Aug 31, 2012

ಆದರ್ಶವೇ ಬೆನ್ನು ಹತ್ತಿ ..... ಭಾಗ 5


ಬಚ್ಚಲುಮನೆಗೆ ಹೋಗಿ ಲೋಕಿ ಕೈ ಮೂಸಿದ. ಸಿಗರೇಟಿನ ಘಮ ಇನ್ನೂ ಉಳಿದಿತ್ತು! ‘ಛೇ!! ದಿನಾ ಎಲೆ ತೆಗೆದುಕೊಂಡು ಕೈ ಉಜ್ಜಿಕೊಂಡು ಬರುತ್ತಿದ್ದೆ. ಇವತ್ತು ಮರೆತುಬಿಟ್ಟೆನಲ್ಲ. ಅಷ್ಟಕ್ಕೂ ನಾನು ಸಿಗರೇಟು ಸೇದ್ತೀನಿ ಅನ್ನೋ ಅನುಮಾನ ಇವರಿಗ್ಯಾಕೆ ಬಂತು? ನಮ್ಮ ನೆಂಟರಿಷ್ಟ್ಯಾರಾದರೂ ನೋಡಿಬಿಟ್ಟರಾ? ಅದೇಗಾದ್ರೂ ತಿಳಿದಿರಲಿ, ಕೊನೇಪಕ್ಷ ಅಣ್ಣ ಬಯ್ಯಲೂ ಇಲ್ಲವಲ್ಲ. ಏನೂ ಆಗೇ ಇಲ್ಲವೆಂಬಂತೆ ಹೊರಟುಹೋದರು. ನಾನೇ ಹೋಗೆ ತಪ್ಪಾಯ್ತು ಅಂತ ಕೇಳ್ಲಾ? ಇನ್ನು ಮುಂದೆ ಸೇದಲ್ಲ ಅಣ್ಣ . . .ಸಿಗರೇಟು ಬಿಡಬಲ್ಲೆನಾ?

Aug 30, 2012

ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’


kavya madhavan
ಗದ್ದಾಮ photo source - sify.com
ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.

Aug 28, 2012

ಬೆಚ್ಚಿಬೀಳಿಸುವ ವ್ಯಾಸ!


astra
 ಡಾ ಅಶೋಕ್. ಕೆ. ಆರ್
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!

Aug 27, 2012

ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!


ಚಿತ್ರಕೃಪೆ - ಇಂಡಿಯಾ ಟುಡೇ
 ಡಾ ಅಶೋಕ್. ಕೆ. ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!

Aug 24, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 4



ಆದರ್ಶವೇ ಬೆನ್ನು ಹತ್ತಿ . . . ಭಾಗ 3

“ಹೋಟೆಲ್ಲಿನಲ್ಲಿ ನಡೆದಿದ್ದರ ಬಗ್ಗೆ ಚಿಂತಿಸುತ್ತಿದ್ದೀರ. ಆ ವಿಷಯವನ್ನು ನಾನು ಯಾರಿಗೂ ಹೇಳೋದಿಲ್ಲ. ಚಿಂತೆ ಬೇಡ”
“ನಿಮಗೇನಾದರೂ ಫೇಸ್ ರೀಡಿಂಗ್ ಬರುತ್ತಾ?”
‘ಇದೇ ಪ್ರಶ್ನೆ ಸ್ವಲ್ಪ ಸಮಯದ ಮೊದಲು ನನ್ನ ಮನಸ್ಸಿಗೂ ಬಂದಿತ್ತಲ್ಲ’ ಎಂದು ಅಚ್ಚರಿಗೊಳ್ಳುತ್ತ “ಇಲ್ಲ” ಎಂದ. ಅಷ್ಟರಲ್ಲಿ ಸಯ್ಯದ್ ಒಳಬಂದ. “ಏನ್ ಇನ್ನೂ ಏನು ಆರ್ಡರ್ರೇ ಮಾಡಿಲ್ಲ” ಎಂದ್ಹೇಳಿ ಮಾಣಿಯನ್ನು ಕರೆದು ತಿಂಡಿ ಹೇಳಿದ. ತಿಂಡಿ ತಿಂದಾದ ಮೇಲೆ “ಸರಿ ಲೋಕಿ. ಒಂದಷ್ಟು ಕೆಲಸವಿದೆ. ನಾಳೆ ಭೇಟಿಯಾಗೋಣ” ಎಂದ್ಹೇಳಿ ಸಯ್ಯದ್ ಮೇಲೆದ್ದ. “ಬರ್ತೀನಿ ಲೋಕೇಶ್” ರೂಪಾ ಕೂಡ ಹೊರಡಲನುವಾದಳು. ‘ದಯಮಾಡಿ ಹೇಳಬೇಡ’ ಅನ್ನೋ ಬೇಡಿಕೆಯಿತ್ತಾ?! ಛೇ! ನಿಜಕ್ಕೂ ನನಗೆ ಫೇಸ್ ರೀಡಿಂಗ್ ಬರುವಂತಿದ್ದರೆ. .

