Nov 8, 2014

`ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು ಮಕ್ಕಳೇ ನನ್ನ ನೋಡಿದರೂ ಮಾತನಾಡಿಸುತ್ತಿರಲಿಲ್ಲ’

jadamali jagattu
ಜಾಡಮಾಲಿ ಜಗತ್ತು
ಭಾನುವಾರ ನವೆಂಬರ್ 9ರಂದು ಹಾಸನದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ಒಂಭತ್ತು ಘಂಟೆಗೆ ನಾಗರಾಜ್ ಹೆತ್ತೂರ್‍ ಅವಧಿ ವೆಬ್ ಪತ್ರಿಕೆಗೆ ಬರೆದಿದ್ದ "ಜಾಡಮಾಲಿ ಜಗತ್ತು" ಲೇಖನಗಳ ಸಂಗ್ರಹದ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಪುಸ್ತಕದ ಆಯ್ದಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಹೌದು..!  ವೃತ್ತಿಯೇ ಅಂತದ್ದು. ಯಾರಿಗಾದರೂ ಸರಿಯೇ ನಾನು ಇಂತಹವರು ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಕಾರಣ ವೃತ್ತಿಗೆ ಗೌರವ ಕೊಡುವವರು ಸಮಾಜದಲ್ಲಿ ಯಾರಿದ್ದಾರೆ ಹೇಳಿ ? ಯಾರು  ಅವರನ್ನು ಕರೆದು ಆತ್ಮೀಯವಾಗಿ ಮಾತನಾಡಿಸುತ್ತಾರೆ ? ಯಾವ ಮಕ್ಕಳೂ ಕೂಡ ನನ್ನ ಅಮ್ಮ ಕಸ ಗುಡಿಸುವವಳು, ನನ್ನಪ್ಪ ಬೀದಿ ಗುಡಿಸುವ ಪೌರ ಕಾರ್ಮಿಕ ಎಂದು ಹೇಳಿಕೊಳ್ಳುವ  ಪರಿಸ್ಥಿತಿ ಇಂದಿನ ಸಮಾಜದಲ್ಲಿ ಇಲ್ಲ.
ಪೌರಕಾರ್ಮಿಕರ ಮಕ್ಕಳಿಗೆ ಶಾಲೆಯಲ್ಲಿ ನಿಮ್ಮ ಅಪ್ಪ ಅಮ್ಮ ಏನು ಮಾಡುತ್ತಿದ್ದಾರೆ...? ಎಂದು ಕೇಳಿದರೆ ಉತ್ತರ ತಲೆ ತಗ್ಗಿಸುವುದು ಅಷ್ಟೆ..? ಮುಂದೆ ಮಾತಿಲ್ಲಹಾಸನದ ನಿರ್ಮಲ ನಗರದ ಜಯಮ್ಮನ ಮತ್ತು ಮಕ್ಕಳ ಪರಿಸ್ಥಿತಿಯೂ ಇದೆ. ಆಕೆಯ ಮಕ್ಕಳಿಗೆ ಸಮಾಜದಿಂದ ಬಹಿಷ್ಕøತರಂತಿರುವ ನಾವುಗಳು ನಮ್ಮ ತಂದೆತಾಯಿ ಪೌರಕಾರ್ಮಿಕರು ನಾವು ಬೀದಿ ಗುಡಿಸುವವರ ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆ.
nagaraj hettur
ಮುಖಪುಟ
ಇಂತಹ ಹಲವು ಪ್ರಸಂಗಗಳನ್ನು  ನಿತ್ಯವೂ ಎದುರಿಸುತ್ತೇವೆ ಎನ್ನುವ ಜಯಮ್ಮ  ತನ್ನ ಒಡಲಿನ ಸಂಕಟವನ್ನು ನಮ್ಮೊಂದಿಗೆ ರೀತಿ ಹಂಚಿಕೊಂಡರು.
