ಹನಿ ಬೀಚ್ |
Umesh Mundalli Naik
ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾಗಿದೆ. ಸ್ವತಂತ್ರ ಹೋರಾಟದಲ್ಲಿ ಇಲ್ಲಿನ ಪಾತ್ರ ಅತಿಮುಖ್ಯವಾಗಿದೆ. ಕಡಲ ಸನಿಹದ ಗುಡ್ಡಗಳಲ್ಲಿ ಬೆಳೆಯುವ ಅಂಕೋಲೆ ಮರದಿಂದ ಊರಿಗೆ ಈ ಹೆಸರು ಬಂದಿದೆ. ಕಾರವಾರದಿಂದ 34ಕಿ.ಮೀ. ದೂರದಲ್ಲಿರುವ ತಾಲೂಕಿನ ಕೇಂದ್ರ.
ಆರ್ಯ ದುರ್ಗಾ ದೇವಸ್ಥಾನ |
ಕಾತ್ಯಾಯನಿ ದೇವಸ್ಥಾನ |
ಅಂಕೋಲಾದಲ್ಲಿ ಮಹಾಮಾಯಿ, ಕುಂಡೋಧರಿ, ಅಂಜದೀವದಿಂದ ತರಲ್ಪಟ್ಟ ಆರ್ಯದುರ್ಗಾ ದೇವರುಗಳ ಮಂದಿರ ಮಠಗಳು ಇದ್ದು ಸುಂದರವಾಗಿದೆ. ಇವಲ್ಲದೆ ಸುಂದರ ನಾರಾಯಣ, ವೆಂಕಟರಮಣ, ಹಳೆಪೇಟೆಯ ಗಣಪತಿ, ಅಂಬಾರಕೊಡ್ಲದಲ್ಲಿ ನಾರಾಯಣ, ಹೊನ್ನೆಕೆರಿಯಲ್ಲಿ ಮಹಾದೇವ, ವಿಠೋಬ, ಕಾಳಭೈರವ,ಕುಂಬಾರಕೇರಿಯಲ್ಲಿ ಕದಂಬೇಶ್ವರ ಮುಂತಾದ ಆಕರ್ಷಕ ದೇವಾಲಯಗಳಿವೆ. ಅಂಕೋಲೆಯ ಕಡಲದಂಡೆಯ ಗುಡ್ಡದ ಮೇಲೆ ‘ಬಸವನ ಕಲ್ಲು’ ಎಂಬ ರಮಣೀಯ ಪ್ರದೇಶವಿದೆ. ಅಲ್ಲಿ ಬಸವ ಎಂದು ಹೇಳಲ್ಪಡುವ ಕಲ್ಲಿನ ಮೇಲೆ ಅಷ್ಟು ಎತ್ತರ ಪ್ರದೇಶದಲ್ಲಿ ಸದಾ ನೀರು ತೊಟಕುತ್ತ ಇರುವುದು ಕುತೂಹಲಕಾರಿಯಾಗಿದೆ.
ಸರ್ಪಮಲ್ಲಿಖ್ನ ಕೋಟೆ
ಅಂಕೋಲೆಯಲ್ಲಿನ ಸರ್ಪಮಲ್ಲಿಖ್ ನ ಕೋಟೆ ಮತ್ತು ಕುದುರೆ ಬಾವಿ ಇಂದಿಗೂ ಅಜ್ಞಾತವಾಗಿಯೇ ಉಳಿದಿದೆ. ಕುದುರೆಗಳಿಗೆ ದಾರಾಳವಾಗಿ ನೀರು ಕುಡಿಯಲು ಅನುಕೂಲವಾಗಲೆಂದೆ ಸರ್ಪಮಲ್ಲಿಖ್ ನು ಕುದುರೆ ಬಾವಿ ನಿರ್ಮಿಸಿದ್ದನು ಎಂದು ಹೇಳಲಾಗುತ್ತಿತ್ತು.
ಸಜ್ಜೇಶ್ವರ ದೇವಸ್ಥಾನ |
ಬೇಲಿಕೇರಿ ಬಂದರು
ಬೇಲಿಕೇರಿಯಲ್ಲಿ ಸುಂದರ ಬೀಚ್ ಇದೆ. ಮತ್ತು ಜಗತ್ಪ್ರಸಿದ್ದ ವ್ಯಾಪಾರಿ ಬಂದರು ಇಲ್ಲಿದ್ದು ಬ್ರಿಟಿಷರ ಕಾಲದಲ್ಲಿ ಈ ಬಂದರಿನ ಮೂಲಕ ವಿದೇಶಕ್ಕೆ ಸಾಕಷ್ಟು ವ್ಯಾಪಾರ ವಹಿವಾಟು ನಡೆದಿರುವ ಬಗ್ಗೆ ಉಲ್ಲೇಖಗಳಿವೆ. ಇತ್ತೀಚಿನ ದಿನಗಳಲ್ಲಿ ಮ್ಯಾಂಗನಿಸ್ ಸಾಗಾಟಕ್ಕೆ ಈ ಬಂದರು ಹೆಸರುವಾಸಿಯಾಗಿದೆ.
