ದಕ್ಷಿಣ
ಕೆರೋಲೀನಾದಲ್ಲಿ ಒಂದೇ ಸಮನೆ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ. ಪ್ರವಾಹವೆಂದರೆ ಮನುಷ್ಯನನ್ನೂ
ಸೇರಿಸಿ ಸಕಲ ಪಕ್ಷಿ – ಪ್ರಾಣಿ ಸಂಕುಲಕ್ಕೂ ಭಯವೇ. ಈ ಭಯದಿಂದ ಇರುವೆಗಳೂ ಹೊರತಲ್ಲ. ಪ್ರವಾಹಕ್ಕೆ
ಸಿಲುಕಿದ ಮನುಷ್ಯನನ್ನೇನೋ ಇತರರು ದೋಣಿಗಳ ಮೂಲಕ, ಹೆಲಿಕಾಪ್ಟರಿನ ಮೂಲಕ ಬಚಾವು
ಮಾಡಿಬಿಡುತ್ತಾರೆ. ಕೆಂಪು ಇರುವೆಗಳು ಈ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ
ಸ್ಪೂರ್ತಿಯಾಗುವಂತಹುದು.
ಇರುವೆ
ನೀರಿನಲ್ಲಿ ಬಿದ್ದಾಗ ಸ್ವಲ್ಪ ಮಟ್ಟಿಗೆ ತೇಲಿ ಸ್ವಲ್ಪ ಮಟ್ಟಿಗೆ ಈಜಬಲ್ಲದು. ಈ ತೇಲುವಿಕೆ
ಈಜುವಿಕೆಯೆಲ್ಲ ಸ್ವಲ್ಪ ಹೊತ್ತು ನಡೆದು ಇರುವೆ ಮುಳುಗಿ ಬಿಡುತ್ತದೆ. ಒಂಟಿಯಾಗಿ
ಮುಳುಗಿಹೋಗುವುದನ್ನು ತಪ್ಪಿಸಲು ಸಾವಿರಾರು ಇರುವೆಗಳ ಸೈನ್ಯ ಒಂದೂವರೆ ನಿಮಿಷದ ಒಳಗೆ ಒಬ್ಬರಿಗೊಬ್ಬರು
ಅಂಟಿಕೊಂಡು ತೆಪ್ಪ ನಿರ್ಮಿಸಿ ಪ್ರವಾಹದಲ್ಲಿ ಮುಳುಗುವುದರಿಂದ ಬಚಾವಾಗಿವೆ. ಈ ರೀತಿ ತೆಪ್ಪ
ನಿರ್ಮಿಸಿಕೊಂಡರೆ ವಾರಗಟ್ಟಲೆ ತೇಲಿಕೊಂಡೇ ಇರುವಷ್ಟು ಚೈತನ್ಯ ಇರುವೆಗಳಿಗೆ ದಕ್ಕುತ್ತದೆಯಂತೆ.
ವೀಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ಒಂಟಿಯಾಗಿದ್ದರೆ
ಶೀಘ್ರ ಸಾವು; ಜೊತೆಯಲ್ಲಿದ್ದರೆ ಪ್ರವಾಹವನ್ನೇ ಎದುರಿಸಬಹುದು ಎಂಬ ಪಾಠ ಕಲಿಸಿಕೊಟ್ಟಿವೆ ಈ
ಕೆಂಪು ಇರುವೆಗಳು.
No comments:
Post a Comment