Oct 22, 2014

ಚೆ - ಕ್ರಾಂತಿಯ ಸಹಜೀವನ ಪುಸ್ತಕದ ಮುನ್ನುಡಿಯಿಂದ



che guevera kannada book
(ಡೇವಿಡ್ ಡಚ್ ಮನ್ ಸಂಪಾದಿಸಿರುವ ಚೆ - ಕ್ರಾಂತಿಯ ಸಹಜೀವನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ನಾ.ದಿವಾಕರ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ ನಂ.2ರಂದು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ)
ಜೀಸಸ್ ಮಾಂಟೇನ್ ಒರೋಪೆಸ್
ಕ್ಯೂಬಾದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದ್ದುದರಿಂದ ಗಡೀಪಾರು ಆಗಿ ಜುಲೈ 7, 1955 ಗುರುವಾರ ಹವಾನಾದಿಂದ ಮೆಕ್ಸಿಕೋಗೆ ತೆರಳುವ ಮುನ್ನ ಫಿಡೆಲ್ ಕ್ಯಾಸ್ಟ್ರೋ ಚೆ ಅವರನ್ನು ಭೇಟಿಯಾಗಿದ್ದರು.
ಜುಲೈ 26, 1953 ಮೊಂಕಾಡ ರಕ್ಷಣಾ ದಳದ ಮೇಲಿನ ದಾಳಿ ಪ್ರಜಾ ಸಶಸ್ತ್ರ ದಂಗೆಯನ್ನು ಹುಟ್ಟುಹಾಕುವ ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು. ದಾಳಿಯಲ್ಲಿ ಬದುಕುಳಿದವರನ್ನು ಪೈನ್ಸ್ ದ್ವೀಪದ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಮೇ 15, 1955 ಭಾನುವಾರದಂದು, ಬಂಧನದ 53 ದಿನಗಳ ನಂತರ ನಮ್ಮೆಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.
53 ದಿನಗಳ ಅವಧಿಯಲ್ಲಿ ಹವಾನಾದಲ್ಲೇ ಇದ್ದ ಫಿಡೆಲ್ ಸಮೂಹ ಮಾಧ್ಯಮಗಳ ಮೂಲಕ  ದಿಟ್ಟವಾಗಿ ರಾಜಕೀಯ ಸಂಘರ್ಷವನ್ನು ಜಾರಿಯಲ್ಲಿರಿಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಪಾತಕಿ ಕೃತ್ಯಗಳನ್ನು ಮತ್ತು ಮೊಂಕಾಡ, ಬಯಾರ್ಮೋ ದಾಳಿಯಲ್ಲಿ ಭಾಗಿಯಾದವರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಫಿಡೆಲ್ ಬ್ಯಾಟಿಸ್ಟಾ ಸರ್ಕಾರದ ದಮನಕಾರಿ ನೀತಿಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆಯ ವಿರುದ್ಧ ಹೋರಾಡುವವರನ್ನು ಹತ್ತಿಕ್ಕುವ, ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯನ್ನು ಸಮರ್ಥಿಸುವ, ಶಾಂತಿಯುತ ರಾಜಕೀಯ ಹೋರಾಟಗಳಿಗೆ ಅವಕಾಶವೀಯದ ಬ್ಯಾಟಿಸ್ಟಾ ಆಡಳಿತದ ವಿರುದ್ಧ ಫಿಡೆಲ್ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಕೂಡಲೇ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕ್ಯೂಬಾ ದೇಶದಲ್ಲಿ ಪ್ರಜಾತಂತ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾವು ನೀಡುತ್ತಿದ್ದ ಪ್ರಚೋದನಕಾರಿ ಹೇಳಿಕೆಗಳ ಹಿಂದೆ ಸರ್ವಾಧಿಕಾರಿ ಬ್ಯಾಟಿಸ್ಟಾನನ್ನು ಒತ್ತಾಯಿಸುವ ಉದ್ದೇಶವಿದ್ದುದನ್ನು ಕಾಣಬಹುದಿತ್ತು
Also Read

ಫಿಡೆಲ್ ಅನುಸರಿಸಿದ ಎಲ್ಲಾ ತಂತ್ರಗಳೂ ಬ್ಯಾಟಿಸ್ಟಾನ ಸರ್ವಾಧಿಕಾರಿ ಧೋರಣೆ, ಪಾತಕಿ ಲಕ್ಷಣಗಳನ್ನು ಬಹಿರಂಗ ಪಡಿಸುವ ಉದ್ದೇಶದಿಂದಲೇ ಕೂಡಿದ್ದವು. ನಮಗೆ ದೊರಕಬಹುದಾಗಿದ್ದ ಸ್ವಾತಂತ್ರ್ಯವೂ ಆಳ್ವಿಕರ ಔದಾರ್ಯವಲ್ಲ ಎಂದು ತೋರಿಸುವ ಉದ್ದೇಶದಿಂದ ಕೂಡಿದ್ದವು. ರಾಜಕೀಯ ಬಂದಿಗಳಿಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಾದ್ಯಂತ ವ್ಯಾಪಕವಾದ ಸಾರ್ವಜನಿಕ ಆಂದೋಲನಗಳು ನಡೆದು ಸರ್ಕಾರದ ಮೇಲೆ ಒತ್ತಡವಿತ್ತು.
ಎಲ್ಲಾ ರಾಜಕೀಯ ಪಕ್ಷಗಳೂ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಗ್ರಹಿಸಿರಲಿಲ್ಲ. ಆದರೂ ಎಲ್ಲಾ ಪಕ್ಷಗಳೂ ಪ್ರಚಲಿತ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ತೆರಬೇಕಾದ ಬೆಲೆಯನ್ನು ತೆರಲು ಸಿದ್ಧವಾಗಿರಲೂ ಇಲ್ಲ. ಪದಚ್ಯುತ ಮಾಜಿ ಅಧ್ಯಕ್ಷ ಕಾರ್ಲೋಸ್ ಸೋಕ್ರಾಸ್ ಕ್ಯೂಬಾಗೆ ಹಿಂದಿರುಗುಲು ಸಿದ್ಧರಾಗುತ್ತಿದ್ದರು. ಅಂದರೆ ಸೋಕ್ರಾಸ್ ತಮ್ಮ ಶಸ್ತ್ರಗಳನ್ನು ತ್ಯಜಿಸಿ ಬ್ಯಾಟಿಸ್ಟಾ ವಿಧಿಸಿದ ಷರತ್ತುಗಳಿಗೆ ಬದ್ಧರಾಗಿ ಹಿಂದಿರುಗಲು ತಯಾರಾಗಿದ್ದರು. ಬ್ಯಾಟಿಸ್ಟಾನ   ಕ್ರಮಗಳ ಹಿಂದೆ ತನ್ನ ಅಧಿಕಾರಾವಧಿಯನ್ನು ಅನಿರ್ದಿಷ್ಟವಾಗಿ ಮುಂದುವರೆಸುವ ದುರುದ್ದೇಶವೂ ಇತ್ತು. ಒಂದಲ್ಲಾ ಒಂದು ಕಾರಣವನ್ನು ಮುಂದಿಟ್ಟುಕೊಂಡು ವಿಭಿನ್ನ ರಾಜಕೀಯ ಪಕ್ಷಗಳು ಮಾತುಕತೆಯ ಮಾರ್ಗದತ್ತಲೇ ಮುಂದುವರೆಯುತ್ತಿದ್ದವು. ಆದರೆ ಮಾರ್ಗವನ್ನು ಅನುಸರಿಸುವುದರಿಂದ ಯಾವುದೇ ಸಮಸ್ಯೆಗೆ ಇತ್ಯಾತ್ಮಕ ಪರಿಹಾರ ದೊರೆಯುವುದು ಸಾಧ್ಯವಿರಲಿಲ್ಲ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಫಿಡೆಲ್ ತಮ್ಮ ರಾಜಕೀಯ ತಂತ್ರದ ಸಂಘರ್ಷವನ್ನು ಮುಂದುವರೆಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಆಡಳಿತವು ಯಾವುದೇ ನೈಜ ವಿರೋಧವನ್ನು ಸಹಿಸುವುದಿಲ್ಲ ಎಂದು ಫಿಡೆಲ್ ಅವರಿಗೆ ತಿಳಿದಿದ್ದರಿಂದ ಸಂಘರ್ಷದ ಪರಿಣಾಮ ನಿರೀಕ್ಷಿತವೇ ಆಗಿತ್ತು. ಒಂದಾದ ಮೇಲೊಂದರಂತೆ ರಾಜಕೀಯ ಸಂಘರ್ಷಗಳ ಎಲ್ಲಾ ಹಾದಿಗಳನ್ನೂ ಮುಚ್ಚಲಾಗಿತ್ತು. ಪೊಲೀಸರು ಫಿಡೆಲ್ ಸಹಚರರನ್ನು ಬಂಧಿಸಿ ಹಿಂಸಿಸತೊಡಗಿದರು. ಫಿಡೆಲ್ ಸೋದರ ರೌಲ್ ಕ್ಯಾಸ್ಟ್ರೋ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಲಾಗಿ ಆತನೂ ದೇಶಾಂತರ ಹೋಗಬೇಕಾಯಿತು. ಫಿಡೆಲ್ ಅವರ ದೂರವಾಣಿಯನ್ನು ಕದ್ದಾಲಿಸಲಾಗುತ್ತಿತ್ತು. ಫಿಡೆಲ್ಗೆ ಕೊಲೆ ಬೆದರಿಕೆಗಳೂ ಬರಲಾರಂಭಿಸಿದ್ದವು. ಸಾರ್ವಜನಿಕ ಸಭೆ, ರೇಡಿಯೋ, ದೂರದರ್ಶನದಲ್ಲಿ ಫಿಡೆಲ್ಗೆ ಅವಕಾಶ ನಿರ್ಬಂಧಿಸಲಾಯಿತು. ಅಂತಿಮವಾಗಿ ಫಿಡೆಲ್ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಏಕೈಕ ಪತ್ರಿಕೆ ಲಾ ಕಾ¯ ಪತ್ರಿಕಾಲಯವನ್ನೂ ಮುಚ್ಚಲಾಯಿತು.
