ಅರವಿಂದ್ ಕೇಜ್ರಿವಾಲ್ |
ಎಲ್ಲರಿಂದ ಬೇಸತ್ತ ಮತದಾರ ದೆಹಲಿಯಲ್ಲಿ ಹೊಚ್ಚ ಹೊಸ ಪಕ್ಷ, ಹಿಂದೆ ಮುಂದೆ ಕಂಡು ಕೇಳರಿಯದ ಪಕ್ಷ ಆಮ್ ಆದ್ಮಿ ಪಾರ್ಟಿಗೆ ವೋಟ್ ಕೊಟ್ಟು ಗೆಲ್ಲಿಸಿದ. ರೆಫರೆಂಡಮ್‌ನಲ್ಲಿ ಸರ್ಕಾರ್ ಮಾಡಿ ಅಂತ ಕೂಡ ಅಭಿಪ್ರಾಯ ಕೊಟ್ಟ. ಆದರೆ ಈ ಆಮ್ ಆದ್ಮಿ ಪಕ್ಷ 45 ದಿನಗಳ ನೌಟಂಕಿ ನಡೆಸಿ ಸರಕಾರ ಬರ್ಖಾಸ್ತು ಮಾಡಿಕೊಂಡಿತು. ದೆಹಲಿಯಲ್ಲಿ ಮಾಡಲಿಕ್ಕೆ ಸಾವಿರ ಕೆಲಸಗಳು ಬಾಕಿ ಇವೆ. ಅದೆಲ್ಲ ಬಿಟ್ಟು ಏನೇನೋ ಮಾಡಲಿಕ್ಕೆ ಹೋಗಿ ಆಪ್ ಸರಕಾರ ಇಲ್ಲವಾಯಿತು. ಈಗ ದೆಹಲಿಯ ಸ್ಥಿತಿ ಅತಂತ್ರ. ದೆಹಲಿಯಲ್ಲ್ಲಿ ಆಯ್ಕೆಯಾದ ಆಪ್ ಎಂಎಲ್ಎಗಳು ಈಗ ದೆಹಲಿ ಮರೆತು ದೇಶ ಸುತ್ತುತ್ತಿದ್ದಾರೆ. ಎಲ್ಲೆಲ್ಲೋ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಕೇಜ್ರಿವಾಲ್‌ನನ್ನು ನಾನು ಮೆಚ್ಚುತ್ತೇನೆ ಆದರೆ ಇದೇ ಕೇಜ್ರಿವಾಲ್ ಈಗ ಲೋಕಸಭೆಗೂ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದರೆ ದೆಹಲಿಯಲ್ಲಿ ಇವರನ್ನು ಗೆಲ್ಲಿಸಿದ ಮತದಾರನ ಗತಿ ಏನು? ಇದು ಒಂದು ರೀತಿಯ ಬೃಷ್ಟಾಚಾರವಲ್ಲವೆ? ಇದು ಸಾರ್ವಜನಿಕರ ದುಡ್ಡು ಪೋಲಾಗುವ ಕೆಲಸವಲ್ಲವೆ?
ಜೀವಮಾನದುದ್ದಕ್ಕೂ ಈ ವ್ಯವಸ್ಥೆ ಬಗ್ಗೆ ಒಂದೇ ಒಂದು ಮಾತು ಕೂಡ ಆಡದ, ಒಂದೇ ಒಂದು
ಅಭಿಪ್ರಾಯ ವ್ಯಕ್ತಪಡಿಸದ, ಊರ್ ಮೇಲ್ ಊರ್ ಬಿದ್ರೆ ಶಾನುಭಾಗರ ಶಾ... ಎಂತ ಹೋಯ್ತು ಎಂದು
ತಮ್ಮ ಕೆಲಸ ಮಾಡಿಕೊಂಡಿದ್ದ ಮಹಾ ಸಭ್ಯ ಸಂಸಾರಸ್ಥ ಮಹಾನುಭಾವರೆಲ್ಲ ಆಪ್ ಅಭ್ಯರ್ಥಿಗಳು.
ಹೆಚ್ಚಿನವರು ಬಹಳ ಶಿಕ್ಷಿತರು, ವೈದ್ಯರು, ಇಂಜಿನಿಯರ್‌ಗಳು, ಐಐಟಿಯನ್ನರು, ಸಿಇಒಗಳು,
ಚಿತ್ರ ನಟರು ಇತ್ಯಾದಿ ಇತ್ಯಾದಿ. ಈಗ ಈ ಜಾವೇದ್ ಜಾಫ್ರಿ ಎಂಬ ನಟ ಮತ್ತು ಡ್ಯಾನ್ಸ್
ಮಾಸ್ಟರ್, ಗುಲ್ ಪನಾಗ್ ಎಂಬ ನಟಿ ಇವರೆಲ್ಲ ಆಪ್ ಆಭ್ಯರ್ಥಿಗಳು. ಆಪ್ ಕಟ್ಟಿದ
ಕಾರ್ಯಕರ್ತರೆಲ್ಲ ಇವರಿಗೆ ಮತದಾರ ಮಾತ್ರ. ಆಮ್ ಆದ್ಮಿ ಹೆಸರಿಗೆ ಮಾತ್ರ. ಆಮ್ ಆದ್ಮಿ
ಇವರಿಗೆ ಕೇವಲ ಮತದಾರ ಮಾತ್ರ.
