Oct 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

Oct 29, 2014

P. Sainath: 100 days of Namo and Sycophant media.



Sainath P
ಪಿ. ಸಾಯಿನಾಥ್

P.Sainath
Its barely a couple of weeks ago since the media and the elite celebrated hundred days of the Modi government in power. I want to speak about the media, because at this point the media are an embarrassment not only to themselves but to Mr Modi’s public relation officers who must be feeling insecure about their jobs! You know, so since the media are doing so much better, the sycophantic projection, that PR firm which he had hired, I don’t think there contract need be renewed. The first hundred days, you know we had that tamasha over the first hundred days, I ask myself this question whether its Mr Modi or whether it is Mr Dr Manmohan singh or whoever, what about, what happens in those hundred days typically in rural area. 

Oct 27, 2014

ಮಾಧ್ಯಮ ಮತ್ತು ಜನಸಾಮಾನ್ಯ

media and common man
Dr Ashok K R


ಭಾರತದ ಮಕ್ಕಳ ಏಳಿಗೆಗಾಗಿ, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರ ವಿರುದ್ಧ ಅವಿರತ ಹೋರಾಟ ಮಾಡಿದ ಕೈಲಾಶ್ ಸತ್ಯಾರ್ಥಿ ಎನ್ನುವವರಿಗೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಹಿಯ ಜೊತೆಗೆ ಜಂಟಿಯಾಗಿ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಘೋಷಣೆಯಾಯಿತು. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದ ನೋಬಲ್ ಪ್ರಶಸ್ತಿ ಸಂತಸ ನೀಡುವುದರ ಜೊತೆಜೊತೆಗೆ “ಯಾರಿದು ಕೈಲಾಶ್ ಸತ್ಯಾರ್ಥಿ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಬಹುಶಃ ಕೈಲಾಶ್ ಸತ್ಯಾರ್ಥಿಯ ಸಂಘಟನೆಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇನ್ಯಾರಿಗೂ ಅವರ ಹೆಸರಾಗಲೀ ಅವರ ಕೆಲಸ ಕಾರ್ಯಗಳಾಗಲೀ ತಿಳಿದೇ ಇರಲಿಲ್ಲ. ನೋಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆಯೂ ಅವರ ಬಗ್ಗೆಯೇ ಮಾತು, ಅವರ ಬಗ್ಗೆಯೇ ಚರ್ಚೆ. ದೂರದೂರಿನವರಿಗಿರಲಿ ಅವರು ಕೆಲಸ ಮಾಡುತ್ತಿದ್ದ ರಾಜ್ಯದ ಹೆಚ್ಚಿನ ಜನರಿಗೂ ಅವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲವಂತೆ. ಎಲೆಮರೆಕಾಯಿಯಂತೆ ಅವರು ಕೆಲಸ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳಬಹುದಾದರೂ ಜನಸಾಮಾನ್ಯರಿಗೆ ಜನಸಾಮಾನ್ಯರ ಮಧ್ಯೆಯೇ ಇದ್ದು ಅತ್ಯುತ್ತಮವೆನ್ನಿಸುವಂತಹ ಕೆಲಸ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿಯವರನ್ನು ನೋಬೆಲ್ ಬರುವುದಕ್ಕೆ ಮುಂಚೆಯೇ ಪರಿಚಯಿಸುವ ಕೆಲಸ ಮಾಧ್ಯಮದ್ದಾಗಿತ್ತಲ್ಲವೇ? ಒಬ್ಬ ವ್ಯಕ್ತಿ ಆತನ ಕೆಲಸಗಳು ನಮ್ಮ ಮಾಧ್ಯಮದಲ್ಲಿ ಬರುವುದಕ್ಕೂ ವಿದೇಶಿ ಪ್ರಶಸ್ತಿಯೊಂದು ಅವರಿಗೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಾದರೂ ಯಾಕೆ?

Oct 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

Oct 23, 2014

ಫ್ಯಾಕ್ಟರಿ ಹಾಲು!

Muufri
ಹಾಲು ಫ್ಯಾಕ್ಟರಿ!
ದೂರದ ಅಮೆರಿಕಾದಲ್ಲಿ ಭಾರತೀಯ ಮೂಲದವರಾದ ರಿಯಾನ್ ಪಾಂಡೆ, ಪೆರುಮಾಲ್ ಗಾಂಧಿ ಮತ್ತು ಇಶಾ ದತಾರ್ ಸೇರಿಕೊಂಡು ಹಾಲಿನ ಫ್ಯಾಕ್ಟರಿ ತಯಾರಿಸುವ ಉತ್ಸಾಹದಲ್ಲಿದ್ದಾರೆ. Genetically engineered ಹಸುಗಳನ್ನು ಚಿಕ್ಕ ಜಾಗದಲ್ಲಿ ಗುಡ್ಡೆ ಹಾಕಿಕೊಂಡು ಹಾಲು ಉತ್ಪಾದಿಸುವ ಫ್ಯಾಕ್ಟರಿ ಎಲ್ಲೆಡೆಯೂ ಇರುವಾಗ ಈ ಹಾಲಿನ ಫ್ಯಾಕ್ಟರಿಯ ವಿಶೇಷವೇನೆಂದರೆ ಇಲ್ಲಿ ಹಸುಗಳೊಂದೂ ಇರುವುದಿಲ್ಲ! ಬೇರೆ ಪ್ರಾಣಿಯೂ ಇರುವುದಿಲ್ಲ ಎಂಬುದನ್ನು ನೆನಪಿಡಿ! ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿರುವ ಮುಫ್ರಿ ತಂಡದ ಪ್ರಯತ್ನವಿದು!
Also Read
ಹಿಂಗೂ ಇರುತ್ತೆ!