Aug 23, 2012

ತೀವ್ರವಾದದ ನಡುವೆ ಸೊರಗುತ್ತಿರುವ ಮನುಷ್ಯ ಧರ್ಮ


 ಡಾ ಅಶೋಕ್. ಕೆ. ಆರ್.
ಇತ್ತೀಚೆಗಷ್ಟೇ ಸುಳ್ಯ ಮತ್ತು ಪುತ್ತೂರಿನ ಸುತ್ತಮುತ್ತ ವಾಸಿಸುತ್ತಿರುವ ನಿರಾಶ್ರಿತ ಶ್ರೀಲಂಕಾ ತಮಿಳರು ಪಡಿತರ ಚೀಟಿಯನ್ನು ವಿತರಿಸಬೇಕೆಂದು ಪ್ರತಿಭಟಿಸಿದರು. ಟಿಬೆಟ್ಟಿನಲ್ಲಿ ಚೀನಾ ದೇಶದ ಶೋಷಣೆಯನ್ನು ಖಂಡಿಸಿ ಕೆಲವು ತಿಂಗಳುಗಳ ಹಿಂದೆ ಟಿಬೆಟ್ಟಿಯನ್ನರು ಭಾರತದ ವಿವಿದೆಡೆ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ನೇಪಾಳಿಗರ ವಲಸೆ ನಿರಂತರವಾಗಿ ನಡೆಯುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾನವ ಹಕ್ಕು ಆಯೋಗದ ವರದಿಯಂತೆ ಕಳೆದ ಮೂರು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಹಿಂದೂ ಪಾಕಿಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಈ ವಲಸೆಗಳ ಬಗ್ಗೆ ಇಲ್ಲದ ಆಕ್ರೋಶ ಬಾಂಗ್ಲಾ ವಲಸಿಗರ ಮೇಲೆ ಮಾತ್ರ ಯಾಕೆ? ಬಾಂಗ್ಲಾ ವಲಸಿಗರು ಸ್ಥಳೀಯ ಬೋಡೋ ಆದಿವಾಸಿಗಳ ಮೇಲೆ ನಡೆಸಿರುವ ಕ್ರೌರ್ಯವಷ್ಟೇ ಇದಕ್ಕೆ ಕಾರಣವಾ? ಆಶ್ರಯನೀಡಿದ ದೇಶಕ್ಕೆ ಅವರು ದ್ರೋಹಬಗೆಯುತ್ತಿದ್ದಾರೆಂಬ ಅಸಹನೆಯಾ? ಆಶ್ರಯ ನೀಡಿದ ದೇಶದ ಪ್ರಧಾನಮಂತ್ರಿಯನ್ನೇ ಕೊಂದ ಜನರ ವಿರುದ್ಧ ‘ದೇಶಭಕ್ತಿಯ’ ಹೆಸರಿನಲ್ಲಿ ಕೂಗಾಡದ ಮಂದಿ ಬಾಂಗ್ಲಾ ವಲಸಿಗರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸುತ್ತಿರುವುದ್ಯಾಕೆ? ಬಾಂಗ್ಲಾ ವಲಸಿಗರು ಮುಸಲ್ಮಾನರೆಂಬ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್, ಶ್ರೀರಾಮ ಸೇನೆಯಂಥ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದಾರಾ?

