ಮೊಹಮದ್ ಇರ್ಷಾದ್
ಅದು ಸಂಜೆಯ ವೇಳೆ. ಸ್ವಲ್ಪ ಬಿಡುವಿದ್ದ ಕಾರಣಕ್ಕಾಗಿ ಸಂಗೀತ ಕೇಳುತ್ತಾ
ಕುಳಿತಿದ್ದೆ. ಅಷ್ಟೊತ್ತಿಗೆ ನನ್ನ ಪೋನ್ ರಿಂಗ್ ಆಯಿತು. ನಾನು ಹಲೋ ಅಂದ
ಕೂಡಲೇ ಆ ಕಡೆಯಿಂದ ಹೆಣ್ಣು ಧ್ವನಿವೊಂದು ಕೇಳಿಸಿತು. ಅದು ಆತಂಕದಿಂದ ಕೂಡಿದ
ಏನೋ ನಡೆದಿದೆ ಎಂಬ ಅಸ್ಪಷ್ಟ ಧ್ವನಿಯಾಗಿತ್ತು. ಹೇಳ ಬೇಕೋ, ಬೇಡವೋ
ಎಂಬವಂತ್ತಿತ್ತು ಆಕೆಯ ಮಾತು. ಯಾರು ಅಂತ ವಿಚಾರಿಸಿದಾಗ ಕರೆ ಮಾಡಿದ ಹೆಣ್ಣು ಮಗಳು
ತನ್ನ ಪರಿಚಯ ಹೇಳಿದಳು.