Jul 14, 2018

ಬದುಕು

ಪ್ರವೀಣಕುಮಾರ್.ಗೋಣಿ

ಸಾವಿರ ತಪ್ಪುಗಳ ನಂತರವೂ 

ಮತ್ತದೇ ಪ್ರೀತಿಯಿಂದ ಪೊರೆದು 

ಬಿಗಿದಪ್ಪುವ ತಾಯಿಯಂತಹುದ್ದು ಈ ಬದುಕು !


ಎಲ್ಲಿಂದಾದರೂ ಆರಂಭಿಸಲು 

ಸಾಧ್ಯವಾಗುವಂತಹುದ್ದು 

ಅಸಾಧ್ಯತೆಗಳನ್ನ ಮೀರಲು 

ಅವಕಾಶಗಳ ಬೀಜಕ್ಕೆ ಸತುವೊದಗಿಸುವ 

ಜೀವಸತ್ವದಂತಹುದ್ದು ಈ ಬದುಕು !


ಎಲ್ಲಾ ಮುಗಿಯಿತು ಇನ್ನೇನಿಲ್ಲ 

ಎನ್ನುವ ಭಾವ ಕಾಡಿ 

ಕಾರ್ಗತ್ತಲಾವರಿಸಿ ನಿಂತಂತೆನಿಸಿದಾಗ 

ಫಕ್ಕನೆಂದು ಹೊಳೆದು ಪೊರೆಯುವ 

ಭಗವಂತನ ದೇದೀಪ್ಯಮಾನವಾದ 

ಸಾಂಗತ್ಯದಂತಹುದೀ ಬದುಕು !

1 comment:

  1. Good going. Keep up. All the best. Hope to see you soon as one of the greatest poets India has ever had.

    ReplyDelete