ಪರಿಣಾಮವನ್ನು ಮೊದಲೇ ಊಹಿಸಿದ್ದ ಫಿಡೆಲ್ ನಾವು ಜೈಲಿನಿಂದ ಬಿಡುಗಡೆಯಾದ ದಿನದಿಂದಲೇ ಪ್ರಾರಂಭವಾದ ಸಾರ್ವಜನಿಕ ರಾಜಕೀಯ ಸಂಘರ್ಷದ ಜೊತೆಯಲ್ಲೇ ತಮ್ಮನ್ನು ಮತ್ತೊಂದು ಮಹತ್ತರ ಕಾರ್ಯಕ್ಕೆ ಅರ್ಪಿಸಿಕೊಂಡಿದ್ದರು.  ಜುಲೈ 26 ಕ್ರಾಂತಿಕಾರಿ ಆಂದೋಲನವನ್ನು ರಹಸ್ಯವಾಗಿ ಸಂಘಟಿಸುವ ನಿಟ್ಟಿನಲ್ಲಿ ಫಿಡೆಲ್ ದೇಶದ ಮೂಲೆ ಮೂಲೆಗಳಿಂದ ಕ್ರಾಂತಿಕಾರಿ ಯುವ ಜನತೆಯನ್ನು ಸಂಘಟಿಸಿ ಪ್ರಜಾ ಸಶಸ್ತ್ರ ದಂಗೆಯನ್ನು ಸಜ್ಜಾಗಿಸಲು ಭೂಗತ ಚಟುವಟಿಕೆಗಳನ್ನು ಕೈಗೊಂಡಿದ್ದರು. ಪ್ರಭುತ್ವದೊಡನೆ ಸಂಘರ್ಷದಲ್ಲಿ ತೊಡಗಲು ಕ್ರಾಂತಿಕಾರಿ ಯುವಕರಿಗೆ ತರಬೇತಿ ನೀಡಲು ಮತ್ತು ಯುವಪಡೆಗಳಿಗೆ ಶಸ್ತ್ರಗಳನ್ನು ಪೂರೈಸಲು ಜುಲೈ 26 ಕ್ರಾಂತಿಕಾರಿ ಆಂದೋಲನವನ್ನು ರೂಪಿಸಲಾಗಿತ್ತು. ಕ್ಯೂಬಾ ದೇಶದಿಂದ ಹೊರಗೆ ರೂಪಿಸಲಾಗಿದ್ದ ಸಣ್ಣ ಪ್ರಮಾಣದ ಯುವ ಕ್ರಾಂತಿಕಾರಿ ಪಡೆಗೆ  ಕ್ಯೂಬಾಗೆ ಹಿಂದಿರುಗಿ ಕ್ರಾಂತಿಕಾರಿ ಸಮರವನ್ನು ಪ್ರಾರಂಭಿಸಲು ತರಬೇತಿ ನೀಡಲಾಗುತ್ತಿತ್ತು.
ರೀತಿಯ ವಿಶಿಷ್ಟ ಸನ್ನಿವೇಶದಲ್ಲಿಯೇ ಫಿಡೆಲ್ 1955 ಜುಲೈನಲ್ಲಿ ಮೆಕ್ಸಿಕೋಗೆ ಆಗಮಿಸಿದರು. ಅದೇ ತಿಂಗಳಿನಲ್ಲಿ ಫಿಡೆಲ್ ಅರ್ಜೆಂಟೈನಾದ ಯುವ ವೈದ್ಯ ಅರ್ನೆಸ್ಟೋ ಗುವಾರ ಡಿ ಲಾ ಸೆರ್ನಾ ಅವರನ್ನು ಪ್ರಪ್ರಥಮವಾಗಿ ಭೇಟಿಯಾದರು. ಗುವಾರ ಅವರ ಪರಿಚಯವಿದ್ದ ಕೆಲವೇ ಕ್ಯೂಬನ್ನರು ಅವರನ್ನು ಪ್ರೀತಿಯಿಂದ ಚೆ ಎಂದು ಕರೆದರು.
ಗ್ವಾಟೆಮಾಲಾದಿಂದ ಆಗಮಿಸಿದ ಚೆ ಸೆಪ್ಟೆಂಬರ್ 21, 1954ರಂದು ಮೆಕ್ಸಿಕೋಗೆ ಆಗಮಿಸಿದ್ದರು. ಏಪ್ರಿಲ್ 1953ರಲ್ಲಿ ಬ್ಯೂನಸ್ ಐರಿಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ವ್ಯಾಸಂಗವನ್ನು ಮುಗಿಸಿದ್ದ ಚೆ ಜೂನ್ 12ರಂದು ವೈದ್ಯಕೀಯ ಡಿಪ್ಲೊಮಾ ಪಡೆದಿದ್ದರು. ಜುಲೈ 6ರಂದು ತನ್ನ ಸ್ವದೇಶವನ್ನೂ, ಅರ್ಜೆಂಟೈನಾದ ರಾಜಧಾನಿಯನ್ನೂ ತೊರೆದ ಚೆ ಮತ್ತೆ ಅಲ್ಲಿಗೆ ಹಿಂದಿರುಗಲೇ ಇಲ್ಲ. ನಾವು ಮೊಂಕಾಡ ರಕ್ಷಣಾ ದಳದ ಮೇಲೆ ಆಕ್ರಮಣ ಮಾಡಿದ ದಿನದಂದು (ಜುಲೈ 26, 1953) ಚೆ ಬೊಲಿವಿಯಾದಲ್ಲಿ ಇದ್ದರು. 14 ವರ್ಷಗಳ ನಂತರ ಅದೇ ದೇಶದಲ್ಲಿ ಚೆ ವೀರಮರಣ ಹೊಂದಿದ್ದರು. ಇದು ಚೆ ಅವರ ಅಂತಾರಾಷ್ಟ್ರೀಯ ವ್ಯಕ್ತಿತ್ವಕ್ಕೆ ಮಾದರಿಯಷ್ಟೆ.
1953 ಡಿಸೆಂಬರ್ ಮಧ್ಯಭಾಗದಲ್ಲಿ ಚೆ ಪ್ರಪ್ರಥಮ ಬಾರಿಗೆ ಜುಲೈ 26 ಆಕ್ರಮಣದಲ್ಲಿ ಭಾಗಿಯಾಗಿದ್ದ ಕ್ಯೂಬಾದ ಕ್ರಾಂತಿಕಾರಿಗಳನ್ನು ಭೇಟಿಯಾಗಿದ್ದರು. ಇವರೆಲ್ಲರೂ ಗಡೀಪಾರಾಗಿ ಕೋಸ್ಟರಿಕಾದ ಸ್ಯಾನ್ ಜೋಸ್ನಲ್ಲಿ ತಂಗಿದ್ದರು. ಚೆ ಕ್ಯೂಬಾ ಕ್ರಾಂತಿಯೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಂಡಿದ್ದು ಗ್ವಾಟೆಮಾಲಾ ನಗರದಲ್ಲಿ 1954 ಜನವರಿ 3ರಂದು ಅಂಟೋನಿಯೋ ನಿಕೋ ಲೊಪೆಜ್ ಅವರನ್ನು ಭೇಟಿ ಮಾಡಿದ ನಂತರವೇ.
ಮೊಂಕಾಡಾ ದಾಳಿಯನ್ನು ಬೆಂಬಲಿಸುವ ಸಲುವಾಗಿ ಆಯೋಜಿಸಲಾಗಿದ್ದ ಬಯಾಮೋ ಮಿಲಿಟರಿ ಕಾವಲು ದಳದ ಮೇಲೆ ದಾಳಿ ಕಾರ್ಯಾಚರಣೆಯ ನಂತರ ನಿಕೋ ಲೊಪೆಜ್ ಹೇಗೋ ತಪ್ಪಿಸಿಕೊಂಡು ಗ್ವಾಟೆಮಾಲಾದಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು.  ಆರು ಅಡಿ ಎತ್ತರದ, ತೆಳ್ಳಗಿನ ದೇಹದ 21 ವರ್ಷದ ಲೊಪೆಜ್ ನಮ್ಮೆಲ್ಲರಿನ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದರು. ಬಡ ಕುಟುಂಬದಿಂದ ಬಂದವರಾದ್ದರಿಂದ ನಿಕೋ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಾಗಲಿಲ್ಲ. ಆದರೆ ಗಂಭೀರ ತೀವ್ರಗಾಮಿ ಚಿಂತನೆಗಳನ್ನು ಹೊಂದಿದ್ದ ನಿಕೋ ಫಿಡೆಲ್ ಅವರಿಗೆ ಪರಮಾಪ್ತ ಅನುಯಾಯಿಯಾಗಿದ್ದರು. ಧೈರ್ಯ ಸಾಹಸಗಳನ್ನು ಮೈಗೂಡಿಸಿಕೊಂಡಿದ್ದ  ಕ್ರಿಯಾತ್ಮಕ ವ್ಯಕ್ತಿಯಾಗಿದ್ದರು.  ಹವಾನಾದ ಆಹಾರ ಮಾರುಕಟ್ಟೆಯಲ್ಲಿ ಹಮಾಲಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಿಕೋ ತನ್ನ ಮತ್ತು ಕುಟುಂಬದ ನಿರ್ವಹಣೆಗೆ ಅನೇಕ ಇತರ ಕೆಲಸಗಳನ್ನೂ ಮಾಡುತ್ತಿದ್ದರು.
ನಮ್ಮ ಕ್ರಾಂತಿಕಾರಿ ಆಂದೋಲನವನ್ನು ಕುರಿತು ಮತ್ತು ಯುವ ವಕೀಲ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕ್ಯೂಬಾದಲ್ಲಿ ಚೆ ಅವರೊಡನೆ ಪ್ರಪ್ರಥಮವಾಗಿ ಮಾತನಾಡಿದವರು ನಿಕೋ ಲೊಪೆಜ್. ನಿಕೋ ಮತ್ತು ಚೆ ಗ್ವಾಟೆಮಾಲಾದಲ್ಲಿ ಪ್ರಾರಂಭಿಸಿದ ಅಪ್ರತಿಮ ಗೆಳೆತನ ಮೆಕ್ಸಿಕೋದಲ್ಲಿ ಇನ್ನೂ ಗಟ್ಟಿಯಾಗಿ ಡಿಸೆಂಬರ್ 8, 1956ರಂದು ನಿಕೋ ಅವರ ಮರಣದೊಂದಿಗೆ ಅಂತ್ಯಗೊಂಡಿತ್ತು. ವೇಳೆಗಾಗಲೇ ಗ್ರಾನ್ಮಾ ಸಮರ ನೌಕೆ ನಮ್ಮನ್ನು ಓರಿಯಂಟ್ ಪ್ರಾಂತ್ಯಕ್ಕೆ ಕರೆದೊಯ್ದಿತ್ತು.
ಗ್ವಾಟೆಮಾಲಾದಲ್ಲಿ ಅರ್ಬೆಂಜ್ ನೇತೃತ್ವದ ಪ್ರಜಾಸತ್ತಾತ್ಮಕ ರಾಷ್ಟ್ರವಾದಿ ಆಡಳಿತವನ್ನು ಪದಚ್ಯುತಗೊಳಿಸಿದಾಗ ಚೆ ಮೆಕ್ಸಿಕೋಗೆ ತೆರಳಿದರು. ಹತ್ತು ತಿಂಗಳುಗಳ ನಂತರ ಕ್ಯೂಬಾದ ವಲಸಿಗ ಮರಿಯ ಆಂಟೋನಿಯ ಗೊನ್ಸಾಲೆಜ್ ಅವರ ಮನೆಯಲ್ಲಿ ಚೆ ಫಿಡೆಲ್ ಅವರನ್ನು ಭೇಟಿಯಾಗಿದ್ದರು. ಭೇಟಿಯ ಸಂದರ್ಭವನ್ನು ಚೆ ಅವರ ಮಾತುಗಳಲ್ಲೇ ಕೇಳಬಹುದು :-
ಮೆಕ್ಸಿಕೋದಲ್ಲಿ ಆಡಳಿತ ನಡೆಸುತ್ತಿದ್ದ ಯುನೈಟೆಡ್ ಫ್ರೂಟ್ ಕಂಪನಿ ಸರ್ಕಾರಕ್ಕೆ ಅಪಾಯಕರ ಎಂದು ಪರಿಗಣಿಸಲ್ಪಟ್ಟವರನ್ನೆಲ್ಲಾ ಎಫ್ಬಿಐ ಏಜೆಂಟರು ಬಂಧಿಸಿ ಹತ್ಯೆಮಾಡುತ್ತಿದ್ದುದರಿಂದ  ನಾನು ಗ್ವಾಟೆಮಾಲಾದಿಂದ ತಪ್ಪಿಸಿಕೊಂಡು ಮೆಕ್ಸಿಕೋಗೆ ಬಂದೆ. ಸಂದರ್ಭದಲ್ಲಿ ಗ್ವಾಟೆಮಾಲಾದಲ್ಲಿ ಭೇಟಿಯಾಗಿದ್ದ ಕೆಲವು ಜುಲೈ 26 ಚಳುವಳಿಯ ಸದಸ್ಯರನ್ನು ಭೇಟಿ ಮಾಡಿದೆ. ಆಗಲೇ ಫಿಡೆಲ್ ಅವರ ಸೋದರ ರೌಲ್ ಕ್ಯಾಸ್ಟ್ರೋ ಅವರೊಡನೆ ನನ್ನ ಸ್ನೇಹ ಬೆಳೆಯಿತು. ಕ್ರಾಂತಿಕಾರಿಗಳು ಕ್ಯೂಬಾವನ್ನು ಆಕ್ರಮಿಸಲು ಯೋಜಿಸುತ್ತಿದ್ದ ಸಂದರ್ಭದಲ್ಲಿ ರೌಲ್ ನನ್ನನ್ನು ಫಿಡೆಲ್ಗೆ ಪರಿಚಯ ಮಾಡಿಸಿದರು.