Oct 22, 2014

ಅಂಬೇಡ್ಕರ್ ವಾದಿಯ ಕಣ್ಣಲ್ಲಿ ಬಾಬಾಸಾಹೇಬ್

ladai prakashana
ಬಿ. ಶ್ರೀಪಾದ್ ಭಾವಾನುವಾದ ಮಾಡಿರುವ ನಾಮದೇವ ನಿಮ್ಗಾಡೆ ಬರೆದಿರುವ "ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ" ಪುಸ್ತಕದ ಬಗ್ಗೆ ಡಾ.ಎಚ್.ಎಸ್. ಅನುಪಮರವರ ಬರಹ. ಲಡಾಯಿ ಪ್ರಕಾಶನದಿಂದ ಮುದ್ರಣ ಕಂಡಿರುವ ಪುಸ್ತಕ ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.



 ಮಧ್ಯಪ್ರದೇಶದ ಸಾತಗಾಂವ್ ಎಂಬ ಹಳ್ಳಿಯ ಮಹಾರ್ ಕೇರಿಯಲ್ಲಿ 1920ನೇ ಇಸವಿಯ `ಮಳೆಗಾಲದ ಯಾವುದೋ ಒಂದು ದಿನ ಹುಟ್ಟಿದ ನಾಮದೇವನೆಂಬ ಹುಡುಗನೊಬ್ಬ, ತನ್ನ 14ನೇ ವರ್ಷಕ್ಕೆ ಶಾಲೆ ಸೇರಿ ಓದಿ, ಪದವೀಧರನಾಗಿ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಿ, ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ನಾಮದೇವ್ ನಿಮ್ಗಾಡೆಯಾಗಿ ಬೆಳೆದ ಕತೆಯೇ, `ಇನ್ ಟೈಗರ್ಸ್ ಶಾಡೋ.’
ಉಳಿದ ದಲಿತ ಆತ್ಮಕಥೆಗಳಲ್ಲಿರುವಂತೆಯೇ ಇಲ್ಲೂ ನಿಮ್ಗಾಡೆ ತಾವು ಎದುರಿಸಿದ ಅಸ್ಪೃಶ್ಯತೆಯ ಅವಮಾನ, ಜಾತೀಯತೆಯ ಕ್ರೌರ್ಯಗಳು, ಮಾನವೀಯ ಅನುಕಂಪದ ಸಹಾಯಗಳು ಇವನ್ನೆಲ್ಲ ನೆನೆದು ದಾಖಲಿಸುತ್ತಲೇ, ಅಂಬೇಡ್ಕರ್ ಅವರ ವ್ಯಕ್ತಿತ್ವ-ವೈಯುಕ್ತಿಕ ಜೀವನದ ಬಗೆಗೊಂದು ಆಪ್ತ ಮತ್ತು ಖಾಸಾ ಆದ ಫಸ್ಟ್ಹ್ಯಾಂಡ್ ನೋಟವೊಂದನ್ನು ಕೊಟ್ಟಿದ್ದಾರೆ. ಕಳೆದ ಶತಮಾನದ 40-50 ದಶಕವು ನಮ್ಮ ದೇಶದ ಮಟ್ಟಿಗೆ ಮಹಾಸಂಕ್ರಮಣದ ಕಾಲ. ದಿನಗಳಲ್ಲಿ ಅಂಬೇಡ್ಕರರೊಡನೆ ಹತ್ತಿರದಿಂದ ಒಡನಾಡಿದ ನಾಮದೇವ ನಿಮ್ಗಾಡೆ, ತಮ್ಮ ಗುರು-ಸ್ಪೂರ್ತಿ-ಸಲಹಾಕಾರ-ಆಪದ್ಭಾಂಧವ ಎಲ್ಲವೂ ಆಗಿದ್ದ ಬಾಬಾಸಾಹೇಬ್ ಅವರನ್ನು ಹೆಜ್ಜೆಹೆಜ್ಜೆಗೂ ನೆನಪಿಸಿಕೊಂಡಿದ್ದಾರೆ. ತಮ್ಮ ಯಶಸ್ಸಿನ ರೂವಾರಿ ಅವರೇ ಎಂದು ಹುಲಿ ನಡೆದ ಜಾಡಿನಲ್ಲಿ ನಡೆಯುತ್ತಾರೆ.
ಪುಸ್ತಕದ ಬಗೆಗೆ ಹೆಚ್ಚು ಬರೆಯುವುದಕ್ಕಿಂತ ಅದರ ಇಣುಕುನೋಟವನ್ನು ಕೊಡುವುದು ಸೂಕ್ತ. ಅದರಲ್ಲೂ ಮತ್ತೆಮತ್ತೆ ಬರುವ ಅಂಬೇಡ್ಕರ್ ಕುರಿತಾದ ಘಟನೆಗಳ ಸಾರಸಂಗ್ರಹ ಇಲ್ಲಿದೆ..

