Nov 30, 2014

ಗೋವಾದಲ್ಲಿ ಆರಂಭ ಚಿತ್ರದ ದ್ವನಿಸುರುಳಿ ಬಿಡುಗಡೆ.

aarambha goa publicity
ಪತ್ರಿಕಾ ಪ್ರಕಟಣೆ 
ಅಖಿಲ ಗೋವಾ ಕನ್ನಡ ಮಹಾ ಸಂಘ ಅಧ್ಯಕ್ಷರಾದ ಸಿದ್ದಣ್ಣ ಮೀಟಿಯವರು, ಎಸ್ ಅಭಿ ಹನಕೆರೆ ನಿರ್ದೇಶನದ  ಆಡಿಯೋ ಸೀಡಿಯನ್ನು ಗೋವಾ ಬೀಚಿನಲ್ಲಿ ಬಿಡುಗಡೆಗೊಳಿಸಿದರು.

Nov 25, 2014

ನಾನೂ ಶಿಲ್ಪವಾಗಬೇಕು....

ಉಮೇಶ ಮುಂಡಳ್ಳಿ ಭಟ್ಕಳ
ಬನ್ನಿ ಯಾರಾದರೂ
ಎತ್ತಿಕೊಳ್ಳಿ,
ಶಿಲ್ಪವಾಗಿಸಿ,
ಕಪ್ಪು ಕಲ್ಲಿನಂತೆ ನಾನು
ಗರ್ಭಗುಡಿಯ ಸೇರಬೇಕು,
ಶಿಲ್ಪವಾಗಬೇಕು.

ಅಹಮ್ಮುಗಳಿಗೆ ಬಲಿಯಾದ ಧರ್ಮ ಮತ್ತು ಕರ್ತವ್ಯ

kannada news channels
Dr Ashok K R
ಟಿ.ವಿ 9 ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಕೆಟ್ಟತನಕ್ಕಾಗಿ! ಡಿ.ಕೆ.ಶಿವಕುಮಾರರ ಮೇಲೆ ಟಿ.ವಿ.9 ಮತ್ತು ಅದರ ಸೋದರ ಸಂಸ್ಥೆ ನ್ಯೂಸ್ 9 ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಆರೋಪವನ್ನೊರಸಿದ್ದಾರೆ. ಡಿ.ಕೆ.ಶಿವಕುಮಾರರು ತಮ್ಮ ಅಧಿಕಾರದ ಪ್ರಭಾವಳಿಯನ್ನು ಬಳಸಿ ಕೇಬಲ್ ಆಪರೇಟರ್ರುಗಳ ಮೂಲಕ ಟಿ.ವಿ.9 ಮತ್ತು ನ್ಯೂಸ್ 9 ವಾಹಿನಿ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ! ಟಿ.ವಿ.9 ವಾಹಿನಿಯ ಪ್ರಕಾರ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆಯ ವರೆಗೆ ಈ ಬ್ಲ್ಯಾಕ್ ಔಟ್ ನಡೆದಿದೆ. ಮಾಧ್ಯಮಗಳನ್ನು ಹತ್ತಿಕ್ಕುವ ಸರ್ಕಾರದ ಪ್ರತಿನಿಧಿಯ ಪ್ರಯತ್ನ ಸ್ವಹಿತಾಸಕ್ತಿಗಾಗಿ ನಡೆಸಿದ ಫ್ಯಾಸಿಸ್ಟ್ ಮನೋಭಾವವೇ ಹೊರತು ಮತ್ತೇನಲ್ಲ. ಸರಕಾರದ ವಿರುದ್ಧ ಒಂದಾದ ಮೇಲೊಂದರಂತೆ ವರದಿಗಳನ್ನು ಪ್ರಕಟಿಸುತ್ತಿರುವುದು ಈ ಹತ್ತಿಕ್ಕುವಿಕೆಗೆ ಕಾರಣವಂತೆ! ಮಾಧ್ಯಮದ ಕೆಲಸವೇ ವಿರೋಧ ಪಕ್ಷದಂತೆ ಕೆಲಸ ನಿರ್ವಹಿಸುವುದಲ್ಲವೇ? ಅದನ್ನೇ ಅವರನ್ನು ಮಾಡಬೇಡಿ (ಅವರು ಮಾಡುತ್ತಿಲ್ಲ ಎಂಬುದು ಮತ್ತೊಂದು ಸತ್ಯ) ಎಂದರೆ ಹೇಗೆ ಸ್ವಾಮಿ? ಉಳಿದ ವಾಹಿನಿಗಳೂ ಕೂಡ ಸರಕಾರದ ವಿರುದ್ಧ ವರದಿಗಳನ್ನು ಬಿತ್ತರಿಸುವಾಗ ಟಿ.ವಿ.9 ಮಾತ್ರ ಹೇಗೆ ಮತ್ತು ಏಕೆ ಬಹಿಷ್ಕಾರಕ್ಕೊಳಗಾಯಿತು?

