1998ರಲ್ಲಿ ನಡೆದ ಒಂದು ನೈಜ ಘಟನೆಯಿಂದ ಪ್ರೇರೇಪಿತರಾಗಿ ಕಥೆ ಹೆಣೆದಿರುವುದಾಗಿ ಹೇಳಿಕೆ ಕೊಟ್ಟಿದ್ದ ಬಿ.ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಿತ್ರದ ಟ್ರೇಲರ್ ಯೂಟ್ಯೂಬಿನಲ್ಲಿ ಕಾಣಿಸಿಕೊಂಡು ಸಿನಿಮಾಸಕ್ತರ ಗಮನ ಸೆಳೆಯುತ್ತಿದೆ. ಕೇಸರಿ ಹಿಂದೂ ಧರ್ಮಕ್ಕೆ, ಹಸಿರು - ಕಪ್ಪು ಮುಸ್ಲಿಂ ಧರ್ಮಕ್ಕೆ, ಬಿಳಿ ಕ್ರಿಶ್ಚಿಯನ್ ಧರ್ಮಕ್ಕೆ ಪರ್ಯಾಯವಾಗಿಬಿಟ್ಟಿರುವ ದಿನಗಳಲ್ಲಿ ಬಣ್ಣಗಳ ಗೋಜಲುಗಳ ಹಿಂದೆ ದೇವರು ಮರೆಯಾಗಿಬಿಟ್ಟಿದ್ದಾರೆ! ದೇವರ ನಾಡಲ್ಲಿ ಚಿತ್ರದ ಟ್ರೇಲರ್ ನಲ್ಲಿ ಮೂರು ಧರ್ಮದ ಬಣ್ಣಗಳ ನಡುವೆ ಕಮ್ಯುನಿಷ್ಟರ ಕೆಂಪು ಬಣ್ಣವೂ ಅಲ್ಲಲ್ಲಿ ಇಣುಕಿದೆ! ಒಟ್ಟಿನಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವಂತಹ ಎಲ್ಲಾ ಅಂಶಗಳೂ ಟ್ರೇಲರ್ರಿನಲ್ಲಿವೆ. ಪ್ರಕಾಶ್ ರೈ, ಅಚ್ಯುತ್ ಕುಮಾರ್ ಮತ್ತು ಸಿಹಿಕಹಿ ಚಂದ್ರುರವರ ಅಭಿನಯದ ಬಗ್ಗೆ ಮತ್ತೆ ಮತ್ತೆ ಹೇಳುವ ಅವಶ್ಯಕತೆಯಿಲ್ಲ! "ಮನುಷ್ಯ ಮೂಲತಃ ಕೇಡಿಗನಿರುತ್ತಾನೆ. ಒಳ್ಳೆಯವನ ಥರ ಕಾಣೋನೇ ಬಾಂಬ್ ಇಟ್ಟಿರ್ತಾನೆ" ಎಂದು ಟ್ರೇಲರ್ರಿನ ಕೊನೆಯಲ್ಲಿ ಪ್ರಕಾಶ್ ರೈ ಹೇಳುವ ಮಾತು ಚಿತ್ರಕ್ಕೆ ಕಾಯುವಂತೆ ಮಾಡುತ್ತವೆ!
No comments:
Post a Comment