Apr 29, 2014
Apr 23, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 27
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ
‘ಘಟ್ಟಗಳಲ್ಲಿ ನಕ್ಸಲ್ ಚಳುವಳಿ
ಬಲವಾಗಿ ಬೇರೂರುತ್ತಿದೆ’ ಎಂದು ಗುಪ್ತಚರರು ಸರ್ಕಾರಕ್ಕೆ ಅನೇಕ ಬಾರಿ ವರದಿ ಕಳುಹಿಸಿದ್ದರು. ಎಲ್ಲಾ
ವಿಷಯಗಳಲ್ಲೂ ನಿರ್ಲಕ್ಷ್ಯ ತೋರುವ ಸರ್ಕಾರಕ್ಕೆ ಆ ವರದಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದೆನಿಸಲೇ
ಇಲ್ಲ. ಎಲ್ಲಾ ವರದಿಗಳಂತೆ ಅದೂ ಧೂಳು ತಿನ್ನುತ್ತಾ ಕುಳಿತುಕೊಂಡಿತ್ತು. ಆದರೆ ಪತ್ರಿಕಾ ವರದಿಗಳು
ಸರ್ಕಾರವನ್ನು ಬೆಚ್ಚಿಬೀಳಿಸಿದವು. ನಕ್ಸಲ್ ಚಳುವಳಿಯಿರಲಿ, ದೇಶದಲ್ಲಿ ನಡೆದ, ನಡೆಯುತ್ತಿರುವ ಯಾವೊಂದು
ಚಳುವಳಿಯ ಒಳ ಹೊರಗು; ಆಗು ಹೋಗುಗಳು ಗೊತ್ತಿಲ್ಲದ ರಾಜಕಾರಣಿಗಳೆಲ್ಲಾ ದಿನಕ್ಕೊಂದು ಮಾತನ್ನಾಡಲಾರಂಭಿಸಿದವು.
ಕಬೀರನ ಪರ ಹೋರಾಟ ದಿಕ್ಕು ತಪ್ಪದಿರಲಿ
ಕಬೀರನ ಹತ್ಯೆಯ ವಿರುದ್ಧದ ಪ್ರತಿಭಟನೆ ಆತನ ಧರ್ಮದ ಕಾರಣದಿಂದಾಗಿ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಿರುವಾಗ ಮುನೀರ್ ಕಾಟಿಪಳ್ಳ ಬರೆದಿರುವ ಈ ಪುಟ್ಟ ಲೇಖನ ಪ್ರಸ್ತುತವೆನ್ನಿಸಿತು.
ಕಬೀರನ ಹತ್ಯೆ ಮಾಡಿದ್ದು ಪ್ರಭುತ್ವ. ಪ್ರಭುತ್ವ ಮಾಡಿರುವ ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕೇವಲ ಮುಸ್ಲಿಮರ ಜವಾಬ್ದಾರಿ ಅಲ್ಲ.ಇದು ಮುಸ್ಲಿಮರಿಗೆ ಸೀಮಿತವಾದ ವಿಷಯವೂ ಅಲ್ಲ. ಪ್ರಭುತ್ವ ಮಾಡಿದ ಕೊಲೆಯ ವಿರುದ್ದ ಹೋರಾಟದಲ್ಲಿ ಇಡೀ ಜನ ಸಮೂಹ ಪಾಲ್ಗೊಳ್ಳಬೇಕು.ಆ ರೀತಿಯ ಐಕ್ಯ ಹೋರಾಟ ನಡೆದರೆ ಮಾತ್ರ ಕಬೀರ್ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಅಂತಹ ಐಕ್ಯ ಹೋರಾಟದ ಅಪೂರ್ವ ಸನ್ನಿವೇಶ ನಿರ್ಮಾಣವಾಗುತ್ತಿರುವುದನ್ನು ಕಂಡು, ಜನಚಳುವಳಿ ಎದ್ದುಬರುತ್ತಿರುವುದನ್ನು ಕಂಡು ಪ್ರಭುತ್ವ ಬೀತಿಗೊಂಡಿದೆ. ಹಿಂದು ಮುಸ್ಲಿಂ ಹೀಗೆ ಎಲ್ಲಾ ವಿಭಾಗದ ಜನ ಕಬೀರ್ ತಮ್ಮ ಮನೆಯ ಮಗನೇನೋ ಎಂಬಂತೆ ಕಬೀರ್ ಪರ ದನಿ ಎತ್ತುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ.ಈ ಹೋರಾಟವನ್ನು ಹೇಗಾದರು ಮುರಿಯಬೇಕು ಎಂದು ಪಿತೂರಿ ನಡೆಸತೊಡಗಿದೆ.