Nov 22, 2014

What is a real temple?


temple in subramanya
Shanmukha HR
Having prayed to gods and goddesses in so many temples, I once gave a thought to what's it that we really go to temple for...? All of us go to temples to pray for one or the other reason. Most of us pray for our loved ones and feel protected.

Nov 21, 2014

ವಾಡಿ ಜಂಕ್ಷನ್ .... ಭಾಗ 7

wadi junction
Dr Ashok K R
ಎಂಟು ಘಂಟೆಯ ಸುಮಾರಿಗೆ ಕ್ರಾಂತಿ ರೂಮಿಗೆ ಬಂದ. ಬನ್ನಿಮಂಟಪದಲ್ಲಿ ಟೆಂಪೋ ಹಿಡಿದು ಕಳಸ್ತವಾಡಿಯಲ್ಲಿ ಇಳಿದುಕೊಂಡು ಚಕ್ರೇಶ್ವರಿ ಬಾರಿನಲ್ಲಿ ಎರಡು ಬಿಯರ್ ಬಾಟಲ್ ಖರೀದಿಸಿ ಪಕ್ಕದ ರಾಜಹಂಸ ಡಾಬಾಕ್ಕೆ ಕಾಲಿಟ್ಟಾಗ ಸಮಯ ಒಂಭತ್ತಾಗಿತ್ತು. ಕ್ರಾಂತಿ ಯೋಚನಾಲಹರಿಯಲ್ಲಿ ತೇಲುತ್ತಾ ಮೌನವಾಗುಳಿದಿದ್ದ. ಉಳಿದ ಮೂವರೂ ಕ್ರಾಂತಿಯನ್ನು ಯಾವ ರೀತಿಯಿಂದ ಮಾತಿಗೆ ಹಚ್ಚಬೇಕು ಎಂಬುದನ್ನು ಚಿಂತಿಸುತ್ತಾ ಕುಳಿತಿದ್ದರು. ‘ನಿಮ್ಮಿಬ್ಬರಲ್ಲೊಬ್ಬರು ಮೊದಲು ಮಾತನಾಡಬೇಕು ನಂತರವಷ್ಟೇ ನಾನು ಆ ವಿಷಯವನ್ನು ಚರ್ಚಿಸೋದು’ ಎಂದು ತುಷಿನ್ ಮೊದಲೇ ಹೇಳಿಬಿಟ್ಟಿದ್ದ. 
Also Read: ವಾಡಿ ಜಂಕ್ಷನ್ ಭಾಗ 6

