Noel Chungigudde
'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಉತ್ಸಾಹದಲ್ಲಿ ಇವರನ್ನೆಲ್ಲ ನಾವು ಸಹಿಸಿಕೊಳ್ಳುತ್ತೇವೆ! ಕಮ್ಯೂನಿಸ್ಟರನ್ನು ತೆಗಳುತ್ತೇವೆ!!!
ಹೋರಾಟ ಮಾಡಿದ್ರೆ ಈ ಬಿಜೆಪಿ- ಕಾಂಗ್ರೆಸ್ ತರ ಮಾಡ್ಬೇಕು. ಚುನಾವಣೆ ಬಂದಾಗ ರಥಯಾತ್ರೆ, ಪಾದ ಯಾತ್ರೆ, ರೋಡ್ show. ಮೈ-ಕೈ ನೋವಿಲ್ಲ, ಲಾಠಿ ಏಟು ತಿನ್ನುವ ಪ್ರಶ್ನೆಯೇ ಇಲ್ಲ,
ಸ್ವಯಂ ಪ್ರೇರಿತರಾಗಿ ಜೈಲ್ ಭರೋ ಮಾಡಿದರೆ ಸೈ. ಹೋರಾಟ ಅಂದ್ರೆ ಹೊಸ ಶೂ, ಗರಿ ಗರಿ ಇಸ್ತ್ರೀ ಹಾಕಿದ ಶರ್ಟು, ಒಳ ಚಡ್ಡಿ ಕೂಡ ಕಾಣುವಂತಹ ಪಾರದರ್ಶಕ ಪ್ಯಾಂಟು, ಅಲ್ಲಲ್ಲಿ ಡ್ಯಾನ್ಸು, ಹತ್ತಿಪ್ಪತ್ತು ಬೆಂಕಿ ಕಾರುವ ಭಾಷಣಗಳು, ಬಸ್ಸುಗಳಲ್ಲಿ ತರುವ ಬಾಡಿಗೆ ಜನಗಳು, ಅವರಿಗೆ ಬಿರಿಯಾನಿ, ಎಣ್ಣೆ, ಕ್ಯಾಪು, ಬೈಕು, ಕಣ್ಕಟ್ಟು....
ಆಹಾ. ಇವರಿಗೇ ಅನಾಯಾಸವಾಗಿ ಸಿಗುತ್ತದೆ ಮಂತ್ರಿ ಪಟ್ಟ! ಇಂಥವರ ಬಗ್ಗೆ ನಮಗೆ ಅನುಕಂಪ, ಗೌರವ, ಭಕ್ತಿ, ಭಯ!
ಜೀವಮಾನ ಇಡೀ ನೈಜ ಹೋರಾಟ ಮಾಡಿದರೂ ಕಮ್ಯೂನಿಸ್ಟರಿಗೆ ಈ ದೇಶದಲ್ಲಿ ಅಧಿಕಾರ ಹಿಡಿಯಲಾಗುವುದಿಲ್ಲ. ತಿನ್ನುವ ಪೊಲೀಸ್ ಲಾಠಿ ಏಟು, ಬೂಟುಗಾಲ ಒದೆಗಳಿಗೆ ಲೆಕ್ಕವೇ ಇಲ್ಲ. ಈ ಕೃತಘ್ನ ದೇಶದಲ್ಲಿ ಕೆಲವರು ಮೊನ್ನೆ ಮೊನ್ನೆ ಅಧಿಕಾರ ಹಿಡಿದ 'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಭರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಉಗಿಯುವುದನ್ನು ಮರೆತು ಕಮ್ಯೂನಿಸ್ಟರು ಏನು ಮಾಡಿದರು ಎಂಬ ಚರ್ಚೆ ಮಾಡುತ್ತಿದ್ದಾರೆ.
'ಆಮ್ ಆದ್ಮಿ' ಪಕ್ಷದ ಸಾಧನೆ ಬಗ್ಗೆ ನನಗೂ ಮೆಚ್ಚಿಗೆ ಇದೆ. ಆದರೆ ದೆಹಲಿಯಲ್ಲಿ 'ಆಮ್ ಆದ್ಮಿ' ಪಕ್ಷವನ್ನು ಯಾವ ವರ್ಗ ಏಕೆ ಬೆಂಬಲಿಸಿತು ಎಂಬುದರ ಬಗ್ಗೆ ಗಾಢವಾಗಿ ಚಿಂತಿಸಬೇಕಾಗಿದೆ. ಅಲ್ಲಿನ social structure ಬಗ್ಗೆ ಅಧ್ಯಯನ ಮಾಡಬೇಕಾಗಿದೆ.