Aug 22, 2012

ಕುಪ್ಪಳ್ಳಿಯಲ್ಲಿ 'ಕರ್ನಾಟಕ ಕಂಡ ಚಳುವಳಿಗಳು' ಸಂವಾದ ಸಮಾವೇಶ

ಆತ್ಮೀಯರೆ, 

ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು,  ಈ ಸಲದ  ನಾವು ನಮ್ಮಲ್ಲಿ  ಕಾರ್ಯಕ್ರಮವನ್ನು  ಇದೇ ತಿಂಗಳ 25 ಮತ್ತು 26ರಂದು ಕುಪ್ಪಳ್ಳಿಯಲ್ಲಿ ಆಯೋಜಿಸಿದೆ.  ಈಸಲದ  ಸಮಾವೇಶದ ಸಂವಾದ ವಿಷಯ ' ಕರ್ನಾಟಕ ಕಂಡ ಚಳವಳಿಗಳು' 





ಬನ್ನಿ ಭಾಗವಹಿಸಿ. 

ವೇದಿಕೆಯ ಪರವಾಗಿ 
ಅಕ್ಷತಾ ಕೆ.
ನಿರಂಜನ ಎಚ್.ಎಂ
ಅರುಣ್ ಜೋಳದ ಕೂಡ್ಲಿಗಿ
ಭಾರತೀದೇವಿ. ಪಿ.

Aug 19, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 3


ಮಹಾರಾಜ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್ ಬಾಲ್ ಮೈದಾನದಲ್ಲಿ ಸಂಜೆಯ ವೇಳೆ ಹತ್ತಾರು ಚಿಕ್ಕ ಚಿಕ್ಕ ಮಕ್ಕಳು ಸ್ಕೇಟಿಂಗ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಜೊತೆಯಲ್ಲಿ ಅವರ ಮನೆಯ ಹಿರಿಯರೊಬ್ಬರು. ಲೋಕಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬಂದು ಕಲ್ಲು ಬೆಂಚಿನ ಮೇಲೆ ಕೂರುತ್ತಿದ್ದ. ಹೊಸಬರು ಸ್ಕೇಟಿಂಗ್ ಕಲಿಯುವ ರೀತಿ, ಹಳಬರು ಹೊಸ ಹುಡುಗರ ಮುಂದೆ ತಮಗೆ ಎಲ್ಲಾ ಗೊತ್ತು ಎಂಬಂತೆ ಮಾಡುತ್ತಿದ್ದ ಮುಖಭಾವವನ್ನು ನೋಡಿದರೆ ಮನಸ್ಸಿಗೆಷ್ಟೋ ಸಮಾಧಾನವಾಗುತ್ತಿತ್ತು. ಅಂದು ಕೂಡ ಲೋಕಿ ಅಲ್ಲಿ ಬಂದು ಕುಳಿತಿದ್ದ. ಸಯ್ಯದ್ ಈತನನ್ನು ಕಂಡು ಬಳಿಗೆ ಬಂದ.

Aug 10, 2012

ಬ್ರಹ್ಮಚಾರಿ


ಡಾ ಅಶೋಕ್. ಕೆ. ಆರ್.
ಕಥೆಯ ಆರಂಭಕ್ಕೂ ಮುಂಚೆ ಒಂದು Disclaimer! – ಈ ಕಥೆಯಲ್ಲಿ ಉಪಯೋಗಿಸಿರುವ ಜಾತಿ ಧರ್ಮದ ಹೆಸರುಗಳು ಕೇವಲ ಸಾಂಕೇತಿಕ. ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ. ಈ ಕೆಳಗೆ ಹೆಸರಿಸಿರುವ ಯಾವುದಾದರೂ ಜಾತಿ ಧರ್ಮದವರು ನೀವಾಗಿದ್ದ ಪಕ್ಷದಲ್ಲಿ ಕಥೆ ಓದಿ ಮುಗಿಸಿದ ನಂತರ ನಿಮ್ಮಲ್ಲಿ ಖುಷಿ ಅಥವಾ ಕೋಪದ ಭಾವನೆ ಮೂಡಿದರೆ ಅದು ನಿಮ್ಮ ಕಲ್ಮಶ ಮನಸ್ಸಿನ ಸಂಕೇತ!

