ಕು.ಸ.ಮಧುಸೂದನ
ಉತ್ತರಪ್ರದೇಶದಲ್ಲಿನ 2017ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಾಜಪ ಇದೀಗ ತಾನು ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಆಡಳಿತ ನಡೆಸುತ್ತಿರುವ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸತತವಾಗಿ ಎರಡು ಅವಧಿಗೆ ಅಧಿಕಾರ ನಡೆಸಿರುವ ಬಾಜಪ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆ ನಿಜಕ್ಕೂ ಕಷ್ಟಕರವಾಗಲಿದೆ. ಇದಕ್ಕಿರಬಹುದಾದ ಕಾರಣಗಳನ್ನು ನೋಡೋಣ:
ಮೊದಲನೆಯದಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರ ಪರಿಣಾಮವಾಗಿ ಅದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಎರಡನೆಯದಾಗಿ ಮೊದಲಿಂದಲೂ ಇದ್ದ ಮಾದಕದ್ರವ್ಯಗಳ ಮಾಫಿಯಾ ಹೆಚ್ಚಾಗಿದ್ದು, ಇದರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೂ ಷಾಮೀಲಾಗಿದ್ದಾರೆಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಲೇ ಬಂದಿದ್ದಾರೆ.