ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲೀಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ನಡೆದ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಳುವಳಿಗಾರರು, ಇಂಜಿನಿಯರ್ರುಗಳು, ವೈದ್ಯರು, ರಂಗಕರ್ಮಿಗಳು, ದಲಿತ ಮುಖಂಡರು, ಸಿನಿಮಾ ರಂಗದವರೆಲ್ಲರೂ ಭಾಗವಹಿಸಿದ್ದರು. ಅನ್ಯಾಯವೆಸಗಿದ ಭೂಮಾಲೀಕನನ್ನು ಬಂಧಿಸಲು ಒತ್ತಾಯಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲೆಕುಡಿಯ ಆದಿವಾಸಿಗಳ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಸುತ್ತಿರುವ ಭೂಮಾಲೀಕ ಗೋಪಾಲಗೌಡನು ಇತ್ತೀಚೆಗೆ ಸುಂದರ ಮಲೆಕುಡಿಯನ ಎರಡೂ ಕೈಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪ್ರಗತಿಪರ ಸಾಹಿತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲಿನಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮದ ಪತ್ರಿಕಾ ಹೇಳಿಕೆ.
 |
ಮುನೀರ್ ಕಾಟಿಪಳ್ಳ |
|
 |
ದ್ವಾರಕಾನಾಥ್ |
|
ಕಳೆದ 25 ವರ್ಷಗಳಿಂದ ಅಕ್ರಮವಾಗಿ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಭೂಮಾಲೀಕ ಬೆಳ್ತಂಗಡಿಯ ಗೋಪಾಲಗೌಡನು ಈಗಲೂ ತನ್ನ ಜಮೀನನ್ನು ವಿಸ್ತಿರಿಸುವ ಕಾಯಕದಲ್ಲಿ ತೊಡಗಿದ್ದಾನೆ. ಭೂಮಾಲೀಕ ಗೋಪಾಲಗೌಡನ ಕುಟುಂಬ ಬ್ರಿಟೀಷರ ಆಡಳಿತಾವಧಿ ಕಾಲದಲ್ಲಿ ಬ್ರಿಟೀಷರಿಗಾಗಿ ಕರವಸೂಲಿ ಮಾಡುವ ಶೇಣವರಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ರಮೇಣ ಜಮೀನ್ದಾರರಾಗಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಭೂಮಾಲೀಕ ಪ್ರವೃತ್ತಿಯನ್ನು ಮುಂದುವರೆಸಿದ್ದು, ಈಗಲೂ ಆದಿವಾಸಿಗಳು, ದಲಿತರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಲೇ ಬಂದಿದ್ದಾನೆ.
ಸುಂದರ ಮಲೆಕುಡಿಯರು ಗೋಪಾಲಗೌಡನ ಜಮೀನಿನ ಪಕ್ಕದಲ್ಲಿ ಜಮೀನನ್ನು ಹೊಂದಿದ್ದು, ಸುಂದರ ಮಲೆಕುಡಿಯನು ಅಲ್ಲಿ ಕೃಷಿ ಮಾಡಬಾರದೆಂದು ಸುಮಾರು 25 ವರ್ಷಗಳ ಆದೇಶ ಹೊರಡಿಸಿದ್ದ. ಆದರೆ ಸುಂದರ ಮಲೆಕುಡಿಯ ಕೃಷಿ ಚಟುವಟಿಕೆ ಮುಂದುವರೆಸಿದಾಗ ಗೋಪಾಲಗೌಡನ ಸಹಚರರು ಸುಂದರ ಮಲೆಕುಡಿಯನ ಮನೆಗೆ ನುಗ್ಗಿ ಮಗು ಪೂರ್ಣೇಶ ಮಲಗಿದ್ದ ತೊಟ್ಟಿಲನ್ನು ಕಡಿದಿದ್ದರು. ಆಗ ಅಡ್ಡ ಬಂದ ಸುಂದರ ಮಲೆಕುಡಿಯನ ಪತ್ನಿಯ ಕೈ ಬೆರಳುಗಳನ್ನು ಗೋಪಾಲಗೌಡನ ಸಹಚರರು ತುಂಡರಿಸಿದ್ದರು. ಇಂತಹ ಹಲವಾರು ಘಟನೆಗಳು ಆ ಸಂದರ್ಭದಲ್ಲಿ ನಡೆದಿತ್ತು. 25 ವರ್ಷಗಳ ಹಿಂದೆ ಮುಖ್ಯವಾಹಿನಿಯಲ್ಲಿ ನಡೆಯುತ್ತಿರೋ ಹೋರಾಟಗಳ ಸಂಪರ್ಕ ಇಲ್ಲದಿದ್ದ ಮಲೆಕುಡಿಯರು ಬೆರಳು, ಕೈಗಳನ್ನು ಕಳೆದುಕೊಂಡು ಸುಮ್ಮನಿದ್ದರು.