Aug 9, 2012

ಆದರ್ಶವೇ ಬೆನ್ನು ಹತ್ತಿ....ಭಾಗ 2


 “ಹಬ್ಬದ ದಿನ ಏನೇನೋ ಹೇಳಿ ನಿನ್ನ ಮನಸ್ಸಿಗೆ ಬೇಸರ ಉಂಟುಮಾಡುವ ಇಚ್ಛೆ ನನಗಿಲ್ಲ. ಮತ್ತೊಮ್ಮೆ ಹೇಳ್ತೀನಿ” ನಗುತ್ತಾ ಉತ್ತರಿಸಿ ಹೊರಟುಹೋದ.

ಗಣೇಶ ಚತುರ್ಥಿಯಾಗಿ ಒಂದು ವಾರ ಕಳೆದ ನಂತರ ಲೋಕಿಯ ಹುಟ್ಟುಹಬ್ಬ. ಪಿ.ಯು.ಸಿಗೆ ಬಂದ ನಂತರ ಸ್ನೇಹಿತರಿಗೆ ಪಾರ್ಟಿ ಕೊಡಿಸುವ ನೆಪದಲ್ಲಿ ಮನೆಯಲ್ಲಿ ಹಣ ಪಡೆದುಕೊಂಡು ನೂರು ರುಪಾಯಿಗೆ ಒಂದು ಪುಸ್ತಕ, ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕವನ್ನು ಖರೀದಿಸುತ್ತಿದ್ದ. ಮಿಕ್ಕ ದುಡ್ಡನ್ನು ಭಿಕ್ಷುಕರಿಗೆ ಕೊಟ್ಟುಬಿಡುತ್ತಿದ್ದ. ಇಂದ್ಯಾಕೋ ಹಣ ಕೊಡುವುದು ಬೇಡ, ಹೋಟೆಲ್ಲಿಗೆ ಕರೆದೊಯ್ದು ಊಟ ಕೊಡಿಸೋಣ ಎಂದೆನಿಸಿತು. ಇದೇ ಯೋಚನೆಯಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ಇಂದ್ರ ಭವನ್ ಹೋಟೆಲ್ ಎದುರಿಗೆ ಒಬ್ಬ ವ್ಯಕ್ತಿ ಭಿಕ್ಷೆ ಬೇಡುತ್ತಿರುವುದು ಕಂಡಿತು. ಆತನಿಗೆ ಎರಡೂ ಕಾಲುಗಳಿರಲಿಲ್ಲ. ಎಡಗೈ ಇರಲಿಲ್ಲ. ಅವನ ಹತ್ತಿರ ಹೋಗಿ “ಏನಾದರೂ ತಿಂತೀರಾ?” ಅಂದ. “ದುಡ್ಡೇ ಇಲ್ಲ ಸಾಮಿ” ಅವನ ಮಾತು ಕೇಳಿ ಲೋಕಿಗೆ ‘ಸಮಾನತೆ ಅನ್ನೋದು ಕೈಗೆಟುಕದ ನಕ್ಷತ್ರದಂತೆಯೇ ಉಳಿದುಹೋಗುತ್ತದಾ?’ ಎಂಬ ಯೋಚನೆ ಬಂತು. ಯೋಚನೆಗಳನ್ನು ಹತ್ತಿಕ್ಕುತ್ತಾ “ನಾನು ಕೊಡಿಸ್ತೀನಿ ನಡೀರಿ” ಎಂದ್ಹೇಳಿ ಆತನ ಮಾತಿಗೂ ಕಾಯದೆ ಅವನನ್ನು ಅನಾಮತ್ ಮೇಲೆತ್ತಿಕೊಂಡು ಇಂದ್ರ ಭವನದ ಒಳಗೆ ಹೋದ. ಸುತ್ತಲಿನವರ ಗಮನ ಲೋಕಿಯ ಮೇಲಿತ್ತು.

Aug 8, 2012

ಕನಸುಗಳ ಬೆಂಬತ್ತಿದ ಬರ್ಟ್ ಮನ್ರೋ – The worlds fastest Indian


burt munro

 ಡಾ ಅಶೋಕ್. ಕೆ. ಆರ್.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.