ನಾರಾಯಣಿ ದೇವಸ್ಥಾನ |
ಕಾರವಾರ
ಇದು ಕರ್ನಾಟಕದ ಕಾಶ್ಮೀರ. ಇದು ಜಿಲ್ಲಾ ಕೇಂದ್ರವಾಗಿದ್ದು ಜಗತ್ತಿನಲ್ಲಿಯೇ ಉತ್ತಮ ಬಂದರುಗಳಲ್ಲಿ ಒಂದಾಗಿರುವ ಅರ್ಧಚಂದ್ರಾಕೃತಿಯ ನೈಸರ್ಗಿಕ ಬಂದರು ಇಲ್ಲಿದೆ. ಒಂದು ಕಡೆ ಸುಂದರ ಸಹ್ಯಾದ್ರಿ ಪರ್ವತ ಶ್ರೇಣಿ, ಇನೊಂದು ಕಡೆ ಬೋರ್ಗರೆವ ಕಡಲು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕಾರವಾರದ ಠಾಗೋಗ ಬೀಚ್, ಮತ್ತು ಅಲ್ಲಿಂದ ಕೇವಲ 5ಕಿ.ಮಿ. ಸಮುದ್ರದಲ್ಲಿ ಮಲಗಿರುವ ತಿಮಿಂಗಲದಂತೆ ಕಾಣುವ ಸದಾಶಿವಗಡ ದ್ವೀಪ, ದೇವಬಾಗ್ ಬೀಚ್, ಲೆಡಿಸ್ ಬೀಚ್, ಸೀ ಬರ್ಡ ನೌಕಾನೆಲೆ, ಮೊದಲಾದವುಗಳು ಇಲ್ಲಿನ ಪ್ರಮುಖ ತಾಣಗಳು. ಕಾರವಾರದ ಕಾಜುಭಾಗದಲ್ಲಿ ಈಶ್ವರ, ವಿಠ್ಠಲ ರುಕುಮಾಯಿ,ಸಾಯಿಕಟ್ಟೆ, ಮಾಲಾದೇವಿ ಗುಡಿಗಳು, ಬಾಡದಲ್ಲಿ ರಾಮೇಶ್ವರ ಮಠ, ಬಂಡಿಕಟ್ಟೆ, ಸಪ್ತಕೋಟೆಶ್ವರ, ಗ್ರಾಮದೇವ, ಬ್ರಹ್ಮದೇವ, ರೇವತಿ, ರಾಮಕೃಷ್ಣ ಮಠ, ಪದ್ಮನಾಭಮಠಗಳು, ಕೋಡಿಭಾಗದಲ್ಲಿ ದುಗಾದೇವಿ, ಮುರಳೀಧರ ಮಠ, ಮೊದಲಾದ ದೇವಾಲಯಗಳಿವೆ. ಧೋಭಿಘಾಟನಲ್ಲಿ ಇತ್ತಿಚೆಗೆ ನಿರ್ಮಿಸಿದ ಸುಂದರ ಸರಳಶೈಲಿಯ ಶ್ರೀ ಸತ್ಯಸಾಯಿ ಮಂದಿರವು ಪ್ರಶಾಂತವಾಗಿದೆ. ದೇವಿಭಾಗ ಎಂಬ
ಸಮುದ್ರ ಮಧ್ಯದ ನೆಲೆಯಲ್ಲಿ ಪ್ರವಾಸಿಗರಿಗಾಗಿ ವಿಹಾರ ವಸತಿಧಾಮವನ್ನು ನಿರ್ಮಿಸಲಾಗಿದೆ.
ಕದ್ರಾ ಜಲಾಶಯ |
ಕಾರವಾರ ಬಂದರು
ಇದೊಂದು ನೈಸರ್ಗಿಕ ಬಂದರು. ಇದು ಕಾರವಾರದ ಬೈತಕೋಲ್ನಲ್ಲಿದೆ. ಅನೇಕ ವಿದೇಶಿ ಹಡಗುಗಳು ಈ ಬಂದರಿಗೆ ಆಗಾಗ ಬಂದುಹೋಗುತ್ತಿರುತ್ತವೆ. ಈ ಹಡಗುಗಳಲ್ಲಿ ಅನೇಕ ಸರಕು ಸಾಮಾಗ್ರಿಗಳ ಆಮದು ಮತ್ತು ರಪ್ತು ನಡೆಯುತ್ತಿರುತ್ತದೆ.
ಮತ್ಸ್ಯಾಲಯ
ಕಾರವಾರ ಗೋವಾ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಮುದ್ರ ಮೀನುಗಳ ಪ್ರದರ್ಶನ ಕೇಂದ್ರವಿದೆ. ಅನೇಕ ಜಾತಿಯ ಮೀನುಗಳನ್ನು ಇಲ್ಲಿ ಕಾಣಬಹುದಾಗಿದೆ. ಜಿಲ್ಲಾ ವಿಜ್ಞಾನ ಕೇಂದ್ರವೂ ಇಲ್ಲಿಯೇ ಹತ್ತಿರದಲ್ಲಿದೆ.
