Sep 21, 2015

ಅಕಾಡೆಮಿ ಪ್ರಶಸ್ತಿಗೆ ಭಗವಾನ್ ಯೋಗ್ಯರೇ?!

ಇತ್ತೀಚೆಗೆ ಗೆಳೆಯನೊಬ್ಬ ಭಗವಾನ್ ಹಿಂದೂ ದೇವತೆಗಳ ಬಗ್ಗೆ, ಗೃಂಥಗಳ ಬಗ್ಗೆ 'ಬಾಯಿಗೆ ಬಂದಂತೆ' ಮಾತನಾಡುವುದರ ಬಗ್ಗೆ ಕೇಳಿದಾಗ 'ಅವರ ಪುಸ್ತಕವನ್ನು ನಾನು ಓದಿಲ್ಲ; ಅವರ ಭಾಷಣವನ್ನೂ ಕೇಳಿಲ್ಲ. ಅಂದಮೇಲೆ ಅವರ ಬಗ್ಗೆ ಕಮೆಂಟಿಸುವುದು ಸರಿಯಲ್ಲ ಎಂದಿದ್ದೆ'. ಪತ್ರಿಕೆಗಳಲ್ಲಿ, ಮಾಧ್ಯಮದಲ್ಲಿ ಭಗವಾನ್ ಹೇಳಿದರೆನ್ನಲಾದ ನಿಜಕ್ಕೂ ಅಸಂಬದ್ಧವೆನ್ನಿಸುವ ಮಾತುಗಳನ್ನು ನೋಡಿ ಅವರನ್ನು ದ್ವೇಷಿಸಲಾರಂಭಿಸಬೇಕಾ? ಎಂದು ಪ್ರಶ್ನಿಸಿಕೊಂಡರೆ ನಮ್ಮ ಮಾಧ್ಯಮಗಳು ಯಾವ ಯಾವ ವಾಕ್ಯವನ್ನು ಎಡಿಟ್ ಮಾಡಿ ಯಾವ್ಯಾವ ವಾಕ್ಯಗಳನ್ನು ಉಳಿಸಿಕೊಂಡು ವರದಿ ರಚಿಸುತ್ತವೆ ಎನ್ನುವುದನ್ನು ಗಮನಿಸಿದವರಿಗೆ ವರದಿ ನೋಡಿ ದ್ವೇಷಿಸುವುದರ ನಿರರ್ಥಕತೆ ಅರ್ಥವಾಗುತ್ತದೆ. ತಮ್ಮ ವಿಚಾರಗಳಿಗೆ ಪೂರಕವಾಗಿ, ಯಾರ್ಯಾರನ್ನು ರೊಚ್ಚಿಗೆಬ್ಬಿಸಬೇಕೋ ಅವರನ್ನು ರೊಚ್ಚಿಗೆಬ್ಬಿಸಲು ಏನೇನು ಬರೆಯಬೇಕೋ ಅದನ್ನಷ್ಟೇ ಬರೆಯುತ್ತಾರೆ. ಇಂತಹ ಮಾಧ್ಯಮಗಳ ಇರುವಿಕೆಯ ಅರಿವಿದ್ದೂ ಅವರ ಉದ್ದೇಶಗಳಿಗೆ ಪೂರಕವಾಗಿ ಮಾತನಾಡುವುದು ಸರಿಯಲ್ಲ ಎಂಬುದು ಭಗವಾನ್ ರಂತವರಿಗೆ ಅರಿವಾಗುವುದಿಲ್ಲವಾ? ಹಿಂದೂ ಧರ್ಮದೊಳಗೆ, ಹಿಂದೂ ಸಂಪ್ರದಾಯಗಳ ವಿರುದ್ಧ ಹಿಂದೂ ದೇವರ ವಿರುದ್ಧ ಕಟುವಾಗಿ ಮಾತನಾಡುವುದು ಹೊಸತೇನಲ್ಲ. ಈ ಕಟು ಮಾತುಗಳಿಗೆ ಮೂಲ ಆ ಹಿಂದೂ ಸಂಪ್ರದಾಯಗಳ ಹೆಸರಿನಲ್ಲಿ ಮೂಲೆಗುಂಪಾದವರ ಆಕ್ರೋಶವೇ ಹೊರತು ಯಾರನ್ನೋ ನೋಯಿಸಿ ಮತ್ಯಾರನ್ನೋ ಪುಸಲಾಯಿಸುವ ಮನಸ್ಥಿತಿಯಲ್ಲ. ಆ ಕಟು ಮಾತುಗಳು ಕೂಡ ಕಟ್ಟರ್ ಹಿಂದೂವಾದಿಗಳಿಗೆ 'ಹೌದಲ್ವಾ? ಇವರು ಹೇಳ್ತಿರೋದು ಸರಿ ಇದೆ' ಎನ್ನಿಸುವಂತಿರಬೇಕೆ ಹೊರತು 'ಇವರು ನಮ್ ವಿರುದ್ಧ ಮಸಲತ್ತು' ಮಾಡ್ತಿದ್ದಾರೆ ಎನ್ನಿಸುವಂತಿರಬಾರದು. ಅಷ್ಟರ ಮಟ್ಟಿಗಿನ ವಿವೇಚನೆ ಭಗವಾನರನ್ನು ಸೇರಿಸಿ ಎಲ್ಲರಿಗೂ ಇರಬೇಕು.
ತಮ್ಮ ಮಾತುಗಳಿಂದ ಅವರು ಫೇಮಸ್ಸಾಗಿದ್ದು (ಅದನ್ನು ನೀವು ಫೇಮಸ್ ಅನ್ನುತ್ತೀರಾದರೆ!) ಇತ್ತೀಚಿನ ವರುಷಗಳಲ್ಲಿ. ಕಲಬುರ್ಗಿಯವರ ಹತ್ಯೆಯಾದ ನಂತರ ಭಗವಾನರಿಗೆ ಪೋಲೀಸ್ ರಕ್ಷಣೆ ನೀಡಲಾಗಿದೆ. ಪದೇ ಪದೇ ಬೆದರಿಕೆ ಪತ್ರಗಳು ಬರುತ್ತಿವೆ. ಇವೆಲ್ಲದರ ಮಧ್ಯೆ ಅವರಿಗೆ 2013ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಇದು ಅವರ ಹಿಂದೂ ವಿರೋಧಿ ಮನಸ್ಥಿತಿಗೆ ಕಾಂಗ್ರೆಸ್ ಸರಕಾರದಿಂದ ಸಿಕ್ಕ ಬಹುಮಾನ ಎಂದು ಹಿಂದೂವಾದಿಗಳು ಆಗಲೇ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ. 