Feb 5, 2016

ಚಿತ್ರೋತ್ಸವ ಕರ್ನಾಟಕದ್ದಾಗಲಿ: ಅಭಿ ಹನಕೆರೆ.

ಪತ್ರಿಕಾ ಪ್ರಕಟಣೆ
ಗೆ,
1. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.
2. ವಾರ್ತಾ ಸಚಿವರು, ಕರ್ನಾಟಕ ಸರ್ಕಾರ.
3. ಕಾರ್ಯದರ್ಶಿಗಳು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
4. ನಿರ್ದೇಶಕರು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
5. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
6. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ.
ಮಾನ್ಯರೇ,

ಮೈಸೂರು ರಾಜ್ಯ ಅಂತ ಇದ್ದಿದ್ನ ಕರ್ನಾಟಕ ರಾಜ್ಯ ಅಂತ ಮಾಡಿರುವ ವಿಚಾರವನ್ನು ಮರೆತು ಬೆಂಗಳೂರು ರಾಜ್ಯ ಮಾಡಲು ಹೊರಟಂತಿದೆ, ಅಂತರರಾಷ್ಟ್ರೀಯ ಚಿತ್ರೋತ್ಸವದ ವಿಷಯದಲ್ಲಿ, ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟ ಚಿತ್ರ್ಸೋತ್ಸವಕ್ಕೆ ಇಲ್ಲಿಯವರೆಗು, “ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರ್ಸೋತ್ಸವ” ಅಂತಲೇ ಆಚರಿಸಿಕೊಂಡು ಬಂದಿದ್ದೀರಿ, ಬೆಂಗಳೂರು ಕರ್ನಾಟಕಕ್ಕಿಂತ ದೊಡ್ಡದೇ? ಇದರ ಜೊತೆಗೆ ಬೆಂಗಳೂರಿನ ಹೆಸರಿನ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿದ್ದೀರಿ! ಈ ಕ್ರಮ ಸರಿಯಿಲ್ಲ. ಆದ್ದರಿಂದ ಇನ್ನುಮುಂದೆ “ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಆಚರಿಸುವ ಕಾರ್ಯಕ್ರಮಕ್ಕೆ “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

• ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಪ್ರತಿಚಿತ್ರವು ಬಹು ಮುಖ್ಯವಾಗಿರುವುದರಿಂದ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನ ಮಾಡುವಂತಾಗಲೀ (ಹಲವು ಸ್ಕ್ರೀನ್ ಗಳಿದ್ದರೆ ಎಲ್ಲದರಲ್ಲೂ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನವಿರಲಿ)

• ಕಲಾವಿದರು ಮತ್ತು ಜನ ಸಾಮಾನ್ಯರು ಒಟ್ಟುಗೂಡುವ ಇಂತ ಸುಸಂದರ್ಭವನ್ನು ಒಂದಕ್ಕಿಂತ ಹೆಚ್ಚು ಊರಿಗೆ ಭಾಗ ಮಾಡದೇ ಒಂದೇ ಊರಿನಲ್ಲಿ ನಡೆಸುವಂತಾಗಬೇಕು. 

• ಈ ಬಾರಿಯಂತೆ ಮುಂದೆಂದು ಮಾಲ್ ಗಳಲ್ಲಿ ಆಯೋಜಿಸಿ ಶಾಪಿಂಗ್ ಮಾಲ್ ಗಳು ಜನರಿಂದ ಹಣ ಸುಲಿಯುವ ಸಂಸ್ಕೃತಿಗೆ ಸಹಾಯ ಮಾಡಬೇಡಿ.

• ತಾಲ್ಲೂಕು-ಹೋಬಳಿ ಮಟ್ಟದಲ್ಲಿ ಸಿನಿಮಾ ಮಂದಿರಗಳ ಸ್ಥಿತಿ ಶೋಚನೀಯವಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ದೃಷ್ಟಿಯಿಂದ ತಾಲ್ಲೂಕು-ಹೋಬಳಿ ಮಟ್ಟದಲ್ಲಿ “ ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ನಡೆಯುವಂತಾಗಲೀ.

