Jan 28, 2015

ಯುಟ್ಯೂಬ್ ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದು ಹೇಗೆ?

ಅಂತರ್ಜಾಲದ ಸ್ಪೀಡು ಕಡಿಮೆಯಿದ್ದಾಗ ಯುಟ್ಯೂಬಿನಲ್ಲಿರುವ ವೀಡಿಯೋಗಳನ್ನು ಸರಾಗವಾಗಿ ನೋಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ಯುಟ್ಯೂಬಿನಿಂದ ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ನಂತರ ನೋಡುವುದು ಅನುಕೂಲಕರ. ಈ ಉದ್ದೇಶಕ್ಕಾಗಿ ಯುಟ್ಯೂಬ್ ಡೌನ್ ಲೋಡರ್, ರಿಯಲ್ ಡೌನ್ ಲೋಡರುಗಳನ್ನು ಕಂಪ್ಯೂಟರಿಗೆ ಇನ್ ಸ್ಟಾಲ್ ಮಾಡಿಕೊಂಡು ಉಪಯೋಗಿಸಬಹುದು. ಇನ್ ಸ್ಟಾಲ್ ಮಾಡಿಕೊಳ್ಳುವ ಕಷ್ಟ ಬೇಡವೆನ್ನುವವರಿಗೆ ಆನ್ ಲೈನಿನಲ್ಲೇ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸುಲಭ ವಿಧಾನವೊಂದನ್ನು ಇಲ್ಲಿ ನೀಡಲಾಗಿದೆ.
ಮೊದಲಿಗೆ ಯುಟ್ಯೂಬನ್ನು ತೆರೆದು ನಿಮಗೆ ಬೇಕಾದ ವೀಡಿಯೋದ ಮೇಲೆ ಕ್ಲಿಕ್ಕಿಸಿ:
downloading videos from youtube

ನಂತರ ಚಿತ್ರದಲ್ಲಿ ತೋರಿಸಿರುವಂತೆ ಅಡ್ರೆಸ್ ಬಾರಿನಲ್ಲಿ youtube ಪದದ ಮುಂಚೆ ss ಎಂದು ಟೈಪಿಸಿ ಎಂಟರ್ ಒತ್ತಿ:
download from youtube

savefrom.net ವೆಬ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಬೇಕಾದ ಗುಣಮಟ್ಟದ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಧ್ವನಿಯನ್ನು ಮಾತ್ರ ಡೌನ್ ಲೋಡ್ ಮಾಡಿಕೊಳ್ಳುವ ಸೌಕರ್ಯವೂ ಇದೆ.
online video download from youtube
ನಿಮ್ಮ ಆಯ್ಕೆಯ ವೀಡಿಯೋದ ಲಿಂಕನ್ನು ಕಾಪಿ ಮಾಡಿಕೊಂಡು ನಂತರ savefrom.netನಲ್ಲಿ ಪೇಸ್ಟ್ ಮಾಡಿ ಕೂಡ ಡೌನ್ ಲೋಡ್ ಮಾಡಬಹುದು. ಯುಟ್ಯೂಬಿನಿಂದ ಮಾತ್ರವಲ್ಲದೆ ಫೇಸ್ ಬುಕ್ಕಿನಿಂದ ಕೂಡ ವೀಡಿಯೋ ಡೌನ್ ಲೋಡ್ ಮಾಡಬಹುದು.
ಡೌನ್ ಲೋಡ್ ಮಾಡುವ ವಿಧಾನವನ್ನು ವೀಕ್ಷಿಸಲು ಕೆಳಗಿನ ವೀಡಿಯೋ ನೋಡಿ:
ಸೂಚನೆ: ಯುಟ್ಯೂಬಿನ ಕೆಲವು ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದು ಕಾಪಿರೈಟ್ ಉಲ್ಲಂಘನೆಗೆ ಕಾರಣವಾಗಬಹುದು. ಡೌನ್ ಲೋಡ್ ಮಾಡುವ ಮುನ್ನ ಯುಟ್ಯೂಬಿನ ಅಥವಾ ನಿರ್ದಿಷ್ಟ ವೀಡಿಯೋಗೆ ಸಂಬಂಧಪಟ್ಟ ನಿಯಮಗಳನ್ನು ತಪ್ಪದೇ ಓದಿ.


No comments:

Post a Comment