'ಭಗವಾನ್ ಗೆ ಶ್ರದ್ಧಾಂಜಲಿ' ಎಂದು ಬರೆಯುವ ನೀಚ ಮಟ್ಟಕ್ಕೂ ಇಳಿದುಬಿಟ್ಟಿದ್ದಾರೆ. Online Petition ಕೂಡ ಪ್ರಾರಂಭಿಸಿಬಿಟ್ಟಿದ್ದಾರೆ. ಇದು ಹಿಂದೂ ಬಲಪಂಥೀಯರ ಎಂದಿನ ನಡೆಗಳು. ವರುಷಗಳ ಹಿಂದೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಇದೇ ರೀತಿ ಉಯಿಲೆಬ್ಬಿಸಿದ್ದರು. ಭೈರಪ್ಪನವರಿಗೆ ಸಿಗದ ಪ್ರಶಸ್ತಿ ಪ್ರಶಸ್ತಿಯೇ ಅಲ್ಲ, ಇದು ಕಂಬಾರರು ಮಾಡಿರುವ ಲಾಬಿಯಷ್ಟೇ ಎಂದು ನಗೆಯಾಡಿದ್ದರು. ಕೆಲವೇ ತಿಂಗಳುಗಳಲ್ಲಿ ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಿಕ್ಕಿತು. ಇದು ಭೈರಪ್ಪನವರು ಮಾಡಿದ ಲಾಬಿ ಎಂದವರ್ಯಾರೂ ಯಾಕೋ ನಗೆಯಾಡಲಿಲ್ಲ! ಭೈರಪ್ಪನವರಿಗೆ ರಾಷ್ಟ್ರೀಯ ಪ್ರೊಫೆಸರ್ ಹುದ್ದೆ ದೊರೆತಾಗ ಕೂಡ ಭೈರಪ್ಪನವರು ಮೋದಿ ಪರ ಮತ್ತು ಬಿಜೆಪಿ ಪರವಿದ್ದುದರಿಂದ ಸಿಕ್ಕ ಹುದ್ದೆಯದು ಎಂದವರ್ಯಾರೂ ಗೋಳಾಡಲಿಲ್ಲ! ತಮ್ಮ ವಿಚಾರಗಳಿಗೆ ಪೂರಕವಾಗಿ ಮಾತನಾಡುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಅರ್ಹತೆಯಿಂದ ಎಂದು ಮತ್ತು ತಮ್ಮ ವಿಚಾರಗಳಿಗೆ ವಿರುದ್ಧವಾಗಿರುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಲಾಬಿಯಿಂದ ಎಂದು ವಾದ ಮಾಡುವುದು ಇವರಿಗೆ ಸಹಜವಾಗಿ ಹೋಗಿದೆ. ಅಂತವರಿಗೆ ಹೊಸತಾಗಿ ಸಿಕ್ಕ ಅಸ್ತ್ರ ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿ. ಎಲ್ಲಾ ಪ್ರಶಸ್ತಿಯಲ್ಲೂ ಎಲ್ಲಾ ಹುದ್ದೆಗಳ ಆಯ್ಕೆಯಲ್ಲೂ ಲಾಬಿ ಇದ್ದೇ ಇರುತ್ತದೆ. ಅಂತಹ ಲಾಬಿಯನ್ನು ತತ್ವ ಸಿದ್ಧಾಂತಗಳಾಚೆ ನಿಂತು ವಿರೋಧಿಸುವುದಾದರೆ ಅದು ಸರಿಯಾದ ಕ್ರಮ. ಹೋಗಲಿ ಭಗವಾನ್ ಆ ಪ್ರಶಸ್ತಿಗೆ ಅರ್ಹರಲ್ಲ ಎಂದರೆ ಆ ಹಿಂದೂ ಬಲಪಂಥೀಯರಲ್ಲೇ ಒಬ್ಬರು ಅವರ ಪುಸ್ತಕಗಳ ವಿಮರ್ಶೆ ಮಾಡಿ ಯಾಕೆ ಅವರು ಅನರ್ಹರು ಎಂದು ತಿಳಿಸಿದ್ದರೂ ಒಪ್ಪಬಹುದಿತ್ತು. ಶ್ರದ್ಧಾಂಜಲಿಯ ಭಾಷೆಯನ್ನಾಡುವವರಿಂದ ಇಷ್ಟೆಲ್ಲ ನಿರೀಕ್ಷಿಸಬಾರದೇನೋ. ಜನರ ಭಾವನೆಗಳನ್ನು ಭಗವಾನ್ ರ ವಿರುದ್ಧವಾಗಿರುವಂತೆ ಮಾಡಲಾಗಿದೆ, ಅದನ್ನವರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ and unfortunately ಭಗವಾನ್ ರವರು ಕೂಡ ಬಲಪಂಥೀಯರ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿಸಿಕೊಂಡು ಅದಕ್ಕೆ ಪೂರಕವಾಗಿಯೇ ವರ್ತಿಸುತ್ತಿದ್ದಾರೆ. 

ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿಯ ಬಗ್ಗೆ ಹುಲಿಕುಂಟೆ ಮೂರ್ತಿ ಈ ರೀತಿಯಾಗಿ ಬರೆದಿದ್ದಾರೆ  "ನನಗೆ ಬುದ್ಧಿ ತಿಳಿದಾಗಿನಿಂದ ಭಗವಾನ್ ಅವರ ಸಾಹಿತ್ಯವನ್ನು ಓದುತ್ತಿದ್ದೇನೆ. ಅವರು ನಂಬುವ ವಿಚಾರಗಳ ಪರವಾಗಿದ್ದೇನೆ ಆದರೆ, ಇತ್ತೀಚಿನ ಅವರ ಮಾತುಗಳ ಜತೆಗಿರಲಾರೆ... ಹಿಂದೂ ಧರ್ಮ, ಪುರಾಣಗಳ ಕುರಿತು ಚಳವಳಿಯ ರೀತಿಯಲ್ಲಿ ಮಾತಾಡುವ, ಆ ಮೂಲಕ ಸಮಯ ವ್ಯರ್ಥ ಮಾಡುವ ಯಾರ ಮಾತುಗಳನ್ನೂ ನಾನು ಸಮರ್ಥಿಸಲಾರೆ... ಮಾನವ ಪ್ರೇಮವನ್ನು ಉಳಿಸುವ, ಬೆಳೆಸುವ ಕ್ರಿಯಾತ್ಮಕ ಚಳವಳಿಗಳೊಂದಿಗೆ ನನ್ನ ಪಯಣ.....

