Dec 22, 2016

ಸುಪ್ತಭಾವ

ಸವಿತ ಎಸ್ ಪಿ
ಹುಣ್ಣಿಮೆ ಚಂದಿರನ
ಮನೋಹರ ರೂಪ
ನೆನಪಿಸಿಹುದು ಏನನು
ನಿನ್ನ ಮುದ್ದುಮೊಗವನು....

ತಂಪು ತಂಗಾಳಿ ಸುಳಿದಾಡಿ
ಶೀತಲ ಸ್ಪರ್ಶ‌ದಲೂ
ಬೆಚ್ಚನೆ ಭಾವವದೇನದು
ನಿನ್ನ ಮಧುರ ಪಿಸುಮಾತದು...

ಸಾಗರದಲೆಗಳ ತೀರವ 
ಮುದ್ದಿಸಿ ತಣಿಯದ ತಪನ
ಸುಪ್ತಭಾವವ ತಟ್ಟಿಹುದೇನದು
ನಿನ್ನ ಪ್ರೇಮಾದಾಲಿಂಗನವದು...

ಇರುಳ ಮಿನುಮಿನುಗುವ 
ಚುಕ್ಕಿ ತುಂಟತನದಿ
ತಿಳಿಸಿಹ ಗುಟ್ಟೇನದು
ನಿನ್ನ ಸರಸಸಲ್ಲಾಪದ ಹೊಳಪದು

No comments:

Post a Comment