Nov 19, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 2

modi cabinetDr Ashok K R
ಕೇಂದ್ರ ಸರ್ಕಾರವನ್ನು ರೂಪಿಸುವಲ್ಲಿ ಉತ್ತರ ಪ್ರದೇಶದ ಪ್ರಭಾವ ಹೆಚ್ಚು. ದೊಡ್ಡ ರಾಜ್ಯ, ವಿಪರೀತ ಜನಸಂಖೈಯಿರುವ ಉತ್ತರಪ್ರದೇಶದಿಂದ ಎಂಭತ್ತು ಜನ ಸಂಸದರು ಲೋಕಸಭೆ ಪ್ರವೇಶಿಸುತ್ತಾರೆ. ಸಂಸದರ ಸಂಖೈಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಿಂದ ಆಯ್ಕೆಯಾಗುವವರ ಸಂಖೈ ನಲವತ್ತೆಂಟು! ಉತ್ತರ ಪ್ರದೇಶ ಗೆದ್ದರೆ ಅಧಿಕಾರದ ಗದ್ದುಗೆ ಏರಿದಂತೆಯೇ ಎಂಬ ಮಾತು ಅದಕ್ಕಾಗೇ ಹುಟ್ಟಿರಬೇಕು. ಎಂಭತ್ತು ಸ್ಥಾನದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಪ್ಪತ್ತೊಂದು ಸ್ಥಾನದಲ್ಲಿ ಜಯಗಳಿಸಿತ್ತು. ಸಹಜವಾಗಿ ಅಲ್ಲಿನವರಿಗೆ ಸಚಿವ ಸಂಪುಟದಲ್ಲೂ ಪ್ರಾಮುಖ್ಯತೆ ದೊರೆಯಬೇಕು. ಮೊದಲ ಸಂಪುಟದಲ್ಲಿ ಉತ್ತರಪ್ರದೇಶದ ಎಂಟು ಮಂದಿಯಿದ್ದರೆ ಈ ಬಾರಿ ಮತ್ತೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ದಲಿತ ನಾಯಕರಿಗೆ, ನಿಶಾದರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಆರೆಸ್ಸೆಸ್ ನಾಯಕ ರಾಮ್ ಶಂಕರ್ ಕಥಾರಿಯಾ, ನಿಶಾದರ ಮತಗಳನ್ನು ಬಿಜೆಪಿಗೆ ತಂದುಕೊಟ್ಟ ಸಾಧ್ವಿ ನಿರಂಜನ್ ಜ್ಯೋತಿಯವರಿಗೆ ಸಚಿವ ಸ್ಥಾನ ದಕ್ಕಿದೆ. 
ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಭಾಗ 1

Nov 18, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 1


modi cabinet
Dr Ashok K R
ಸಂಪುಟ ವಿಸ್ತರಣೆಯೆಂಬುದು ಪ್ರಹಸನದಂತೆ ನಡೆಯುವ ಸಂದರ್ಭಗಳೇ ಹೆಚ್ಚಾಗುತ್ತಿರುವ ದಿನಗಳಲ್ಲಿ ನರೇಂದ್ರ ಮೋದಿಯವರ ಸಂಪುಟ ವಿಸ್ತರಣೆಯ ಕಾರ್ಯ ಸುಸೂತ್ರವಾಗಿ ನಡೆದಿದೆ ಎಂದೇ ಹೇಳಬಹುದು. ಅನೇಕ ವರುಷಗಳಿಂದ ಸಮ್ಮಿಶ್ರ ಸರ್ಕಾರಗಳೇ ಅಸ್ತಿತ್ವದಲ್ಲಿದ್ದ ಕಾರಣ ಬಹುಮತ ಪಡೆಯಲಾಗದ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಕೋರಿಕೆ – ಅಣತಿಯ ಮೇರೆಗೆ ಸಂಪುಟ ವಿಸ್ತರಣೆ ನಡೆಸಬೇಕಾಗುತ್ತಿತ್ತು. ಒಂದು ಪಕ್ಷಕ್ಕೆ ಕೊಟ್ಟರೆ ಮತ್ತೊಂದು ಪಕ್ಷಕ್ಕೆ ಮುನಿಸು. ಅವರ ಮುನಿಸು ತಣಿಸುವಷ್ಟರಲ್ಲಿ ಮಗದೊಬ್ಬರ ಕೋಪ; ಇವೆಲ್ಲ ಘಟನೆಗಳೂ ಸೇರಿ ಸಂಪುಟ ವಿಸ್ತರಣೆಯೆಂದರೆ ಅಧಿಕಾರದಲ್ಲಿರುವ ಮುಖ್ಯಸ್ಥನಿಗೆ ತಲೆನೋವಿನ ಸಂಗತಿಗಳನ್ನಾಗಿ ಮಾಡಿತ್ತು. ದಶಕಗಳ ನಂತರ ಕೇಂದ್ರದಲ್ಲಿ ಏಕಪಕ್ಷ ಬಹುಮತ ಪಡೆದಿದೆ, ಚುನಾವಣಾ ಪೂರ್ವದಿಂದ ಜೊತೆಗಿದ್ದ ಮಿತ್ರಪಕ್ಷಗಳಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿಯ ಮೇಲೆ ‘ನಮಗೆ ಇಂತಹ ಸ್ಥಾನ ಬೇಕು’ ಎಂದು ಒತ್ತಾಯಿಸುವಂತಿಲ್ಲ, ಒತ್ತಾಯಿಸಿದರೆ ಎನ್ ಡಿ ಎ ತೊರೆದು ಹೋಗಲು ಸಿದ್ಧರಾಗಬೇಕಾಗುತ್ತದೆ. ಅದರಲ್ಲೂ ಏಕಪಕ್ಷಕ್ಕಿಂತ ಏಕವ್ಯಕ್ತಿ ಆಡಳಿತದಂತಿರುವ ಈಗಿನ ಕೇಂದ್ರ ಸರ್ಕಾರದಲ್ಲಿ ಬಿಜೆಪಿಯವರೇ ಮೇಲಿನವರ ಮಾತುಗಳನ್ನು ಪ್ರಶ್ನಿಸುವಂತಿಲ್ಲ, ಇನ್ನು ಉಳಿದ ಪಕ್ಷಗಳು ಪ್ರಶ್ನಿಸಲು ಹೇಗೆ ಸಾಧ್ಯ?! ಕಾಂಗ್ರೆಸ್ಸಿನ ಹೈಕಮಾಂಡಿನ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಹೈಕಮಾಂಡ್ ಸಂಸ್ಕೃತಿ ಬಹುವೇಗವಾಗಿ ಬೆಳೆಯುತ್ತಿದೆ! ಅಲ್ಲಿಗೆ ಬಿಜೆಪಿ ಕಾಂಗ್ರೆಸ್ ಆಗುವ ಪ್ರಯತ್ನದಲ್ಲಿ ವೇಗದಿಂದಲೇ ಮುಂದುವರೆಯುತ್ತಿದೆ!

