Mar 26, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 23

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 22 ಓದಲು ಇಲ್ಲಿ ಕ್ಲಿಕ್ಕಿಸಿ
ಇವೆಲ್ಲವೂ ನಡೆದುಹೋಗಿ ಆಗಲೇ ಏಳು ತಿಂಗಳಾಗಿ ಹೋಯಿತಲ್ಲ. ಕಾಲನ ವೇಗದಲ್ಲಿ ಚಲಿಸುವ ಶಕ್ತಿ ಯಾರಿಗೂ ಇಲ್ಲ ಎನ್ನಿಸಿತು ಲೋಕಿಗೆ. ಇವತ್ತಿಗೆ ನಾನು ಪೂರ್ಣಿ ಮಾತನಾಡಿ ಒಂದು ವರುಷವಾಯಿತಂತೆ. ಇವತ್ತಿನ ದಿನವೇ ಅವಳ ಜೊತೆ ಸರಿಯಾಗಿ ಮಾತನಾಡಲಿಲ್ಲವಲ್ಲ. ವಿಜಯ್ ಗಾದ ಅನ್ಯಾಯ; ತಂದೆ ದೊಡ್ಡವರೆನಿಸಿಕೊಂಡವರಿಗೆ ಹೆದರಿ ನಡೆದುಕೊಂಡ ರೀತಿ; ಆದರ್ಶಗಳಿಗೆ ವಿರುದ್ಧವಾಗಿ ನಿಂತು ಏನೊಂದೂ ಮಾತನಾಡದೆ ನಾನು ಸುಮ್ಮನಾಗಿಬಿಟ್ಟದ್ದು – ಇವೆಲ್ಲಾ ಮನಸ್ಸನ್ನು ಬಹಳ ತಿಂಗಳುಗಳ ನಂತರ ಮತ್ತೆ ಬೇಸರಕ್ಕೆ ದೂಡಿ ಬಿಟ್ಟಿತು.

Mar 24, 2014

ಬಿರುಬಿಸಿಲಿಗೂ ಬಾಡದ ಮರುಭೂಮಿಯ ಹೂವಿದು.



ಡಾ.ಅಶೋಕ್. ಕೆ. ಆರ್.
ಆತ್ಮಕಥೆಗಳೇ ಹಾಗೆ! ಅಸಂಖ್ಯಾತ ತಿರುವುಗಳಿರುವ ಪುಟಪುಟಕ್ಕೂ ಕುತೂಹಲ ಹೆಚ್ಚಿಸುವ ಥ್ರಿಲ್ಲರ್ ಕಾದಂಬರಿಗಳಿಗಿಂತ ರೋಮಾಂಚನಕಾರಿ. ಕಲ್ಪಿಸಿಕೊಳ್ಳಲೂ ಕಷ್ಟಸಾಧ್ಯವಾದ ಅನೇಕ ಸಂಗತಿಗಳು ನಿಜಜೀವನದಲ್ಲಿ ಘಟಿಸಿಬಿಟ್ಟಿರುತ್ತದೆ. ಓದಿ ಮುಗಿಸಿದ ನಂತರ ಒಂದಷ್ಟು ಅಚ್ಚರಿ ಮತ್ತು ಅಘಾತ ಮೂಡಿಸುವ ಆತ್ಮಕಥೆ 90ರ ದಶಕದ ಜಾಹೀರಾತು ಜಗತ್ತಿನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ವಾರಿಸ್ ಡೆರಿಸ್ ಳದ್ದು.

Mar 21, 2014

ಗಲಭಾ ರಾಜಕೀಯ!

ಕೆಲವೊಮ್ಮೆ ಏನೋ ಹೇಳಲು ಹೋಗಿ ಸತ್ಯವನ್ನು ಹೊರಹಾಕಿಬಿಡಲಾಗುತ್ತದೆ! ಇವತ್ತಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದಿರುವ ಒಂದು ವರದಿ ಗಲಭೆಗಳ ಹಿಂದಿನ ರಾಜಕೀಯವನ್ನು ಬಯಲು ಮಾಡಿಬಿಡುವುದರ ಜೊತೆಜೊತೆಗೆ ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಏನು ಕಾರಣ ಎಂಬುದನ್ನೂ ಸೂಚ್ಯವಾಗಿ ತಿಳಿಸಿಬಿಟ್ಟಿದೆ.

