿಡು
ಸಮಯ ಕ್ಷಣ ಕ್ಷಣಕ್ಕೂ ಕಮ್ಮಿಯಾಗುತ್ತಿದೆ ..

ಸಂಬಂಧದ ಕೊಂಡಿ ಕಳಚುತ್ತಾ ಇದೆ ಎಂದಾಗ ನನ್ನಲ್ಲಿ 
ಸ್ಪಷ್ಟವಾಗಿ ಕಂಡಿದ್ದು ನಿನ್ನ ಹೃದಯ ಸಾರಾಯಿಯಲ್ಲಿ .

Aug 1, 2018

ಯಾರಿವನು?

ಪದ್ಮಜಾ ಜೋಯಿಸ್ 
ಹೋದಲ್ಲಿ ಬಂದಲ್ಲಿ ,
ಕುಳಿತಲ್ಲಿ ನಿಂತಲ್ಲಿ.
ಪರಿಚಿತರು ಕಾಡುತ್ತಾರೆ
ಸಖಿಯರು ದುಂಬಾಲು ಬೀಳುವರು, 
ನಿನ್ನ ಕನಸು ಮನಸುಗಳಲ್ಲಿ,
ಕಾವ್ಯ ಕಥನಗಳಲ್ಲಿ,
ಬದುಕು ಸಾವುಗಳಲಿ
ಝರಿಯಾಗಿ ಹರಿದವ
ಜೀವವಾಗಿ ಮಿಡಿದವ 
ಪ್ರೇಮಿಯಾಗಿ ಕಾಡಿದವ
ವಿರಹವನೇ ಉಣಿಸಿದವ
ಯಾರವ ಹೇಳೇ ಯಾರವ ??