Àನ್ನ ಮಕ್ಕಳು ಓದುವ ಸ್ಕೂಲಿನ ಎದುರೇ ನಾವು ಕಸ ಗುಡಿಸುತ್ತಿದ್ದೆವು. ನಮ್ಮ  ಮಕ್ಕಳು ನಮ್ಮ ಕಣ್ಣ ಮುಂದೆ ಇದ್ದರೂ  ಮಾತನಾಡಿಸುತ್ತಿರಲಿಲ್ಲ. ನಮಗೂ ಹೆದರಿಕೆ ಎಲ್ಲಿ ಅವರ ಗೆಳೆಯರ ಎದುರು ಮಾತನಾಡಿಸಿದರೆ ಇವಳು ನನ್ನಮ್ಮ ಎಂದು ಹೇಳುತ್ತಾರೋ...?  ಎಲ್ಲಿ ಮಕ್ಕಳ ಮರ್ಯಾದೆ ಹೋಗುತ್ತದೋ ಎಂಬ ಆತಂಕ. ಇಂತಹ ನೂರಾರು ಪ್ರಸಂಗಗಳನ್ನು ಎದುರಿಸಿದ್ದೇವೆ ಎನ್ನುತ್ತಾರೆ  ಗಟ್ಟಿಗಿತ್ತಿ ಜಯಮ್ಮ,
ಈಕೆಯದೂ ಒಂದು ದೊಡ್ಡ ಸ್ಟೋರಿ.. ಆಕೆಯಿಂದಲೇ ಕೇಳಿ..,
`ನಮ್ಮ ತಂದೆ-ತಾಯಿ ಮಲ ಹೊರುತ್ತಿದ್ದರು. ಆಗ ನಾವೆಲ್ಲಾ ಚಿಕ್ಕವರು. ಇದೆನೆಂದು ಗೊತ್ತಿಲ್ಲ. ನಾವು ಸುಮ್ಮನೆ ಹೋಗಿ ನಿಂತುಕೊಳ್ಳುತ್ತಿದ್ದೆವು. ಅವರಿಗೆ ಆಗಾಗ ಸಹಾಯ ಕೂಡ ಮಾಡುತ್ತಿದ್ದೆವು. ಆದರೆ ಬರಬರುತ್ತಾ ನಾವು ದೊಡ್ಡವರಾದಂತೆ, ಸಮಾಜ ಗೊತ್ತಾಗುತ್ತಿದ್ದಂತೆ ನಾವೆಲ್ಲಾ ಇಂತಹ ಕೆಲಸಗಳನ್ನು ಮಾಡಿದೆವಾ..? ಎಂದುಕೊಳ್ಳುತ್ತೇವೆ. ಅಂದಿನ ಕೆಲಸವನ್ನು ಇಂದು ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ ಆದರೆ ನಮ್ಮ ಅಪ್ಪ-ಅಮ್ಮ ಯಾವತ್ತೂ ನಮಗೆ ಮಲ ಹೊರಿಸಲಿಲ್ಲ  ನಾನು ಕೂಡ  ನನ್ನ ಮಕ್ಕಳಿಗೆ ಯಾವತ್ತೂ  ಮಲ ಹೊರಿಸುವುದಿರಲಿ ಕೆಲಸದ ಬಗ್ಗೆ ಯೋಚಿಸುವಂತೆ ಕೂಡ ಮಾಡಲಿಲ್ಲ  ಎಂದು ಹೇಳುತ್ತಾ ನಿಟ್ಟುಸಿರು  ಬಿಟ್ಟರು ಜಯಮ್ಮ.
jadamali jagattu
ಸಮಾರಂಭದ ವಿವರಗಳು
ನಾನು ಕಳೆದ ಇಪ್ಪತ್ತಮೂರುವರ್ಷದಿಂದಲೂ ಪೌರಕಾರ್ಮಿಕಳಾಗಿ ಕೆಲಸ  ಮಾಡುತ್ತಿದ್ದೇನೆ ಇಂದಿಗೂ ಮಾಡುತ್ತಿದ್ದೇನೆ. ನನ್ನ ಬದುಕಿನಲ್ಲಿ ಮಹತ್ತರ ಬದಲಾವಣೆಗಳಾಗಿವೆ. ನಗರವನ್ನು ಸ್ವಚ್ಛ ಮಾಡುವ ಕೆಲಸದಿಂದ ನನ್ನ ಆತ್ಮಗೌರೆವಕ್ಕೆ ಎಂದೂ ಧಕ್ಕೆಯಾಗಿಲ್ಲ. ಬದಲಾಗಿ ಇಡೀ ನಗರವನ್ನು ಸ್ವಚ್ಛ ಮಾಡಿದೆ ಎನ್ನುವ ಖುಷಿ ಇದೆಗಂಡ ತೀರಿ 15 ವರ್ಷ ಆಗಿದೆ. ಹೀಗಿದ್ದರೂ ತಮ್ಮ 5 ಹೆಣ್ಣು ಮಕ್ಕಳು 3 ಗಂಡು ಮಕ್ಕಳನ್ನು ಎಲ್ಲರಂತೆ ಬೆಳೆಸಿದ್ದೆನೆವಿದ್ಯೆ ಬುದ್ದಿ  ಕೊಡಿಸಿದ್ದೇನೆ. ಮೂವರು ಸರ್ಕಾರಿ ಕೆಲಸಕ್ಕೆ ಸೇರಿದ್ದಾರೆ. ಹೆಣ್ಣು ಮಕ್ಕಳನ್ನು ಒಂದು ಹಂತಕ್ಕೆ ಓದಿಸಿ ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದೆ ಈಗ ಮೊಮ್ಮೊಕ್ಕಳೊಂದಿಗೆ ಆಡಿಕೊಂಡು ತೃಪ್ತಿ ಜೀವನ ನಡೆಸುತ್ತಿದ್ದೆನೆ.
