Oct 14, 2014

ಟಿ.ಕೆ.ತ್ಯಾಗರಾಜ: ಭಾವಭಿತ್ತಿಯ ಚಿತ್ರಗಳು ಕಥಾ ಸಂಕಲನ

hingyake
ಮುಖಪುಟ
ಟಿ.ಕೆ.ತ್ಯಾಗರಾಜರ ಹತ್ತು ಕಥೆಗಳ ಸಂಕಲನ "ಭಾವಭಿತ್ತಿಯ ಚಿತ್ರಗಳು" ಇದೇ ಶುಕ್ರವಾರ (17/10/2014) ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನಲ್ಲಿ ಸಂಜೆ ಐದೂ ಮೂವತ್ತಕ್ಕೆ ಬಿಡುಗಡೆಯಾಗಲಿದೆ.
ಕರಿಯಪ್ಪನ ಆರ್ತಧ್ಯಾನದ ಪರಿಣಾಮವು ಎಂಬ ಕಥೆಯ ಒಂದು ಪುಟ್ಟ ಭಾಗ ಹಿಂಗ್ಯಾಕೆ ಓದುಗರಿಗಾಗಿ
hingyake
ಪುಸ್ತಕ ಬಿಡುಗಡೆಯ ವಿವರ
ಹೀಗೆ ಒಂದು ಹುಣ್ಣಿಮೆಯ ಸಂಜೆ ಇಡೀ ಗ್ರಾಮವೇ ಕಲ್ಲುಬೆಟ್ಟದ ಬಳಿ ಜಮಾಯಿಸಿದ್ದಾಗ ಅಲ್ಲಿಗೆ ಹೋದ ಪೆಮಾಗೆ ಅಚ್ಚರಿ ಕಾದಿತ್ತು. ತನಗೆ ಒಂದು ದಿನ ಕೊಯ್ಲೆ ಮೀನಿನ ಸಾರು ಮತ್ತು ರೊಟ್ಟಿ ತಂದು ಕೊಟ್ಟಿದ್ದ ಕರಿಯಪ್ಪ ಕರಟವಾದನದಲ್ಲಿ ತನ್ಮಯನಾಗಿದ್ದ. ಮಾಸೂರು ಕಲ್ಲಣ್ಣ ಮೈಮರೆತು ಹಾಡುತ್ತಿದ್ದರು. ಅದು ಪೆಮಾ ಪಾಲಿಗೆ ಮರೆಯಲಾಗದ ಸಂಜೆ. ಯಾವುದೇ ಪ್ರಶಸ್ತಿಯ ಭಾರವಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ, ಯಾವುದೇ ಮಹತ್ವಾಕಾಂಕ್ಷೆಯೂ ಇಲ್ಲದೆ ತಮ್ಮ ಪಾಡಿಗೆ ತಾವು ತಮ್ಮದೇ ಖುಷಿಗೆ ಜಾನಪದ ಸಿರಿಯನ್ನು ಮೈತುಂಬಿಕೊಳ್ಳುತ್ತಿದ್ದ ಪರಿಯನ್ನು ಕಂಡು ಪೆಮಾ ನಿಬ್ಬೆರಗಾದಳು. ಅಪ್ಪಟ ಪ್ರತಿಭೆಯ ಕರಿಯಪ್ಪ ಕೇವಲ ರುಚಿರುಚಿಯಾದ ಅಡುಗೆಯನ್ನಷ್ಟೇ ಮಾಡುತ್ತಿರಲಿಲ್ಲ, ಆ ಗ್ರಾಮದಲ್ಲಿ ಆತನೊಬ್ಬ ಫೇಮಸ್ ಕ್ಷೌರಿಕನಷ್ಟೇ ಅಲ್ಲ, ಆತನ ಪುಟ್ಟ ಗುಡಿಸಲಲ್ಲೂ ಎಂಥ ಅಪೂರ್ವ ಕಲೆಯ ಸಂಪತ್ತಿದೆ ಎಂಬುದನ್ನು ಪೆಮಾ ಮನಗಂಡಳು. ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವವರಲ್ಲಿ ಮಾತ್ರವಲ್ಲದೇ ಪ್ರತಿಭೆ ಇರುವ ವ್ಯಕ್ತಿಗಳಲ್ಲೂ ಸೌಂದರ್ಯ ಇದೆ ಎಂಬ ಸತ್ಯ ಅವಳ ಅರಿವಿಗೆ ಬಂತು. ಹಾಗೆ ನೋಡಿದರೆ ಕರಿಯಪ್ಪನ ನಿಜವಾದ ಹೆಸರು ಕದಿರಪ್ಪ. ಕಪ್ಪಗಿದ್ದುದರಿಂದ ಎಲ್ಲರೂ ಕರಿಯಪ್ಪ, ಕರಿಯಪ್ಪ ಎಂದು ಕರೆಯುತ್ತಾ ಅದೇ ಅಧಿಕೃತ ಹೆಸರಾಗಿಬಿಟ್ಟಿತ್ತು.
Also Read
ಓದಿನರಮನೆ

 

No comments:

Post a Comment