ಡಬ್ಬಿಂಗ್ ಮುಗಿಸಿದ 'ಆರಂಭ'

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಗಣೇಶ್ ವಿ.ನಾಗೇನಹಳ್ಳಿ ನಿರ್ಮಿಸುತ್ತಿರುವ 'ಆರಂಭ' ಚಿತ್ರ ಡಬ್ಬಿಂಗ್ ಪೂರ್ಣಗೊಳಿಸಿ ರೀರೆಕಾರ್ಡಿಂಗಿಗೆ ಸಿದ್ಧವಾಗಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಿಥುನ್ ಪ್ರಕಾಶ್, ರಸಗವಳ ನಾರಾಯಣ,ಬೇಬಿ ಹಾಸಿನಿ,ಅಭಿರಾಮಿ,ಡಿಸ್ಕೊ ಪೃಥ್ವಿ,ಬಳ್ಳಾರಿ ರಾಘವೇಂದ್ರ,ಪ್ರವೀಣ್,ಬ್ಯಾಂಕ್ ಜನಾರ್ಧನ,ಪಾಂಡು ಕುಮಾರ್,ಅಭಿರಾಜ್ ಅಭಿನಯಿಸುತ್ತಿದ್ದಾರೆ. ಎಸ್. ಅಭಿ ಹನಕೆರೆ ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಊರಾದ ಕಣಗಾಲಿನಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಆರಂಭ ಚಿತ್ರತಂಡದ್ದು. ಚಿತ್ರರಂಗದ ಗಣ್ಯರನ್ನು ಮತ್ತು ಸಿನಿಮಾಸಕ್ತರನ್ನು ಕಣಗಾಲಿಗೆ ಆಹ್ವಾನಿಸಿ ಪುಟ್ಟಣ್ಣ ಕಣಗಾಲರ ನೆನಪಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ ನಡೆಸುವ ಉದ್ದೇಶ ನಿರ್ದೇಶಕರಿಗಿದೆ. 
ಜಿ.ಮ್ಯೂಸಿಕ್ ಲಾಂಛನದಲ್ಲಿ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು ಜನರ ಮನಗೆದ್ದಿದೆ.