ಆಕೆ ಹೇಳುವಂತೆ `ಹಾಸನದ  ನಾಗರಿಕರಿಗೆ  ಇನ್ನೂ ಪರಿಜ್ಞಾನ ಬಂದಿಲ್ಲ. 25 ವರ್ಷದ  ಹಿಂದೆ ಜನ ಯಾವ   ರೀತಿ ಇದ್ದರೋ ಇಂದಿಗೂ ಹಾಗೆ ಇದ್ದಾರೆ. ಇದು ನಮ್ಮ ದುರಂತ. ಇದು ನಮ್ಮ ನಗರ , ನಮ್ಮ ಪ್ರದೇಶ, ನಮ್ಮ ರಸ್ತೆ ಎಂದು ಯಾವತ್ತೂ ಯೋಚಿಸುವುದಿಲ್ಲ. ಈಕೆ ಪೌರಕಾರ್ಮಿಕಳಾಗಿ ಕೆಲಸ ಆರಂಭಿಸಿದಾಗ ಇವರಿಗೆ ಸಿಗುತ್ತಿದ್ದ ಸಂಬಳ ಕೇವಲ 30 ರೂ  ಅಷ್ಟು ಸಂಬಳಕ್ಕೆ  8 ವರ್ಷ ಕೆಲಸ ಮಾಡಿದ್ದಾರೆ. ಬಂಗಾರಪ್ಪ ಸರ್ಕಾರ ಇದ್ದಾಗ ನಮ್ಮನ್ನೆಲ್ಲ  ಪರ್ಮನೆಂಟ್ ಮಾಡಿದರು ಎನ್ನುವ ಜಯಮ್ಮ  ಬಂಗಾರಪ್ಪನ ಕಾರ್ಯವನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈಗ ಈಕೆಯ ಸಂಬಳ 18 ಸಾವಿರ ಇದ್ದರೂ , 30 ರೂ  ಸಂಬಳ ಇದ್ದ ಕಾಲದಲ್ಲಿ ಈಕೆಯ ಕಷ್ಟ ಎಂಥ ಘನಘೋರವಾಗಿದ್ದಿತು ಎಂದು ಯೋಚಿಸುವದೂ ಕಷ್ಟವಾಗಿತ್ತು ಎಂದು  ಆಕೆ ಈಗಲೂ ಹೇಳಿಕೊಂಡು ಮರುಕ ಪಡುತ್ತಾಳೆ.