Mar 19, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 22



ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 21 ಓದಲು ಇಲ್ಲಿ ಕ್ಲಿಕ್ಕಿಸಿ
ಮೈಸೂರಿಗೆ ಬರುತ್ತಿದ್ದಂತಯೇ ಲೋಕಿ ಮನೆಗೂ ಹೋಗದೆ ನೇರ ಗೃಂಥಾಲಯಕ್ಕೆ ಹೋದ. ‘ಹಳೆ ಪತ್ರಿಕೆಗಳು ಎಲ್ಲಿವೆ’ ಎಂದು ಗೃಂಥಪಾಲಕರನ್ನು ಕೇಳಿ, ಪತ್ರಿಕೆಗಳಿದ್ದ ಜಾಗಕ್ಕೆ ಹೋಗಿ ‘ಬಾಂಬ್ ಎಸ್.ಐ’ ಮತ್ತು ISRAದ ಬಗ್ಗೆ ಬಂದಿದ್ದ ಪ್ರತಿಯೊಂದು ಮಾಹಿತಿಯನ್ನು ಓದಲಾರಂಭಿಸಿದ.

ಆಪರೇಷನ್ ಕನಕಾಸುರ! ಪತ್ರಿಕೋದ್ಯಮವನ್ನೇ ಕುಟುಕಿದ ಕಾರ್ಯಾಚರಣೆ!



