Jul 31, 2014
ಅತ್ಯಾಚಾರದ ಮನಸ್ಥಿತಿಯ ಸುತ್ತ
ಡಾ ಅಶೋಕ್ ಕೆ ಆರ್.
ಕಳೆದೊಂದಷ್ಟು ದಿನಗಳಿಂದ ಅತ್ಯಾಚಾರಗಳದ್ದೇ
ಸುದ್ದಿ. ಎಲ್ಲ ಸುದ್ದಿ ವಾಹಿನಿಯವರು ನಾ ಮುಂದು ತಾ ಮುಂದು ಎನ್ನುತ್ತ ಅತ್ಯಾಚಾರಗಳ ಬಗ್ಗೆ
ವರದಿಗಳನ್ನು ಮಾಡಿದ್ದಾರೆ. ಇಡೀ ಕರ್ನಾಟಕವೇ ಅತ್ಯಾಚಾರಿಗಳ ಕೂಪವಾಗಿಬಿಟ್ಟಿದೆ ಎಂಬ ಅಭಿಪ್ರಾಯ
ಮೂಡಿಸಿಬಿಟ್ಟಿವೆ. ‘ರೇಪ್ ಕ್ಯಾಪಿಟಲ್’ ‘ರೇಪಿಸ್ಟ್ ರಾಜ್ಯ’ ಎಂಬ ವಿಷೇಶಣಗಳನ್ನು ಕರ್ನಾಟಕಕ್ಕೆ
ನೀಡಿವೆ. ಹೀನಾತಿ ಹೀನ ಕೃತ್ಯಗಳು ಕರ್ನಾಟಕದಲ್ಲಿ ನಡೆದಿರುವುದು ನಿಜ, ಅದನ್ನು ಮಾಧ್ಯಮಗಳು
ಸುದ್ದಿ ಮಾಡಬೇಕಿರುವುದೂ ನಿಜ ಆದರೆ ಸುದ್ದಿ ಬಿತ್ತರಿಸುವಾಗ ಅವಶ್ಯವಾಗಿ ಇರಬೇಕಿದ್ದ ಸಂಯಮ
ಮಾಯವಾಗಿದೆ. ಕಾರ್ಯಾಂಗ ಎಂದಿನಂತೆ ತುಂಬಾ ಕ್ರಿಯಾಶೀಲವಾಗಿಯೇನೂ ಇಲ್ಲ. ಅತ್ಯಾಚಾರಗಳ ಬಗ್ಗೆ
ವರದಿಗಳು ಸರದಿಯ ಮೇಲೆ ಆಗುತ್ತಿರುವಾಗ ನ್ಯಾಯಾಂಗದ ಕಾರ್ಯನಿರ್ವಹಣೆಯ ಬಗ್ಗೆ,
ಅತ್ಯಾಚಾರಿಗಳಿಗಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ. ಶಾಸಕಾಂಗ
ಎಂದಿನಂತೆ ನಿದ್ರಾವಸ್ಥೆಯಲ್ಲಿದೆ, ದೂರದೃಷ್ಟಿ ಪರಿಹಾರಗಳನ್ನು ರೂಪಿಸಬೇಕಾದ ಶಾಸಕಾಂಗ ಇವತ್ತು
ಪ್ರತಿ ಘಟನೆಯನ್ನೂ ತಮ್ಮ ವೈಯಕ್ತಿಕ ಮತ್ತು ಪಕ್ಷದ ರಾಜಕೀಯ ಕಾರಣಕ್ಕೆ ಯಾವ ರೀತಿ
ಉಪಯೋಗವಾಗಬಲ್ಲದು ಎಂಬುದನ್ನು ಲೆಕ್ಕ ಹಾಕುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇನ್ನು
ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಸಿಗುವ ಘಟನಾವಳಿಗಳಿಗೆ ಮಾತ್ರ ಪ್ರತಿಕ್ರಯಿಸುತ್ತ ಪ್ರತಿಭಟಿಸುತ್ತ
ಸಾಗುತ್ತಿರುವ ‘ಜಾಣ ಜನರಾದ’ ನಾವಿದ್ದೀವಿ. ನಮ್ಮೆಲ್ಲರ ಮಧ್ಯೆ ಅತ್ಯಾಚಾರಕ್ಕೊಳಗಾಗುತ್ತಲೇ ಇರುವ
ಮಕ್ಕಳ, ಯುವತಿಯರ, ಮಹಿಳೆಯರ, ವೃದ್ಧರ ಆಕ್ರಂದನವಿದೆ.