`ಅಂದು ಹಾಸನ ಬೆಳೆದಿರಲಿಲ್ಲ. ಆಗ ಅಷ್ಟು ಜನಕ್ಕೆ ನಾವು ಮಹಿಳೆಯರು 40 ರಿಂದ 50 ಜನ ಕಸ ಗುಡಿಸುವ ಕೆಲಸ ಮಾಡುತ್ತಿದ್ದೆವು. ಈಗ ನೋಡಿ ಹಾಸನದ ಜನಸಂಖ್ಯೆ ಒಂದೂವರೆ  ಲಕ್ಷ ದಾಟಿದೆ. ಆದರೆ ನಗರವನ್ನು ಸ್ವಚ್ಛ  ಮಾಡಲು ನಾವೆಷ್ಟು ಜನರಿದ್ದೇವೆ. ನೂರ ತೊಂಬತ್ತು ಜನ ಜನ ಹಾಸನದ ಯಾವ ಮೂಲೆಗೂ ಆಗುವುದಿಲ್ಲ ಸ್ವಾಮಿ
ಆದರೂ ಮಾಡಲೇಬೇಕಿದೆ ಎನ್ನುತ್ತಾರೆ. ನಮ್ಮ ಜನರು ಸ್ವಚ್ಛತೆ ಬಗ್ಗೆ ಇನ್ನೂ  ಬುದ್ದಿ ಕಲಿತಿಲ್ಲ. ವಿಪರ್ಯಾಸ ಎಂದರೆ ಕಸವನ್ನು  ವಿಭಾಗಿಸಿ ಹಾಕಿ ಎನ್ನುತ್ತೇವೆ. ಜನರು ಎಷ್ಟು  ಸೋಮಾರಿಗಳು ಎಂದರೆ ಎಲ್ಲವನ್ನೂ ಒಂದಕ್ಕೆ ತುಂಬಿ  ಹಾಕುತ್ತಾರೆ. ಅಸಹ್ಯವಾಗುತ್ತದೆ. ಬಾಟಲಿ, ಮಾಂಸ, ನಾವು ನೋಡದ ಅಸಹ್ಯಗಳಿಲ್ಲ. ಅದು ನಮಗೆ ಗೊತ್ತು ಸ್ವಾಮಿ. ಕೆಲವೊಂದು ಸಾರಿ ಸಿಟ್ಟು  ಬಂದು ` ಅಲ್ಲಮ್ಮಾ ನೀವು ಹೆಂಗಸರು, ನಾವು  ಹೆಂಗಸರೇ ಯಾಕಮ್ಮಾ ಹೀಗೆಲ್ಲಾ ಮಾಡುತ್ತೀರಿ..? ಸ್ವಲ್ಪನಾದ್ರೂ ತಿಳಿವಳಿಕೆ ಬೇಡವಾ ..? ಎಂದು ಕೇಳಿದರೆ ಅಧಿಕಾರಿಗಳ ಮೇಲೆ ನಮಗೆ ಚಾಡಿ ಹೇಳುತ್ತಾರೆನಾವೂ ಈಗಂತೂ ಏನೂ ಹೇಳುವುದಿಲ್ಲ ಸಹಿಸಿಕೊಂಡು  ಹೋಗುತ್ತೇವೆ. ನಮ್ಮ ಸ್ಥಳದಲ್ಲಿ ಅವರನ್ನು ಒಮ್ಮೆ ಕಲ್ಪಿಸಿಕೊಳ್ಳಲಿ ಆಗ ಗೊತ್ತಾಗುತ್ತದೆ. ಇದೆಲ್ಲ  ಸ್ವಂತ ಬುದ್ದಿಯಿಂದ ತಿಳಿದುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ ಕನಿಷ್ಟ ಜ್ಞಾನ ಜನಕ್ಕೆ ಇಲ್ಲ.

ಕೆಲ ಹೆಂಗಸರು ಅವ್ವರೇ ಅವರಿಗೆ ಬುದ್ದಿ ಐತೋ ಇಲ್ಲವೋ ಸ್ವಾಮಿ ಪ್ಯಾಡ್ ತಗೊಂಡು ಹೋಗಿ ಟಾಯ್ಲೆಟ್ಟಿಗೆ ಹಾಕತ್ತಾರೆ ಅದು ಪೈಂಪ್ ನಲ್ಲೆ ಸಿಕ್ಕಿ ಹಾಕಿಕೊಳ್ಳುತ್ತೆ ಆಗ ಟಾಯ್ಲೆಟ್ ಕಟ್ಟಿಕೊಳ್ಳುತ್ತೆ. ಆಗ ಅದನ್ನ ತೆಗೆಯೋದರೊಳಗೆ ನಮಗೆ ಹುಟ್ಟಿದ ದಿನ ಕಾಣುತ್ತೆ . ವಿದ್ಯಾವಂತ ಹೆಣ್ಣುಮಕ್ಕಳು ಬೇರೆ ಅಷ್ಟು ಸಾಮಾನ್ಯ ತಿಳಿವಳಿಕೆ ಇಲ್ಲವಾ ? ಇವರಿಗೆ ಏನು ಹೇಳಬೇಕು? ಇದರಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಹೆಣ್ಣುಮಕ್ಕಳೇ ಇದು ನಾನು ನಿಮಗೆ ನೀಡುತ್ತಿರುವ ಆದೇಶ ಪ್ಯಾಡ್ಗಳನ್ನ ಟಾಯ್ಲೆಟ್ಟಿಗೆ ಹಾಕಬೇಡಿ  ಅದನ್ನು ಎಲ್ಲಿ ವಿಲೇವಾರಿ ಮಾಡಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿ.