• ಮುಂದಿನ ವರ್ಷದಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ, “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಪ್ರತಿ ವರ್ಷವೂ ಒಂದೊಂದು ಊರಿನಲ್ಲಿ “ಕರ್ನಾಟಕ ಸಾಹಿತ್ಯ ಸಮ್ಮೇಳನ”ದ ಮಾದರಿಯಲ್ಲಿ ಆಯೋಜಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. 

• ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಬೆಂಗಳೂರು ಹೆಸರನ್ನು ಪ್ರಾಮುಖ್ಯತೆ ಮಾಡಿ ವಿದೇಶದಿಂದ ಬೆಂಗಳೂರಿಗೆ ಮಾತ್ರ ಬಂಡವಾಳ ತರುವ ಹುನ್ನಾರ ಮಾಡಬೇಡಿ. ಮತ್ತು ಬೆಂಗಳೂರಿನ ಹೊರಗಿನ ಕರ್ನಾಟಕದವರಿಗೆ ಬೆಂಗಳೂರೇ ದೊಡ್ಡದ್ದು ಎನ್ನುವ ಮನಸ್ಥಿತಿಯನ್ನು ತರಬೇಡಿ.

• ಹಳ್ಳಿಗಳು, ಸಣ್ಣಪುಟ್ಟ ನಗರಗಳಲ್ಲಿ ಕರೆಂಟಿಲ್ಲದೇ, ರಸ್ತೆಗಳಿಲ್ಲದೇ, ಕುಡಿಯುವ ನೀರಿಲ್ಲದೇ, ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡದಂತಹ ಪರಿಸ್ಥಿತಿ ಯಲ್ಲಿ ವಾಸಿಸುತ್ತಿರುವ ನಮಗೆ ಚಿತ್ರೋತ್ಸವಗಳಾದರೂ ಕೊಡಿ.

• ಮಾಡೋದು ಕರ್ನಾಟಕದಲ್ಲಿ ಚಿತ್ರೋತ್ಸವ. ಆದರೆ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಹಂತದಲ್ಲೂ ಇಂಗ್ಲೀಷನ್ನೇ ಬಳಸಿದ್ದೀರಿ, ಚಿತ್ರೋತ್ಸವದ ಹೆಸರು, ಗುರುತಿನ ಚೀಟಿ, ಸಿನಿಮೋತ್ಸವದ ಕೈಪಿಡಿ ಮುಂತಾದವುಗಳಲ್ಲಿ ಕೇವಲ ಆಂಗ್ಲ ಭಾಷೆಯನ್ನೇ ಬಳಸಿದ್ದೀರಿ, ಪ್ರತ್ಯೇಕ್ಷವಾಗಿ, ಬಲವಂತವಾಗಿ ಆಂಗ್ಲ ಭಾಷೆಯನ್ನು ಕನ್ನಡಿಗರ ಮೇಲೆ ಏರಿದ್ದೀರಿ. ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಬ್ರಿಟನ್ ದೇಶದಲ್ಲಿದೆಯೋ! ಬ್ರಿಟಿಷರ ಗುಲಾಮಗಿರಿಯಿಂದ ಆಚೆ ಬಂದಿರುವವರನ್ನು ಚಿತ್ರೋತ್ಸವಕ್ಕೆ ಆಯೋಜಕರನ್ನಾಗಿ ಮಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬನಿಗೂ ಕನ್ನಡ ಭಾಷೆಯು ಅನಿವಾರ್ಯವಾಗುವಂತೆ ಮಾಡಲು ಒತ್ತಾಯಿಸುತ್ತಿದ್ದೇವೆ. 
ಇಂತಿ,
ಎಸ್.ಅಭಿಹನಕೆರೆ(9886756172)

No comments:

Post a Comment