Aug 7, 2012

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...


anna hazare
Team anna
 
-       ಡಾ. ಅಶೋಕ್. ಕೆ. ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

Aug 6, 2012

ಆದರ್ಶವೇ ಬೆನ್ನು ಹತ್ತಿ.... ಭಾಗ 1


ದಾರಿ ಹುಡುಕುತ್ತ....
ವೈದ್ಯಕೀಯ ಓದುತ್ತಿದ್ದಾಗ ಕೊನೆಯ ವರ್ಷ ಕಾಲೇಜಿಗೆ ಹೋಗುವುದನ್ನೂ ಮರೆತು ಬರೆದ ಕಾದಂಬರಿಯಿದು! ಆಗ ಈ ಕಾದಂಬರಿಯ ಕೆಲವು ಭಾಗಗಳು 'ಮಾರ್ಗದರ್ಶಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕಾದಂಬರಿ ಕಾಲಿಟ್ಟ ಘಳಿಗೆಯೋ ಏನೋ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯೇ ಮುಚ್ಚಿಹೋಯಿತು!! ನಂತರದ ದಿನಗಳಲ್ಲಿ ಕಾದಂಬರಿಯನ್ನು ಪುನಃ ಓದಿದಾಗ ಎಳಸೆಳಸು ಬರಹ ಎಂಬ ಭಾವನೆ ಬಂತು[ಇವತ್ತಿಗೂ ಅದೇ ಭಾವನೆಯಿದೆ!]. ಒಂದಷ್ಟು ಬದಲಾವಣೆಗಳೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೀನಿ, ಓದುವ ಕಷ್ಟ ನಿಮ್ಮದಾಗಲಿ! - ಡಾ ಅಶೋಕ್. ಕೆ. ಆರ್.

Aug 5, 2012

ಫಾಲ್ಕೆಯ ಸಿನಿಮಾಗಾಥೆ - 'ಹರೀಶ್ಚಂದ್ರಾಚಿ ಫ್ಯಾಕ್ಟರಿ'

marathi movie
ಹರೀಶ್ಚಂದ್ರಾಚಿ ಫ್ಯಾಕ್ಟರಿ
ಡಾ ಅಶೋಕ್ ಕೆ ಆರ್
ದಾದಾ ಸಾಹೇಬ ಫಾಲ್ಕೆಯ ಹೆಸರು ಕೇಳಿದ್ದು ನಮ್ಮ ರಾಜಣ್ಣನಿಗೆ ಆ ಪ್ರಶಸ್ತಿ ಬಂದಾಗ. ದಾದಾ ಸಾಹೇಬ ಫಾಲ್ಕೆ ಯಾರೆಂಬುದೂ ಸರಿಯಾಗಿ ತಿಳಿದಿರಲಿಲ್ಲ. ತಿಳಿದಿದ್ದು ಮರಾಠಿ ಚಿತ್ರ ಹರೀಶ್ಚಂದ್ರಾಚಿ ಫ್ಯಾಕ್ಟರಿಯನ್ನು ನೋಡಿದಾಗ. ಪರೇಶ್ ಮೊಕಾಶಿಯ ಸಮರ್ಥ ನಿರ್ದೇಶನದಲ್ಲಿ ಪಡಿಮೂಡಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ಹುಟ್ಟಿನ ಕಥೆಯೂ ಹೌದು. ಅದು 1911ರ ಇಸವಿ, ಜೊತೆಗಾರನಿಂದ ಬೇರ್ಪಟ್ಟು ಪ್ರಿಂಟಿಂಗ್ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಜಾದೂಗಾರನಾಗುತ್ತಾನೆ ಫಾಲ್ಕೆ.

Aug 3, 2012

ಗುಡ್ಡೆ ಮೇಲೆ ದೇವಸ್ಥಾನ


-      S. ಅB ಹನಕೆರೆ.
        
 “ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.

Aug 2, 2012

ಎಚ್ಚರ ಪತ್ರಕರ್ತ ಎಚ್ಚರ....!