ನಾನು ಫಿಡೆಲ್ ಅವರೊಡನೆ ಇಡೀ ರಾತ್ರಿ ಮಾತನಾಡಿದ್ದೆ. ಸೂರ್ಯೋದಯವಾಗುವ ವೇಳೆಗೆ ನಾನು ಫಿಡೆಲ್ ಅವರ ಮುಂದಿನ ದಂಡಯಾತ್ರೆಗೆ ವೈದ್ಯನಾಗಿರಲು ಸಿದ್ಧನಾಗಿದ್ದೆ. ಲ್ಯಾಟಿನ್ ಅಮೆರಿಕಾ ದೇಶಗಳ ಸುದೀರ್ಘ ಪ್ರಯಾಣದ ನಂತರ ಗ್ವಾಟೆಮಾಲಾದಲ್ಲಿನ ಅನುಭವಗಳಿಂದ ಯಾವುದೇ ನಿರಂಕುಶ ಪ್ರಭುತ್ವದ ವಿರುದ್ಧ ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾಗಲು ನನಗೆ ಯಾವುದೇ ರೀತಿಯ ಉತ್ತೇಜನ ಬೇಕಿರಲಿಲ್ಲ. ಆದರೂ ಫಿಡೆಲ್ ಓರ್ವ ಅಸಾಧಾರಣ ವ್ಯಕ್ತಿಯಾಗಿ ನನ್ನನ್ನು ಆಕರ್ಷಿಸಿದ್ದರು. ಅಸಾಧ್ಯ ಕಾರ್ಯಗಳನ್ನು ಕೈಗೆತ್ತಿಕೊಂಡು, ಎದುರಿಸಿ, ನಿರ್ವಹಿಸುವಲ್ಲಿ ಫಿಡೆಲ್ ಅಪ್ರತಿಮರಾಗಿದ್ದರು. ಅವರ ವಿಶ್ವಾಸ ಎಷ್ಟು ದೃಢವಾಗಿತ್ತೆಂದರೆ, ಒಮ್ಮೆ ಕ್ಯೂಬಾಗೆ ಪಯಣ ಬೆಳೆಸಿದರೆ ನಾನಲ್ಲಿ ಇರುತ್ತೇನೆ, ಒಮ್ಮೆ ಕ್ಯೂಬಾ ಪ್ರವೇಶಿಸಿದರೆ ಹೋರಾಡುತ್ತೇನೆ, ಹೊರಾಡುತ್ತಾ ವಿಜಯಿಯಾಗುತ್ತೇನೆ ಎಂಬ ವಿಶ್ವಾಸ ಅವರಲ್ಲಿತ್ತು. ಅವರ ಆಶಾವಾದವನ್ನು ನಾನೂ ಹಂಚಿಕೊಂಡಿದ್ದೆ. ಕಾರ್ಯಾರಣೆ ಕೈಗೊಂಡು, ಸಂಘರ್ಷಗಳನ್ನು ನಡೆಸಿ, ಹೋರಾಡಿ, ಪರಿಣಾಮ ಬೀರುವಂತೆ ಮಾಡಿ, ಅಳುವುದನ್ನು ನಿಲ್ಲಿಸಿ ಹೋರಾಟ ಮಾಡುವುದು ಅಗತ್ಯವಾಗಿತ್ತು. ತಾನು ನಂಬಿದ್ದನ್ನು ಮಾಡಿ ತೋರಿಸುವ ಫಿಡೆಲ್ ಅವರ ವಿಶ್ವಾಸಭರಿತ ವ್ಯಕ್ತಿತ್ವವನ್ನು ಕ್ಯೂಬಾದ ಜನರು ಒಪ್ಪಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಫಿಡೆಲ್ “1956ರಲ್ಲಿ ನಾವು ಸ್ವತಂತ್ರರಾಗುತ್ತೇವೆ ಅಥವಾ ಹುತಾತ್ಮರಾಗುತ್ತೇವೆÉ ಎಂಬ ಘೋಷಣೆಯನ್ನು ಮೊಳಗಿಸಿದ್ದರು. ಅಷ್ಟೇ ಅಲ್ಲದೆ ವರ್ಷಾಂತ್ಯದ ವೇಳೆಗೆ ತಾನು ತನ್ನ ದಂಡಯಾತ್ರೆಯ ಸೇನೆಯ ಮುಖ್ಯಸ್ಥನಾಗಿ ಕ್ಯೂಬಾದ ಯಾವುದೋ ಒಂದು ಪ್ರಾಂತ್ಯದಲ್ಲಿ ಬಂದಿಳಿಯುತ್ತೇನೆ ಎಂದೂ ಘೋಷಿಸಿದ್ದರು.
(ರಿಕಾರ್ಡೋ ಮಸೆಟ್ಟಿ 1958 ಏಪ್ರಿಲ್ನಲ್ಲಿ ಚೆ ಅವರೊಡನೆ ಮಾಡಿದ ಸಂದರ್ಶನದ ತುಣುಕುಗಳು.)
ಭೇಟಿಯ ಒಂದು ತಿಂಗಳ ಮುನ್ನ, ಅಂದರೆ ಜೂನ್ 14, 1955ಕ್ಕೆ ಚೆ 27 ವರ್ಷ ಪೂರೈಸಿದ್ದರು. ಕೆಲವೇ ದಿನಗಳ ನಂತರ, ಆಗಸ್ಟ್ 13ರಂದು ಫಿಡೆಲ್ 29 ವರ್ಷ ಪೂರೈಸಲಿದ್ದರು. ಇಬ್ಬರೂ ಒಂದೇ ಪೀಳಿಗೆಯವರಾದರೂ ಅವರ ರಾಜಕೀಯ-ಸೈದ್ಧಾಂತಿಕ ಅಸ್ಮಿತೆಗಳು ದಿನಕಳೆದಂತೆ ಗಾಢವಾಗುತ್ತಲೇ ಇದ್ದವು. ವಿದ್ಯಮಾನವು ಅವರಿಬ್ಬರ ಕಾಕತಾಳೀಯ ಭೇಟಿಗಿಂತಲೂ ಹೆಚ್ಚಿನ ಮಹತ್ವವುಳ್ಳದ್ದು.
Related articles
 
ಅವಧಿಯನ್ನು ಕುರಿತಂತೆ ಚೆ ಹೆಚ್ಚಾಗಿ ಬರೆಯಲಿಲ್ಲ. ಆದರೆ ಚೆ ಬರೆದ ಕೆಲವೇ ಲೇಖನಗಳನ್ನು ಅದೇ ಕಾಲಘಟ್ಟದಲ್ಲಿ ಫಿಡೆಲ್ ಬರೆದ ಲೇಖನಗಳೊಂದಿಗೆ ತುಲನೆ ಮಾಡಿ ನೋಡಿದಾಗ ಅವರೀರ್ವರ ನಡುವೆ ಸಹಬಾಂಧವ್ಯ ಹೇಗೆ ಮೂಡಿತೆಂದು ಗ್ರಹಿಸಬಹುದು.
ಮೊದಲ ಭೇಟಿಯ ನಂತರದ ಪ್ರಾರಂಭಿಕ ದಿನಗಳಲ್ಲಿ, ಹವಾನಾದಲ್ಲಿದ್ದ ವಿಮೋಚನಾ ಚಳುವಳಿಯ ನಾಯಕರಾಗಿದ್ದ ನಮಗೆ ಫಿಡೆಲ್ ಹೀಗೆ ಬರೆಯುತ್ತಿದ್ದರು :
ಇಲ್ಲಿ ನನ್ನ ಕಾರ್ಯಾಚರಣೆಗಳನ್ನು ನಿರ್ವಹಿಸುವ ನಿಯಮಗಳು ಈಗಲೂ, ಸದಾಕಾಲವೂ ಎಚ್ಚರಿಕೆಯಿಂದ ಕೂಡಿದ್ದು ನಾವು ಕ್ಯೂಬಾದಲ್ಲಿರುವಂತೆಯೇ ಭಾವಿಸುವ ರೀತಿಯಲ್ಲಿ ನನ್ನ ಸ್ವಂತ ಆಯ್ಕೆಯ ಪ್ರಶ್ನೆಯಾಗಿರುತ್ತದೆ. ನಾನು ಇಲ್ಲಿ ಹೆಚ್ಚು ಸಕ್ರಿಯನಾಗಿ ಕಾಣಿಸಿಕೊಂಡಿಲ್ಲ. ಆದರೆ ನೀವು ಅಲ್ಲಿ ಮುಂದಡಿ ಇಟ್ಟಂತೆಲ್ಲಾ ನಾವಿಲ್ಲಿ ಮುಂದುವರೆಯುತ್ತೇವೆ. ನಾವು ಯೋಜಿಸಿದಂತೆ ಎಲ್ಲವನ್ನೂ ಕರಾರುವಾಕ್ಕಾಗಿ ಸಾಧಿಸಬಹುದು.
