Apr 28, 2017

ಮೇ ಸಾಹಿತ್ಯ ಮೇಳ

ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ

೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ


ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ


ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫

ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು 
          
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
 
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. 

Apr 18, 2017

ಖೋಡಿ ಮನ

ಸವಿತ ಎಸ್ ಪಿ
ನಿನ್ನ ಕಿರುನಗೆಯ ಸುಳಿಯಿಂದ ಹೊರ ಬಂದು
ಎಲ್ಲ ಭಾವಗಳ ಬಚ್ಚಿಟ್ಟು ನಾನು ನೀನು ದ್ವೀಪಗಳಂತೆ, 
ಅಪರಿಚಿತರಂತೆ ಸೋಗು ಹಾಕಿ ಬದುಕುವುದೊಂದು 
ಸಂಘರ್ಷವಲ್ಲದೇ ಮತ್ತೇನೋ ಹುಡುಗಾ...!

ಹೀಗೊಂದು ಪತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರೀತಿಯ ಕೆ,

ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ ಬದ್ದತೆಯನ್ನಾಗಲಿ, ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ ಮತ್ತು ಅಸಹನೆಯೂ ಇಲ್ಲ. 

Apr 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.

Apr 4, 2017

ಗದ್ದರ್ ನೆನಪಲ್ಲೊಂದು ಗೆಳೆಯರ ಕತೆ......

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಗದ್ದರ್!
ಗದ್ದರ್ !!
ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ಹಾಡುನೃತ್ಯಗಳ ಮೂಲಕ ಜನರಿಗೆ ಅದರಲ್ಲಿಯೂ ತಳ ಸಮುದಾಯಗಳ ಯುವಕರಿಗೆ ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕ. ಇದೀಗ ಇಂತಹ ಗದ್ದರ್ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ.

ಯಾಕೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ ತಳಮಳಗಳ ಪ್ರತಿಫಲವೇ ಎಂಬುದನ್ನು ಯೋಚಿಸಲೂ ಕಾಯದೆ ತತ್ ಕ್ಷಣದ ಪ್ರತಿಕ್ರಿಯೆ ನೀಡುವ ಭರದಲ್ಲಿ ನಾವು ಎಡವುತ್ತಿದ್ದೇವೆಯೇ? ಗೊತ್ತಿಲ್ಲ!

ಹೇ ಹುಡುಗಿ.

ನಾಗಪ್ಪ.ಕೆ.ಮಾದರ
ಹೇ ಹುಡಗಿಯೇ
ಕೇಳು ನನ್ನ ಪ್ರೀತಿಯ
ಮಧುರ ಆಪಾಪನೆಯನು!