ಡಾ. ಅಶೋಕ್. ಕೆ. ಆರ್
ಪ್ರಕರಣವೊಂದರ ಬೆನ್ನು ಹತ್ತಿ ತನಿಖೆ ಮಾಡುವುದು ಪತ್ರಿಕೋದ್ಯಮದ ಭಾಗ. ಪತ್ರಿಕೋದ್ಯಮದ ರೀತಿ ರಿವಾಜುಗಳು ಬದಲಾದಂತೆ ತನಿಖಾ ಪತ್ರಿಕೋದ್ಯಮದ ರೂಪು ರೇಷೆಗಳೂ ಬದಲಾಗುತ್ತಿವೆ. ಅವಶ್ಯ ದಾಖಲೆಗಳನ್ನು ಸಂಗ್ರಹಿಸುತ್ತ ಸಂಗ್ರಹಗೊಂಡ ದಾಖಲೆ ವ್ಯಕ್ತಿಯೊಬ್ಬರ ವಿರುದ್ಧ, ಸಂಸ್ಥೆಯೊಂದರ ವಿರುದ್ಧ ಪತ್ರಿಕಾ ಲೇಖನ ಬರೆಯುವುದಕ್ಕೆ ಸಾಕಷ್ಟಾಯಿತು ಎಂಬ ಭಾವ ಮೂಡಿದ ನಂತರ ಲೇಖನಿಗೆ ಕೆಲಸ ಕೊಡಲಾಗುತ್ತಿತ್ತು. ಪತ್ರಿಕಾ ವರದಿಗಳು ಸಮಾಜವನ್ನಲುಗಿಸಿ ಕ್ರಿಯಾಶೀಲವಾಗಿಸುತ್ತಿತ್ತು. ಪತ್ರಿಕಾ ವರದಿಗಳ ಕರಾರುವಕ್ಕುತನ ಎಷ್ಟಿರುತ್ತಿತ್ತೆಂದರೆ ಅದರ ಸತ್ಯಾ ಸತ್ಯತೆಗಳ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ಅನುಮಾನ ಮೂಡುತ್ತಿರಲಿಲ್ಲ. ಇದು ವಿರೋಧಿಗಳ ಒಳಸಂಚು ಎಂಬ ಭಾವನೆ ಮೂಡುತ್ತಿದ್ದುದಂತೂ ಅಪರೂಪದಲ್ಲಿ ಅಪರೂಪ. ಬೋಪೋರ್ಸ್ ತರಹದ ಹಗರಣಗಳು ಹೊರಪ್ರಪಂಚಕ್ಕೆ ತಿಳಿದಿದ್ದು ಇಂತಹ ನಿರ್ಭಯ ತನಿಖಾ ಪತ್ರಿಕೋದ್ಯಮದಿಂದ. ವರದಿಯನ್ನು ಬೆಂಬಲಿಸುವಂತಹ ದಾಖಲೆಗಳನ್ನು ಸಂಗ್ರಹಿಸಿದ ನಂತರವಷ್ಟೇ ಪ್ರಕಟಣೆಗೆ ಪರಿಗಣಿಸಲಾಗುತ್ತಿತ್ತು. ಪತ್ರಿಕೆಗಳ ಸಂಖ್ಯೆ ಹೆಚ್ಚಿದ ನಂತರ ಅದರಲ್ಲೂ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಬರುವ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಖೈ ಅಧಿಕಗೊಂಡ ಬಳಿಕ ತನಿಖಾ ಪತ್ರಿಕೋದ್ಯಮದಲ್ಲೂ ಆತುರತೆ ಕಾಣಲಾರಂಭಿಸಿತು. ತತ್ಪರಿಣಾಮವಾಗಿ ಪತ್ರಿಕೆ ಮತ್ತು ಪತ್ರಕರ್ತರ ಮೇಲಿನ ಮಾನನಷ್ಟ ಮೊಕದ್ದಮೆಗಳೂ ಹೆಚ್ಚಾಗಲಾರಂಭಿಸಿತು. ಕೆಲವೊಮ್ಮೆ ಕಣ್ಣಿಗೆ ಕಾಣುವ ಸತ್ಯಕ್ಕೆ ದಾಖಲೆಯ ಅಲಭ್ಯತೆಯುಂಟಾಗುವುದರಿಂದ ಸಂಪೂರ್ಣ ದಾಖಲೆಗಳಿಲ್ಲದ ತನಿಖಾ ಪತ್ರಿಕೋದ್ಯಮವನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಲಾಯಿತು. ಇತ್ತೀಚಿನ ದಿನಮಾನದಲ್ಲಿ ಉತ್ತಮ ತನಿಖಾ ಪತ್ರಿಕೋದ್ಯಮಕ್ಕೆ ಪ್ರಜಾವಾಣಿಯಲ್ಲಿ ಪ್ರಕಟವಾದ ಕೆ.ಪಿ.ಎಸ್.ಸಿ ಕರ್ಮಕಾಂಡವನ್ನು ಉದಹರಿಸಬಹುದು.

ಈ ಅಭ್ಯರ್ಥಿಯ ಒಟ್ಟು ಆಸ್ತಿ ರೂ 750 ಮಾತ್ರ!

ಮುನೀರ್ ಕಾಟಿಪಳ್ಳ
ದೇಶಾದ್ಯಂತ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭ್ರಷ್ಟಾಚಾರ ವಿರೋಧಿ , ಪ್ರಾಮಾಣಿಕತೆ , ಸರಳತೆ ಮುಂತಾದ ವಿಷಯಗಳು ಗಂಭೀರ ರಾಜಕೀಯ ಚರ್ಚೆಯ ವಿಷಯವಾಗಿದೆ. ಕಳೆದ ಲೋಕಸಭೆಯಲ್ಲಿ ಕೋಟ್ಯಾಧೀಶರುಗಳ ಸಂಖ್ಯೆ ಗಣನೀಯವಾಗಿತ್ತು. ಎಲ್ಲಾ ರಾಜ್ಯಗಳಲ್ಲಿ ವಿಧಾನಸಭೆಗೆ ಆರಿಸಿ ಬರುವವರು ಬಹುಕೋಟಿಯ ಒಡೆಯರು ಆಗಿರುವುದು ಈಗ ಒಂದು ಪದ್ದತಿಯಾಗಿದೆ.