Apr 22, 2014
Apr 17, 2014
ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮ
ಡಾ ಅಶೋಕ್ ಕೆ ಆರ್
ಪ್ರಜಾಪ್ರಭುತ್ವ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಆ ಕಾರಣದಿಂದಲೇ ಪತ್ರಿಕೋದ್ಯಮವನ್ನು
ಪ್ರಜಾಪ್ರಭುತ್ವದ ಮೂರು ಆಧಾರ ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗದ ಜೊತೆಗೆ ಸಮೀಕರಿಸಿ
ನಾಲ್ಕನೇ ಸ್ಥಂಭವಾಗಿ ಗುರುತಿಸಲಾಗಿದೆ. ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದ ಕೊಡುಗೆ
ಅಪಾರ. ಪತ್ರಿಕೋದ್ಯಮಕ್ಕಿರುವ ಸ್ವಾತಂತ್ರ್ಯ ಮತ್ತು ಪತ್ರಕರ್ತರಿಗಿರುವ ರಕ್ಷಣೆಯ ಆಧಾರದ ಮೇಲೆ ಆ
ಸಮಾಜದ ಆರೋಗ್ಯವನ್ನಳೆಯುವುದೂ ಇದೆ. Reporters without borders ಸಂಸ್ಥೆಯ ಅಧ್ಯಯನದ ಅನ್ವಯ ಭಾರತ
ಪತ್ರಿಕೋದ್ಯಮದ ವಿಷಯದಲ್ಲಿ ಗಳಿಸಿರುವುದು 143ನೇ ಸ್ಥಾನ! ಇತ್ತೀಚಿನ ವರುಷಗಳಲ್ಲಿ ಭಾರತದಲ್ಲಿ ಪತ್ರಿಕೋದ್ಯಮಿಗಳ
ಮೇಲೆ ಪತ್ರಕರ್ತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. 2013ರಲ್ಲಿ ಭಾರತದ ಎಂಟು ಮಂದಿ
ಪತ್ರಕರ್ತರನ್ನು ಹತ್ಯೆಗೈಯ್ಯಲಾಗುತ್ತದೆ. ಈ ಸಂಖ್ಯೆ ಪತ್ರಕರ್ತರಿಗೆ ಅಪಾಯಕಾರಿ ದೇಶವೆನ್ನಿಸಿಕೊಂಡಿರುವ
ಪಾಕಿಸ್ತಾನಕ್ಕಿಂತಲೂ ಹೆಚ್ಚು ಎಂಬುದು ಭಾರತದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ
ಪರಿಸ್ಥಿತಿಯನ್ನು ನೆನಪಿಸುತ್ತದೆ.
ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?
ಡಾ.ಅಶೋಕ್. ಕೆ. ಆರ್
ಮೋದಿ ಜಪದ ಭಾಜಪ
ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು
ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ
ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ
ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು
ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ
ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ
ಮನಸ್ಸು ಮಾಡಿದ್ದಾನೆ.
