ಮೊದಲ ಪುಟ |
ಭಾರತದ
ಐಟಿ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವುದು ನಮ್ಮ ರಾಜಧಾನಿ ಬೆಂಗಳೂರು. ಐಟಿ ಕ್ಯಾಪಿಟಲ್
ಆಗಿರುವುದರಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಅನೇಕ ಅನುಕೂಲಗಳೂ ಆಗಿವೆ, ಅನಾನುಕೂಲಗಳೂ
ಆಗಿವೆ. ಐಟಿ ತಂತ್ರಜ್ಞಾನವನ್ನು ಸರಕಾರದ ವತಿಯಿಂದ ಜನರ ಬಳಿಗೆ ಕೆಲಸವೊಂದು ನಡೆದಿದೆ.
ಎಲ್ಲರೊಳಗೊಂದಾಗಿರುವ ಮೊಬೈಲು ಫೋನುಗಳನ್ನು ಉಪಯೋಗಿಸಿಕೊಂಡು ಸರಕಾರದ ವಿವಿಧ ಇಲಾಖೆಗಳನ್ನು
ಮತ್ತನೇಕ ಖಾಸಗಿ ಸೇವೆಗಳನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಸರಕಾರ
ಕೈಹಾಕಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೊಬೈಲ್ ಒನ್ ಯೋಜನೆ ಸಿದ್ಧರಾಮಯ್ಯನವರ
ಆಸಕ್ತಿಯಿಂದಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿಗೊಂಡಿದೆ.
ದೇಶದಲ್ಲೇ
ಮೊದಲ ಪ್ರಯತ್ನವಿದು. ಈ ಮೊಬೈಲ್ ಒನ್ ಸೇವೆಯನ್ನು ಆಂಡ್ರಾಯ್ಡ್ ಮತ್ತು ಐಫೋನುಗಳಲ್ಲಿ
ಅಪ್ಲಿಕೇಶನ್ ಮೂಲಕ ಮತ್ತು ಸ್ಮಾರ್ಟ್ ಫೋನ್ ಉಪಯೋಗಿಸದವರು 161ಕ್ಕೆ ಎಸ್.ಎಮ್.ಎಸ್ ಕಳುಹಿಸುವ
ಮೂಲಕ ಅಥವಾ *161# ಎಂದು ಯು.ಎಸ್.ಎಸ್.ಡಿ ನಂ ಕಳುಹಿಸುವ ಮೂಲಕ ಪಡೆಯಬಹುದು.ನೋಂದಣಿ ಪುಟ |
ಮೊಬೈಲ್
ಒನ್ನಿನ ಆಂಡ್ರಾಯ್ಡ್ ತಂತ್ರಾಂಶದ ಕಿರುಪರಿಚಯ ಈ ಲೇಖನದ ಉದ್ದೇಶ. ಕರ್ನಾಟಕ ಮೊಬೈಲ್ ಒನ್
ತಂತ್ರಾಂಶವನ್ನು ಗೂಗಲ್ ಪ್ಲೇ ಮುಖಾಂತರ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಇನ್ಸ್ಟಾಲ್ ಮಾಡಿ ಮೊಬೈಲ್
ಒನ್ನನು ತೆರೆದರೆ ರಿಜಿಶ್ಟ್ರೇಷನ್ನಿನ ಪುಟ ತೆರೆದುಕೊಳ್ಳುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಎಂಬ
ಆಯ್ಕೆ ಈ ಪುಟದಲ್ಲಿದೆಯಾದರೂ ನಂತರದ ಪುಟಗಳಲ್ಲಿ ಇಂಗ್ಲೀಷ್ ಮಾತ್ರವಿದೆ. ರಿಜಿಷ್ಟ್ರೇಷನ್ನಿನ ವಿಧಾನ
ಅತ್ಯಂತ ಸುಲಭದ್ದಾಗಿದೆ. ನಿಮ್ಮ ಮೊಬೈಲ್ ನಂಬರ್, ಹೆಸರು ಟೈಪಿಸಿ ಓಕೆ ಒತ್ತಿದರೆ ಮೊಬೈಲಿಗೊಂದು
ಪಾಸ್ ವರ್ಡ್ ಮೆಸೇಜಿನ ರೂಪದಲ್ಲಿ ಬರುತ್ತದೆ. ಅದನ್ನುಪಯೋಗಿಸಿ ಲಾಗಿನ್ ಆದರೆ ಆಯಿತು. ಯಾವ ಯಾವ
ವಿಭಾಗಗಳಿವೆ ಎಂಬುದನ್ನು ಚಿತ್ರಗಳಲ್ಲಿ ಗಮನಿಸಿ.
ಮೊದಲ ಪುಟ |
ಎರಡನೆಯ ಪುಟ |
ಮೂರನೆಯ ಪುಟ |
ಕೃಷಿ ಪುಟ |
ಬ್ಯಾಂಕಿಂಗ್ ಸೇವೆಗಳು |
ಬಸ್ ಟ್ರೇನ್ ಬುಕ್ಕಿಂಗ್ |
ವಿಪತ್ತು ಮಾಹಿತಿ |
ಕೆಲಸ ಹುಡುಕಲು... |
ದೂರು ನೀಡಲು ಐಕೇರ್ |
ತೆರಿಗೆಯ ಮಾಹಿತಿಗಾಗಿ |
ಅಂಚೆ ಇಲಾಖೆ |
ವಕೀಲರನ್ನುಡುಕಲು |
ಎಮ್ ಪವರ್ |
ಪಿಯುಸಿ ರಿಸಲ್ಟ್ಸ್ |
ರಾಯಿಟರ್ಸ್ ಮಾರುಕಟ್ಟೆ? |
ಸಕಾಲ |
ಆರೋಗ್ಯ ಮತ್ತಿತರ ಸೇವೆಗಳು |
ಎಸ್ ಎಸ್ ಎಲ್ ಸಿ ರಿಸಲ್ಟ್ಸ್ |
ಕ್ರೈಂ ರೆಕಾರ್ಡ್ |
ವೀಸಾ ಸೇವೆಗಳು |
ಪ್ರಯಾಣದನುಕೂಲಕ್ಕೆ |
No comments:
Post a Comment