'ಹುಲಿಯ ನೆರಳಿನೊಳಗೆ' ಪುಸ್ತಕದ ಮುನ್ನುಡಿಯಿಂದ



namadeva nimgade
ನಂ 2 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ 'ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ' ಪುಸ್ತಕಕ್ಕೆ ಅಪ್ಪಗೆರೆ ಸೋಮಶೇಖರ್ ಬರೆದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ. 
ಆತ್ಮಕಥೆಯಲ್ಲೊಂದು ಅಂಬೇಡ್ಕರ್ ಕಥೆ

 ದೆಹಲಿಯ ನವಯಾನ ಪ್ರಕಾಶನ ಪ್ರಕಟಿಸಿರುವ In The Tiger’s Shadow : The Autobiography of An Ambedkariteಪ್ರಖ್ಯಾತ ವಿಜ್ಞಾನಿಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ. ಮಹತ್ವದ ಆತ್ಮಕಥೆಯನ್ನುಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ. ಶ್ರೀಪಾದ ಭಟ್ ಅವರು ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಭಾರತೀಯ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ ಹಲವು ಪ್ರಮುಖ ದಲಿತ ಆತ್ಮಕಥೆಗಳು ಕನ್ನಡ ಪ್ರಜ್ಞೆ ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿವೆ. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ದಲಿತ ಆತ್ಮಕಥೆಗಳನ್ನು ಕುರಿತ ಜಿಜ್ಞಾಸೆಗೆ ಭಿನ್ನ ಆಯಾಮವನ್ನು ಒದಗಿಸಿಕೊಟ್ಟಿವೆ. ಅವುಗಳಲ್ಲಿ ಲಕ್ಷ್ಮಣ ಗಾಯಕವಾಡರಉಚಲ್ಯಾ; ಮಾದವಿ ದೇಸಾಯಿ ಅವರಕುಣಿಯೇ ಘುಮ(ಕನ್ನಡಕ್ಕೆ-ಚಂದ್ರಕಾಂತ ಪೋಕಳೆ); ಶರಣಕುಮಾರ ಲಿಂಬಾಳೆ ಅವರಅಕ್ರಮ ಸಂತಾನ; ದಾದಾ ಸಾಹೇಬ್ ಮಲ್ಲಾರಿ ಮೋರೆ ಅವರಗಬಾಳ(ಕನ್ನಡಕ್ಕೆ-ದು. ನಿಂ. ಬೆಳಗಲಿ); ಎಸ್. ಕೆ. ಥೊರಟ್ ಅವರಬಾಲ್ಯದಿಂದ ಪ್ರಾಯಕ್ಕೆ(ಕನ್ನಡಕ್ಕೆ-ನಗರಗೆರೆ ರಮೇಶ್, ಗಂಗಾಧರಮೂರ್ತಿ); ನರೇಂದ್ರಜಾದವ್ ಅವರಬಹಿಷ್ಕø(ಕನ್ನಡಕ್ಕೆ-ಸುಮಾಧ್ವಾರಕನಾಥ್); ಭಗವಾನ್ ದಾಸ್ ಅವರಭಂಗಿಜನ ಕಥಾ(ಕನ್ನಡಕ್ಕೆ-ಕೆ. ನಾರಾಯಣಸ್ವಾಮಿ); ಭೀಮರಾವ್ ಗಸ್ತಿ ಅವರವಾಲ್ಮೀಕಿ(ಕನ್ನಡಕ್ಕೆ-ಸರಜೂ ಕಾಟ್ಕರ್); ಭಾಮ ಅವರಕರುಕ್ಕು(ಕನ್ನಡಕ್ಕೆ-ಎಸ್. ಪ್ಲೋಮಿನ್ದಾಸ್); ದಯಾ ಪವಾರ ಅವರಬಲುತ(ಕನ್ನಡಕ್ಕೆ-ಪ್ರೊ. ಚಂದ್ರಕಾಂತ ಪೋಕಳೆ) ; ಬೇಬಿ ಹಾಲ್ದಾರ್ ಅವರನೋವು ತುಂಬಿದ ಬದುಕು(ಕನ್ನಡಕ್ಕೆ-ಜಿ. ಕುಮಾರಪ್ಪ)–ಮುಂತಾದವು ಪ್ರಮುಖ ಆತ್ಮಕಥಗಳಾಗಿವೆ. ಪರಂಪರೆಗೆ ಹೊಸ ಸೇರ್ಪಡೆ ಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ.

