ಒಂದು ಹಂತದ ಓದುವ ಮಟ್ಟ ಮುಟ್ಟಿದ ಮೇಲೆ ನಾವು ಲಿಯೋ ಟಾಲ್ಸ್ಟಾಯ್, ಕುವೆಂಪು, ತೇಜಸ್ವಿ, ಕಾರಂತ, ಕಂಬಾರ, ಭೈರಪ್ಪ, ಶೇಕ್ಸ್ಪಿಯರ್ ಅಂತೆಲ್ಲ ಗಂಭೀರ ಚರ್ಚೆಯನ್ನು ಮಾಡುವವರಂತೆ ನಟಿಸುತ್ತೀವಿ. ನಿಜಕ್ಕೂ ಈ ಮೇಲಿನ ಮತ್ತು ಇನ್ನೂ ಅನೇಕ ಮೇರು ಲೇಖಕರ ಪುಸ್ತಕಗಳನ್ನು ಮೊದಲು ಓದಲಾರಂಭಿಸಿಬಿಟ್ಟಿದ್ದರೆ ಖಂಡಿತವಾಗಿ ಮತ್ತೆ ಜೀವನದಲ್ಲಿ ಪುಸ್ತಕವನ್ನು ಮುಟ್ಟುತ್ತಿರಲಿಲ್ಲ! ಏನ್ ತಲೆ ತಿಂತಾರಪ್ಪ ಇವರೆಲ್ಲ ಎಂಬ ಭಾವದಿಂದ!
ಚಿಕ್ಕಂದಿನಲ್ಲಿ ಮನೆಗೆ ಬರುತ್ತಿದ್ದ ಪ್ರಜಾವಾಣಿಯ ಭಾನುವಾರದ ಸಾಪ್ತಾಹಿಕ ಪುರವಣಿ ಮತ್ತು ಸುಧಾ ವಾರಪತ್ರಿಕೆ ಮನೆಗೆ ಬಂದಾಗ ನಮ್ಮಲ್ಲಿ ಪತ್ರಿಕೆಯನ್ನು ಓದಲು ಪೈಪೋಟಿಯೇ ನಡೆಯುತ್ತಿತ್ತು. ಮೊದಲು ನೋಡುತ್ತಿದ್ದ ಅಂಕಣ "ಪುಟ್ಟಿ" "ರಾಮನ್" "ಶ್ರೀಮತಿ" ಮತ್ತು "ಫ್ಯಾಂಟಮ್". ಫ್ಯಾಂಟಮ್ ಸಾಹಸದ ಮೂಲಕ ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತಿದ್ದರೆ ಪುಟ್ಟಿ, ರಾಮನ್ ಮತ್ತು ಶ್ರೀಮತಿ ನಮ್ಮದೇ ಮನೆಯ, ನೆರೆಹೊರೆಯ ಕಥೆಗಳಾಗಿ ಓದಿನಲ್ಲಿರುವ ಸುಖವನ್ನು ನಮಗರಿವಿಲ್ಲದಂತೆಯೇ ತಿಳಿಹೇಳುತ್ತಿದ್ದವು. ಹಾಸ್ಯ, ಪೆದ್ದುತನ, ಬುದ್ಧಿವಂತಿಕೆ, ಚಾಲಾಕಿತನ, ಅರಿವಿಲ್ಲದಂತೆಯೇ ಒಂದಷ್ಟು ನೀತಿಪಾಠ ನಮ್ಮನ್ನು ತಲುಪುತ್ತಿತ್ತು.
ಪುಟ್ಟಿ, ರಾಮನ್ ಮತ್ತು ಶ್ರೀಮತಿಯ ಕೆಳಗೆ "ಪ್ರಾಣ್" ಎಂಬ ಎರಡಕ್ಷರದ ಮುದ್ರೆಯಿರುತ್ತಿತ್ತು. ಭಾರತದ ಸಾವಿರಾರು ಜನರನ್ನು ಬಾಲ್ಯದಿಂದಲೇ ಓದುವಂತೆ ಮಾಡುವಲ್ಲಿ ಪ್ರಾಣ್ ಸೃಷ್ಟಿಸಿದ ಕಾಮಿಕ್ ಗಳು ಮಹತ್ತರ ಪಾತ್ರ ವಹಿಸಿರುವುದರಲ್ಲಿ ಎರಡು ಮಾತಿಲ್ಲ. ಇಪ್ಪತ್ತು ವರುಷದ ಹಿಂದಿನ ಮಾತಷ್ಟೇ ಅಲ್ಲದೆ ಈಗಿನ ಮಕ್ಕಳೂ ಕೂಡ ಈ ಕಾರ್ಟೂನುಗಳನ್ನು ಓದುವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಅವರ ಪ್ರತಿಭೆಯ ದೈತ್ಯಶಕ್ತಿಯನ್ನು ತೋರ್ಪಡಿಸುತ್ತದೆ.
ನಮ್ಮಲ್ಲನೇಕರನ್ನು ಓದಿಗೆ ಹಚ್ಚಿದ ಕಾರ್ಟೂನಿಸ್ಟ್ ಪ್ರಾಣ್ ಕರುಳಿನ ವ್ಯಾಧಿಯಿಂದ ಬಳಲಿ ನಿನ್ನೆ ಇನ್ನಿಲ್ಲವಾಗಿದ್ದಾರೆ. ಅವರಚ್ಚಿಸಿದ ಓದಿನಭ್ಯಾಸವನ್ನು ನಮ್ಮೊಡನೆಯೇ ಬಿಟ್ಟು.....
Cartoonist Pran whose Comic characters reached lakhs of Kannadigas through 'putti' 'raman' and 'Srimathi' expired.

No comments:
Post a Comment