Nov 11, 2014

ಇಂತಿ ನಮಸ್ಕಾರಗಳು

inthi namaskaragalu
ಇಂತಿ ನಮಸ್ಕಾರಗಳು
ಬಹುಶಃ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಅರ್ಥವಾಗದ, ಅರ್ಥವಾಗದಿದ್ದರೂ ಓದಿಸಿಕೊಂಡ ಪುಸ್ತಕವೆಂದರೆ ನಟರಾಜ್ ಹುಳಿಯಾರರು ಪಿ.ಲಂಕೇಶ್ ಮತ್ತು ಡಿ.ಆರ್.ನಾಗರಾಜರ ಕುರಿತು ಬರೆದಿರುವ ನೆನಪಿನ ಸಂಚಿಕೆ 'ಇಂತಿ ನಮಸ್ಕಾರಗಳು'. ಈ ಪುಸ್ತಕ ಅರ್ಥವಾಗದ್ದಕ್ಕೆ ಮುಖ್ಯ ಕಾರಣ ನಟರಾಜ್ ಹುಳಿಯಾರರು ಬರೆದಿರುವ ಇಬ್ಬರ ಬರವಣಿಗೆ, ಬದುಕಿನ ಬಗೆಗೆನ ಅಷ್ಟೇನೂ ತಿಳಿಯದಿರುವುದು.

Nov 9, 2014

ವಾಡಿ ಜಂಕ್ಷನ್ .... ಭಾಗ 6



wadi junctionDr Ashok K R
ಅವರು ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್ ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ ಶಿಖಾಮಣಿಗಳೆಂದೇ ತಿಳಿದಿದ್ದರು.

Nov 8, 2014

`ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು ಮಕ್ಕಳೇ ನನ್ನ ನೋಡಿದರೂ ಮಾತನಾಡಿಸುತ್ತಿರಲಿಲ್ಲ’

jadamali jagattu
ಜಾಡಮಾಲಿ ಜಗತ್ತು
ಭಾನುವಾರ ನವೆಂಬರ್ 9ರಂದು ಹಾಸನದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ಒಂಭತ್ತು ಘಂಟೆಗೆ ನಾಗರಾಜ್ ಹೆತ್ತೂರ್‍ ಅವಧಿ ವೆಬ್ ಪತ್ರಿಕೆಗೆ ಬರೆದಿದ್ದ "ಜಾಡಮಾಲಿ ಜಗತ್ತು" ಲೇಖನಗಳ ಸಂಗ್ರಹದ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಪುಸ್ತಕದ ಆಯ್ದಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಹೌದು..!  ವೃತ್ತಿಯೇ ಅಂತದ್ದು. ಯಾರಿಗಾದರೂ ಸರಿಯೇ ನಾನು ಇಂತಹವರು ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಕಾರಣ ವೃತ್ತಿಗೆ ಗೌರವ ಕೊಡುವವರು ಸಮಾಜದಲ್ಲಿ ಯಾರಿದ್ದಾರೆ ಹೇಳಿ ? ಯಾರು  ಅವರನ್ನು ಕರೆದು ಆತ್ಮೀಯವಾಗಿ ಮಾತನಾಡಿಸುತ್ತಾರೆ ? ಯಾವ ಮಕ್ಕಳೂ ಕೂಡ ನನ್ನ ಅಮ್ಮ ಕಸ ಗುಡಿಸುವವಳು, ನನ್ನಪ್ಪ ಬೀದಿ ಗುಡಿಸುವ ಪೌರ ಕಾರ್ಮಿಕ ಎಂದು ಹೇಳಿಕೊಳ್ಳುವ  ಪರಿಸ್ಥಿತಿ ಇಂದಿನ ಸಮಾಜದಲ್ಲಿ ಇಲ್ಲ.

ಹೊಂಬಣ್ಣವನ್ನರಸಿ....