ಕಸಬರಿಕೆ ಚಿಹ್ನೆಯ ಈ ಪಾರ್ಟಿ ಕಸಬರಿಕೆಯಿಂದ ಕೊಳೆ ಎಲ್ಲ ಸ್ವಚ್ಛ ಮಾಡಿ ಗುಡಿಸುತ್ತೆ ಎಂದ ನಂಬಿದ್ದ ದೆಹಲಿಯ ಜನ ಇವರ ಕಸಬರಿಕೆಯಿಂದ ಕೇವಲ ಧೂಳು ಮಾತ್ರ ಏಳುತ್ತಿದೆ ವಿನಃ ಸ್ವಚ್ಛತೆ ನಡೆಯುತ್ತಿಲ್ಲ ಎಂಬುದನ್ನು ಮನಗಂಡಂತಿದೆ. ಇಂದು ಟಿವಿ ಚಾನೆಲ್‌ನಲ್ಲಿ ಮಾತನಾಡಿದ ದೆಹಲಿಯ ಅನೇಕ ಆಪ್ ಆಭಿಮಾನಿಗಳು ಅವರು ಆಪ್ ಬಗ್ಗೆ ಭ್ರಮನಿರಸನ ಹೊಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆಪ್ ಕೇವಲ ಕರಪ್ಷನ್ ಬಗ್ಗೆ ಮಾತನಾಡುತ್ತೆ. ಕೋಮುವಾದದ ಬಗ್ಗೆ ಆಪ್ ಮಾತಾಡುತ್ತಿಲ್ಲ. ಬೃಷ್ಟಾ಼ಚಾರ ವಿರೋಧಿ ಎಂದು ಹೇಳಿಕೊಳ್ಳುವ ಕೇಜ್ರಿವಾಲ್ ಖಾಸಗೀಕರಣದ ದೊಡ್ಡ ಸಮರ್ಥಕನೂ ಹೌದು.
ಬೃಷ್ಟಾಚಾರದ ಬಗ್ಗೆ ನಾನು, ನೀವು, ಅವರು ಎಲ್ಲರೂ ಮಾತನಾಡಬಹುದು. ಅದು ಸುಲಭ. ಈ ದೇಶದ ಇಂದಿನ ದೊಡ್ಡ ಶತ್ರು ಬೃಷ್ಟಾಚಾರ ಅಲ್ಲ. ಕೋಮುವಾದದ ಬಗ್ಗೆ ಮಾತನಾಡಬೇಕು, ಅದಕ್ಕೆ ಎದೆಗಾರಿಕೆ ಬೇಕು. ಈ ದೇಶದಲ್ಲಿ ಅಲ್ಪಸಂಖ್ಯಾತರು ಎರಡನೆಯ ದರ್ಜೆಯ ಮನುಷ್ಯರಾಗುತ್ತಿದ್ದಾರಲ್ಲಾ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ದಲಿತರ ಶೋಷಣೆ, ಹತ್ಯೆ, ಅವಮಾನ ಇನ್ನೂ ಮುಂದುವರಿದಿದೆಯಲ್ಲ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ಹರ್ಯಾಣ, ಪಂಜಾಬ್‌ಗಳಲ್ಲಿ ನಡೆಯುವ ಮರ್ಯಾದಾ ಹತ್ಯೆಗಳನ್ನು ವಿರೋಧಿಸಬೇಕು. ಅದಕ್ಕೆ ಎದೆಗಾರಿಕೆ ಬೇಕು. ಆದರೆ ಸ್ವತಃ ಕೇಜ್ರಿವಾಲ್ ಈ ಖಾಪ್ ಪಂಚಾಯತ್‌ಗಳ ಸಮರ್ಥಕನೂ ಹೌದು.
ಮೋದಿಯನ್ನು ನರಹಂತಕ ಎಂಬ ಕಾರಣಕ್ಕೆ ವಿರೋಧಿಸಿ ಎಂದು ಸಾರ್ವಜನಿಕವಾಗಿ ಘೋಷಿಸುವ ಸಿದ್ದರಾಮಯ್ಯ ನನಗೆ ಇಷ್ಟವಾಗುತ್ತಾರೆ. ಕೇಜ್ರಿವಾಲ್ ಬಗ್ಗೆ ಗೌರವ ಇದೆ. ಆದರೆ ಆಪ್ ಮೂಲಕ ಮಾಡುತ್ತಿರುವ ಈ ನೌಟಂಕಿ ಅವರು ನಿಲ್ಲಿಸಲೇಬೇಕು. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅರವಿಂದ ಕೇಜ್ರಿವಾಲ್ ಮತ್ತು ಆಪ್ ಬಗ್ಗೆ ಭಯಂಕರ ಎಕ್ಸೈಟ್ ಆಗಿ ಮಾತನಾಡುವವರು ಸದ್ಯಕ್ಕಂತೂ ನನಗೆ ಮೂರ್ಖರ ತರಹ ಕಾಣಿಸುತ್ತಿದ್ದಾರೆ.

No comments:
Post a Comment