ಡಾ ಅಶೋಕ್ ಕೆ ಆರ್
ಹ್ಯುಗೋ ಷಾವೆಜ್! ಇಪ್ಪತ್ತೊಂದನೇ ಶತಮಾನದ ಸಮಾಜವಾದಿ ನಾಯಕ, ಲ್ಯಾಟಿನ್
ಅಮೆರಿಕಾದಲ್ಲಿ ಸಮಾಜವಾದದ ಉದಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವ, ಸಮಾಜವಾದದ ಹೆಸರಿನಲ್ಲಿ ಡಿಕ್ಟೇಟರ್
ಆಗಲು ಹೊರಟವ, ಪ್ರತಿಯೊಂದೂ ತನ್ನ ಆಣತಿಯಂತೆಯೇ ನಡೆಯಬೇಕು ಎಂಬ ಹಟದವ...... ಹ್ಯುಗೋ ಷಾವೆಜ್ ಬಗೆಗೆ
ತಿಳಿಯಲು ಪುಸ್ತಕಗಳನ್ನೋ ಅಂತರ್ಜಾಲವನ್ನೋ ತೆರೆದು ಕುಳಿತರೆ ವಿವಿಧ ರೀತಿಯ ವ್ಯಕ್ತಿಕ್ವ ವರ್ಣನೆ
ನಮ್ಮನ್ನು ತಬ್ಬಿಬ್ಬುಗೊಳಿಸುವುದು ಸಹಜ! ಉಳಿದ ದೇಶದವರ ಮಾತು ಬಿಡಿ ವೆನೆಜುವೆಲಾದ ನಾಗರೀಕರೇ ಅಂತರ್ಜಾಲದಲ್ಲಿ
ಅಗಲಿದ ತಮ್ಮ ನಾಯಕನ ಬಗ್ಗೆ ವಿಷ ಕಾರಿದ್ದಾರೆ! ಹಾಗಿದ್ದರೆ ಹ್ಯುಗೋ ಷಾವೆಜ್ ಕೇವಲ ಸರ್ವಾಧಿಕಾರಿಯಾ?
ವೆನೆಜುವೆಲಾಗೆ ಏನು ಕೊಡುಗೆಯನ್ನೇ ನೀಡಲಿಲ್ಲವಾ? ತನ್ನ ಅಹಂ ತೃಪ್ತಿಪಡಿಸಿಕೊಳ್ಳಲಷ್ಟೇ ಸಮಾಜವಾದದ
ಹೆಸರು ಉಪಯೋಗಿಸಿಕೊಂಡ ನಾಯಕನಾ?!