Jul 30, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 34
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 33 ಓದಲು ಇಲ್ಲಿ ಕ್ಲಿಕ್ಕಿಸಿ
ಸ್ನೇಹಾಳಿಗೆ
ಬಂದಿದ್ದ ಪತ್ರವನ್ನು ಓದಿದಳು ಪೂರ್ಣಿಮಾ. ಸಿಂಚನಾ ಕೂಡ ಓದಿದಳು. ಲೋಕಿ ಹೋಗಿದ್ದೆಲ್ಲಿಗೆ ಎಂದು ಈಗ
ತಿಳಿಯಿತು. ಸ್ನೇಹ ಪೂರ್ಣಿಮಾಳ ಹೆಗಲನ್ನು ಆಸರೆಯಾಗಿಸಿಕೊಂಡು ಕುಳಿತಿದ್ದಳು. ಯಾರಿಗ್ಯಾರು ಸಮಾಧಾನಿಸಬೇಕೆಂದು
ತಿಳಿಯಲಿಲ್ಲ.
“ನಿನಗೆ ಪತ್ರ
ಯಾವಾಗ ತಲುಪಿತು ಸ್ನೇಹಾ?”
“ಈಗ ಒಂದರ್ಧ
ಘಂಟೆಯಾಯಿತು. ನಿಮಗೆ?”
Jul 28, 2014
ಪುಸ್ತಕ ನಿಷೇಧಿಸುವ 'ಘನಕಾರ್ಯ'
ಮತ್ತೊಂದು ಪುಸ್ತಕ ನಿಷೇಧಕ್ಕೊಳಗಾಗಿದೆ! ಪುಸ್ತಕ ನಿಷೇಧಿಸುವುದು ಕೂಡ ಪ್ರತಿಯೊಂದೂ ರಾಜಕೀಕರಣಗೊಳ್ಳುತ್ತಿರುವ ದಿನಗಳಲ್ಲಿ ವೋಟ್ ಬ್ಯಾಂಕ್ ಪಾಲಿಸಿಯಾಗಿಬಿಡುತ್ತಿರುವುದು ದುರಂತ. ಒಂದು ವರ್ಗದ ಜನಕ್ಕೆ, ಒಂದು ಧರ್ಮದ ಜನಕ್ಕೆ ಇಷ್ಟವಾಗದ ಅಂಶಗಳು ಪುಸ್ತಕದಲ್ಲಿವೆ ಎಂಬುದನ್ನೇ ನೆಪವಾಗಿಟ್ಟುಕೊಂಡು ಪುಸ್ತಕಗಳನ್ನು ನಿಷೇಧಿಸುತ್ತಾ ಸಾಗಿದರೆ ಕೊನೆಗೆ ಓದಲು ಯಾವೊಂದು ಪುಸ್ತಕವೂ ಇರುವುದಿಲ್ಲ.
Jul 25, 2014
ವಿಧಾನಸಭಾ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೊದಲ ಸಭೆಯಲ್ಲಿ ದೇವರಾಜ ಅರಸುರವರ ಮಾತುಗಳು.
“ನವ,
ಯುವ ಮತ್ತು ಹಿರಿಯ ಶಾಸಕರೇ, ನಿಮಗೆಲ್ಲ ಶುಭಾಶಯಗಳು. ಶ್ರೀಮತಿ ಇಂದಿರಾಗಾಂಧಿಯವರಿಗೆ ಮತ್ತು ನನ್ನ
ಕಷ್ಟಕಾಲದಲ್ಲಿ ಕೈಹಿಡಿದ ಮತದಾರ ಬಂಧುಗಳಿಗೆ ಅಂತರಂಗದ ನಮಸ್ಕಾರಗಳು. ದಿII ಕೆಂಗಲ್ ಹನುಮಂತಯ್ಯನವರು
ಕಟ್ಟಿದ ನಾಡ ಆಡಳಿತದ ಗುಡಿಗೆ ನಿಮಗೆಲ್ಲ ಸ್ವಾಗತ. ನಿಮ್ಮಲ್ಲಿ ಅನೇಕರು ಹೊಸಬರಿದ್ದೀರಿ. ಚಿಕ್ಕವರಿದ್ದೀರಿ.
ಆಡಳಿತದ ಅನುಭವದ ಬಯಕೆಗಳನ್ನು ಆಶಿಸುವವರಿದ್ದೀರಿ. ನೀವು ಮತ ಕೇಳಲು ಹೋದಾಗ ಕೆಲವರು ನಿಮ್ಮನ್ನು ವಿರೋಧಿಸಿದ್ದಾರೆ.
ನಿಮ್ಮ ಕಾರಿಗೆ ಸಗಣಿ, ಕಲ್ಲು ತೂರಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಮತದಾರ ನಿಮ್ಮನ್ನು ಆಯ್ಕೆ
ಮಾಡಿದ್ದಾನೆ.