ಆದ್ದರಿಂದಲೇ ನಾನು ನನ್ನ ಆಗಮನದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡಲಿಲ್ಲ. ಶಿಷ್ಟಾಚಾರದ ಪ್ರಜ್ಞೆ ನನ್ನನ್ನು ಹೇಳಿಕೆ ನೀಡದಂತೆ ತಡೆಹಿಡಿದಿದೆ. ಕ್ಯೂಬಾದ ಸಮಸ್ಯೆಗಳ ಪರಿಹಾರಕ್ಕಾಗಿ ಬಂದೂಕು ಹಿಡಿದು ಹೋರಾಡುವ ಕ್ಯೂಬಾದ ಕೊನೆಯ ಪ್ರಜೆ  ಜೀವಂತವಾಗಿರುವವರೆಗೂ ಕ್ಯೂಬಾದ ಸಮಸ್ಯೆಗಳ ಬಗ್ಗೆ ಅನ್ಯರಾರೂ ಕಣ್ಣೀರು ಸುರಿಸುವ ಅವಶ್ಯಕತೆಯಿಲ್ಲ. ನಮ್ಮ ನಾಚಿಕೆಗೆಟ್ಟ ರಾಜಕೀಯ ಪರಿಸ್ಥಿತಿಯನ್ನು ಕುರಿತು ನಾವು ಮೆಕ್ಸಿಕೋ ಜನರೊಡನೆ ಮಾತನಾಡಿದರೆ, ಅವರು, ತಮ್ಮ ದೇಶದಲ್ಲಿ ಏನೂ ಸಮಸ್ಯೆಯೇ ಇಲ್ಲವೇನೋ ಎಂಬಂತೆ,  ಕ್ಯೂಬಾದ ಜನ ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಬಹುದು. ಹೆಚ್ಚೆಂದರೆ ಭವಿಷ್ಯದಲ್ಲಿ ನಮ್ಮನ್ನು ಕುರಿತು, ಅಸಾಧ್ಯವಾದುದನ್ನು ಸಾಧಿಸಲು ಹೋಗಿ ಹುತಾತ್ಮರಾದರು ಎಂದು ಮೂದಲಿಸಬಹುದು, ಆದರೆ ನಾವು ಧೈರ್ಯಗೆಟ್ಟು ಅಳುತ್ತಾ ಕುಳಿತಿರಲಿಲ್ಲ ಎಂಬುದಂತೂ ಸ್ಪಷ್ಟವಾಗುತ್ತದೆ.
ನಂತರದಲ್ಲಿ ನಮಗೆ ದೊರಕಿದ ಚೆ ಅವರ ಹೇಳಿಕೆಗಳು ಜುಲೈ  14, 1955ರಂದು ಫಿಡೆಲ್ ನೀಡಿದ ಹೇಳಿಕೆಗಳೊಡನೆ ಸಾಮ್ಯತೆ ಹೊಂದಿರುವುದೇ ಅಲ್ಲದೆ ಈರ್ವರ ವ್ಯಕ್ತಿತ್ವ ಮತ್ತು ಚಿಂತನೆಗಳು ಒಂದೇ ಸ್ವರೂಪದ್ದಾಗಿದ್ದವೆಂದು ಸ್ಪಷ್ಟವಾಗುತ್ತದೆ. ಅದೇ ವರ್ಷದ ಆಗಸ್ಟ್ 12ರಂದು ಮತ್ತೊಂದು ಪತ್ರದಲ್ಲಿ ಫಿಡೆಲ್ ಹೀಗೆ ಬರೆಯುತ್ತಾರೆ :
ನಾನು ನನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸುತ್ತಿದ್ದೇನೆಂದು ಭಾವಿಸುತ್ತೇನೆ. ಸಂದರ್ಭದಲ್ಲಿ ನಾನು ಸಣ್ಣ ಕೊಠಡಿಯಲ್ಲಿ ಕುಳಿತು ಪತ್ರಗಳನ್ನು, ಪ್ರಣಾಳಿಕೆಗಳನ್ನು ಬರೆಯುವ ಬಗ್ಗೆ ಹೇಳುತ್ತಿಲ್ಲ. ಅದಕ್ಕಿಂತಲೂ ಮಹತ್ತರವಾದ ಕರ್ತವ್ಯವನ್ನು ಕುರಿತು ಹೇಳುತ್ತಿದ್ದೇನೆ. ನಾನು ಕೈಗೊಂಡಿರುವ ಕಾರ್ಯದ ಬಗ್ಗೆ ನನ್ನಲ್ಲಿ ಆಶಾವಾದ ಇದೆ ಎಂಬ ಮಾತಂತೂ ಸರಳ ಸತ್ಯ. ಹೊರಗಡೆ ನಡೆಯುತ್ತಿರುವ ಕಾರ್ಯಾಚರಣೆಗಳು ಅಷ್ಟೇ ಮಹತ್ವವುಳ್ಳದ್ದು ಎಂದು ಭಾವಿಸುತ್ತಲೇ ನನ್ನ ಗೈರುಹಾಜರಿಯ ನೋವನ್ನು ಮರೆತು ವಿರಮಿಸಲೆತ್ನಿಸುತ್ತೇನೆ. ಹಾಗೆಯೇ ನನ್ನ ಸಂಕಟವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತೇನೆ. ಆದಷ್ಟು ಬೇಗನೆ ಕ್ಯೂಬಾದ ಭೂಮಿಯ ಮೇಲೆ ಹೋರಾಡುವ ನನ್ನ ಆಶಯವನ್ನು ಪೂರ್ತಿಗೊಳಿಸಲು ಯತ್ನಿಸುತ್ತೇನೆ. ಒಂದು ವೇಳೆ ನಮ್ಮ ಆಶಯಗಳು ಅಸಾಧ್ಯವೆಂದೇ ಪರಿಗಣಿಸಲ್ಪಟ್ಟು ನಾವು ಒಬ್ಬಂಟಿಗರಾದರೆ , ನಾನು ಒಂದು ಬಂದೂಕಿನೊಡನೆ ಕ್ಯೂಬಾದ ಯಾವುದೋ ಒಂದು ಕಡಲ ತೀರಕ್ಕೆ ದೋಣಿಯಲ್ಲಿ ಬರುವುದನ್ನು ನೀವು ನೋಡುವಿರಿ.
1955 ಬೇಸಿಗೆಯಲ್ಲಿ ಮೆಕ್ಸಿಕೋ ನಗರದಲ್ಲಿ ಚೆ ಭೇಟಿ ಮಾಡಿದ ಫಿಡೆಲ್ ಅವರ ವ್ಯಕ್ತಿತ್ವ ಹೀಗಿತ್ತು. ಒಬ್ಬರಿಗಿಂತ ಮತ್ತೊಬ್ಬರು ಪ್ರಚೋದನಕಾರಿ ಪ್ರವೃತ್ತಿಯನ್ನು ಹೊಂದಿದ್ದ ಲ್ಯಾಟಿನ್ ಅಮೆರಿಕಾದ ಪ್ರಜಾತಾಂತ್ರಿಕ ರಾಜಕಾರಣಿಗಳನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದ, ಬೊಲಿವಿಯಾ ಕ್ರಾಂತಿಯು ಹಿಮ್ಮುಖವಾಗಿ ಚಲಿಸುತ್ತಿದ್ದುದನ್ನು ವೀಕ್ಷಿಸುತ್ತಿದ್ದ, ಗ್ವಾಟೆಮಾಲಾದ ರಾಷ್ಟ್ರವಾದಿ ಹೋರಾಟಗಳ ಪ್ರಯತ್ನಗಳು ದಮನಕ್ಕೆ ಒಳಗಾಗುದುದನ್ನು ಕಣ್ಣಾರೆ ಕಂಡಿದ್ದ ವ್ಯಕ್ತಿಯೊಬ್ಬ; ತನ್ನಂತೆಯೇ ದೇಶದಿಂದ ಗಡಿಪಾರಾಗಿ ದಾರಿದ್ರ್ಯದಿಂದ ಬಳಲುತ್ತಿದ್ದ, ತನ್ನ ದೇಶದಲ್ಲಿ ಸಶಸ್ತ್ರ ದಂಗೆಯನ್ನು ರೂಪಿಸಲು ಹಾತೊರೆಯುತ್ತಿದ್ದ, ಜೈಲುವಾಸ ಅನುಭವಿಸಿದ್ದ, ಅತ್ಯಂತ ಆತ್ಮ ವಿಶ್ವಾಸದಿಂದ, ಉತ್ಸಾಹದಿಂದ, ಶ್ರದ್ಧೆಯಿಂದ ತನ್ನ ಕ್ರಾಂತಿಕಾರಿ ಯೋಜನೆಯ ಬಗ್ಗೆ ಮಾತನಾಡುತ್ತಿದ್ದ, ಆಗಲೇ ವಿಜಯೋತ್ಸವದ ಉತ್ಸಾಹದಿಂದ ಬೀಗುತ್ತಿದ್ದ, ಯಾವುದೇ ಆರ್ಥಿಕ ಸಂಪನ್ಮೂಲಗಳಿಲ್ಲದಿದ್ದರೂ ತನ್ನ ಸ್ವದೇಶದಲ್ಲಿ ವಿಮೋಚನೆಗಾಗಿ  ಯುದ್ಧ ನಡೆಸಲು ಸಿದ್ಧತೆ ನಡೆಸಿದ್ದ, ಅತ್ಯಂತ ಕಠಿಣ ಅನುಪಯುಕ್ತ ಸನ್ನಿವೇಶಗಳಲ್ಲಿ ದಿನ ಕಳೆಯುತ್ತಿದ್ದ ಕ್ಯೂಬಾ ದೇಶದ ವ್ಯಕ್ತಿಯನ್ನು ಭೇಟಿ ಮಾಡಿದಾಗ ಸನ್ನಿವೇಶ ಹೇಗಿರಬಹುದೆಂದು ಊಹಿಸುವುದು ಅಸಾಧ್ಯವೇನಲ್ಲ.
ನಾನು 1955 ಆಗಸ್ಟ್ ಎರಡನೆ ವಾರದಲ್ಲಿ ಮೆಕ್ಸಿಕೋ ನಗರಕ್ಕೆ ಆಗಮಿಸಿದೆ. ಅದೇ ಮೊದಲ ಬಾರಿ ನಾನು ಕ್ಯೂಬಾದಿಂದ ಹೊರಬಂದಿದ್ದೆ. ಕ್ಯೂಬಾದಲ್ಲಿ ಆಯೋಜಿಸಲಾಗಿದ್ದ ಜುಲೈ 26 ಆಂದೋಲನಕ್ಕೆ ಅಗತ್ಯವಾದ ಬರಹಗಳನ್ನು ಮುದ್ರಿಸುವ ಸಲುವಾಗಿ  ರಹಸ್ಯವಾಗಿ ಮುದ್ರಣ ಯಂತ್ರಗಳನ್ನು ಆಯೋಜಿಸಲು ನನಗೆ ಆದೇಶ ನೀಡಲಾಗಿತ್ತು. ಹಾಗಾಗಿ ನಾನು ಚಳುವಳಿಯ ಸಾಮಾನ್ಯ ಖಜಾಂಚಿಯಾಗಿ ಮತ್ತು ಫಿಡೆಲ್ ಅವರ ಸಹಾಯಕನಾಗಿ ನನ್ನ ಕರ್ತವ್ಯ ನಿರ್ವಹಿಸಲು ಮೆಕ್ಸಿಕೋಗೆ ಹೋಗಿದ್ದೆ.
