ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ |
ಯುಗಾದಿ ಹಬ್ಬದ ದಿನದಂದು ಜನನಿಬಿಡ ಕೆ.ಜಿ ರಸ್ತೆಯಲ್ಲಿನ ಮುಹೂರ್ತ ಸಮಾರಂಭ ನೆರವೇರಿಸಿದ್ದ, ಜನರನ್ನು ತಲುಪಲು ಹೊಸ ವರುಷದ ಮುನ್ನಾದಿನದಂದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿದ್ದ ಆರಂಭ – The Last Chance ಚಿತ್ರತಂಡವು ಈಗ ಸಂಪೂರ್ಣ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಿನ ಕೊನೆಯ ಹಂತದಲ್ಲಿದೆ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನೂ ವಿಭಿನ್ನವಾಗಿ ಆಯೋಜಿಸಿದೆ ಚಿತ್ರತಂಡ.
ಒಳ್ಳೆಯ
ಕಾರ್ಯಗಳಿಗೆ ಮುಂಚೆ ವಿಘ್ನನಿವಾರಕ ಗಣೇಶನನ್ನು ಪೂಜಿಸುವುದು ಸಂಪ್ರದಾಯ. ಧ್ವನಿಸುರುಳಿ ಬಿಡುಗಡೆಯನ್ನು
ವಿಘ್ನನಿವಾರಕನ ಸನ್ನಿಧಿಯಲ್ಲಿ ನೆರವೇರಿಸಿ ಚಿತ್ರ ಬಿಡುಗಡೆಗೆ ಅಣಿಯಾಗುವುದು ಚಿತ್ರತಂಡದ ಉದ್ದೇಶ.
ಒಂದೇ ಸ್ಥಳದಲ್ಲಿ ಬಿಡುಗಡೆಗೊಳಿಸುವ ಸಂಪ್ರದಾಯಕ್ಕೆ ತಿಲಾಂಜಲಿಯಿತ್ತು ಗಣೇಶನನ್ನು ಪ್ರತಿಷ್ಟಾಪಿಸಿರುವ
ರಾಜ್ಯದ ಹಲವೆಡೆ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸುವ ಉದ್ದೇಶವಿದೆ ಎಂದು ತಿಳಿಸಿದ್ದು ಚಿತ್ರದ
ನಿರ್ದೇಶಕ ಎಸ್. ಅಭಿ ಹನಕೆರೆ. ಯಾವುದೇ ಜಿಲ್ಲೆಯ ಯಾವುದೇ ಊರಿನವರಾದರೂ ಗಣೇಶೋತ್ಸವ ನಡೆಸುವ ಸ್ಥಳಕ್ಕೆ
ಚಿತ್ರತಂಡವನ್ನು ಧ್ವನಿಸುರುಳಿ ಬಿಡುಗಡೆಗೊಳಿಸುವುದಕ್ಕಾಗಿ ಆಹ್ವಾನಿಸಿದರೆ ಅತಿಥಿಗಳೊಂದಿಗೆ ಆ ಊರಿಗೆ
ತೆರಳಿ ಸಮಾರಂಭ ನಡೆಸುವುದಾಗಿ ಚಿತ್ರತಂಡ ತಿಳಿಸಿದೆ.
ಮೊದಲನೆಯದಾಗಿ ಸೆಪ್ಟೆಂಬರ್ ಮೂರರಂದು ಮಧುಗಿರಿಯಲ್ಲಿ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯಲಿದೆ. ಸಮಾರಂಭಕ್ಕೆ ಸಂಗೀತ
ನಿರ್ದೇಶಕ ಗುರುಕಿರಣ್ ಆಗಮಿಸಲಿದ್ದು ಅತಿಥಿಯಾಗಿ ಖ್ಯಾತ ನಟ ಶ್ರೀನಗರ ಕಿಟ್ಟಿ ಆಗಮಿಸಲಿದ್ದಾರೆ.
ನಿರ್ದೇಶಕರು, ಗುರುಕಿರಣ್, ವಿ.ಮನೋಹರ್, ಗೊಟೂರಿ, ಕವಿರಾಜ್ ರಚಿಸಿರುವ ಸಾಹಿತ್ಯಕ್ಕೆ ಧ್ವನಿಯಾಗಿರುವವರು
ಮಾಲ್ಗುಡಿ ಶುಭಾ, ಮುರಳಿ ಮೋಹನ್, ಗುರುರಾಜ್ ಹೊಸ್ಕೋಟೆ, ಗುರುಕಿರಣ್. ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ
ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸುತ್ತಿರುವ ಆರಂಭ ಚಿತ್ರದ ಹಾಡುಗಳು ಎಲ್ಲಾ
ವಯೋಮಾನದವರಿಗೂ ಪ್ರಿಯವಾಗುತ್ತದೆ ಮತ್ತು ಚಿತ್ರದ ವಿಶಿಷ್ಟತೆ ಮುಹೂರ್ತ, ಪ್ರಚಾರಕ್ಕೆ ಸೀಮಿತವಾಗದೆ
ಚಿತ್ರದಲ್ಲೂ ಕಾಣಸಿಗುತ್ತದೆ ಮತ್ತದು ಪ್ರೇಕ್ಷಕರಿಗೂ ಮೆಚ್ಚುಗೆಯಾಗುತ್ತದೆ ಎಂಬ ನಿರೀಕ್ಷೆ ಚಿತ್ರತಂಡದ್ದು.
Summary - Aarambha - The Last Chance, Kannada Movie's audio release function on Septembrr 3 at Madhugiri.
Listen and download songs at www.hingyake.in
No comments:
Post a Comment