 |
"ಮನುಜಮತ" |
|
 |
ಅನಂತನಾಯ್ಕ್ |
|
 |
ಕೊನೆಗೊಂದು ಹಾಡು.... |
|
ಇತ್ತೀಚೆಗೆ ಮತ್ತೆ ಸುಂದರ ಮಲೆಕುಡಿಯನ ಜಮೀನಿಗೆ ನುಗ್ಗಿದ ಗೋಪಾಲಗೌಡ ಮತ್ತು ಸಹಚರರು ಮರಗಳನ್ನು ಮಿಷಿನ್ನಿನ ಮೂಲಕ ಕಡಿಯಲಾರಂಭಿಸಿದ್ದರು. ಅದನ್ನು ವಿರೋಧಿಸಿದ ಸುಂದರ ಮಲೆಕುಡಿಯ ಮತ್ತು ಪತ್ನಿ, ಮಗ ಪೂರ್ಣೇಶನಿಗೆ ಮೆಣಸಿನ ಹುಡಿ ಎರಚಿದ್ದಾರೆ. ನಂತರ ಸುಂದರ ಮಲೆಕುಡಿಯ ಕೈಗಳನ್ನು ಪ್ರಜ್ಞಾಪೂರ್ವಕವಾಗಿ ಹಿಡಿದು ಎರಡೂ ಕೈಗಳನ್ನು ಪ್ರತ್ಯೇಕವಾಗಿ ಮೆಷಿನ್ನಿನಿಂದ ತುಂಡರಿಸಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳು:
- ಪೋಲೀಸರು ಭೂಮಾಲೀಕ ಗೋಪಾಲಗೌಡನನ್ನು ಇನ್ನೂ ಬಂಧಿಸಿಲ್ಲ. ಗೋಪಾಲಗೌಡನ ಬಂಧನವಾಗಬೇಕು. ಭೂಮಾಲೀಕನಿಂದ ಕೈಗಳನ್ನು ಕಳೆದುಕೊಂಡಿರುವ ಸುಂದರ ಮಲೆಕುಡಿಯನಿಗೆ 25 ಲಕ್ಷ ಪರಿಹಾರ ನೀಡಬೇಕು.
- ಸುಂದರ ಮಲೆಕುಡಿಯನ ಪುತ್ರ ಪೂರ್ಣೇಶನಿಗೆ ಸರಕಾರಿ ಉದ್ಯೋಗ ನೀಡಬೇಕು.
- ಇನ್ನೂ ಅಸ್ತಿತ್ವದಲ್ಲಿ ಇರುವ ಭೂಮಾಲೀಕ ಪದ್ಧತಿಯನ್ನು ಹತ್ತಿಕ್ಕಲು ಸರಕಾರ ನಿರ್ಧಾರ ಕೈಗೊಳ್ಳಬೇಕು.
- ಭೂಮಾಲೀಕರು ಅಥವಾ ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಗುರುತಿಸಿ ಅವರ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಗ್ರಾಮದ ಭೂ ರಹಿತರಿಗೆ ವಿತರಿಸಬೇಕು.
- ಭೂಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿ ಗ್ರಾಮದಲ್ಲಿ ಪ್ರತ್ಯೇಕ ಸರಕಾರವನ್ನು ಹೊಂದಿರುವ ಭೂಮಾಲೀಕರ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು
Update: ದಿನಾಂಕ 23/08/2015ರಂದು ಗೋಪಾಲಕೃಷ್ಣಗೌಡನನ್ನು ಬಂಧಿಸಲಾಗಿದೆ.
No comments:
Post a Comment