ಅಲ್ಲಿ ನಮ್ಮ ಮುಖ್ಯಸ್ಥನ ವಿಶ್ವಾಸ ಗಳಿಸಿದ್ದ ಕೆಲವೇ ಜನರ ಗುಂಪಿನಲ್ಲಿ ನಾನು ಚೆ ಅವರನ್ನು ಭೇಟಿಯಾಗಿದ್ದೆ. ಅಲ್ಪ ಸಮಯದಲ್ಲೇ ಚೆ  ತಮ್ಮ ರಾಜಕೀಯ ಚಾಣಾಕ್ಷತೆ ಮತ್ತು ವೈಯಕ್ತಿಕ ಗುಣಗಳನ್ನು ಪ್ರದರ್ಶಿಸಿದ್ದರು. ಫಿಡೆಲ್ ತಮ್ಮ ಅತ್ಯಂತ ವಿಶ್ವಾಸವುಳ್ಳ ವ್ಯಕ್ತಿಗಳ ಗುಂಪಿನಲ್ಲಿ ಚೆ ಅವರಿಗೆ ಪ್ರಮುಖ ಸ್ಥಾನವನ್ನು ನೀಡಿದ ಕಾರಣ ತಿಳಿಯಬೇಕಾದರೆ, ನಾವು ಗಡೀಪಾರಾಗಿ ಅನ್ಯದೇಶದಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ಎಂತಹ ಕಠಿಣ ಭದ್ರತಾ ವ್ಯವಸ್ಥೆಯ ನಡುವೆ ನಿರ್ವಹಿಸಬೇಕಾಗಿತ್ತೆಂದು ಗ್ರಹಿಸಬೇಕಾಗುತ್ತದೆ. ಫಿಡೆಲ್ ಅವರ ವಿಶ್ವಾಸಕ್ಕೆ ಸ್ವಲ್ಪವೂ ಭಂಗ ತರದೆ ತಮ್ಮ ಕಾರ್ಯದಕ್ಷತೆಯನ್ನು ಮೆರೆದ ಚೆ ಅವರ ಕಾರ್ಯವೈಖರಿ ಫಿಡೆಲ್ ಅವರ ನಿರ್ಧಾರವನ್ನು ಹುಸಿಗೊಳಿಸಲಿಲ್ಲ.
ನಾನು ಅಲ್ಲಿಗೆ ಬಂದ ಕೆಲವೇ ದಿನಗಳ ನಂತರ, ಆಗಸ್ಟ್ 19ರಂದು ಚೆ ಪೆರು ದೇಶದ ಅರ್ಥಶಾಸ್ತ್ರಜ್ಞೆ ಹಿಲ್ಡಾ ಗಾಡಿಯಾ ಅವರನ್ನು ವಿವಾಹವಾದರು. ಇದಕ್ಕೂ ಮುನ್ನ ಚೆ ಹಿಲ್ಡಾ ಅವರನ್ನು ಗ್ವಾಟೆಮಾಲಾದಲ್ಲಿ ಭೇಟಿಯಾಗಿದ್ದರು. ಚೆ ನನ್ನನ್ನೂ ವಿವಾಹಕ್ಕೆ ಆಹ್ವಾನಿಸಿದ್ದರು. ಚೆ ಅವರೊಡನೆ ಕೆಲಸ ಮಾಡುತ್ತಿದ್ದ ಮೆಕ್ಸಿಕೋದ ಇಬ್ಬರು ವೈದ್ಯರು, ಹಿಲ್ಡಾಳ ಗೆಳತಿ ವೆನಿಜುಯೆಲಾದ ಕವಯಿತ್ರಿ ಲುಸಿಲಾ ವೆಲಾಸ್ಕ್ ಮತ್ತು ನಾನು ವಿವಾಹಕ್ಕೆ ಮುಖ್ಯ ಸಾಕ್ಷಿಗಳಾಗಿದ್ದೆವು. ಮೆಕ್ಸಿಕೋ ನಗರ ಸಣ್ಣ ಪಟ್ಟಣ ಟೆಪೋಟ್ಜೋಷಿಯನ್ನಲ್ಲಿ ಮುನಿಸಿಪಲ್ ಸಭಾಂಗಣದಲ್ಲಿ ಸಮಾರಂಭ ಏರ್ಪಟ್ಟಿತ್ತು.
ನನ್ನ ಪತ್ನಿ ಮೆಲ್ಬಾ ಹೆರ್ನಾಂಡೆಜ್ ಅಲ್ಲಿ ಆಗಮಿಸಿದ ನಂತರ ಚೆ ಅವರ ನಿಕಟ ಬಾಂಧವ್ಯ ಗಾಢವಾಗಿ ಬೆಳೆದಿತ್ತು. ನಾನು, ಮೆಲ್ಬಾ ಮತ್ತು ಚೆ ಅನೇಕ ಬಾರಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದೆವು. ಮೆಕ್ಸಿಕೋ ನಗರದಲ್ಲಿರುವ ಮೆಕ್ಸಿಕನ್-ರಷ್ಯನ್ ಸಾಂಸ್ಕøತಿಕ ವಿನಿಮಯ ಸಂಸ್ಥೆಯ ವಾಚನಾಲಯಕ್ಕೂ ನಾವು ಒಟ್ಟಿಗೇ ಭೇಟಿ ನೀಡಿದ್ದೆವು.
ಚೆ ಅವರ ಮಾನವೀಯತೆ, ವ್ಯಕ್ತಿತ್ವ, ದೃಢ ವಿಶ್ವಾಸ, ಧೈರ್ಯ, ರಾಜಕೀಯ ಚಿಂತನೆಗಳು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ದೃಢ ನಿರ್ಧಾರ, ಭೌತಿಕ ಸಂಗತಿಗಳಲ್ಲಿ ನಿರಾಸಕ್ತಿ ಇವೆಲ್ಲವನ್ನು ಕುರಿತು ಸಾಕಷ್ಟು ಹೇಳಲಾಗಿದೆ. ಅನೇಕ ವರ್ಷಗಳಿಂದ ಚೆ ಅವರನ್ನು ಕುರಿತು ಈಗಾಗಲೇ ಹೇಳಿರುವುದನ್ನೇ ನಾನೂ ಪುನರುಚ್ಚರಿಸಬಹುದಷ್ಟೆ.
ಆದಾಗ್ಯೂ ಚೆ ಅವರೊಡನೆ ಮೆಕ್ಸಿಕೋದಲ್ಲಿ ಕಳೆದ ದಿನಗಳನ್ನು ನೆನಪುಮಾಡಿಕೊಂಡಾಗ, ಫಿಡೆಲ್ ಅವರ ಗುಂಪಿನ ಯಾವುದೇ ಸದಸ್ಯರೂ ಮಾಡದಂತಹ ಪ್ರಯತ್ನಗಳನ್ನು ಚೆ ಅವರು ಮಾಡಿದ್ದು ನೆನಪಾಗುತ್ತದೆ. ಬೆಟ್ಟ ಏರುವ ಸಂದರ್ಭದಲ್ಲಿ, ಸುದೀರ್ಘ ವ್ಯಾಯಾಮದಲ್ಲಿ, ಬುಕಾರೆಲ್ ರಸ್ತೆಯ ಜಿಮ್ನಾಸಿಯಮ್ ಯುದ್ಧ ರಕ್ಷಣಾ ಅಭ್ಯಾಸದಲ್ಲಿ, ಗುರಿ ಇಡುವ ಅಭ್ಯಾಸದ ಸಂದರ್ಭದಲ್ಲಿ, ಕೆಲವು ತಿಂಗಳುಗಳ ಕಾಲ ನಡೆದ ಗೆರಿಲ್ಲಾ ಸಮರ ತಂತ್ರದ ತರಬೇತಿಯಲ್ಲಿ ಚೆ ಎಲ್ಲರಿಗಿಂತಲೂ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದುದು ವಿಶೇಷ.
ಅಷ್ಟೇ ಅಲ್ಲದೆ ಚೆ ಕ್ಯೂಬಾದ ಪ್ರಜೆಯಲ್ಲದಿದ್ದರೂ ಅವರು ನಮ್ಮೊಡನೆ ಬೆರೆತು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದೇ ಅಲ್ಲದೆ ನಮ್ಮ ದೇಶಕ್ಕೆ ಬರಲೂ ಸಿದ್ಧರಿದ್ದರು. ತನ್ಮೂಲಕ ಚೆ ಅವರು ನಮ್ಮ ಕ್ರಾಂತಿಯ ಉತ್ತೇಜನೀಯ ಅಂತಾರಾಷ್ಟ್ರೀಯತೆಯ ಪರಂಪರೆಯ ಹರಿಕಾರರಾಗಿದ್ದರು. ಪದವಿ ಪಡೆದ ನಂತರ ವೆನೆಜುವೆಲಾಗೆ ಹೋಗುವ ತಮ್ಮ ಯೋಜನೆಯನ್ನು ಕೈ ಬಿಟ್ಟು, ಕ್ರಾಂತಿಕಾರಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಗ್ವಾಟೆಮಾಲಾಗೆ ಹೇಗೆ ತೆರಳಿದ್ದರೋ ಹಾಗೆಯೇ ಮೆಕ್ಸಿಕೋದಲ್ಲಿ ಬಹಳ ಕಾಲ ಬಡತನ ಹಸಿವಿನಿಂದ ಬಳಲಿ ಜೀವನೋಪಾಯಕ್ಕೆ ಮಾರ್ಗವಿಲ್ಲದೆ ಇದ್ದ ಸಂದರ್ಭದಲ್ಲಿ ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧ್ಯಾಪಕರಾಗಿ ನೌಕರಿ ಗಳಿಸಿದ್ದರೂ ಚೆ ಅವಕಾಶವನ್ನು ಬದಿಗೊತ್ತಿ, ತನ್ನ ಕುಟುಂಬದ ಸುಖಶಾಂತಿಗಳನ್ನೂ ಲೆಕ್ಕಿಸದೆ,  ಪತ್ನಿ ಮತ್ತು ನವಜಾತ ಪುತ್ರಿಯರ ಸುಖವನ್ನೂ ಬದಿಗೊತ್ತಿ, ಕ್ಯೂಬಾದ ಜನತೆಯ ವಿಮೋಚನೆಗಾಗಿ ಹೋರಾಡಲು ಪಣತೊಟ್ಟಿದ್ದರು.
1956 ಜೂನ್ನಲ್ಲಿ ಚೆ ಮತ್ತು ಆತನ 20 ಸಹಚರರನ್ನು ಬಂಧಿಸಲಾಗಿತ್ತು. ಭವಿಷ್ಯದ ದಂಡಯಾತ್ರೆಯ ಸದಸ್ಯರಿಗೆ ತರಬೇತಿ ನೀಡುವ ಸಲುವಾಗಿ ಲಾಸ್ ರೋಸಾಸ್ ರಾಂಚ್ ಎಂಬ ಪ್ರದೇಶದಲ್ಲಿ ಏರ್ಪಡಿಸಿದ್ದ ಶಿಬಿರದ ನಿರ್ವಹಣೆಯನ್ನು ಫಿಡೆಲ್ ಚೆ ಅವರಿಗೆ ಒಪ್ಪಿಸಿದ್ದರು. ಬಂಧಿತರಾದ ಎಲ್ಲ ಗುಂಪುಗಳ ಪೈಕಿ ಚೆ ಅವರ ಗುಂಪು ಕೊನೆಯಲ್ಲಿ ಬಿಡುಗಡೆ ಹೊಂದಿತ್ತು.  ಬಿಡುಗಡೆಯಾದ ನಂತರ ಚೆ ತನ್ನ ಮನೆಗೆ ಹೋಗುವುದೂ ಸಾಧ್ಯವಾಗಲಿಲ್ಲ. ಮನೆಯಿಂದ ಮನೆಗೆ ರಹಸ್ಯವಾಗಿ, ತಪ್ಪಿಸಿಕೊಂಡು ಓಡಾಡುವುದು ಅನಿವಾರ್ಯವಾಗಿತ್ತು. ಕೊನೆಗೆ ನವಂಬರ್ 25ರಂದು ಗ್ರಾನ್ಮಾ ಯುದ್ಧ ಹಡಗಿನಲ್ಲಿ ಕ್ಯೂಬಾಗೆ ಪ್ರಯಾಣ ಬೆಳೆಸಿದ ತಂಡದಲ್ಲಿ ಚೆ ಒಬ್ಬರಾಗಿದ್ದರು.