Mar 9, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 21

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ


ಕೈಯಿಟ್ಟ ವ್ಯಕ್ತಿ ಎ.ಎಸ್.ಐ ರಾಮಸ್ವಾಮಿ!!
“ಉನ್ನದು ಎಂದ ಊರು” (ನಿನ್ನದ್ಯಾವ ಊರು)
“ಮೈಸೂರು” ನಡೆದ ಘಟನೆಗಳಿಂದ ಕೊಂಚ ಅಧೀರನಾಗಿದ್ದ ಲೋಕಿ ಮೆಲ್ಲನೆ ತಗ್ಗಿದ ದನಿಯಲ್ಲಿ ಉತ್ತರಿಸಿದ.
“ತಮಿಳ್ ತೆರಿಯುಮಾ?” (ತಮಿಳು ಬರುತ್ತಾ?)

Mar 8, 2014

ಮಹಿಳಾ ಸಮಾನತೆಯಿಂದ ಸರ್ವಾಂಗೀಣ ಅಭಿವೃದ್ಧಿ



ಡಾ ಅಶೋಕ್ ಕೆ. ಆರ್

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಬಗೆಗಿನ ಚರ್ಚೆಗಳು, ಮಹಿಳಾ ವಾದ, ಮಹಿಳಾ ಸಮಾನತೆಯ ಬಗ್ಗೆ ರಾಜಕಾರಣಿಗಳ ಅದೇ ಹಳೆಯ ಪುನರಾವರ್ತಿತ ಒಣ ಭಾಷಣಗಳನ್ನು ಕೇಳುವ ಸಮಯ. ಜೊತೆಯಲ್ಲಿಯೇ ಮಹಿಳಾವಾದವನ್ನು ತಪ್ಪಾಗಿ ಅರ್ಥೈಸಿಕೊಂಡು ಆ ತಪ್ಪು ಅರ್ಥೈಸುವಿಕೆಯನ್ನೇ ಜೋರು ದನಿಯಲ್ಲಿ ಹೇಳುವ ಮಹಿಳಾವಾದಿಗಳ ಮಾತನ್ನು ಕೇಳುವ, ಓದುವ ಸಮಯವಿದು. ಹೇಗೆ ಜಾತ್ಯತೀತ, ಸೆಕ್ಯುಲರ್, ದೇಶಪ್ರೇಮ, ಧಾರ್ಮಿಕ ವ್ಯಕ್ತಿ ಎಂಬ ಪದಗಳು ಅದನ್ನು ಉಪಯೋಗಿಸುವವರ, ಅದನ್ನು ಆಚರಿಸುತ್ತೇವೆಂದು ಹೇಳಿಕೊಳ್ಳುವ ಜನರ ಆಷಾಡಿಭೂತತನದಿಂದ ಅಪಭ್ರಂಶಗೊಂಡಿದೆಯೋ ಫೆಮಿನಿಷ್ಟ್ ಪದ ಕೂಡ ಅದೇ ಹಾದಿಯಲ್ಲಿದೆ. ಮಹಿಳಾವಾದವೆಂದರೆ ಪುರುಷ ವಿರೋಧವಷ್ಟೇ ಎಂಬ ಭಾವನೆಯಲ್ಲಿರುವವರು “ಸಮಾನತೆಗಾಗಿ ಮಹಿಳೆಯರ ಹೋರಾಟದ ಹಾದಿ ಒಬ್ಬ ಮಹಿಳಾವಾದಿ ಅಥವಾ ಒಂದು ಸಂಘಟನೆಯಿಂದ ರೂಪುಗೊಂಡಿದ್ದಲ್ಲ, ಮಾನವ ಹಕ್ಕುಗಳಿಗಾಗಿ ಹೋರಾಡುವ ಪ್ರತಿಯೊಬ್ಬನ ಶ್ರಮವೂ ಇದರ ಹಿಂದಿದೆ” ಎಂದು ಹೇಳಿದ ಗ್ಲೋರಿಯಾ ಸ್ಟೀನೆಮ್ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

BJP RULES!!