Apr 15, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 26
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 25 ಓದಲು ಇಲ್ಲಿ ಕ್ಲಿಕ್ಕಿಸಿ
ಪ್ರೇಮ್ ನ ವಾಗ್ಝರಿಗೆ ಪತ್ರಕರ್ತರೆಲ್ಲ
ಅವಕ್ಕಾಗಿ ಕುಳಿತಿದ್ದರು. ಮೊದಲನೇ ಪ್ರಶ್ನೆಯನ್ನು ಸಯ್ಯದ್ ಕೇಳಿದ್ದ
“ಬಂದೂಕಿನಿಂದ ಬದಲಾವಣೆ ಅನ್ನೋದು
ನಿಜಕ್ಕೂ ಸಾಧ್ಯವಾಗೋ ಕೆಲಸವಾ?”
“ನೀವೇ ಕಾದು ನೋಡಿ, ಒಂದೆರಡು
ದಿನದಲ್ಲಲ್ಲದಿದ್ದರೂ ಕೆಲವು ವರುಷಗಳಲ್ಲಿ ಬದಲಾವಣೆ ಖಂಡಿತವಾಗ್ಯೂ ಆಗುತ್ತೆ”
Apr 9, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 25
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಬಾಗ 24 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಬಾಗ 24 ಓದಲು ಇಲ್ಲಿ ಕ್ಲಿಕ್ಕಿಸಿ
ಶೃಂಗೇರಿಗೆ ತಲುಪಿದಾಗ ಬೆಳಗಿನ
ಜಾವ ಐದು ಘಂಟೆಯಾಗಿತ್ತು. ಮಂಜು ಕವಿದ ವಾತಾವರಣ; ಅಂಗಿಯ ಮೇಲೊಂದು ಸ್ವೆಟರ್ ಹಾಕಿಕೊಂಡಿದ್ದರೂ ಮೈ
ನಡುಗಿಸುವ ಚಳಿಯಿತ್ತು. ಮುಂಜಾನೆ ಬರುವ ಪ್ರಯಾಣಿಕರಿಗಾಗಿಯೇ ಚಹಾ ಕಾಯಿಸುತ್ತಿದ್ದ ಪೆಟ್ಟಿ ಅಂಗಡಿಯ
ಬಳಿ ಹೋಗಿ ಒಂದು ಕಪ್ ಚಾ, ಒಂದು ಸಿಗರೇಟ್ ತೆಗೆದುಕೊಂಡು ಕುಳಿತ ಸಯ್ಯದ್. ಆರು ಘಂಟೆಯ ಸುಮಾರಿಗೆ
ದೇವಸ್ಥಾನದ ಮುಂಭಾಗಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು.
Apr 4, 2014
ವೊಡಾಫೋನ್ ಒದ್ದೋಡಿಸಿ.....
ಡಾ. ಅಶೋಕ್ ಕೆ ಆರ್.
ಫೇಸ್ ಬುಕ್ಕಿನಲ್ಲಿ #vodafone_insults_kannada ದಿನೇ ದಿನೇ ಹಬ್ಬುತ್ತಲೇ ಇದೆ. ವೊಡಾಫೋನಿನ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ವೊಡಾಫೋನಿನಿಂದ ಬೇರೆ ಸಂಪರ್ಕಕ್ಕೆ ಪೋರ್ಟ್ ಮಾಡಿಸಿಕೊಳ್ಳುವಂತೆ ವಿನಂತಿಸಲಾಗುತ್ತಿದೆ ಮತ್ತು ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಷ್ಟೂ ಜನ ಪೋರ್ಟ್ ಮಾಡಲು ಕೇಳಿಕೊಂಡಿದ್ದರೆ ನೂರಾರು ಮಂದಿ ಗ್ರಾಹಕರನ್ನು ವೊಡಾಫೋನ್ ಕಳೆದುಕೊಳ್ಳಬೇಕಾಗುತ್ತದೆ.

