ಬದುಕು ಮಗ್ಗುಲು ಬದಲಿಸಲು ವಯಸ್ಸಿನ ಹಂಗಿಲ್ಲ. ಕೆಲಸ ನಿರ್ವಹಿಸುವುದರಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿ ತನ್ನಿಡೀ ಜೀವನದ ಆಗುಹೋಗುಗಳನ್ನು ವಿಮರ್ಶಿಸಲಾರಂಭಿಸುತ್ತ ಕೆಲವೊಮ್ಮೆ ಪುಟಿಯುತ್ತ ಕೆಲವೊಮ್ಮೆ ಕುಸಿಯುತ್ತಾ ಹೊಸ ಮನುಷ್ಯನಾಗಿ ಜನ್ಮ ತಳೆಯುವ ಕಥೆಯೇ ಕೂರ್ಮಾವತಾರ. ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರ ಕಥೆಯೊಂದನ್ನು ಆಧರಿಸಿ ತೆಗೆದಿರುವ ಚಿತ್ರ ಕೂರ್ಮಾವತಾರ.
Apr 25, 2013
ಗಾಂಧಿವಾದದ ನೆರಳಿನಲ್ಲಿ ಬದುಕಿನ ಕೂರ್ಮಾವತಾರ.
ಬದುಕು ಮಗ್ಗುಲು ಬದಲಿಸಲು ವಯಸ್ಸಿನ ಹಂಗಿಲ್ಲ. ಕೆಲಸ ನಿರ್ವಹಿಸುವುದರಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿ ತನ್ನಿಡೀ ಜೀವನದ ಆಗುಹೋಗುಗಳನ್ನು ವಿಮರ್ಶಿಸಲಾರಂಭಿಸುತ್ತ ಕೆಲವೊಮ್ಮೆ ಪುಟಿಯುತ್ತ ಕೆಲವೊಮ್ಮೆ ಕುಸಿಯುತ್ತಾ ಹೊಸ ಮನುಷ್ಯನಾಗಿ ಜನ್ಮ ತಳೆಯುವ ಕಥೆಯೇ ಕೂರ್ಮಾವತಾರ. ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರ ಕಥೆಯೊಂದನ್ನು ಆಧರಿಸಿ ತೆಗೆದಿರುವ ಚಿತ್ರ ಕೂರ್ಮಾವತಾರ.
Apr 5, 2013
ದಶಕದ ಇರಾಕ್ ಯುದ್ಧ
ಮಾರ್ಚ್ 20 2013 ಯುದ್ಧವಾರಂಭಿಸಿ ದಶಕವಾಯಿತು ಮತ್ತು
“ಅಧಿಕೃತ”ವಾಗಿ ಈ ಯುದ್ಧವನ್ನು ಅಂತ್ಯಗೊಳಿಸಿ ಹೆಚ್ಚು ಕಡಿಮೆ ಒಂದು ವರುಷವಾಗುತ್ತ ಬಂದಿದೆ. ಯುದ್ಧದಲ್ಲಿ
ಗೆಲುವು ಕಂಡಿದ್ಯಾರು? ಸೋತವರ್ಯಾರು? ಯುದ್ಧವಾರಂಭಿಸಲು ಕೊಟ್ಟ ನೆಪಗಳಲ್ಲಿ ಸತ್ವವಿತ್ತೇ? ದೇಶವೊಂದರ
ಮೇಲೆ ಯುದ್ಧ ಸಾರುವ ಮುನ್ನ ಜಗತ್ತಿನೆದುರಿಗಿಟ್ಟ ಆರೋಪಗಳಲ್ಲಿ ಒಂದಾದರೂ ಸತ್ಯವಿತ್ತೇ? ಅಧಿಕಾರದ
ಕೇಂದ್ರಬಿಂದುವಿನಲ್ಲಿರುವ ವ್ಯಕ್ತಿಯನ್ನು ಬದಲಿಸಿದಕ್ಕಾಗಿ ಯುದ್ಧ ಗೆದ್ದ ಭ್ರಮೆಯಲ್ಲಿರುವವರನ್ನು
ಅಭಿನಂದಿಸಬೇಕಾ ಅಥವಾ ಜನಸಾಮಾನ್ಯರ ಜೀವನವನ್ನು ಮತ್ತಷ್ಟು ದುರ್ಬರಗೊಳಿಸಿದಕ್ಕಾಗಿ ಈ ಯುದ್ಧ ನಿರ್ಮಾಪಕ
ನಿರ್ವಾಹಕರ ಮೇಲೆ ದೋಷಾರೋಪ ಮಾಡಬೇಕಾ?