golden hours
ಹೊಂಬಣ್ಣದ ಸಮಯ
Dr Ashok K R
ಕ್ಯಾಮೆರಾ ದೊಡ್ಡದೇ ಇರಲಿ ಪುಟ್ಟದೇ ಇರಲಿ ಫೋಟೋಗ್ರಫಿ ಕಲಿಯುವ ಉತ್ಸಾಹ ಮೂಡಿದ ಮೇಲೆ ಆ ಉತ್ಸಾಹದ ಜೊತೆಜೊತೆಗೇ ಶಿಸ್ತು ಮೈಗೂಡದಿದ್ದರೆ ಕಷ್ಟ. ಶಿಸ್ತು ಮೈಗೂಡಿಸಿಕೊಂಡ ಮೇಲೆ ಕ್ಯಾಮೆರಾ ಕೈಗೆತ್ತುಕೊಳ್ಳಬೇಕು. ಕ್ಯಾಮೆರಾ ಮತ್ತು ಫೋಟೋಗ್ರಫಿಯ ಮೇಲೆ ‘ಭಯಂಕರ’ ಪ್ರೀತಿ ಮೂಡಿದರೆ ಶಿಸ್ತು ತಾನಾಗೇ ನಮ್ಮೊಳಗೆ ಪ್ರವೇಶಿಸಿಬಿಡುತ್ತದೆ. ಅದರಲ್ಲೂ ನಿದ್ರಾದೇವಿಯ ಅಪಾರ ಕೃಪೆಯಿರುವವರಿಗೆ ಮುಂಜಾನೆಯ ಸವಿನಿದ್ರೆಯಿಂದೇಳುವುದು ಹಿಂಸೆಯೇ ಸರಿ. ಕೋಳಿ ಕೂಗುವುದಕ್ಕಿಂತ ಮೊದಲೇ ಎದ್ದು ಬೆಳಕಿನ ನಿರೀಕ್ಷೆಯಲ್ಲಿರುವವರಿಗೆ (ನನ್ನದೂ ಇದೇ ಕೆಟಗರಿ) ತೊಂದರೆಯಿಲ್ಲ ಬಿಡಿ!

Nov 6, 2014

ನಂದಿತಾ ಎಂಬ ಪುಟ್ಟಿಗೆ ಸಮಾಜ ಮಾಡಿದ ಅನ್ಯಾಯ….

nanditha case
ನಂದಿತಾ

ಒಂದು ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ (ಅದು ಅತ್ಯಾಚಾರದಿಂದಾದ ಹತ್ಯೆ ಎಂದು ಆರೋಪವಿರುವುದರಿಂದ ಅತ್ಯಾಚಾರ ಮತ್ತು ತದನಂತರ ನಡೆದ ಕೊಲೆ ಎಂದೇ ಒಪ್ಪಿಕೊಳ್ಳೋಣ), ಸಹಜವಾಗಿ ಅತ್ಯಾಚಾರ ನಡೆಸಿದವರನ್ನು ಮತ್ತು ಹತ್ಯೆ ಮಾಡಿದವರನ್ನು ಬಂಧಿಸಬೇಕಿರುವುದು ಸರ್ಕಾರ ಮತ್ತು ಪೋಲೀಸರ ಕರ್ತವ್ಯ. ಕೆಲವೊಮ್ಮೆ ಬಂಧನ ಶೀಘ್ರವಾಗಿ ಆಗಬಹುದು. ಕೆಲವೊಮ್ಮೆ ನಿಧಾನವಾಗಬಹುದು. ನಿಧಾನವಾದಾಗ ಸರ್ಕಾರದ ವಿರುದ್ಧ ಪ್ರತಿಭಟಿಸಿ ಮಂತ್ರಿಗಳ ಮತ್ತು ಅಧಿಕಾರಿಗಳ ಮೇಲೆ ಒತ್ತಡ ತರಬೇಕಿರುವುದು ಪ್ರತಿಪಕ್ಷ ಮತ್ತು ಜನರ ಕರ್ತವ್ಯ. ಮೇಲ್ನೋಟಕ್ಕೆ ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ನಡೆದಿರುವುದೂ ಅದೇ ರೀತಿಯಾಗಿ ಕಾಣುತ್ತದೆ. ಆದರೆ?

Nov 5, 2014

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ; ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 2