ಇನ್ನೂ ಕೆಲವರು ಇದ್ದಾರೆ  ನಾವು ಬೀದಿಯಲ್ಲಿ  ಕಸ ಗುಡಿಸುತ್ತ  ಹೋಗುವಾಗ ನಮಗೆ ಬಾರಮ್ಮ ಇಲ್ಲಿ ಸ್ವಲ್ಪ  ಟಾಯ್ಲೆಟ್ ಕ್ಲೀನ್ ಮಾಡಕೊಡು   ಹಣ ಕೊಡುತ್ತೇನೆ ಎನ್ನುತ್ತಾರೆ   ಆದರೆ ನಾವು  ಹೋಗುವುದಿಲ್ಲ ಸ್ವಾಮಿ. ನಮ್ಮ ಜನರಿಗೆ  ನಾನು ಹೇಳುವುದಿಷ್ಟು ``ನಮ್ಮ ನೋಡಿ ನೀವು ಕಲಿತುಕೊಳ್ಳಿ , ನಿಮ್ಮನ್ನು ನೋಡಿ ನಾವು ಕಲಿತುಕೊಳ್ಳುತ್ತೇವೆ. ಒಬ್ಬರನ್ನು ಒಬ್ಬರು  ನೋಡಿ ಕಲಿತುಕೊಂಡು ನಗರವನ್ನು ಸ್ವಚ್ಛವಾಗಿಡೋಣ’’ ಅಲ್ಲವೇ ?
ನಿಮಗೆ ಇನ್ನೊಂದು ವಿಷಯ ಗೊತ್ತಿಲ್ಲ ಸ್ವಾಮಿ ಮೊದಲೆಲ್ಲಾ ಕಸ ಗುಡಿಸುವವರನ್ನು ಬಹಳ ಕೀಳಾಗಿ ನೋಡುತ್ತಿದ್ದರು. ಆದರೆ ಈಗ ಬೇಡಿಕೆ ಹೆಚ್ಚಾಗಿದೆ. ಈಗ ಇದೇ ಕೆಲಸ ಬೇಕು ಎಂದು ಬರುವವ      ಸಂಖ್ಯೆ ಹೆಚ್ಚುತ್ತಿದೆ. ಹೊಟ್ಟೆಪಾಡು ಸ್ವಾಮಿ ಇಲ್ಲೂ ಈಗ ಪೈಪೋಟಿ. ಹಿಂದೆ ನಮ್ಮ ಕಡೆಯ ಗಂಡಸರು ಹೆಚ್ಚು ಹೆಂಡ ಕುಡಿದು ಕೆಲಸ ಮಾಡುತ್ತಿದ್ದರು. ಆದರೆ ಈಗ ಅದಿಲ್ಲ. ಕುಡಿಯುವರ ಸಂಖ್ಯೆ ಕಡಿಮೆ ಯಾಗುತ್ತಿದೆ. ನಮ್ಮ ಜನರು ಕೆಲಸದ ವೇಳೆ ಕುಡಿಯಬಾರದು ಎಂದು ವೃತ್ತಿ ಗೌರವ ಕಾಪಾಡಿಕೊಳ್ಳುವಷ್ಟು ಬುದ್ದಿ ವಂತರಾಗಿದ್ದಾರೆ. ಕೊನೆಯದಾಗಿ ನಾನು ಹೇಳುವುದಿಷ್ಟೆ. ಯಾರ ಮಕ್ಕಳೂ ಪೌರ ಕಾರ್ಮಿಕರಾಗುವುದು ಬೇಡ.