Apr 2, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 24
ಸುssss....ಯ್ ಬೀಸುತ್ತಿದ್ದ
ಗಾಳಿಗೆ ತರಗಲೆಗಳು ಪಟ ಪಟ ಹೊಡೆದುಕೊಳ್ಳುತ್ತಿತ್ತು. ಕೆರೆಯ ನೀರು ತುಯ್ದಾಡುತ್ತಿತ್ತು. ಕುಕ್ಕರಹಳ್ಳಿ
ಕೆರೆಯ ಒಂದು ದಡದಲ್ಲಿ ಯಾರೂ ಹೆಚ್ಚು ಓಡಾಡದ ದಾರಿಯಲ್ಲಿ ಕುಳಿತಿದ್ದರು ಲೋಕಿ ಮತ್ತು ಸಯ್ಯದ್. ಅದೇ
ದಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಪೋಲೀಸ್ ಭವನದಲ್ಲಿ ರೂಪಾಳ ಮದುವೆ. ಬೇಸರ ಕಳೆಯಲು ಸಯ್ಯದ್ ಲೋಕಿಯನ್ನು
ಕುಕ್ಕರಹಳ್ಳಿ ಕೆರೆಗೆ ಕರೆದುಕೊಂಡು ಬಂದಿದ್ದ.
Apr 1, 2014
ನಮೋನೂ ಅಲ್ಲ ರಾಗಾನೂ ಅಲ್ಲ ಆಡಳಿತ ನಡೆಸುವುದು ಕಾಂಚಾಣ.....
ಪ್ರಜಾವಾಣಿ ಪತ್ರಿಕೆಯಿಂದ |
ನಮ್ಮ
ದೇಶದ ಆಡಳಿತ ನಡೆಸುವುದ್ಯಾರು? ಬಿಜೆಪಿ
ಕಾಂಗ್ರೆಸ್ ತೃತೀಯ ರಂಗ? ರಾಹುಲ್
ಗಾಂಧಿ, ಸೋನಿಯಾ ಗಾಂಧಿ, ಮೋದಿ,
ಅಡ್ವಾಣಿ? ತತ್ವ ಸಿದ್ಧಾಂತಗಳ ಪಕ್ಷವೋ
ಆದರ್ಶ ನೀತಿ ನಿಯಮಗಳ ವ್ಯಕ್ತಿಯೋ
ದೇಶವನ್ನು ಮುನ್ನಡೆಸುತ್ತಾರೆಂಬುದು ನಮ್ಮ ಕನಸಷ್ಟೇ. ಪಾಶ್ಚಿಮಾತ್ಯ
ದೇಶಗಳಲ್ಲಿ ಎಂದೋ ಘಟಸಿ ಅಲ್ಲಿನವರಲ್ಲಿ
ಹೆಚ್ಚಿನವರು ಅದನ್ನೂ ಒಪ್ಪಿಯೂ ಮುಗಿದು
ಹೋದ ಸಂಗತಿಗಳು ಭಾರತದಲ್ಲಿ ಈಗ ಬೆಳಕಿಗೆ ಬರುತ್ತಿವೆ.
ಆಡಳಿತವಿರುವ ಪಕ್ಷ ಯಾವುದೇ ಇರಲಿ,
ವ್ಯಕ್ತಿ ಯಾರೇ ಇರಲಿ ಸರಕಾರದ
ನೀತಿ ನಿಯಮಗಳ ದಿಕ್ಕುದೆಸೆಗಳನ್ನು ನಿರ್ಧರಿಸುವವರು
ಕೆಲವೇ ಕೆಲವು ಉದ್ಯಮಪತಿಗಳು.
ಹದಿನಾರನೇ ಲೋಕಸಭೆಗೆ ಕ್ಷಣಗಣನೆ - ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ
ಡಾ ಅಶೋಕ್ ಕೆ ಆರ್
ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿತ್ತು. ಚುನಾವಣೆ ಘೋಷಣೆಯಾದ ನಂತರವಾದರೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿ ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.