ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮೊದಲಿಗೆ ನಿರಂಜನ ವಾನಳ್ಳಿ ಅಂತವರು ಅದರಲ್ಲೂ ಪತ್ರಿಕೋದ್ಯಮದ ಬಗ್ಗೆ ಶಿಕ್ಷಣ ನೀಡುವಂತವರು ಕನ್ಯತ್ವದ ಬಗ್ಗೆ ಮಾತನಾಡಿರುವುದೇ ಅತ್ಯಂತ ಅಸಹ್ಯಕರವಾದ ಮತ್ತು ಅಸಂಗತವಾದ ವಿಚಾರ.
ಅಷ್ಟಕ್ಕೂ ಈ ಕನ್ಯತ್ವಎಂದರೇನು? ಯೋನಿಯೊಳಗಿನ ಕನ್ಯಾಪೊರೆಯನ್ನು ಉಳಿಸಿಕೊಳ್ಳುವುದೇ ಕನ್ಯತ್ವವೇ ವಾನಳ್ಳಿಸರ್?
ಹೆಣ್ಣೊಬ್ಬಳ ಯೋನಿನಾಳದ ಆವರಣದ ತೆಳುವಾದ ಪೊರೆಯನ್ನು ಕನ್ಯಾಪೊರೆ ಎಂದು ಕರೆಯುವುದುಂಟು. ಯಾವತ್ತಿಗೂ ಸಂಭೋಗ ಕ್ರಿಯೆಯಲ್ಲಿ ಬಾಗವಹಿಸದ ಹೆಣ್ಣಿನ ಕನ್ಯಾಪೊರೆ ಹರಿಯುವುದಿಲ್ಲ ಎಂಭ ಭ್ರಮೆಯೊಂದು ಸಮಾಜದಲ್ಲಿ ಬೆಳೆದು ಬಂದಿದೆ. ಹಾಗೆ ಕನ್ಯಾಪೊರೆಯನ್ನು ಉಳಿಸಿಕೊಂಡವಳನ್ನು ಕನ್ಯೆ ಎಂದೂ ಅದನ್ನವಳ ಕನ್ಯತ್ವವೆಂದು ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಇವತ್ತಿಗೂ ತನ್ನ ಮೊದಲರಾತ್ರಿಯ ಸಂಭೋಗದ ಸಮಯದಲ್ಲಿ ಹೆಂಡತಿಯ ಯೋನಿಯಿಂದ ರಕ್ತಸ್ರಾವ ಆಗದೇ ಹೋದಲ್ಲಿ ಅವಳು ಮೊದಲೇ ಸಂಭೋಗ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆಂದು ಅನುಮಾನಿಸುವ ಪುರುಷರು ನಮ್ಮಲ್ಲಿಇದ್ದಾರೆ. ಅಂತವಳನ್ನು ಶೀಲಗೆಟ್ಟವಳೆಂದು ( ಈ ಶೀಲ ಎನ್ನುವುದು ಮತ್ತೊಂದು ಮಿಥ್ಯೆ!) ದೂರಿ ನಿಂದಿಸುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ.
ಯಕಶ್ಚಿತ್ ಯೋನಿಯ ಈ ಕನ್ಯಾಪೊರೆಗೆ ಇಷ್ಟೊಂದು ಮಹತ್ವ ಬಂದಿದ್ದೇ ತಾನು ಮದುವೆಯಾಗುವ ಹೆಣ್ಣು ಇನ್ಯಾರನ್ನು ಕಣ್ಣೆತ್ತಿಯೂ ನೋಡಿರಬಾರದು ಮತ್ತು ಯಾವತ್ತಿಗೂ ಅವಳು ತನಗೆ ಮೊದಲಿಗಳಾಗಿಯೇ ದಕ್ಕಬೇಕೆಂಬ ಗಂಡಿನ ಹಪಾಹಪಿ!
ಬೇಕಿದ್ದರೆ ವೈದ್ಯರುಗಳನ್ನೇ ಕೇಳಿ ನೋಡಿ, ಈ ಕನ್ಯಾಪೊರೆ ಹರಿದುಹೋಗಲು ಸಂಭೋಗ ಕ್ರಿಯೆಯೇ ಬೇಕೆಂದೇನೂ ಇಲ್ಲ. ಹೆಣ್ಣಿನ ಹಲವು ದೈಹಿಕ ಚಟುವಟಿಕೆಗಳಿಂದಲೂ ಈ ಪೊರೆ ಹರಿದು ಹೋಗಬಹುದು
ಇರಲಿ ಈ ಕನ್ಯಾಪೊರೆಯಿಂದ ಹೆಣ್ಣಿಗೇನೊ ಕನ್ಯತ್ವವನ್ನು ಆರೋಪಿಸಿದಿರಿ. ಅದೇ ರೀತಿ ನನ್ನ- ನಿಮ್ಮಂತಹ ಗಂಡಸರಿಗೆ ಕುಮಾರತ್ವ ಏನಾದರು ಇದೆಯೇ?ಇದ್ದರೆ ಅದು ಗಂಡಸಿನ ಶಿಶ್ನದ ಯಾವ ಭಾಗದಲ್ಲಿದೆ? ಅದರ ರೂಪುರೇಶೆಗಳನ್ನು ಸ್ವಲ್ಪ ವಿವರಿಸಿ. ಅದು ಹೇಗೆ ಕಳೆದುಹೋಗುತ್ತದೆ ತಿಳಿಸಿ
ಇಲ್ಲದೇ ಹೋದಲ್ಲಿ ಹೆಣ್ಣಿಗೆ ಮಾತ್ರ ಕನ್ಯತ್ವದ ಭಾಗ್ಯವನ್ನು ದಯಪಾಲಿಸಿದ ತಮ್ಮಂತಹ ಅಥವಾ ನನ್ನಂತಹ ಗಂಡಸರು ಆ ಪೊರೆ ಹರಿಯುವ ಹಟದಿಂದಲೇ ಸಂಭೋಗಿಸುತ್ತೇವೆಯೇ? ಹೇಳಿ…..
ದಯವಿಟ್ಟು ತಾವು ಮುಂದೆ ಪತ್ರರ‍್ತರಿಗೆ ಪಾಠಮಾಡದಿದ್ದರೂ ಪರವಾಗಿಲ್ಲ ಅವರಲ್ಲಿ ಕನ್ಯತ್ವದಂತಹ ಕೀಳು ವಿಚಾರಗಳನ್ನು ತುಂಬಿ ಈಗಾಗಲೇ ಲಿಂಗ ತಾರತಮ್ಯದ ಬೆಂಕಿಯಲ್ಲಿ ಬೇಯುತ್ತಿರುವ ಹೆಣ್ಣನ್ನು ಮತ್ತಷ್ಟು ಬೇಗುದಿಗೆ ತಳ್ಳದಿರಿ.
No comments:
Post a Comment