Jul 24, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 33
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 32 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 32 ಓದಲು ಇಲ್ಲಿ ಕ್ಲಿಕ್ಕಿಸಿ
ಬಸ್ ಶ್ರೀರಂಗಪಟ್ಟಣ ದಾಟಿ
ಹಾಸನದ ಕಡೆಗೆ ಪಯಣ ಬೆಳೆಸಿತ್ತು. ‘ಎಂಥಾ ಜೀವನ ಇದು?! ಜೀವನದ ತುಂಬಾ ಅನಿಶ್ಚಿತತೆಯೇ ತುಂಬಿಕೊಂಡಿದೆಯಲ್ಲಾ.
ಒಂದು ತಿಂಗಳ ಮುಂಚೆ ಕೀರ್ತನಾ ಯಾರೆಂಬುದೂ ತಿಳಿದಿರಲಿಲ್ಲ. ಭೇಟಿಯಾಗಿದ್ದು ಎರಡೇ ಬಾರಿ. ಎರಡನೇ ಬಾರಿಯಷ್ಟೇ
ಇಬ್ಬರ ಮನಗಳೂ ತೆರೆದುಕೊಂಡಿದ್ದು. ಬರೀ ಅಷ್ಟಕ್ಕೆ ನಮ್ಮಿಬ್ಬರ ನಡುವೆ ಎಷ್ಟು ಗಾಢವಾದ ಸಂಬಂಧ ಬೆಳೆದಿದೆ.
ಈ ಸಂಬಂಧಕ್ಕೆ ಏನು ಅರ್ಥ? ಏನು ಹೆಸರು? ಎರಡು ಬಾರಿ ಭೇಟಿಯಾದವನನ್ನು ನಂಬಿ ನನ್ನ ಜೊತೆ ಬಂದಿದ್ದಾಳೆಂದರೆ
ನಮ್ಮ ಸಂಬಂಧದ ಮೇಲೆ ಆಕೆಗೆ ಎಷ್ಟು ಧೃಡ ನಂಬಿಕೆಯಿರಬೇಕು’ ಬೀಸುವ ಗಾಳಿಗೆ ಮುಖವೊಡ್ಡಿ ಕುಳಿತ ಲೋಕಿ
ಯೋಚನೆಗಳಲ್ಲಿ ಮುಳುಗಿದ್ದ. ಕೀರ್ತನಾ ಆತನ ತೊಡೆಯ ಮೇಲೆ ಮಲಗಿದ್ದಳು. ಲೋಕಿ ಯೋಚನೆಗಳಿಂದ ಹೊರಬಂದಿದ್ದು
ಕೀರ್ತನಾಳ ಕಣ್ಣೀರಹನಿಗಳು ಪ್ಯಾಂಟನ್ನು ತೋಯಿಸಿದಾಗ.
Jul 17, 2014
ಜನಪ್ರಿಯವೂ ಅಲ್ಲ ಜನಪರವೂ ಅಲ್ಲ
ಅಭಿವೃದ್ಧಿಯ ಮಾನದಂಡಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವಂತೆ
ಸರಕಾರಗಳು ಘೋಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಆಯವ್ಯಯಗಳೂ ಕೂಡ ಬದಲಾಗುತ್ತಿವೆ. ಆದರೀ ಬದಲಾವಣೆಗಳಲ್ಲಿ
ಎಷ್ಟು ನಿಜಕ್ಕೂ ಜನಪರ – ಪರಿಸರಪರ ಎಂಬುದು ಪ್ರಶ್ನಾರ್ಹ. ಲೋಕಸಭಾ ಚುನಾವಣೆಗೂ ಮುನ್ನ ಕೆಲವೇ ತಿಂಗಳುಗಳಿಗಾಗಿ
ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರಕಾರ ಆಯವ್ಯಯ ಮಂಡಿಸಿತ್ತು. ತರುವಾಯ ನಡೆದ ಚುನಾವಣೆಯಲ್ಲಿ
ಮೂವತ್ತು ವರುಷಗಳ ನಂತರ ಏಕಪಕ್ಷ ಬಹುಮತ ಪಡೆದು ಮೋದಿ ನೇತೃತ್ವದ ಸರಕಾರ ರಚನೆಯಾಯಿತು. ಕಳೆದು ಹಲವು
ವರುಷಗಳಿಂದ ಹಳಿತಪ್ಪಿದ್ದ ಆರ್ಥಿಕತೆ, ಜಾಗತಿಕ ಮತ್ತು ರಾಜಕೀಯ ನಿರ್ಧಾರಗಳಿಂದಾಗಿ ಹೆಚ್ಚುತ್ತಲೇ
ಸಾಗಿದ ಮತ್ತು ಸಾಗುತ್ತಿರುವ ಅವಶ್ಯ ವಸ್ತುಗಳ ಬೆಲೆ ಏರಿಕೆ, ಮುಕ್ತ ಮಾರುಕಟ್ಟೆ ನೀತಿಗಳನ್ನು ಒಪ್ಪಿಕೊಂಡ
ಮೇಲೆ ದೂರದ ದೇಶವೊಂದರಲ್ಲಿ ನಡೆಯುವ ಸಣ್ಣ – ದೊಡ್ಡ ಘಟನೆಗಳೂ ಕೂಡ ದೇಶದ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸುವ
ಪರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಹೊಸದಾಗಿ ಆಯ್ಕೆಯಾದ ಸರಕಾರಕ್ಕೆ. ಇನ್ನು
ಕೆಲವು ತಿಂಗಳುಗಳಿಗಾಗಿ ಆಯವ್ಯಯವನ್ನು ರೂಪಿಸಬೇಕಾದ ಜವಾಬುದಾರಿಯನ್ನು ಮೋದಿ ನೇತೃತ್ವದ ಎನ್.ಡಿ.ಎ
ಸರಕಾರ ಯಶಸ್ವಿಯಾಗಿ ನಿಭಾಯಿಸಿತೇ? ಉತ್ತರ ಸುಲಭವಲ್ಲ.