ಸಾಹಿತ್ಯ ಅಕಾಡೆಮಿ ಕೊಟ್ಟಿರುವ ಪ್ರಶಸ್ತಿ ಭಗವಾನ್ ಅವರ ಸಾಹಿತ್ಯ ಸೇವೆಗೆ ಕಡಿಮೆಯಾಯಿತು. ಅವರಿಗೆ ಅದಕ್ಕಿಂತಲೂ ದೊಡ್ಡ, ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು.

ಸಾಹಿತ್ಯ- ಸಮಾಜದ ವಿದ್ಯಾರ್ಥಿಯಾಗಿ ಭಗವಾನ್ ಅವರಿಗೆ ಅಭಿನಂದನೆಗಳನ್ನು ಹೇಳದೆ ಇರಲಾರೆ...."

ಇನ್ನು ರಾಜೇಂದ್ರ ಪ್ರಸಾದ್  ಭಗವಾನ್ ರವರ ಸಾಹಿತ್ಯ ಕೃಷಿಯಲ್ಲೇನಿದೆ ಎಂಬುದರ ಕುರಿತು ವಿವರವಾಗಿ ಬರೆದಿದ್ದಾರೆ
"ಕೆಲವು ಮತಿಗೇಡಿಗಳು ಪ್ರೊ.ಕೆ ಎಸ್ ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2013 ನೇ ಸಾಲಿನ ಗೌರವ ಪ್ರಶಸ್ತಿ ಕೊಟ್ಟಿರುದಕ್ಕೆ ಬೇಕಾಬಿಟ್ಟಿ ಮಾತನಾಡುವುದು ಕಂಡು ಅಸಹ್ಯವಾಗುತ್ತಿದೆ. 
ಹೌದು ಅವರು ಈಚೆಗೆ 'ಭಕ್ತಾಸ್ ಭಾಷೆ'ಯಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಅಡ್ಡಾದಿಡ್ಡಿ ಮಾತನಾಡುತ್ತಿರುವುದು ಅತಿರೇಕದ ವರ್ತನೆಯೇ. ಖಂಡಿಸೋಣ. 
ಆದರೆ ಅಕಾಡೆಮಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದು. ಅವರ ಈ ಅತಿರೇಕದ ಮಾತುಗಳಿಗಲ್ಲ, ಅವರ ಸಾಹಿತ್ಯಕ್ಕೆ ಅನ್ನುವುದು ನಮಗೆ ನೆನೆಪಿರಬೇಕು.

ಪ್ರೊ.ಕೆ ಎಸ್ ಭಗವಾನ್ ಕೃತಿಗಳು :

ವಿಮರ್ಶೆ :
ಬದಲಾವಣೆ
ಕುವೆಂಪು ಯುಗ
ಆಂತರ್ಯ
ಕಣಿಗಲೆ

ವಿಚಾರ:
ಭಾಷೆ ಮತ್ತು ಸಂಸ್ಕೃತಿ
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
ಸುಖದ ಹಾದಿ
Violence in Hinduism

ಅನುವಾದ:
ಜೂಲಿಯಸ್ ಸೀಸರ್
ವೆನಿಸಿನ ವರ್ತಕ
ಹ್ಯಾಮ್ಲೆಟ್
ಆಂಟನಿ ಮತ್ತು ಕ್ಲಿಯೋಪಾತ್ರ
ಒಥೆಲೊ
ನಿಮ್ಮಿಷ್ಟ
ಮ್ಯಾಕ್ ಬೆತ್
ಮಹಾರಾಜ ಲಿಯರ್
ರೋಮಿಯೊ ಮತ್ತು ಜೂಲಿಯೆಟ್
ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ. ೩, ೭ ಮತ್ತು ೧೧
ವೃದ್ಧ ಮತ್ತು ಸಮುದ್ರ

ಸಂಪಾದನೆ :
ಗಂಗೋತ್ರಿ
ಚಂಪಾ: ಆಯ್ದ ಕವನಗಳು
ಜಿಜ್ಞಾಸು
ಸಾಹಿತ್ಯ ವಿಮರ್ಶೆ ೧೯೮೫
ಕೆಂಗಲ್ಲರ ಭಾಷಣಗಳು
As You Like It
Macbeth
Othello
The Merchant of Venice