ಮೋಟಾರ್ ಸೈಕಲ್ ಡೈರಿ - ಅನುವಾದಕರ ಮಾತು



(ನವೆಂಬರ್ ಎರಡರಂದು ಬಿಡುಗಡೆಗೊಳ್ಳುತ್ತಿರುವ ಲಡಾಯಿ ಪ್ರಕಾಶನ ಹೊರತಂದಿರುವ ಚೆಗೆವಾರನ ಮೋಟಾರ್ ಸೈಕಲ್ ಡೈರಿಗೆ ಅನುವಾದಕಿ ಡಾ.ಎಚ್.ಎಸ್ ಅನುಪಮ ಬರೆದಿರುವ ಸಾಲುಗಳು ಹಿಂಗ್ಯಾಕೆಯ ಓದುಗರಿಗಾಗಿ)

ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ
ಕವಿಯ ಮನಸು, ಕ್ರಾಂತಿಯ ಕನಸು..
ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶದ ಬಿಡುಗಡೆಗಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವೊಪ್ಪಿಸಿದ ವಿಶ್ವಮಾನವ: ಬದುಕಿದ ಕೇವಲ 39 ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲೂ ನಿರಂತರ ಬೆಳೆಯುತ್ತಲಿರುವ ಮಗು..
ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಚೆ - ಕ್ರಾಂತಿಯ ಸಹಜೀವನ ಪುಸ್ತಕದ ಮುನ್ನುಡಿಯಿಂದ



che guevera kannada book
(ಡೇವಿಡ್ ಡಚ್ ಮನ್ ಸಂಪಾದಿಸಿರುವ ಚೆ - ಕ್ರಾಂತಿಯ ಸಹಜೀವನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ನಾ.ದಿವಾಕರ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ ನಂ.2ರಂದು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ)
ಜೀಸಸ್ ಮಾಂಟೇನ್ ಒರೋಪೆಸ್
ಕ್ಯೂಬಾದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದ್ದುದರಿಂದ ಗಡೀಪಾರು ಆಗಿ ಜುಲೈ 7, 1955 ಗುರುವಾರ ಹವಾನಾದಿಂದ ಮೆಕ್ಸಿಕೋಗೆ ತೆರಳುವ ಮುನ್ನ ಫಿಡೆಲ್ ಕ್ಯಾಸ್ಟ್ರೋ ಚೆ ಅವರನ್ನು ಭೇಟಿಯಾಗಿದ್ದರು.
ಜುಲೈ 26, 1953 ಮೊಂಕಾಡ ರಕ್ಷಣಾ ದಳದ ಮೇಲಿನ ದಾಳಿ ಪ್ರಜಾ ಸಶಸ್ತ್ರ ದಂಗೆಯನ್ನು ಹುಟ್ಟುಹಾಕುವ ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು. ದಾಳಿಯಲ್ಲಿ ಬದುಕುಳಿದವರನ್ನು ಪೈನ್ಸ್ ದ್ವೀಪದ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಮೇ 15, 1955 ಭಾನುವಾರದಂದು, ಬಂಧನದ 53 ದಿನಗಳ ನಂತರ ನಮ್ಮೆಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.
53 ದಿನಗಳ ಅವಧಿಯಲ್ಲಿ ಹವಾನಾದಲ್ಲೇ ಇದ್ದ ಫಿಡೆಲ್ ಸಮೂಹ ಮಾಧ್ಯಮಗಳ ಮೂಲಕ  ದಿಟ್ಟವಾಗಿ ರಾಜಕೀಯ ಸಂಘರ್ಷವನ್ನು ಜಾರಿಯಲ್ಲಿರಿಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಪಾತಕಿ ಕೃತ್ಯಗಳನ್ನು ಮತ್ತು ಮೊಂಕಾಡ, ಬಯಾರ್ಮೋ ದಾಳಿಯಲ್ಲಿ ಭಾಗಿಯಾದವರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಫಿಡೆಲ್ ಬ್ಯಾಟಿಸ್ಟಾ ಸರ್ಕಾರದ ದಮನಕಾರಿ ನೀತಿಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆಯ ವಿರುದ್ಧ ಹೋರಾಡುವವರನ್ನು ಹತ್ತಿಕ್ಕುವ, ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯನ್ನು ಸಮರ್ಥಿಸುವ, ಶಾಂತಿಯುತ ರಾಜಕೀಯ ಹೋರಾಟಗಳಿಗೆ ಅವಕಾಶವೀಯದ ಬ್ಯಾಟಿಸ್ಟಾ ಆಡಳಿತದ ವಿರುದ್ಧ ಫಿಡೆಲ್ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಕೂಡಲೇ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕ್ಯೂಬಾ ದೇಶದಲ್ಲಿ ಪ್ರಜಾತಂತ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾವು ನೀಡುತ್ತಿದ್ದ ಪ್ರಚೋದನಕಾರಿ ಹೇಳಿಕೆಗಳ ಹಿಂದೆ ಸರ್ವಾಧಿಕಾರಿ ಬ್ಯಾಟಿಸ್ಟಾನನ್ನು ಒತ್ತಾಯಿಸುವ ಉದ್ದೇಶವಿದ್ದುದನ್ನು ಕಾಣಬಹುದಿತ್ತು
Also Read

ಚೆ - ಕ್ರಾಂತಿಯ ಸಹಜೀವನ - ಪ್ರಕಾಶಕರ ನುಡಿ

che guevera kannada book
ನಂ. 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) "ಚೆ- ಕ್ರಾಂತಿಯ ಸಹಜೀವನ" ಪುಸ್ತಕಕ್ಕೆ ಲಡಾಯಿ ಪ್ರಕಾಶನದ ಬಸೂ ಬರೆದಿರುವ ಸಾಲುಗಳು.


ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ಚೆ ನನ್ನ ಸಂಗಾತಿ..

ಜೀವಮಾನವಿಡೀ ದುಡಿಯುತ್ತ ಸವೆದರೂ ಕಣ್ಣಿಂದ ನೋಡಲಾಗದ, ಕನಸಿನಲ್ಲೂ ಊಹಿಸಲಾಗದ ಸಾವಿರ ಕೋಟಿ ಎಂಬ ಧನರಾಶಿಯ ಕುರಿತು ಜನಸಾಮಾನ್ಯ ದಿಗ್ಭ್ರಮೆಗೊಳ್ಳುವಾಗಲೇ ರಟ್ಟೆ ಕಸುವಿದ್ದರಷ್ಟೇ ಹೊಟ್ಟೆ ತುಂಬುವ, ಪ್ರತಿದಿನದ ಕೂಳೂ ಅವತ್ತಿನ ಸೂರ್ಯನೊಂದಿಗೇ ಮೂಡಿಬರುವ ಅನಿವಾರ್ಯ ವಾಸ್ತವ ಅವನನ್ನು ಕಂಗೆಡಿಸುತ್ತಿದೆ. ಜಾಗತಿಕ ಬಂಡವಾಳ ಹೂಡಿಕೆದಾರರು ಫಲವತ್ತಾದ ನೆಲೆ-ನೆಲ ಅರಸಿ ವಿಶ್ವದ ಬಡದೇಶಗಳನ್ನು ಸುತ್ತಿ ಪ್ರತಿವರ್ಷ ಸಮಾವೇಶ ನಡೆಸುತ್ತಾರೆ. ಸಾವಿರಾರು ಕೋಟಿ ಬಂಡವಾಳ `ಬಡದೇಶಗಳತ್ತ ಹರಿದುಬರುತ್ತದೆ. ಹಾಗೆ ಬಂದದ್ದು ಸ್ಥಳೀಯ ಹಳ್ಳ-ತೊರೆ-ಗುಂಡಿ-ಕೆರೆಗಳಲ್ಲಿರುವುದನ್ನೆಲ್ಲ ಬಾಚಿ ಬರಿದಾಗಿಸಿ ಭೋರ್ಗರೆದು ಸಮುದ್ರದತ್ತಲೇ ಹರಿಯುತ್ತದೆ. ಮರಳುಗಾಡು, ಬರದ ನಾಡುಗಳು ಹರಿವಿನ ದೂರದ ಕನಸಿನಲ್ಲೂ ಇರುವುದಿಲ್ಲ
Also Read

ಲಡಾಯಿ ಪ್ರಕಾಶನದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದ ವಿವರ

ladai prakashana
ಬಿಡುಗಡೆ ಸಮಾರಂಭದ ವಿವರಗಳು
ಎಡಪಂಥೀಯ ವಿಚಾರಧಾರೆಯ, ದಲಿತ ಪರ, ಮಹಿಳಾ ಪರ, ಪ್ರಗತಿಪರ ಪುಸ್ತಕಗಳನ್ನು ಹೊರತರುತ್ತಿರುವ ಗದಗ ಜಿಲ್ಲೆಯ ಲಡಾಯಿ ಪ್ರಕಾಶನದ ಮೂರು ಅನುವಾದಿತ ಪುಸ್ತಕಗಳನ್ನು ನವೆಂಬರ್ ಎರಡರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಗೊಳ್ಳಲಿವೆ.
Also Read
ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ

Oct 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

Oct 18, 2014

ನಂ 1 ಸ್ಥಾನ ಸುಲಭವಾಗಿ ದಕ್ಕುವುದಿಲ್ಲ!