ಜುಲೈ 6 ರಂದು ಅವರ ತಂದೆ ತಾಯಿಯರಿಗೆ ಚೆ ಬರೆದ ಪತ್ರ, ಚೆ ಅವರು ಕ್ಯೂಬಾವನ್ನು ಉಲ್ಲೇಖಿಸಿದ ಪ್ರಥಮ ದಾಖಲೆ ಮಾತ್ರವಲ್ಲದೆ, ಕ್ಯೂಬಾದ ಕ್ರಾಂತಿಗೆ ತಮ್ಮ ಬದ್ಧತೆಯನ್ನು ಸೂಚಿಸಿದ ದಾಖಲೆಯೂ ಆಗಿತ್ತು. ಪತ್ರದಲ್ಲಿ ತಮ್ಮ ಜೈಲುವಾಸದ ಅನುಭವವನ್ನು ಉಲ್ಲೇಖಿಸುತ್ತಾರೆ.
ಕೆಲವು ಸಮಯದ ಮುನ್ನ ಕ್ಯೂಬಾದ ಓರ್ವ ಕ್ರಾಂತಿಕಾರಿ ನನ್ನನ್ನು ಅವರ ಆಂದೋಲನದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದ. ಸ್ವದೇಶದ ವಿಮೋಚನೆಗಾಗಿ ಸಶಸ್ತ್ರ ಹೋರಾಟ ನಡೆಸುವುದು ಅಂದೋಲನದ ಧ್ಯೇಯವಾಗಿತ್ತು. ನಾನೂ ಆಹ್ವಾನವನ್ನು ಒಪ್ಪಿಕೊಂಡೆ. ಕ್ಯೂಬಾಗೆ ಹಿಂದಿರುಗುವ ಯುವಕರ ದೈಹಿಕ ಸಾಮಥ್ರ್ಯವನ್ನು ಕಾಪಾಡಲು ಬದ್ಧನಾಗಿದ್ದ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ವೈದ್ಯಕೀಯ ವೃತ್ತಿಯ ಮಿಥ್ಯೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಗರದ ಹೊರವಲಯದ ಜಾನುವಾರು ಕ್ಷೇತ್ರದಲ್ಲಿದ್ದುದರಿಂದ ಮನೆಗೂ ಹೋಗಿರಲಿಲ್ಲ. ಜುಲೈ 21 ರಂದು ಫಿಡೆಲ್ ಮತ್ತು ಆತನ ಸಂಗಾತಿಗಳನ್ನು ಬಂಧಿಸಲಾಯಿತು. ನಮ್ಮ ವಿಳಾಸವೂ ಫಿಡೆಲ್ ಮನೆಯಲ್ಲಿದ್ದುದರಿಂದ ನಮ್ಮನ್ನು ಸುತ್ತುವರಿಯಲಾಯಿತು. ಮೆಕ್ಸಿಕನ್-ರಷ್ಯನ್ ಸಾಂಸ್ಕøತಿಕ ವಿನಿಮಯ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ರಷ್ಯಾದ ವಿದ್ಯಾರ್ಥಿ ಎಂದು ನನ್ನನ್ನು ಗುರುತಿಸುವ ದಾಖಲೆ ಇದ್ದುದರಿಂದ, ಸಂಘಟನೆಯೊಡನೆ ನನ್ನ ಸಂಪರ್ಕವಿದೆ ಎಂದು ದೃಢವಾಗಿ ನಂಬಲಾಯಿತು. ಅಪ್ಪನ ಸ್ನೇಹಿತರು ವಿಷಯವನ್ನು ಮಾಧ್ಯಮಗಳ ಮೂಲಕ ಟಾಂಟಾಂ ಮಾಡಿದರು.
ಇದು ಗತಿಸಿದ ಘಟನೆಗಳ ಸಂಕ್ಷಿಪ್ತ ವರದಿ. ನಂತರದ ಅವಧಿಯನ್ನು ಎರಡು ಭಾಗಗಳಲ್ಲಿ ವಿಂಗಡಿಸಬಹುದು. ಮಧ್ಯಕಾಲಿಕ ಮತ್ತು ತತ್ಕ್ಷಣದ್ದು. ಮಧ್ಯಕಾಲಿಕ ಅವಧಿಯಲ್ಲಿ ಹೇಳುವುದಾದರೆ ಅದು ಕ್ಯೂಬಾದ ವಿಮೋಚನೆಗೆ ಸಂಬಂಧಿಸಿದ್ದು. ನಾನು ಕ್ಯೂಬಾದ ವಿಮೋಚನೆಯಿಂದ ಉತ್ತೇಜಿತನಾಗಿ ವಿಜಯೋತ್ಸಾಹವನ್ನೂ ಆಚರಿಸುವುದಿಲ್ಲ ಅಥವಾ ಅಲ್ಲಿಯೇ ಸಾಯುವುದೂ ಇಲ್ಲ.  ತತ್ಕ್ಷಣದ ಅವಧಿಯನ್ನು ಕುರಿತು ನಾನೇನೂ ಹೇಳಲಾರೆ. ಏಕೆಂದರೆ ನನಗೆ ಭವಿಷ್ಯದಲ್ಲಿ ಏನಾಗುವುದೆಂದು ಹೇಳಲಾಗುವುದಿಲ್ಲ. ನಾನು ನ್ಯಾಯಾಧೀಶರ ಕೈವಶವಾಗಿದ್ದೇನೆ. ನಾನು ಬೇರೊಂದು ರಾಷ್ಟ್ರದಲ್ಲಿ ಆಶ್ರಯ ಪಡೆಯಲಾಗದೆ ಹೋದಲ್ಲಿ ನನ್ನನ್ನು ಸುಲಭವಾಗಿ ಅರ್ಜೆಂಟೈನಾಗೆ ರವಾನಿಸಬಹುದು. ಹಾಗಾದಲ್ಲಿ ಅದು ನನಗೆ ರಾಜಕೀಯವಾಗಿ ಅನುಕೂಲಕರವೇ.
ಏನೇ ಆಗಲಿ, ಜೈಲಿನಲ್ಲೇ ಇರಲಿ ಅಥವಾ ಬಿಡುಗಡೆ ಹೊಂದಲಿ ನಾನು ನನ್ನ ವಿಧಿಯೊಡನೆ ಭೇಟಿಯಾಗುವುದು ನಿಶ್ಚಿತ ..
ನ್ಯಾಯೋಚಿತವಲ್ಲದ ಬಂಧನಗಳ ವಿರುದ್ಧ ಮತ್ತು ನಮ್ಮ ಸಂಗಾತಿಗಳಿಗೆ ಅನಗತ್ಯ ಚಿತ್ರಹಿಂಸೆ ನೀಡುತ್ತಿರುವುದರ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದರಲ್ಲಿದ್ದೇವೆ. ನಮ್ಮ ಗುಂಪಿನ ಆತ್ಮ ವಿಶ್ವಾಸ ಉಚ್ಛ್ರಾಯ ಮಟ್ಟದಲ್ಲಿದೆ.
ಯಾವುದೇ ಕಾರಣದಿಂದ (ನಾನು ಭಾವಿಸುವಂತೆ ಹಾಗಾಗುವುದಿಲ್ಲ) ನಾನು ಮತ್ತೊಮ್ಮೆ ಪತ್ರ ಬರೆಯಲಾಗದಿದ್ದರೆ ಮತ್ತು ದುರದೃಷ್ಟವಶಾತ್ ಸೋಲುವುದಾದರೆ  ನನ್ನ ಕೆಳಗಿನ ಸಾಲುಗಳನ್ನೇ, ಬಡಾಯಿ ಎನ್ನಲಾಗದಿದ್ದರೂ ಬದ್ಧತೆಯಿಂದ ಹೇಳಲಾದ ಅಂತಿಮ ಬೀಳ್ಕೊಡುಗೆಯ ಮಾತುಗಳೆಂದು ಭಾವಿಸಿರಿ - ನಾನು ನನ್ನ ಜೀವನದಲ್ಲಿ ಸತ್ಯವನ್ನರಸುತ್ತಾ ಅನೇಕ ಸಂಕಷ್ಟಗಳ ಹಾದಿಯಲ್ಲಿ ಕ್ರಮಿಸಿದ್ದೇನೆ, ಈಗ ನನಗೆ ನನ್ನ ಮಾರ್ಗ ಲಭಿಸಿದ್ದು ನನ್ನ ಹಾದಿಯನ್ನೇ ಅನುಸರಿಸುವ ಮಗಳನ್ನೂ ಪಡೆದಿದ್ದೇನೆ. ನಾನು ನನ್ನ ಬಾಳಚಕ್ರವನ್ನು ಸಂಪೂರ್ಣ ಕಂಡಿದ್ದೇನೆ. ಕ್ಷಣದಿಂದ ನಾನು ನನ್ನ ಸಾವನ್ನು ಜಿಗುಪ್ಸೆಯಿಂದ ಕಾಣುವುದಿಲ್ಲ. ಹಿಂಕೆಟ್ನಂತೆನನ್ನ ಅಪೂರ್ಣ ಗಾನದ ವಿಷಾದವನ್ನು ನನ್ನ ಅಂತ್ಯದ ಸಮಾಧಿಯವರೆಗೂ ಕೊಂಡೊಯ್ಯುತ್ತೇನೆ. ’ ”

ಚೆ ಅವರನ್ನು ಅರ್ಜೆಂಟೈನಾಗೆ ಗಡೀಪಾರು ಮಾಡಲಿಲ್ಲ. ಮತ್ತಾವುದೇ ಲ್ಯಾಟಿನ್ ಅಮೆರಿಕಾ ದೇಶದಲ್ಲಿ ಆಶ್ರಯ ಪಡೆಯುವ ಸಂಭವವೂ ಬರಲಿಲ್ಲ. ಬದಲಾಗಿ ಚೆ ಗ್ರಾನ್ಮಾ ಯುದ್ಧ ಹಡಗಿನಲ್ಲಿ ನಮ್ಮೊಡನೆ ದಂಡಯಾತ್ರೆಯಲ್ಲಿ ಭಾಗಿಯಾಗಿ, 1956 ಡಿಸೆಂಬರ್ 2ರಂದು ಓರಿಯೆಂಟ್ ಪ್ರಾಂತ್ಯದ ಬೆಲಿಕ್ ಎಂಬ ಪ್ರದೇಶಕ್ಕೆ ಬಂದಿಳಿದರು. 5ನೆಯ ತಾರೀಖಿನಂದು ನಡೆದ ಪ್ರಥಮ ಸಂಘರ್ಷದಲ್ಲಿ ಚೆ ಗಾಯಗೊಂಡಿದ್ದರು. ಸಂಜೆ ಸಂಘರ್ಷದಿಂದ ಹಿನ್ನಡೆಯುವ ಸಂದರ್ಭದಲ್ಲಿ, ಚೆ ಅವರೇ ಹೇಳುವಂತೆ, ತಮ್ಮ ಔಷಧಿಗಳ ಪೆಟ್ಟಿಗೆಯನ್ನು ಕೊಂಡೊಯ್ಯುವ ಬದಲು ಬುಲೆಟ್ಗಳಿದ್ದ ಪೆಟ್ಟಿಗೆಯನ್ನು ಒಯ್ದಿದ್ದರು. ಘಟನೆ ಚೆ ಅವರನ್ನು ಒಬ್ಬ ಗೆರಿಲ್ಲಾ ಹೋರಾಟಗಾರನಾಗಿ ರೂಪುಗೊಳ್ಳಲು ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು. ಸಿಯೆರ್ರಾ ಮೇಸ್ಟ್ರಾ ಗುಡ್ಡಗಳಲ್ಲಿ ಅಡಗಿದ್ದ ಆರಂಭದ ಬಂಡಾಯ ಸೇನೆಯಲ್ಲಿ ಉನ್ನತ ಮೇಜರ್ ಸ್ಥಾನ ಪಡೆದ ಪ್ರಥಮ ವ್ಯಕ್ತಿ ಚೆ ಅವರೇ ಆಗಿದ್ದರು. ಒಂದು ತುಕಡಿಯನ್ನು ನಿರ್ವಹಿಸುತ್ತಿದ್ದ ಚೆ ಅವರ ಹೆಸರು ಕ್ಯೂಬಾದ ವಿಮೋಚನಾ ಹೋರಾಟದ ಮುಂದಿನ ಎರಡು ವರ್ಷಗಳ ಕಾಲ ನಿರಂತರವಾಗಿ ಕೇಳಿಬರುತ್ತಿತ್ತು.