ಚರಿತ್ರೆ :
ಇತಿಹಾಸ ಚಕ್ರ
ಇತಿಹಾಸದ ಪಾಠಗಳು
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ

ಮಕ್ಕಳ ಸಾಹಿತ್ಯ :
ಮಂತ್ರದ ಉಂಗುರ
ಷೇಕ್ಸ್ ಪಿಯರ್ ಕತೆಗಳು:
ನಲಿವಿನಾಟಗಳು
ನೋವಿನಾಟಗಳು
ಚರಿತ್ರಾಟಗಳು

ಪ್ರೊ.ಕೆ ಎಸ್ ಭಗವಾನ್ ರವರ ಸಾಹಿತ್ಯಿಕ ವ್ಯಕ್ತಿತ್ವಕ್ಕೆ ಗೌರವವಿರಲಿ ಮತ್ತವರ ಈಚಿನ ಕಿರುಚಾಟಗಳ ಬಗ್ಗೆ ದಿವ್ಯನಿರ್ಲಕ್ಷ್ಯವೂ ಇರಲಿ.."

4 comments:

  1. This is what a literature expert had to write about one of the greatest writers of the world Gabriel Garcia Marquez ""For him, the duty of the revolutionary writer is to write well, and the ideal novel is one that moves its reader by its political and social content, and, at the same time, by its power to penetrate reality and expose its other side". Gabo as he was affectionately called influences generation of politicians and people of the entire Continent of South America. He insisted that it is the duty of writers to comment about a nation's politics and society. But he never used it for political agenda.

    Our own Tagore, Kuvempu etc were all very critical of our society and its misconceptions.

    But Bhagwan's speeches in recent times are too stupid. Even for a non-discerning person like me who is not qualified to talk about scholars Bhagwans statements seemed extremely naive and still worse ill intentioned malfeasance.

    I, using my free will, ban all of his books from my life.

    And ofcourse the award is politically motivated, as is the threat given to his life from right-wingers. The murder of Kalaburgi is also politically motivated and it definitely is terrorism. Both sides are playing with our innocence. They want us to believe that it is the only two sides. One side which makes stupid statements and the other which kills.

    Its time to shout and say that we are not gullible.

    ReplyDelete
    Replies
    1. i agree with all you said but not "I, using my free will, ban all of his books from my life. "........ what difference is left between a person who wants to burn a book and you who wants to ban a book!!!!
      We can't read all books that are printed.... if we come across a book by bhagwan we should not 'ban' it from reading :-)

      Delete
  2. Sorry Man. . .I heard even Hafiz Saeed has written books about how great his jihad against india is. But I have no respect either for him or his jihad . If I come across his book I will change my direction.

    Suggest me some other good books.

    ReplyDelete
  3. ಹಫೀಜ್ ಸಯೀದ್ ಒಬ್ಬ ಭಯೋತ್ಪಾದಕ. ಆತನ ಪುಸ್ತಕಗಳನ್ನು ಹಾಗೂ ಭಗವಾನರ ಪುಸ್ತಕಗಳನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದು ಒಪ್ಪಲಾಗದು. ಭಗವಾನರ ಕೃತಿಗಳು ಭಯೋತ್ಪಾದನೆಯನ್ನು ಪ್ರಚೋದಿಸುವುದಿಲ್ಲ ಬದಲಿಗೆ ವೈಚಾರಿಕ ಚಿಂತನೆಗೆ ಪ್ರಚೋದಿಸುತ್ತವೆ. ಭಗವಾನರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದು ಸೂಕ್ತವಾದ ಆಯ್ಕೆ ಎಂದು ನನಗನಿಸುತ್ತದೆ ಮತ್ತು ಇದರಲ್ಲಿ ರಾಜಕೀಯ ಇದೆ ಎಂದು ನನಗನಿಸುವುದಿಲ್ಲ. ಜನ ವಿಚಾರವಂತರಾಗಬೇಕಾದದ್ದು ಇಂದಿನ ಅಗತ್ಯ. ವೈಚಾರಿಕ ಚಿಂತನೆಗೆ ಜನರನ್ನು ಹಚ್ಚುವ ಕೃತಿಗಳು ಅಕಾಡೆಮಿ ಪ್ರಶಸ್ತಿ ಪಡೆಯಬೇಕಾಗಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ಬೆಳೆಯಲು ಸಹಾಯಕ.

    ReplyDelete