vijayavani kannada daily
ನಂ.1 ಆಗಲು ಹೀಗೆಲ್ಲ ಮಾಡಬೇಕೆ
Dr Ashok K R
ಕಳೆದ ಶುಕ್ರವಾರದ ವಿಜಯವಾಣಿಯ ಮುಖಪುಟದಲ್ಲಿ 'ವಿಜಯವಾಣಿ' ಪತ್ರಿಕೆ ಮೊದಲೆರಡು ಸ್ಥಾನಗಳಲ್ಲಿದ್ದ 'ವಿಜಯ ಕರ್ನಾಟಕ' ಮತ್ತು 'ಪ್ರಜಾವಾಣಿ' ಪತ್ರಿಕೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದೆ ಎಂಬ ಸುದ್ದಿ ಭರ್ತಿ ಎರಡು ಪುಟಗಳ ತುಂಬ ಪ್ರಕಟವಾಗಿದೆ. ಜನವರಿಯಿಂದ ಜೂನ್ ವರೆಗಿನ ಆಡಿಟ್ ಬ್ಯೂರೋ ಆಫ್ ಸರ್ಕುಲೇಷನ್ ಪ್ರಕಾರ ವಿಜಯವಾಣಿ ದಿನಂಪ್ರತಿ 6, 67, 879 ಪ್ರತಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಪ ಕಾಲಾವಧಿಯಲ್ಲಿಯೇ ವಿಜಯವಾಣಿ ಇಷ್ಟರಮಟ್ಟಿಗೆ ಯಶ ಸಾಧಿಸಿರುವುದು ಪ್ರಶಂಸಾರ್ಹವೇನೋ ಹೌದು. ಆದರೆ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಿಕೆಗಳು ಮಾರಾಟ ಸಂಖೈ ಹೆಚ್ಚಿಸಲು ಹಿಡಿದಿರುವ ಮಾರ್ಗಗಳನ್ನು ನೋಡಿದರೆ ಬೇಸರವುಂಟಾಗುತ್ತದೆ.
Also Read
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?

Oct 17, 2014

ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು!

raghaveshwara swamy case
ರಾಘವೇಶ್ವರ ಸ್ವಾಮಿ
Dr Ashok K R 


ಅದೊಂದು ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರ್ವೇಸಾಧಾರಣ ಎಂದೇ ಕರೆಯಬಹುದಾದ ಒಂದು ಪ್ರಕರಣ. ತಮ್ಮ ಸ್ಥಾನವನ್ನು ಬಳಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು, ಲೈಂಗಿಕ ಹಿಂಸೆಗೆ ಒಳಪಡಿಸಿಬಿಟ್ಟರು ಎಂಬ ದೂರು ಪೋಲೀಸರನ್ನು ತಲುಪುತ್ತದೆ. ದೂರನ್ನು ಸ್ವೀಕರಿಸಿಕೊಂಡ ಪೋಲೀಸರು ಯಾವ ರೀತಿ ಕಾರ್ಯನಿರ್ವಹಿಸಬೇಕು? ನ್ಯಾಯಾಲಯ ಯಾವ ರೀತಿ ಕೆಲಸ ಮಾಡಬೇಕು? ಸಮಾಜದ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ದೂರು ಸ್ವೀಕರಿಸಿಕೊಂಡ ಪೋಲೀಸರು ಆಪಾದಿತನನ್ನು ವಿಚಾರಿಸಿ ಅಗತ್ಯವಿದ್ದರೆ ಬಂಧಿಸಿ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ನ್ಯಾಯಾಲಯ ಅಪರಾಧದ ಹಿಂದು ಮುಂದನ್ನು ಪರಿವೀಕ್ಷಿಸಿ ಆಪಾದಿತನಿಗೆ ಜಾಮೀನು ಕೊಡಬಹುದು ಅಥವಾ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತೆನ್ನಿಸಿದರೆ ಮತ್ತಷ್ಟು ವಿಚಾರಣೆಗೆ ಅನುಮತಿ ನೀಡಬೇಕು. ಒಂದು ಗುರುತರ ಆರೋಪಕ್ಕೊಳಗಾಗಿರುವ ವ್ಯಕ್ತಿಯನ್ನು ಸಮಾಜ ಆರೋಪ ಸಾಬೀತಾಗುವವರೆಗೂ ಅಪರಾಧಿಯನ್ನಾಗಿ ಮಾಡುವ ಅವಶ್ಯಕತೆಯಿರದಿದ್ದರೂ ಒಂದು ಪುಟ್ಟ ಅನುಮಾನದ ದೃಷ್ಟಿಯಿಂದಲಾದರೂ ನೋಡಬೇಕು. ನಂತರದ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದು ಸತ್ಯಾಸತ್ಯತೆಗಳು ಹೊರಬರಬೇಕು. ಸಂವಿಧಾನಕ್ಕೆ ಕಾನೂನಿಗೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಕರಣಗಳ ವಿಚಾರಣೆಗಳೂ ಇದೇ ರೀತಿ ನಡೆಯಬೇಕಲ್ಲವೇ? ಕ್ಷಮಿಸಿ ಈ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚು ಸಮಾನರು.