Dr Ashok K R
ಆತನ ಹೆಸರು ಹಾರ್ವೆ ಫಾಲ್ಸಿಯಾನಿ. ಮೂಲತಃ ಫ್ರೆಂಚಿನವ. ಸ್ವಿಝರ್ಲ್ಯಾಂಡಿನ ಜಿನೀವಾದಲ್ಲಿರುವ ಹೆಚ್.ಎಸ್.ಬಿ.ಸಿ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾತ. ಕೆಲಸಕ್ಕೆ ಸೇರಿಕೊಂಡ ನಂತರ ತನ್ನ ಬ್ಯಾಂಕು ಹೇಗೆ ವಿವಿಧ ದೇಶಗಳ ತೆರಿಗೆಗಳ್ಳರ ಹಣವನ್ನು ಜೋಪಾನವಾಗಿರಿಸುತ್ತಿದೆ ಎಂಬುದನ್ನು ಕಂಡುಕೊಂಡ. ಬ್ಯಾಂಕಿನ ಇತರೆ ಸಹೋದ್ಯೋಗಿಗಳಂತೆ ಅವ್ಯವಹಾರವನ್ನು ನೋಡಿದ ನಂತರ ಕಣ್ಣು ಮುಚ್ಚಿ ಕೂರದೆ ತನಗಿರುವ ಕಂಪ್ಯೂಟರ್ ಜ್ಞಾನವನ್ನುಪಯೋಗಿಸಿ ನಿಧಾನಕ್ಕೆ ಬ್ಯಾಂಕಿನ ಸರ್ವರುಗಳಿಂದ ಹೆಚ್.ಎಸ್.ಬಿ.ಸಿ ಬ್ಯಾಂಕಿನ ಖಾತೆದಾರರ ವಿವರಗಳನ್ನು ಒಂದೊಂದಾಗಿ ಸಂಗ್ರಹಿಸಲಾರಂಭಿಸುತ್ತಾನೆ. ಕೊನೆಗೆ ಇಪ್ಪತ್ತನಾಲ್ಕು ಸಾವಿರ ಖಾತೆದಾರರ ವಿವರಗಳೊಂದಿಗೆ (ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಖಾತೆಗಳು) ಪರಾರಿಯಾಗುತ್ತಾನೆ.

Nov 4, 2014

ವರ್ತಮಾನ ಬಳಗದ ಪ್ರಶಸ್ತಿ ಪ್ರಧಾನ ಸಮಾರಂಭ.

ಟಿ.ಎಸ್.ವಿವೇಕಾನಂದರಿಗೆ ಪ್ರಶಸ್ತಿ ವಿತರಣೆ
ರವಿಕೃಷ್ಣರೆಡ್ಡಿವರಿದ್ದ ಮೇಲೆ ಕಾರ್ಯಕ್ರಮವೊಂದು ಫಾರ್ಮಲ್ ಆಗಿ ನಡೆಯುವ ಸಾಧ್ಯತೆ ಅಪರೂಪ! ಬಹುಶಃ ಇದೇ ಕಾರಣಕ್ಕೋ ಏನೋ ಅವರು ಕರೆದಾಗ ಹೋಗದೇ ಇರಲು ನನಗೆ ಸಾಧ್ಯವಾಗುವುದಿಲ್ಲ! (ವರ್ತಮಾನಕ್ಕೆ ಬರೆಯುವುದನ್ನು ವೈಯಕ್ತಿಕ ಕಾರಣಗಳಿಗೆ ನಿಲ್ಲಿಸಿದ್ದರೂ ನನ್ನನ್ನೂ ಇನ್ನೂ ವರ್ತಮಾನದ ಬಳಗದವನಂತೆಯೇ ನೋಡುತ್ತಾರೆ). ಗಾಂಧಿ ಜಯಂತಿ ಕಥಾ ಸ್ಪರ್ಧೆಯ 2014ರ ವಿಜೇತರಿಗೆ 'ಬಹುಮಾನ ವಿತರಿಸಲು' ನವೆಂಬರ್ ಎರಡರಂದು ಗಾಂಧಿನಗರದ ಬಸಂತ್ ರೆಸಿಡೆನ್ಸಿಯಲ್ಲಿ 'ಕಾರ್ಯಕ್ರಮ' ಆಯೋಜಿಸಿದ್ದರು. ಬಹುಮಾನ ವಿಜೇತರಾದ ಟಿ.ಎಸ್. ವಿವೇಕಾನಂದ, ಟಿ.ಕೆ. ದಯಾನಂದ, ಡಾ.ಎಚ್. ಎಸ್. ಅನುಪಮರವರನ್ನು ವೇದಿಕೆಯ ಮೇಲೆ ಕೂರಿಸಿ, ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಹಿರೇಮಠರಿಗೆ ಶಾಲು ಹೊದಿಸಿ ಸನ್ಮಾನಿಸಿ ರವಿಕೃಷ್ಣರೆಡ್ಡಿಯವರು ಎಸ್. ಆರ್. ಹಿರೇಮಠರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಹಾಡಿ ಹೊಗಳಿ ಹಿರೇಮಠರಿಂದ ಕಥೆಗಾರರಿಗೆಲ್ಲ ಶಾಲು ಹೊದಿಸಿ ಗಂಧದ ಮಾಲೆ ಹಾಕಿಸಿ ಬಹುಮಾನವನ್ನು ವಿತರಿಸಲಾಯಿತು