ಒಬ್ಬ ಗೆರಿಲ್ಲಾ ನಾಯಕರಾಗಿ ಮತ್ತು ಹೋರಾಟಗಾರನಾಗಿ ಚೆ ಅವರಲ್ಲಿ ಫಿಡೆಲ್ ಎಷ್ಟು ವಿಶ್ವಾಸ ಇರಿಸಿದ್ದರೆಂದರೆ ಸಿಯೆರ್ರಾದಲ್ಲಿ ನಡೆದ ಅತ್ಯಂತ ಮಹತ್ತರ ಸಂಘರ್ಷದಲ್ಲಿ, ಸಿಯೆರ್ರಾ ಮೇಸ್ಟ್ರಾದಲ್ಲಿದ್ದ ಬಂಡಾಯ ಸೇನೆಯ ಪ್ರಥಮ ತುಕಡಿಯ ಮೇಲೆ ವಿರೋಧಿ ಸೈನ್ಯವು 1958ರಲ್ಲಿ ಹಠಾತ್ ಆಕ್ರಮಣ ನಡೆಸಿದಾಗ, ಫಿಡೆಲ್ ಚೆ ಅವರಿಗೆ ಎರಡು ಬಹು ಮುಖ್ಯವಾದ ಜವಾಬ್ದಾರಿಯುತ ಕಾರ್ಯಾಚರಣೆಯನ್ನು ವಹಿಸಿದ್ದರು. ಮೊದಲನೆಯದು ಬಂಡಾಯ ಸೇನೆ ನೆಲೆಸಿದ್ದ ಪ್ರಾಂತ್ಯದಲ್ಲಿ ಕ್ರಾಂತಿಕಾರಿ ಯುವಕರ ಪಡೆಯನ್ನು ಸಂಘಟಿಸಲು ತರಬೇತಿ ನೀಡುವುದು ಮತ್ತು ಎರಡನೆಯದು ವಿರೋಧಿ ಸೈನ್ಯವನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಪಶ್ಚಿಮ ಭಾಗದಲ್ಲಿ ರಕ್ಷಣಾ ದಳದ ನೇತೃತ್ವ ವಹಿಸುವುದು. ಮತ್ತೊಮ್ಮೆ ಚೆ ಅವರು ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿ ಫಿಡೆಲ್ ಅವರ ವಿಶ್ವಾಸವನ್ನು ಸಾರ್ಥಕಗೊಳಿಸಿದ್ದರು. ವಿರೋಧಿ ಸೇನೆಯ ಆಕ್ರಮಣವನ್ನು ಹಿಮ್ಮೆಟ್ಟಿಸಿದ ನಂತರ ಸಮರವನ್ನು ನಗರದ ಇತರ ಭಾಗಗಳಿಗೂ ವಿಸ್ತರಿಸುವ ಸನ್ನಿವೇಶ ಸೃಷ್ಟಿಯಾದ ನಂತರ, ಫಿಡೆಲ್ ಅವರು ಕ್ಯೂಬಾ ದ್ವೀಪದ ಕೇಂದ್ರ ಸ್ಥಾನದೆಡೆಗೆ ಹೊರಡಲು ಸಿದ್ಧವಾಗಿದ್ದ ಎರಡು ಗೆರಿಲ್ಲಾ ಪಡೆಗಳಲ್ಲಿ ಒಂದರÀ ಮುಖ್ಯಸ್ಥನನ್ನಾಗಿ ಚೆ ಅವರನ್ನು ನೇಮಿಸಿದ್ದರು. 1958 ಪ್ರಾರಂಭಿಕ ಅವಧಿಯಲ್ಲಿ ಗೆರಿಲ್ಲಾ ಪಡೆಗಳ ಯಶಸ್ವಿ ಕಾರ್ಯಾಚರಣೆ ಮಿಲಿಟರಿ ಪಡೆಗಳ ಸೋಲು ಮತ್ತು ಕ್ರಾಂತಿಯ ಯಶಸ್ಸಿಗೆ ಮಹತ್ತರವಾದ ಕೊಡುಗೆ ನೀಡಿತ್ತು.

1959 ಜನವರಿ 1 ಗೆಲುವಿನ ನಂತರ ಅನೇಕ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಚೆ ನಮ್ಮ ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಹಾದಿಯಲ್ಲಿ ತಮ್ಮೆಲ್ಲಾ ಶಕ್ತಿ ಸಾಮಥ್ರ್ಯವನ್ನೂ ವ್ಯಯಿಸಿದ್ದರು. ಆರು ವರ್ಷಗಳ ಕಾಲ, 1964ರವರೆಗೆ ನಮ್ಮ ಸಮಾಜದ ಮನ್ವಂತರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕ್ಯೂಬಾದ ಸಮಾಜವನ್ನು ಅಭಿವೃದ್ಧಿಹೀನ ನವವಸಾಹತು ಬಂಡವಾಳಶಾಹಿ ವ್ಯವಸ್ಥೆಯಿಂದ ಸಮಾಜವಾದಿ ಹಾದಿಯೆಡೆಗೆ ಮುನ್ನಡೆಸುವ ದಿಕ್ಕಿನಲ್ಲಿ ಚೆ ಹಲವಾರು ಮಹತ್ತರ ಕೊಡುಗೆ ನೀಡಿದ್ದರು. ತೃತೀಯ ವಿಶ್ವದ ಬಡಜನತೆಯ ವಕ್ತಾರರಾಗಿ ಫಿಡೆಲ್ಗೆ ಚೆ ಉತ್ತಮ ಒಡನಾಡಿಯಾಗಿದ್ದರು.

ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದ ಚೆ 1967 ಅಕ್ಟೋಬರ್ನಲ್ಲಿ ಬೊಲಿವಿಯಾದಲ್ಲಿ ತಮ್ಮ ಅಂತಿಮ ಉಸಿರೆಳೆದಾಗ ಅವರ ವಯಸ್ಸು ಕೇವಲ 39 ವರ್ಷ. ಚೆ ಅವರ ಸಾವಿನಿಂದ ವಿಶ್ವದ ಕ್ರಾಂತಿಕಾರಿ ಚಳುವಳಿಗಳಿಗೆ ಉಂಟಾಗಿರುವ ನಷ್ಟವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಭವಿಷ್ಯದ ಕಮ್ಯುನಿಸ್ಟ್ ಸಮಾಜದ ನಿರ್ಮಾಣದಲ್ಲಿ ನವ ಮಾನವ ಸಮಾಜವಾಗಿ ಕ್ಯೂಬನ್ನರನ್ನು ಪ್ರಸ್ತುತಪಡಿಸುವಲ್ಲಿ ಚೆ ಪ್ರಮುಖ ಪಾತ್ರ ವಹಿಸಿದ್ದರು. ಜುಲಿಯೋ ಅಂಟೋನಿಯೋ ಮೆಲ್ಲಾ ಮತ್ತು ಕ್ಯಾಮಿಲೋ ಸೆನ್ಫ್ಯುಗಸ್ ಅವರ ಜೊತೆಗೂಡಿ ಚೆ ನಮ್ಮ ದೇಶದ ಯುವ ಜನತೆಯ ಸಂಕೇತವಾಗಿ ನಿಲ್ಲುತ್ತಾರೆ. ಹಾಗಾಗಿಯೇ ನಮ್ಮ ಮಕ್ಕಳ ಸಂಘಟನೆಯ ಪ್ರತಿಜ್ಞಾ ವಿಧಿಯಲ್ಲಿನಾವು ಚೆ ಅವರಂತಾಗುತ್ತೇವೆಎಂಬ ಘೋಷಣೆಯನ್ನು ಅಳವಡಿಸಲಾಗಿದೆ. ಮಾನ್ಯತೆಯನ್ನು ಪಡೆದವರು ಚೆ ಮಾತ್ರ ಎನ್ನುವುದು ಹೆಗ್ಗಳಿಕೆಯ ಅಂಶ.
ಎಲ್ಲಾ ಕಾರಣಗಳಿಗಾಗಿ ನಾವು ಚೆ ಅವರನ್ನು ಕುರಿತ ಎಲ್ಲಾ ವಿಷಯಗಳನ್ನೂ ಜನತೆಗೆ ತಿಳಿಸುವ ಅಗತ್ಯ ಇದೆ. ನಿಟ್ಟಿನಲ್ಲಿ ಚೆ ಜೀವನ ಘಟನಾವಳಿಗಳು ಫಿಡೆಲ್ಕ್ಯಾಸ್ಟ್ರೋ ನೆನಪಿನಿಂದ  ಕೃತಿಯು ಸಮಕಾಲೀನ ಕ್ರಾಂತಿಕಾರಿ ಬರಹಗಳಿಗೆ ಮಹತ್ತರವಾದ ಕೊಡುಗೆ ನೀಡುತ್ತದೆ. ದೃಢ ವಿಶ್ವಾಸದಿಂದಲೇ ನಾನು ಆಂಗ್ಲ ಭಾಷೆಯ ಓದುಗರಿಗಾಗಿ ಕೃತಿಗೆ ಮುನ್ನುಡಿಯನ್ನು ಬರೆಯಲು ಪ್ರೇರೇಪಿಸಿದೆ.
1987ರಲ್ಲಿ ಕ್ಯೂಬಾದ ಜೋಸ್ ಮಾರ್ಟಿ ಭಾಷಾ ಪ್ರಕಾಶನ ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಡೇವಿಡ್ ಡಚ್ಮನ್ ಒಟ್ಟಾಗಿ ಸೇರಿ ಚೆ ಗುವಾರ ಮತ್ತು ಕ್ಯೂಬಾದ ಕ್ರಾಂತಿ ಎಂಬ ಕೃತಿಯನ್ನು ಪ್ರಕಟಿಸಿದ್ದರು. ಈಗ ಚೆ ಜೀವನ ಘಟನಾವಳಿಗಳು ಫಿಡೆಲ್ಕ್ಯಾಸ್ಟ್ರೋ ನೆನಪಿನಿಂದ  ಎಂಬ ಪೂರಕ ಕೃತಿಯನ್ನು ಪ್ರಕಟಿಸುತ್ತಿದೆ.
