ಮೈನಾ/ ಗೊರವಂಕ. ಕೆನಾನ್ 550ಡಿ, ಕೆನಾನ್ 75 - 300 ಎಂ ಎಂ ಲೆನ್ಸ್ ಎಫ್/5.6, 1/125, ಐ ಎಸ್ ಓ 100 |
ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿಯು ನಗರ ಪ್ರದೇಶಕ್ಕೆ ಸಂಪೂರ್ಣವಾಗಿ ಒಗ್ಗಿಹೋಗಿದೆ. ಆ ಕಾರಣದಿಂದಲೇ ಇವುಗಳ ಸಂತತಿ ಹೆಚ್ಚುತ್ತಲಿದೆ.
ಆಂಗ್ಲ ಹೆಸರು: - Common myna (ಕಾಮನ್ ಮೈನಾ)
ವೈಜ್ಞಾನಿಕ ಹೆಸರು: - Acridotheris tristis (ಆಕ್ರಿಡೋಥೆರಿಸ್ ಟ್ರಿಸ್ಟಿಸ್)
ಮೈನಾ ಪಕ್ಷಿಯ ದೇಹ ಕಂದು ಬಣ್ಣದ್ದಾಗಿದೆ. ತಲೆಯ ಭಾಗ ಮತ್ತು ರೆಕ್ಕೆಗಳ ಕೊನೆಯ ಭಾಗ ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದ ಬಣ್ಣವನ್ನೊಂದಿವೆ. ಹಳದಿ ಬಣ್ಣದ ಕಾಲು - ಕೊಕ್ಕುಗಳಿವೆ. ಮೈನಾ ಹಕ್ಕಿ ಹಾರುವಾಗ ರೆಕ್ಕೆಯ ಒಳ ಮತ್ತು ಹೊರಭಾಗದಲ್ಲಿ ಕೆಲವು ಬಿಳಿ ಪಟ್ಟಿಗಳನ್ನೂ ಕಾಣಬಹುದು. ಕಣ್ಣಿನ ಸುತ್ತ - ಕೆಳ ಮತ್ತು ಹಿಂಭಾಗದಲ್ಲಿ - ಹಳದಿ ಪಟ್ಟೆಯು ಎದ್ದು ಕಾಣಿಸುತ್ತದೆ. ಮೈನಾ ಪಕ್ಷಿಯ ಕಣ್ಣಿಗೊಂದು ಕೋಪದ ಭಾವವನ್ನು ಈ ಹಳದಿ ಪಟ್ಟಿ ಕರುಣಿಸುತ್ತದೆ.
Click here to read in English