ಲಡಾಯಿ ಪ್ರಕಾಶನದ ಪುಸ್ತಕ ಬಿಡುಗಡೆ ಸಮಾರಂಭ.

ladai prakashana
ದಸಂಸದವರಿಂದ ಕ್ರಾಂತಿಗೀತೆ
ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಹುಲಿಯ ನೆರಳಿನೊಳಗೆ, ಚೆ - ಕ್ರಾಂತಿಯ ಸಹಜೀವನ ಮತ್ತು ಮೋಟಾರ್ ಸೈಕಲ್ ಡೈರಿಯ ಕನ್ನಡ ಅವತರಿಣಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಧೂದರ್ ಹೊನ್ನಾಪುರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ: ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 1

Dr Ashok K R
ಕಳೆದ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎಯ ನೇತೃತ್ವ ವಹಿಸಿದ್ದ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದುದು ಪರರಾಷ್ಟ್ರಗಳಲ್ಲಿರುವ – ಹೆಚ್ಚಿನದಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ ‘ಕಪ್ಪು ಹಣ’ವನ್ನು ಭಾರತಕ್ಕೆ ನೂರೇ ದಿನಗಳಲ್ಲಿ ವಾಪಸ್ಸು ತರುವ ಬಗ್ಗೆ. ನೂರು ದಿನಗಳಲ್ಲಿ ಅಷ್ಟೂ ಹಣವನ್ನು ವಾಪಸ್ಸು ತಂದು ಭಾರತದ ಏಳ್ಗೆಗೆ ಕಾಣ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದರು. ಉಳಿದನೇಕ ಕಾರಣಗಳಿಂದ ಮತ್ತು ತಮ್ಮ ವೈಯಕ್ತಿಕ ಪ್ರಭಾವದಿಂದ ಬಿಜೆಪಿ ಏಕಪಕ್ಷವಾಗಿ ಸರಕಾರ ನಡೆಸುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ನಿರೀಕ್ಷೆಯಂತೆ ನೂರು ದಿನಗಳೊಳಗೆ ಕಪ್ಪು ಹಣವೆಲ್ಲ ವಾಪಸ್ಸು ಬಂತೇ?

Nov 2, 2014

ನಾಲ್ಕಕ್ಷರ ಕಲಿ(ತ)ಯದ ದಲಿತರು ಮೊದಲು ಅಟ್ರಾಸಿಟಿ ಮನಸ್ಥಿತಿಯಿಂದ ಹೊರಬರಬೇಕು

false atrocity case
M L Lingaraju, Prajasamara
   ಸದುದ್ದೇಶದಿಂದ ಜಾರಿಗೆ ಬಂದಿದ್ದ ಜಾತಿನಿಂದನೆ, ಅಟ್ರಾಸಿಟಿ ಪ್ರಕರಣ ಇಂದು ಎಷ್ಟರ ಮಟ್ಟಿಗೆ ದುರುಪಯೋಗವಾಗುತ್ತಿದೆ ಎಂದರೆ, ನಿಜಕ್ಕೂ ಬೇಸರವಾಗುತ್ತದೆ. ಮೊನ್ನೆ ಫೇಸ್ಬುಕ್ನಲ್ಲಿ ದಲಿತ ಯುವಕನು ಹಾಕಿದ್ದ ಸ್ಟೇಟಸ್ಗೆ ಇನ್ನಾವುದೋ ಕೋಮಿನ ಯುವಕ ಕಮೆಂಟು ಮಾಡಿದ್ದಕ್ಕೆ ರಾದ್ಧಾಂತವೇ ನಡೆದುಹೋಯಿತು. ಸ್ಟೇಟಸ್ ಹಾಕಿದ್ದ ದಲಿತ ಯುವಕ, ಕಮೆಂಟ್ ಮಾಡಿದವನ ಮೇಲೆ ನಾಳೆ ಅಟ್ರಾಸಿಟಿ ದಾಖಲು ಮಾಡುವುದಾಗಿ ಅದಕ್ಕಾಗಿ ನನ್ನ ಬೆಂಬಲಕ್ಕೆ ಬರುವ ಸ್ನೇಹಿತರಿದ್ದರೆ, ಬನ್ನಿ ಎಂದು ಕರೆ ನೀಡಿದ್ದ.