``ನನ್ನ ಹೆಸರು ಮಾಣಿಕ್ಯ. ಹೆಸರಿಗೆ ಮಾತ್ರ ಅಷ್ಟೇನಾನು ಈಗ ಬೇಲೂರಿನಲ್ಲಿ   ಪೌರಕಾರ್ಮಿಕನಾಗಿದ್ದೇನೆ. ಕಳೆದ  18 ವರ್ಷದಿಂದಲೂ  ಕಾಯಕ ಮಾಡುತ್ತಿದ್ದು . ನನ್ನಿಡೀ ಕುಟುಂಬವೇ ಪೌರಕಾರ್ಮಿಕರು. ಕೆಲಸವನ್ನು ಯಾರೂ ಮಾಡಬಾರದು  ಸ್ವಾಮಿ. ಬೆಳಗ್ಗೆ 5 ಗಂಟೆಗೆ ಹೋದರೆ  6:30 ಒಳಗೆ  ನಮ್ಮ ಕೆಲಸ ಮುಗಿಸಲೇ ಬೇಕು. ಕಾರಣ ಜನ ಎದ್ದು ನಮ್ಮ ಮುಖ ನೋಡಲು  ಹೆದರುತ್ತಾರೆ. ಬೋಳಿ ಮಕ್ಳ ಬೆಳಗ್ಗೆ  ಬೆಳಗ್ಗೆ ನಿಮ್ಮ ಮುಖ ನೋಡಬೇಕಾ..? ಬೇಗ ಗುಡಿಸಿ ಸಾಯೋಕೆ ಏನು ಎನ್ನುತ್ತಾರೆ.. ನೋಡಿ ಸ್ವಾಮಿ ಇದು ನಮ್ಮ ಸ್ಥಿತಿ. ಕಾರಣಕ್ಕಾಗಿ ನಾನು  ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂದು . ನಮ್ಮನ್ನು ನೋಡುವ ಜನರ  ಮೊದಲು  ಬದಲಾಗಬೇಕೆಂದು ದುಡಿದ ಹಣವನೆಲ್ಲಾ  ಬಳಸಿ ದೊಡ್ಡವರು ವಾಸಿಸುವ ಜಾಗದಲ್ಲೆ  ಮನೆ ಕಟ್ಟಿಕೊಂಡು ಬದುಕುತಿದ್ದೇನೆ. ನನ್ನ  ಮಕ್ಕಳಿಗೂ ಒಳ್ಳೆ ಶಿಕ್ಷಣ ಕೊಟ್ಟಿದ್ದೇನೆ. ಮಕ್ಕಳು ಎಂಜಿನಿಯರ್ ಮಾಡುತ್ತಿದ್ದಾರೆ’’

ಮತ್ತೊಬ್ಬ ಪೌರಕಾರ್ಮಿಕರು ಹೀಗೆ ಎನ್ನುತ್ತಾರೆ ``ನಾನು ಭಾಗ್ಯ, ಗಂಡ ತೀರಿ ಹೋಗಿದ್ದಾರೆ. ಬೇಲೂರಿನಲ್ಲಿ  ಕೆಲಸ ಮಾಡುತಿದ್ದೇನೆ. ನಮಗೆ ಭಾನುವಾರವೂ ಬಿಡುವು ಇಲ್ಲ  ಸಾರ್, ಕೆಲಸವೇ ಹೇಸಿಗೆ ತರುವಂತದ್ದು ನೆಮ್ಮದಿ ಇಲ್ಲ. ಗುತ್ತಿಗೆದಾರರು ನಮ್ಮಿಂದ ಕತ್ತೆ ತರ ದುಡಿಸಿಕೊಳ್ಳುತ್ತಾರೆ ಆದರೆ ಅವರಿಗೆ ಕನಿಷ್ಠ ನಮ್ಮ ಆರೋಗ್ಯದ ಬಗ್ಗೆ ನಿಗಾ ಇಲ್ಲ. ನಮ್ಮ ಕೆಲಸಕ್ಕೆ ಬೇಕಾಗುವ ಯಾವುದೇ  ರಕ್ಷಣಾ ಸಲಕರಣೆಗಳನ್ನು ಇದುವರೆಗೆ  ಕೊಟ್ಟಿಲ್ಲ  ಆದರೂ ನಾವು   ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಜನ ಬೆಳಗ್ಗೆ ಎದ್ದ ತಕ್ಷಣ ನಿಮ್ಮನ್ನು ನೋಡಬೇಕಲ್ಲಾ ಎಂದು ಬೈಯ್ಯುತ್ತಾರೆ. ನಾನು ಪಡುತ್ತಿರುವ ಕಷ್ಟ , ಅವಮಾನ ನನ್ನ ಮಕ್ಕಳು ಪಡಬಾರದು  ಎಂದು ಮಕ್ಕಳಿಗೆ  ಒಳ್ಳೆ ಶಿಕ್ಷಣ ಕೊಡಿಸುತ್ತಿದ್ದೇನೆ  ಯಾರೂ  ಪೌರ ಕಾರ್ಮಿಕ ವೃತ್ತ್ತಿಗೆ ಬರಬೇಡಿ’’


No comments:

Post a Comment