ಸವಿತ ಎಸ್ ಪಿ
ಕಂಗಳಲಿ ಮಧುರ ಪ್ರೇಮಕಾವ್ಯಕೆ
ಹೊಸಭಾಷ್ಯ ಸದ್ದಿಲ್ಲದೆ ಬರೆದು
ಹೆಜ್ಜೆಗಳಲಿ ಲಾಸ್ಯದ ಲಜ್ಜೆ ಬೆರೆಸಿದೆ
ಮನಸಿನಲಿ ಬಣ್ಣಬಣ್ಣದ ಕಾಮನಬಿಲ್ಲ
ಹೊಸಕಾಮನೆ ರಸಕಾವ್ಯ ತುಂಬಿ
ತುಟಿಗಳಲಿ ಮಾಸದ ಕಿರುನಗು ತುಂಬಿದೆ
ಮುಂಗುರುಳ ಮೃದುವಾಗಿ ಸರಿಸುತ್ತಾ
ಹೃದಯವನೇ ಸೆಳೆಯುವಂಥಾ
ನೋಟ ಕನಸಲೂ ಎಡಬಿಡದೆ ಕಾಡಿದೆ
ಅಂತರಂಗದಲಿ ನಿನ್ನದೇ ಕಲರವ
ಎದುರಲಿ ಎಲ್ಲಿಲ್ಲದ ಮೌನ
ನಿನ್ನೆಸರು ಬರೆಯಲೂ ಕೈ ನಡುಗಿದೆ
ಅನುರಾಗಕೆ ಭಾವದೀಪ್ತಿ ಬೆರಸಿ
ಸ್ಪರ್ಶದಲಿ ಮಿಂಚು ಮೂಡಿಸಿ
ತನುಮನಗಳಲಿ ಅರಿಯದ ಪುಳಕವೆಬ್ಬಿಸಿದೆ
No comments:
Post a Comment