ಸದಾಶಿವಕೋಟೆ
ಕಾರವಾರದಿಂದ ಕೇವಲ 6ಕಿ.ಮೀ.ದೂರದಲ್ಲಿದೆ ಈ ಕೋಟೆ. ಗುಡ್ಡದ ಮೇಲ್ಗಡೆ ಈ ಕೋಟೆಯನ್ನು ನಿಮಿಸಲಾಗಿದೆ. ಸೋದೆಯ ಅರಸರಾದ ಸದಾಶಿವರಾಯರು ಈ ಕೋಟೆಯನ್ನು ಕಟ್ಟಿಸಿರುವುದಾಗಿ ಹೇಳಲಾಗುತ್ತದೆ. ಶಿವಾಜಿ ಮಹಾರಾಜರು 1665ರಲ್ಲಿ ಇಲ್ಲಿಗೆ ಬೇಟಿನಿಡಿರುವ ಬಗ್ಗೆ ಐತಿಹ್ಯಗಳಿವೆ.
ಕಾರವಾರದ ದ್ವೀಪಗಳು
ಕಾರವಾರ ಕಡಲ ದಂಡೆಯಿಂದ ಕೆಲವೆ ಅಂತರದಲ್ಲಿ ಅನೇಕ ದ್ವೀಪಗಳಿವೆ. ಅವುಗಳಲ್ಲಿ ದೇವಗಡ, ಕೂರ್ಮಗಡ, ಕಾಂಗಗಡ, ಮಧ್ಯಂಗಡ ಮತ್ತು ಅಂಜುದ್ವಿಪಗಳು ಪ್ರಮುಖವಾದವುಗಳು. ಇವುಗಳು ಉತ್ತಮ ವಿಹಾರ ತಾಣಗಳಾಗಿದ್ದು ನೌಕಾವಿಹಾರಕ್ಕೂ ಇಲ್ಲಿ ಅನೂಕೂಲತೆಗಳಿವೆ. ದೇಶ ವಿದೇಶಗಳಿಂದ ಈ ದ್ವೀಪಗಳನ್ನು ನೋಡಲು ಪ್ರವಾಸಿಗರು ಬರುತ್ತಿರುತ್ತಾರೆ.
ಕೂರ್ಮಗಡ
ಕಾರವಾರದಿಂದ ರಬ್ಬಿ ಸಮುದ್ರದಲ್ಲಿ ಕೇವಲ 6ಕಿ.ಮೀ.ದೂರದಲ್ಲಿದೆ ಕೂರ್ಮಗಡ ಎಂಬ ಪುಟ್ಟ ದ್ವೀಪ. ಕೂರ್ಮ ಎಂದರೆ ಆಮೆ ಗಡ ಎಂದರೆ ಗುಡ್ಡ. ಒಟ್ಟಾರೆ ಇದು ಆಮೆಯ ಆಕಾರದಲ್ಲಿದ್ದ ಕಾರಣ ಇದನ್ನು ಕೂರ್ಮಗಡ ಎಂದು ಕರೆಯುತ್ತಾರೆ. ಧಾರ್ಮಿಕ ವಿಶೇಷತೆಯಿಂದ ಕೂಡಿದ್ದ ಸುಮಾರು ನೂರು ಎಕರೆ ಪ್ರದೇಶವಿರುವ ಇಲ್ಲಿ ನರಸಿಂಹ ದೇವರು ನೆಲೆಸಿರುತ್ತಾನೆ. ಡಿಸೆಂಬರ ಅಥವಾ ಜನವರಿ ತಿಂಗಳಲ್ಲಿ ಬರುವ ಪುಷ್ಯ ಮಾಸದ ಪೂರ್ಣಚಂದ್ರ ದಿನದಂದು ಇಲ್ಲಿ ಜಾತ್ರೆ ನಡೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಭಕ್ತ ಸಾಗರವೇ ಹರಿದುಬರುತ್ತದೆ. ಕದ್ರಾ ಜಲವಿದ್ಯುತ್ ಯೋಜನೆ
ಕಾರವಾರದಿಂದ ಜೊಯ್ಡಾ ಮಾರ್ಗವಾಗಿ 26ಕಿ.ಮೀ. ಕ್ರಮಿಸಿದರೆ ಕದ್ರಾ ಜಲವಿದ್ಯುತ್ ಯೋಜನೆ ಕಣ್ಣಿಗೆ ಕಾಣುತ್ತದೆ. ಕದ್ರಾದಿಂದ ಎಡಕ್ಕೆ 20 ಕಿ.ಮೀ.ದೂರದಲ್ಲಿ ಕೊಡಸಳ್ಳಿ ಜಲಾಶಯ ಮತ್ತು ಬಲಕ್ಕೆ 20 ಕಿ.ಮೀ.ದೂರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ.
No comments:
Post a Comment