ದೆಹಲಿಯಲ್ಲಿ 'ಆಮ್ ಆದ್ಮಿ' ಪಕ್ಷ ಅಧಿಕಾರಕ್ಕೆ ಬಂತು ಎಂದ ಮಾತ್ರಕ್ಕೆ ನಾವು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆಲ್ಲ ಪಕ್ಷಗಳಿಗಿಂತ ಪಾರದರ್ಶಕವಾಗಿರುವ, ಸೈದ್ಧಾಂತಿಕ ಬದ್ದತೆ ಇರುವ ಎಡಪಕ್ಷಗಳ ಮೇಲೆ ಉರಿದು ಬೀಳುವುದು ನನಗೆ ಸರಿ ಎಂದು ಅನಿಸುವುದಿಲ್ಲ. ಇದೇ ಸಿಟ್ಟು ನಮಗ್ಯಾಕೆ ಕಾಂಗ್ರೆಸ್ ಮತ್ತು ಬಿಜೆಪಿ ಮೇಲೆ ಬರಬಾರದು? ಇಂದು ಬಿಜೆಪಿಯಿಂದ ಪ್ರಧಾನಿ ಪದವಿಯ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿಯ ರಕ್ತಸಿಕ್ತ ಹಿನ್ನೆಲೆ ಬಗ್ಗೆ ನಾವೇಕೆ ತುಟಿಪಿಟಕ್ಕೆನುವುದಿಲ್ಲ? ಸಹಸ್ರಾರು ಅಮಾಯಕ ಮುಸ್ಲಿಮರ(ಮುಸ್ಲಿಮರು ಎಂದ ಮಾತ್ರಕ್ಕೆ ಅವರು ಮನುಷ್ಯರಲ್ಲವೆ?) ಗೋರಿಗಳ ಮೇಲೆ ತನ್ನ ಸಾಮ್ರಾಜ್ಯ ಕಟ್ಟಿದ ಆರೋಪ ಎದುರಿಸುತ್ತಿರುವ ನರೇಂದ್ರ ಮೋದಿಯನ್ನು ವಹಿಸಿಕೊಂಡು ಮಾತಾಡುವಾಗ ನಮ್ಮ ಅನೇಕ so called ಸುಶಿಕ್ಷಿತರಿಗೆ ಯಾಕೆ ನಾಚಿಕೆಯಾಗುವುದಿಲ್ಲ? ಇದೇ ನಮ್ಮ ಕರ್ನಾಟಕದಲ್ಲಿ ಸ್ವಚ್ಛ ಆಡಳಿತ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಇಂದು ಮಾಡುತ್ತಿರುವುದಾದರೂ ಏನು? ಬೆಳ್ತಂಗಡಿಯ ಸೌಜನ್ಯ ಪ್ರಕರಣದಲ್ಲಿ, ಸಂತೋಷ್ ಲಾಡ್, ಶಿವಕುಮಾರ್ ಮೊದಲಾದವರ ವಿಷಯದಲ್ಲಿ ಈ ಸಿದ್ಧರಾಮಯ್ಯನ ಉಗ್ರ ಪ್ರತಾಪ ಎಲ್ಲಿ ಅಡಗಿ ಹೋಯಿತು?
ಇವರನ್ನೆಲ್ಲ ನಾವು ಸಹಿಸಿಕೊಳ್ಳುತ್ತೇವೆ! ಕಮ್ಯೂನಿಸ್ಟರನ್ನು ತೆಗಳುತ್ತೇವೆ!!!
Height of hypocricy.
image source - http://indiansawaal.com/

ಕಮ್ಯುನಿಷ್ಟರ ಸೋಲಿಗೆ ಅವರ ಒಡಕುಗಳು ಮುಖ್ಯಕಾರಣವಾಯ್ತು. ಅಲ್ಲದೆ ಮದ್ಯಮವರ್ಗದ ಜನತೆಯನ್ನು ಓಲೈಸಲು ಅದು ಸಂಪೂರ್ಣವಾಗಿ ಸೋತಿತು. ಕ್ರಾಂತಿಗೆ ಕೆಳವರ್ಗ ಅತ್ಯಗತ್ಯವಾದರೂ ಚುನಾವಣಾ ರಾಜಕೀಯಕ್ಕೆ ಮಧ್ಯಮವರ್ಗವು ಅತ್ಯಾವಶ್ಯಕ. ಅದನ್ನು ಆಮ್ಆದ್ಮಿ ಪಕ್ಷವು ತನ್ನದಾಗಿಸಿಕೊಂಡಿದೆ.
ReplyDeletegorigala mele saamrajya!!!nimmvaru russia mathu chinadalli maadiddenu?North koreadallenu nadeyuthide?
ReplyDelete