Praveen Goni
ದಿವಿನಾಗಿ ನಿನ್ನ ಕಂಗಳಲಿ
ತುಂಬಿಕೊಳಬೇಕು ಆ ಹೊಳಪಲ್ಲೇ
ಹೊಸ ಹುರುಪ ನನ್ನೆದೆಯ
ಗೂಡಲ್ಲಿ ಮೊಳೆಯಿಸಿ ಕೊಳಬೇಕು .
ನಿನ್ನ ಅನುಪಸ್ತಿತಿಯಲಿ
ಸೊಗಸಿಗೆಲ್ಲಿಯ ಹಾದಿ
ನೆನಪ ಮಜ್ಜನದಲೇ
ಮನದ ಮಬ್ಬ ನೀಗಿಸಿಕೊಳಬೇಕು .
ನಿನ್ನ ಬರುವೆಗೆ ಹೃದಯ
ಕಾತರಿಸಿ ಕೂತಿಹುದು
ಕೂಗಲದು ಕೋಗಿಲೆಯು
ವಸಂತದ ಹಾದಿಯ ಕಾಯ್ವಂತೆ .
ಎದೆಯ ಅಂಗಳದಿ ನಿನ್ನ
ಸವಿ ನೆನಪ ರಂಗೋಲಿ
ನೀ ಇರಲು ಬದುಕು ಅರಳಿ
ತಾ ನಿಲ್ಲುವುದು ಬಾಡದ ಸುಮವಾಗಿ .
No comments:
Post a Comment