ಚೆ ಅವರ ಜೀವನವನ್ನು  ಮತ್ತು ಕ್ಯೂಬಾದಲ್ಲಿನ ಅವರ ಆಕರ್ಷಕ ರಾಜಕೀಯ ಅನುಭವಗಳನ್ನು ತಿಳಿದುಕೊಳ್ಳುವ ಉದ್ದೇಶ ಹೊಂದಿರುವ ಪ್ರತಿಯೊಬ್ಬರಿಗೂ ಪ್ರಸ್ತುತ ಕೃತಿ ಒಂದು ಪ್ರಮುಖ ಉಲ್ಲೇಖನೀಯ ಗ್ರಂಥವಾಗುವುದೆಂಬ ದೃಢ ವಿಶ್ವಾಸ ನನಗಿದೆ. ಕೃತಿಯು ಮುಖ್ಯವಾಗಿ ಚೆ ಅವರಿಗೆ ಸಂಬಂಧಿಸಿದಂತೆ ನೀಡಿದ ಭಾಷಣಗಳು, ಬರೆದ ಲೇಖನಗಳು, ನೀಡಿದ ಸಂದರ್ಶನಗಳ ಸಂಗ್ರಹವಾಗಿದೆ. ಅರ್ನೆಸ್ಟೋ ಗುವಾರ ಡಿ ಲಾ ಸೆರ್ನ ಅವರನ್ನು ಪರಾಮರ್ಶಿಸಲು ಫಿಡೆಲ್ ಅವರಿಗಿಂತಲೂ ಹೆಚ್ಚು ಸಮರ್ಥ ವ್ಯಕ್ತಿ ಬೇರಾರೂ ಇರಲಾರರು. ಫಿಡೆಲ್ ಅವರ ಅಧಿಕಾರಯುತ ಸ್ನೇಹಮಯ ಸಾಮಥ್ರ್ಯವನ್ನು ಚೆ ಗುವಾರ 1965 ಏಪ್ರಿಲ್ನಲ್ಲಿ ಬರೆದ ತಮ್ಮ ಬೀಳ್ಕೊಡುಗೆ ಪತ್ರದಲ್ಲಿ, ಫಿಡೆಲ್ ಅವರೊಡಗಿನ ಬಾಂಧವ್ಯ ಮತ್ತು ಅನನ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ :-

ನನ್ನ ಗತಜೀವನವನ್ನು ನೆನಪಿಸಿಕೊಳ್ಳುವಾಗ, ಕ್ರಾಂತಿಯ ಉದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಸಾಕಷ್ಟು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ನನ್ನ  ಕಾರ್ಯ ನಿರ್ವಹಿಸಿರುವುದನ್ನು ಪ್ರಮಾಣೀಕರಿಸುತ್ತೇನೆ. ನನ್ನ ಒಂದೇ ಒಂದು ವೈಫಲ್ಯವೆಂದರೆ ಸಿಯೆರ್ರಾ ಮೇಸ್ಟ್ರಾದಲ್ಲಿದ್ದಾಗ ಪ್ರಾರಂಭಿಕ ಹಂತದಿಂದಲೇ ನಾನು ನಿಮ್ಮ ಸಂಪೂರ್ಣ ವಿಶ್ವಾಸ ಗಳಿಸಲಾಗದಿದ್ದುದು. ಮತ್ತು ನಿಮ್ಮೊಳಗಿನ ಓರ್ವ ಕ್ರಾಂತಿಕಾರಿಯ, ನಾಯಕತ್ವದ ಗುಣ ಲಕ್ಷಣಗಳನ್ನು ಶೀಘ್ರವಾಗಿ ಅರಿಯದೆ ಹೋದದ್ದು.
ನಾನು ಉಜ್ವಲವಾದ ದಿನಗಳನ್ನು ಕಳೆದಿದ್ದೇನೆ. ನಿಮ್ಮ ಸಾಂಗತ್ಯದಲ್ಲಿದ್ದ ಸಂದರ್ಭದಲ್ಲಿ ಸಂಭವಿಸಿದ ಕ್ಯಾರಿಬಿಯನ್ ಕ್ಷಿಪಣಿ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನನ್ನ ದೇಶದ ಜನರೊಡನೆ ಬೆರೆತಿದ್ದ ಹೆಮ್ಮೆ ನನಗಿದೆ. ದಿನಗಳಲ್ಲಿ ನಿಮ್ಮನ್ನು ಮೀರಿದ ಒಬ್ಬ ರಾಜತಂತ್ರಜ್ಞನನ್ನು ಕಾಣುವುದು ಅಸಾಧ್ಯವೇ ಆಗಿತ್ತು. ನಾನು ಯಾವುದೇ ಅನಿಶ್ಚಿತತೆ ಇಲ್ಲದೆ ನಿಮ್ಮನ್ನು ಹಿಂಬಾಲಿಸಿದ್ದನ್ನು, ನಿಮ್ಮ ಆಲೋಚನಾ ಲಹರಿಯೊಂದಿಗೆ ಗುರುತಿಸಿಕೊಂಡಿದ್ದನ್ನು, ಅಪಾಯಗಳನ್ನು, ತತ್ವಗಳನ್ನು ನಿಮ್ಮಂತೆಯೇ ಗ್ರಹಿಸಿದ್ದುದನ್ನು ಹೆಮ್ಮೆಯಿಂದ ನೆನೆಯುತ್ತೇನೆ.
ನನ್ನ ಪ್ರಾಮಾಣಿಕ ಪ್ರಯತ್ನಗಳು ಅನ್ಯ ದೇಶಗಳಲ್ಲಿ ಅವಶ್ಯವಾಗಿ ಬೇಕಾಗಿದೆ. ಕ್ಯೂಬಾ ದೇಶಕ್ಕೆ ನಾಯಕತ್ವ  ನೀಡುವ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ಹೊಣೆಗಾರಿಕೆಯನ್ನು ನೀವು ಹೊರಲಾರಿರಿ, ಆದರೆ ನಾನು ಕೆಲಸ ಮಾಡಬಲ್ಲೆ. ಹಾಗಾಗಿ ನಾವಿಬ್ಬರೂ ಪರಸ್ಪರ ದೂರವಾಗುವ ಕಾಲ ಸನ್ನಿಹಿತವಾಗಿದೆ.

ಪತ್ರದ ಸಾರಾಂಶವನ್ನು ಕೆಲವು ಸಮಯದ ನಂತರ ಸಾರ್ವಜನಿಕವಾಗಿ ಬಹಿರಂಗಪಡಿಸಲಾಯಿತು.  ನಮ್ಮ ಕ್ರಾಂತಿಯ ವಿರೋಧಿಗಳು ವಿಶ್ವದಾದ್ಯಂತ ಹರಡಿದ್ದ, ಚೆ ಮತ್ತು ಫಿಡೆಲ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ, ಇಬ್ಬರ ನಡುವೆ ಜಗಳವಾಗಿದೆ, ಹಾಗಾಗಿಯೇ  ಪರಸ್ಪರ ದೂರ ಸರಿದಿದ್ದಾರೆ, ಚೆ ಕ್ಯೂಬಾ ತೊರೆದಿದ್ದಾರೆ, ಎಂಬ ಮಿಥ್ಯಾರೋಪವನ್ನು ತೊಡೆದುಹಾಕುವಲ್ಲಿ ಪತ್ರ ಸಫಲವಾಗಿದೆ. ಅಮೆರಿಕದ ಸಾಮ್ರಾಜ್ಯಶಾಹಿ ಮತ್ತು ಮಿತ್ರ ರಾಷ್ಟ್ರಗಳ ಕೈಗೊಂಡ ಅನೇಕ ಮಿಥ್ಯಾ ಪ್ರಚಾರಗಳು ಕಳೆದ ಮೂವತ್ತು ವರ್ಷಗಳಲ್ಲಿ ಕ್ಯೂಬಾದ ಕ್ರಾಂತಿಯನ್ನು ವಿಫಲಗೊಳಿಸುವ ದುರುದ್ದೇಶದಿಂದ ನಡೆಯುತ್ತಿವೆ. ಆದರೆ ಮಿಥ್ಯಾರೋಪ ಹೀನಾಯ ಕೃತ್ಯವಾಗಿದ್ದು ಇತಿಹಾಸದ ಇಬ್ಬರು ಮಹಾನ್ ಕ್ರಾಂತಿಕಾರಿ ಗೆಳೆಯರ ಸ್ನೇಹಕ್ಕೆ ಮಸಿ ಬಳಿಯಲು ಯತ್ನಿಸಿದೆ.

ಇಬ್ಬರು ಮಹಾನ್ ವ್ಯಕ್ತಿಗಳ ನಡುವಿನ ಸಂಬಂಧಗಳ ಸೂಕ್ಷ್ಮತೆಗಳನ್ನು ಸವಿಸ್ತಾರವಾಗಿ, ವಿವರಣಾತ್ಮಕವಾಗಿ ಪ್ರಸ್ತುತಪಡಿಸುವ ಚೆ ಜೀವನ ಘಟನಾವಳಿಗಳು ಫಿಡೆಲ್ಕ್ಯಾಸ್ಟ್ರೋ ನೆನಪಿನಿಂದ  ಕೃತಿ ಕಾರಣಕ್ಕಾಗಿಯೇ ಮಿಥ್ಯಾರೋಪಗಳಿಗೆ ಚರಮಗೀತೆ ಹಾಡುತ್ತದೆ. ಅಷ್ಟೇ ಅಲ್ಲದೆ ಚೆ ಅವರನ್ನು ವಿಶ್ಲೇಷಿಸಿ, ಪರಾಮರ್ಶಿಸುವ, ಅವರ ಮಾನವೀಯ ಪ್ರಜ್ಞೆಯನ್ನು ಹೊರಗೆಡಹುವ ಒಂದು ಸಮಗ್ರ ಸಂಪೂರ್ಣ ಕೃತಿ ಇದಾಗಿದೆ. ಚೆ ಓರ್ವ ಕ್ರಾಂತಿಕಾರಿಯಾಗಿ, ದೃಢ ವಿಶ್ವಾಸ ಹೊಂದಿದ್ದ ಕ್ರಾಂತಿಕಾರಿ ಯೋಧನಾಗಿ ಏಕೆ ಒಂದು ಸಂಕೇತವಾಗಿ ಹೊಮ್ಮುತ್ತಾರೆ ಎಂದು ತಿಳಿಸುವಲ್ಲಿ ಕೃತಿ ಸಫಲವಾಗಿದೆ. ಮಾನವೀಯತೆಯ ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೋರಾಟದಲ್ಲಿ ತೊಡಗುವ ಪ್ರತಿಯೊಬ್ಬರಿಗೂ ಕೃತಿ ಚೆ ಅವರನ್ನು ಕ್ರಾಂತಿಯ ಸಂಕೇತವನ್ನಾಗಿ ಪ್ರಸ್ತುತಪಡಿಸುತ್ತದೆ.
ಹವಾನಾ, ಮೇ 1989                                                           ಜೀಸಸ್ ಮಾಂಟೇನ್ ಓರೋಪೆಸ್.

No comments:

Post a Comment