ಭಾರತೀಯರು ಬೆಚ್ಚಿ ಬೀಳುವಂತ ಸುದ್ದಿಯೊಂದು ಪಕ್ಕದ ಚೀನಾದಿಂದ ಬಂದಿದೆ! ಇಲ್ಲ ಇಲ್ಲ ಇದು ಗಡಿ ಗಲಾಟೆಯೂ ಅಲ್ಲ, ಯುದ್ಧವೂ ಅಲ್ಲ! ಚೀನ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟತೆ ಮಾಡಿ ಸುಸ್ತಾಗಿ ಕೊನೆಗೆ ಈ ಅನಗತ್ಯ ಹೆಚ್ಚುವರಿ ಧನಾಗಮನದಿಂದ ಮನಸ್ಸಾಕ್ಷಿ ಕಲಕಿದಂತಾಗಿ ಮಾಡಿದ ಅನ್ಯಾಯಗಳನ್ನೆಲ್ಲ ನೆನೆದು ಪ್ರಾಯಶ್ಚಿತದ ರೂಪದಲ್ಲಿ ಆತ್ಮಹತ್ಯೆಗೆ ಶರಣಾಗಿಲ್ಲ.
ಬದಲಾಗಿ ಅಲ್ಲಿನ ಆಡಳಿತಾರೂಢ ಕಮ್ಯುನಿಷ್ಟ್ ಪಕ್ಷ ನವೆಂಬರ್ 2012ರಿಂದ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುತ್ತಿರುವುದು ಅಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.
2012ರ ನವೆಂಬರ್ರಿನಿಂದ ಇಲ್ಲಿಯವರೆಗೆ ಒಟ್ಟು ಐನೂರಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ, ವಿಚಾರಣೆಗೊಳಪಡಿಸಿದ್ದಾರೆ. ಕಾಕತಾಳೀಯವೆಂಬಂತೆ ಇದೇ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಅಧಿಕಾರಿಗಳ ಸಂಖೈಯಲ್ಲೂ ಏರಿಕೆಯುಂಟಾಗಿದೆ. 2011ರಲ್ಲಿ 19 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2012ರಲ್ಲಿ 21 ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ. ಭ್ರಷ್ಟತೆಯ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡವರು 48 ಅಧಿಕಾರಿಗಳು. ಕಳೆದ ಜುಲೈ ತಿಂಗಳಿನಲ್ಲಿ ನಾಲ್ಕು ಮಂದಿ ಅಧಿಕಾರಿಗಳು ಜೀವತ್ಯಜಿಸಿದ್ದಾರೆ.
ಕೆಲವೊಂದು ಪ್ರಕರಣಗಳಲ್ಲಿ ವಿಚಾರಣೆಗೆ ಮತ್ತು ಶಿಕ್ಷೆಗೆ ಹೆದರಿ ಸಾವನ್ನಪ್ಪಿದ್ದರೆ ಇನ್ನು ಕೆಲವುಗಳಲ್ಲಿ ತಮ್ಮ ಮೇಲಿನ ಭ್ರಷ್ಟ ಅಧಿಕಾರಿಗಳ ಒತ್ತಡಕ್ಕೆ ಸಿಲುಕಿ ಪ್ರಾಣ ತ್ಯಜಿಸಿದ್ದಾರೆ. ಒಟ್ಟಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮಾಡಿದ ಪಾಪದ ಭ್ರಷ್ಟಾಚಾರವೇ ಕಾರಣವಾಗಿದೆ!
ಸದ್ಯ ಚೀನದಲ್ಲಿ ಹುಟ್ಟಲಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಂಡಿದ್ದು ಮಾತ್ರ ಭಾರತದ ಭ್ರಷ್ಟ ಅಧಿಕಾರಿಗಳು!!
English Summary - Corrupt Chinese officials commit suicide as the government's anti corruption movement gains momentum. 4 officials have committed suicide in July 2014.

China nalli huttalillavalla endu bejaaru madikondiddu maatra bharathada prajegalu
ReplyDeleteಹ್ಹ ಹ್ಹ ಇರಬಹುದು!
Deleteಭಾರತದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿ ಕೊಳ್ಳ ಬೇಕಷ್ಟೇ !..
ReplyDeleteಸತ್ಯ ಮೇಡಮ್
Delete