Elections are nearing. Probably Loksabha elections in India was never portrayed like the one we are seeing in this. Instead of being a democratic election's publicity it has become a fight between the two individuals. Here is a small piece of article which i read in facebook. Appears hilarious but unfortunately true - hingyake

Mar 7, 2014

ನದಿ ತಿರುಗಿಸುವ ದುಸ್ಸಾಹಸ.....

ಡಾ.ಅಶೋಕ್.ಕೆ.ಆರ್.

ನಾಗರೀಕತೆಗೆ ಮೂಲವಾದ ನದಿಗಳ ಬಗೆಗಿನ ಮನುಷ್ಯನ ನೋಟ ದಿಕ್ಕುತಪ್ಪಿಹೋಗಿದೆ. ಪ್ರಪಂಚದೆಲ್ಲರಿಗಿಂತ ಬುದ್ಧಿವಂತ ಜೀವಿ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡರೂ ಪ್ರಕೃತಿಯ ಮುಂದೆ ನಾವೆಲ್ಲರೂ ತೃಣಮಾತ್ರರೆಂಬುದನ್ನು ಮರೆಯಬಾರದು. ಪ್ರಕೃತಿ ಪ್ರತಿಯೊಂದನ್ನೂ ಕಾರಣವಿಲ್ಲದೆ ಮಾಡುವುದಿಲ್ಲ, ಅದು ನದಿಯ ಹರಿವಿನ ಜಾಡಿರಬಹುದು, ನದಿ ಸಮುದ್ರಕ್ಕೆ ಸೇರುವ ಬಗೆಯಿರಬಹುದು ಪ್ರತಿಯೊಂದಕ್ಕೂ ಕಾರಣವಿದ್ದೇ ಇದೆ; ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ಪ್ರೀತಿಯ ಸಿಂಚನವಿದೆ. ಇಂತಹ ಪರಿಸರವನ್ನು ಮಲಿನಗೊಳಿಸಿದ ಮೊದಲ ಶ್ರೇಯಸ್ಸು ಶತಶತಮಾನಗಳ ಹಿಂದೆ ಕೃತಕವಾಗಿ ಬೆಂಕಿ ಸೃಷ್ಟಿಸಿದ ಆದಿಮಾನವನದು. ಪ್ರಕೃತಿಯ ವಿರುದ್ಧ ಈಜಲು ತೊಡಗಿದ್ದು ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆ ನಿಂತು ವ್ಯವಾಸಾಯ ಆರಂಭಿಸಿದ ತಲೆಮಾರಿನದು. ಅಂದಿನಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧ ಈಜುತ್ತಲೇ ಇದ್ದೇವೆ, ನಮ್ಮ ಶಕ್ತಿಗೆ ತಕ್ಕಷ್ಟು ಪರಿಸರ ನಾಶಗೊಳಿಸುತ್ತಲೇ ಸಾಗಿದ್ದೇವೆ.

Mar 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 20

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ

"ಬಾಂಬ್’ ಎಸ್.ಐ ಬಂಧನ!”
ಲೋಕಿ ಸಿಂಚನಾಳ ಬಳಿ ಬಂದು “ಮಧುರೈಗೆ ಹೋಗಲು ಇದು ಸರಿಯಾದ ದಾರಿ ಅಲ್ವಂತೆ? ಕರ್ನಾಟಕ ರಿಜಿಸ್ಟ್ರೇಷನ್ ಇರೋ ಬಸ್ಸನ್ನೇ ಮಾಡಬಹುದಿತ್ತಲ್ವಾ?”
“ಕರ್ನಾಟಕ ರಿಜಿಸ್ಟ್ರೇಷನ್ ಇರೋ ಗಾಡಿ ಮಾಡಿದ್ದರೆ ಆರು ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕಿತ್ತು ತಮಿಳುನಾಡಿನಲ್ಲಿ. ಅದಿಕ್ಕೆ ಹೋಗೋದು ಸ್ವಲ್ಪ ಲೇಟಾದ್ರೂ ಪರವಾಗಿಲ್ಲ ಅಂತ ಈ ಬಸ್ಸನ್ನೇ ಮಾಡಿದ್ದು”