ಆದರ್ಶವೇ ಬೆನ್ನು ಹತ್ತಿ.... ಭಾಗ 32
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 31 ಓದಲು ಇಲ್ಲಿ ಕ್ಲಿಕ್ಕಿಸಿ
ಒಮ್ಮೆಯೂ ನೋಡದಿರೋ ಅಗಾಧ ಕಾಡಿನಲ್ಲಿ ನಕ್ಸಲರ ಸಂಪರ್ಕ ಸಾಧಿಸುವುದು ಹೇಗೆ? ರಸ್ತೆಯ ಯಾವುದಾದರೂ ಭಾಗದಿಂದ ಕಾಡಿನೊಳಗೇನೋ ಪ್ರವೇಶಿಸಬಹುದು. ಪರಿಚಯವೇ ಇರದ ದಟ್ಟ ಅರಣ್ಯದಲ್ಲಿ ಕಣ್ಣಿದ್ದೂ ಕುರುಡರಂತಾಗುತ್ತೇವೆಯೇ ಹೊರತು ನಕ್ಸಲರ ಸಂಪರ್ಕ ಸಾಧಿಸುವುದು ದೂರದ ಮಾತು. ಏನು ಮಾಡೋದು ಈಗ?
ಆದರ್ಶವೇ ಬೆನ್ನು ಹತ್ತಿ ಭಾಗ 31 ಓದಲು ಇಲ್ಲಿ ಕ್ಲಿಕ್ಕಿಸಿ
ಒಮ್ಮೆಯೂ ನೋಡದಿರೋ ಅಗಾಧ ಕಾಡಿನಲ್ಲಿ ನಕ್ಸಲರ ಸಂಪರ್ಕ ಸಾಧಿಸುವುದು ಹೇಗೆ? ರಸ್ತೆಯ ಯಾವುದಾದರೂ ಭಾಗದಿಂದ ಕಾಡಿನೊಳಗೇನೋ ಪ್ರವೇಶಿಸಬಹುದು. ಪರಿಚಯವೇ ಇರದ ದಟ್ಟ ಅರಣ್ಯದಲ್ಲಿ ಕಣ್ಣಿದ್ದೂ ಕುರುಡರಂತಾಗುತ್ತೇವೆಯೇ ಹೊರತು ನಕ್ಸಲರ ಸಂಪರ್ಕ ಸಾಧಿಸುವುದು ದೂರದ ಮಾತು. ಏನು ಮಾಡೋದು ಈಗ?
Jul 16, 2014
Jul 13, 2014
Jul 8, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 31
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ
“ಸಾರಿ. ಸ್ವಲ್ಪ ಹೆಚ್ಚೆನಿಸುವಷ್ಟೆ
ಭಾವುಕನಾಗಿಬಿಟ್ಟೆ” ಎಂದ. ಈಗಲೂ ಕೀರ್ತನಾಳ ಹಸ್ತವೇ ಮಾತನಾಡಿತು.
“ನನ್ನ ವಿಷಯವೇನೋ ಹೇಳಾಯ್ತು.
ನಿನ್ನ ಸಮಾಚಾರ ಹೇಳು. ರಾಜೀವ್ ದೀಕ್ಷಿತರಿಂದ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕೆಂದು ತೀರ್ಮಾನಿಸಿದೆ
ಅನ್ನೋದು ತಿಳಿಯಿತು. ಆದರೆ ನಿನಗ್ಯಾಕೆ ನಕ್ಸಲ್ ತತ್ವಗಳಲ್ಲಿ ಆಸಕ್ತಿ ಬಂತು?”