Also Read
ಧರ್ಮ ಮರೆತ ನಾಡಿನಲ್ಲಿ

Oct 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

Oct 15, 2014

ಡಿ.ಎಸ್.ಎಲ್.ಆರ್ ಕ್ಯಾಮೆರಾ ಖರೀದಿಸುವ ಮುನ್ನ

fast vs slow shutter speed
Understanding shutter speed
Dr Ashok K R
ಸುಳ್ಯದ ಪರಿಸರದಿಂದ ಉತ್ತೇಜಿತನಾಗಿ ‘ದೊಡ್ಡ’ ಕ್ಯಾಮೆರಾ ಖರೀದಿಸಬೇಕೆಂದು ನಿರ್ಧರಿಸಿದೆ. ಒಂದಷ್ಟು ಪರಿಚಯದ ಫೋಟೋಗ್ರಾಫರುಗಳನ್ನು ಕೇಳಿದಾಗ ಬಹುತೇಕರು ‘ನಿಕಾನ್’ ಎಂದರು. ಇಂಟರ್ನೆಟ್ ಯುಗದಲ್ಲಿ ಜನರನ್ನು ಕೇಳಿ ತಿಳಿದು ಸುಮ್ಮನಿರಲಾದೀತೇ! ಸರಿ ಗೂಗಲ್ಲಿನಲ್ಲಿ ‘Best DSLR for beginners’ ಎಂದು ಟೈಪಿಸಿ ಗೂಗಲ್ ಹರವಿದ ಲಕ್ಷಾಂತರ ಪುಟಗಳಲ್ಲಿ ಒಂದಷ್ಟನ್ನು ತೆರೆತೆರೆದು ಓದುವುದಾರಂಭವಾಯಿತು. ನಿಕಾನ್ ಮತ್ತು ಕೆನಾನ್ ಮಧ್ಯೆ ಜೋರು ಯುದ್ಧವೇ ನಡೆದಿತ್ತು. ಹದಿನೈದು ದಿನದ ಓದಿನ ನಂತರವೂ ಯಾವ ಕ್ಯಾಮೆರಾ ಖರೀದಿಸಬೇಕೆಂದು ತೀರ್ಮಾನಿಸಲಾಗಲಿಲ್ಲ. ಹದಿನೈದು ದಿನದ ಓದಿನಿಂದ ಕ್ಯಾಮೆರಾಗಳ ಬಗೆಗಿನ ತಾಂತ್ರಿಕ ವಿವರಗಳ ಬಗ್ಗೆ ಸ್ವಲ್ಪ ತಿಳಿದಂತಾಗಿ ನನಗೆ ಗೊತ್ತಿಲ್ಲದ ಫೋಟೋಗ್ರಫಿಯ ಮೂಲಭೂತ ಅಂಶಗಳೇ ಅಧಿಕವಾಗಿದೆ ಎಂಬುದರಿವಾಯಿತು! ಸದ್ಯಕ್ಕೆ ನಿಕಾನೂ ಬೇಡ, ಕೆನಾನೂ ಬೇಡ ಎಂದು ನಿರ್ಧರಿಸಿ ಅಷ್ಟರವರೆಗೆ ಜೊತೆಗಿದ್ದ ಸೋನಿ DSC S930 ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾ ಕೈಗೆತ್ತಿಕೊಂಡೆ.
Also Read
Flash "ಬ್ಯಾಕ್"

Oct 14, 2014

ಟಿ.ಕೆ.ತ್ಯಾಗರಾಜ: ಭಾವಭಿತ್ತಿಯ ಚಿತ್ರಗಳು ಕಥಾ ಸಂಕಲನ

hingyake
ಮುಖಪುಟ
ಟಿ.ಕೆ.ತ್ಯಾಗರಾಜರ ಹತ್ತು ಕಥೆಗಳ ಸಂಕಲನ "ಭಾವಭಿತ್ತಿಯ ಚಿತ್ರಗಳು" ಇದೇ ಶುಕ್ರವಾರ (17/10/2014) ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನಲ್ಲಿ ಸಂಜೆ ಐದೂ ಮೂವತ್ತಕ್ಕೆ ಬಿಡುಗಡೆಯಾಗಲಿದೆ.
ಕರಿಯಪ್ಪನ ಆರ್ತಧ್ಯಾನದ ಪರಿಣಾಮವು ಎಂಬ ಕಥೆಯ ಒಂದು ಪುಟ್ಟ ಭಾಗ ಹಿಂಗ್ಯಾಕೆ ಓದುಗರಿಗಾಗಿ
hingyake
ಪುಸ್ತಕ ಬಿಡುಗಡೆಯ ವಿವರ
ಹೀಗೆ ಒಂದು ಹುಣ್ಣಿಮೆಯ ಸಂಜೆ ಇಡೀ ಗ್ರಾಮವೇ ಕಲ್ಲುಬೆಟ್ಟದ ಬಳಿ ಜಮಾಯಿಸಿದ್ದಾಗ ಅಲ್ಲಿಗೆ ಹೋದ ಪೆಮಾಗೆ ಅಚ್ಚರಿ ಕಾದಿತ್ತು. ತನಗೆ ಒಂದು ದಿನ ಕೊಯ್ಲೆ ಮೀನಿನ ಸಾರು ಮತ್ತು ರೊಟ್ಟಿ ತಂದು ಕೊಟ್ಟಿದ್ದ ಕರಿಯಪ್ಪ ಕರಟವಾದನದಲ್ಲಿ ತನ್ಮಯನಾಗಿದ್ದ. ಮಾಸೂರು ಕಲ್ಲಣ್ಣ ಮೈಮರೆತು ಹಾಡುತ್ತಿದ್ದರು. ಅದು ಪೆಮಾ ಪಾಲಿಗೆ ಮರೆಯಲಾಗದ ಸಂಜೆ. ಯಾವುದೇ ಪ್ರಶಸ್ತಿಯ ಭಾರವಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ, ಯಾವುದೇ ಮಹತ್ವಾಕಾಂಕ್ಷೆಯೂ ಇಲ್ಲದೆ ತಮ್ಮ ಪಾಡಿಗೆ ತಾವು ತಮ್ಮದೇ ಖುಷಿಗೆ ಜಾನಪದ ಸಿರಿಯನ್ನು ಮೈತುಂಬಿಕೊಳ್ಳುತ್ತಿದ್ದ ಪರಿಯನ್ನು ಕಂಡು ಪೆಮಾ ನಿಬ್ಬೆರಗಾದಳು. ಅಪ್ಪಟ ಪ್ರತಿಭೆಯ ಕರಿಯಪ್ಪ ಕೇವಲ ರುಚಿರುಚಿಯಾದ ಅಡುಗೆಯನ್ನಷ್ಟೇ ಮಾಡುತ್ತಿರಲಿಲ್ಲ, ಆ ಗ್ರಾಮದಲ್ಲಿ ಆತನೊಬ್ಬ ಫೇಮಸ್ ಕ್ಷೌರಿಕನಷ್ಟೇ ಅಲ್ಲ, ಆತನ ಪುಟ್ಟ ಗುಡಿಸಲಲ್ಲೂ ಎಂಥ ಅಪೂರ್ವ ಕಲೆಯ ಸಂಪತ್ತಿದೆ ಎಂಬುದನ್ನು ಪೆಮಾ ಮನಗಂಡಳು. ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವವರಲ್ಲಿ ಮಾತ್ರವಲ್ಲದೇ ಪ್ರತಿಭೆ ಇರುವ ವ್ಯಕ್ತಿಗಳಲ್ಲೂ ಸೌಂದರ್ಯ ಇದೆ ಎಂಬ ಸತ್ಯ ಅವಳ ಅರಿವಿಗೆ ಬಂತು. ಹಾಗೆ ನೋಡಿದರೆ ಕರಿಯಪ್ಪನ ನಿಜವಾದ ಹೆಸರು ಕದಿರಪ್ಪ. ಕಪ್ಪಗಿದ್ದುದರಿಂದ ಎಲ್ಲರೂ ಕರಿಯಪ್ಪ, ಕರಿಯಪ್ಪ ಎಂದು ಕರೆಯುತ್ತಾ ಅದೇ ಅಧಿಕೃತ ಹೆಸರಾಗಿಬಿಟ್ಟಿತ್ತು.
Also Read
ಓದಿನರಮನೆ

 

Oct 13, 2014

ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ - ವೀರಣ್ಣ ಮಡಿವಾಳರ ಖಂಡಕಾವ್ಯ ಬಿಡುಗಡೆ ಸಮಾರಂಭ

veeranna madiwala
ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ
ವೀರಣ್ಣ ಮಡಿವಾಳರು ಬರೆದಿರುವ ಖಂಡಕಾವ್ಯ "ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ" ಚಾನೂ ಪ್ರಕಾಶನ, ಗಾವಡ್ಯಾನವಾಡಿಯ ವತಿಯಿಂದ ಪ್ರಕಟವಾಗಿದೆ. ಇದೇ ಭಾನುವಾರ ದಿನಾಂಕ 19/10/2014ರಂದು ಬೆಂಗಳೂರಿನ ಕರ್ನಾಟಕ ಅಕಾಡೆಮಿಯ ಚಾವಡಿಯಲ್ಲಿ ಬೆಳಿಗ್ಗೆ ಹತ್ತಕ್ಕೆ ಲೋಕಾರ್ಪಣೆಯಾಗಲಿದೆ. ಖಂಡಕಾವ್ಯದ ಪುಟ್ಟ ಭಾಗ "ಹಿಂಗ್ಯಾಕೆ" ಓದುಗರಿಗೆ.
                                           
ಸಮಯಾಸಮಯಗಳ ಸಂಗಮದಲ್ಲಿ ಋತುಬಳಗ ದಿಕ್ಕಾಪಾಲು
ಚೈತ್ರ ವಸಂತ ಹಾಡಿದ್ದೆಲ್ಲ ಚರಮಗೀತೆ
ನೋವ ಅಳೆಯುವ ಮಾಪು ಇನ್ನೂ ಬಂದಿಲ್ಲ
ಕಳಂಕ ಮಮತೆ ಗಳೆಲ್ಲ ಅದಲು ಬದಲು
ಎಲ್ಲದಕ್ಕೂ ಇಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ
ಮೋಡ ನುಡಿದ ಮೌನ ಸದ್ದಿದು
ಬರೆದವನ ಬಡಬಡಿಕೆಯಲ್ಲ
ಕೋಗಿಲೆಯ ಒಡಲೊಳಗೆ ಉಳಿದ ಪದವಿದು
ನಂಬಿಕೆಯ ರಿಯಾಯಿತಿ ಬೇಡುವುದಿಲ್ಲ
ಸಕಲ ಜೀವದ ಕಣ್ಣಹನಿಯ ಸ್ವಗತ
ತೋರಿ ತಾಕುವ ತಾಕತ್ತು ಯಾವುದರಲ್ಲೂ ಇಲ್ಲ