ಇಷ್ಟು ದಿನ ಪತ್ರಕರ್ತರನ್ನು ಅದರಲ್ಲೂ  ದೃಶ್ಯಮಾಧ್ಯಮದ ವರದಿಗಾರರನ್ನು ದೂಷಿಸುವುದೇ ಆಗುತ್ತಿತ್ತು. ಕಾರಣ ಅಲ್ಲಿನ ಬಹುತೇಕರ ವರ್ತನೆ ದೂಷಿಸಲು ಯೋಗ್ಯವಾಗಿಯೇ ಇರುವುದು! ಮಂಗಳೂರಿನ ಪಡೀಲಿನ ಘಟನೆಯಲ್ಲಿ ವಿಚಾರಣೆಗೊಳಪಟ್ಟ ನವೀನ್ ಸೂರಿಂಜೆ ಬರೆದ ಲೇಖನದ ನಂತರ ಉಳಿದೆಡೆಗಳಿಂದಲೂ ಪತ್ರಕರ್ತರು ಅನುಭವಿಸುತ್ತಿರುವ ಪಡಿಪಾಟಲುಗಳ ವಿವರಗಳು ಬರುತ್ತಿವೆ. ನಂತರ ಪ್ರಜಾವಾಣಿಯ ಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ಕೂಡ ಪತ್ರಕರ್ತರ ಪಾತ್ರದ ಬಗ್ಗೆ, ಅವರ ಮೇಲಾಗುತ್ತಿರುವ ಕೊಟ್ಟಿ ಕೇಸುಗಳ ಬಗ್ಗೆ ತಿಳಿಸಿತ್ತು. ಉತ್ತರಕರ್ನಾಟಕದ ಪತ್ರಕರ್ತ ಪರಶುರಾಮ್ ತಹಸೀಲ್ದಾರ್ ತಾನು ಅನುಭವಿಸಿದ್ದನ್ನು ಬರೆದಿದ್ದಾರೆ...

ಕೆಲವು 'ಬರ'ದ ಪದ್ಯಗಳು

1

ಚುಕ್ಕಿ ಮೂಡುವ ಹೊತ್ತಿನಲ್ಲಿ
ನನ್ನೊಳಗೆ
ಮಿಣುಕು ಹುಳು ಜೀವ ಪಡೆಯುತ್ತವೆ
ಕತ್ತಲಲ್ಲಿ ಬಿದ್ದ ಕಣ್ಣಹನಿ ಉರಿದಂತೆ
ಮತ್ತೆ ಉದುರುತ್ತವೆ
ಈ ಜಗದ ಬೇಗುದಿ ದೊಡ್ಡದು

2

ಯಾವ ಸುದ್ದಿ
ಯಾರು ತಂದರೋ ತಿಳಿದಿಲ್ಲ
ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ
ನಾವಿಂದು ಕರೆಯದೇ ಬಂದ ಅತಿಥಿ
ನೆತ್ತಿಯ ಮೇಲೆ ಹಾರುತಿದೆ
ಯಾರದೋ ನಗು ತುಂಬಿದ ವಿಮಾನ

3

ಅಳುವ
ಮಗುವಿನ ಕೈಯಲ್ಲಿನ
ನಗುವ ಗೊಂಬೆಯಂತೆ ನೀನು
ಕೋಗಿಲೆಯೊಳಗಿನ ಕೊಳಲು
ಆಲದ ಬಿಳಲು ಮುತ್ತಿರುವ ಎಲೆಯ ಕುಕಿಲು
ನೇಣು ಬಿಗಿದುಕೊಳ್ಳಲು ಬಂದ ಅನ್ನದಾತನ ಅಳಲೂ

4

ಬರದ ನೆಲದ ಬೆಂಕಿ ಹೂ
ಹೇಗೆ ಮುಡಿಯುವುದು
ಖಾಲಿ ಹೊಟ್ಟೆ ಉರಿವ ಕೊಂಡ
ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ
ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ
ಈ ಬೇಗೆಯೂ ಬೇಕು ಬಿಡು ನಿನ್ನಂತೆ
- ವೀರಣ್ಣ ಮಡಿವಾಳರ್ 

ಚರ್ಚೆಯಾಗಬೇಕಿರುವುದು ‘ಸಂಸ್ಕೃತಿಯ’ ಬಗ್ಗೆಯಲ್ಲ ಕುಡಿತದ ಬಗ್ಗೆ....




-      ಡಾ ಅಶೋಕ್. ಕೆ. ಆರ್

ಮಂಗಳೂರಿನ ಪಡೀಲಿನ ಘಟನೆಯ ನಂತರ ಸಂಸ್ಕೃತಿ, ಸ್ವಾತಂತ್ರ್ಯ, ಸ್ವೇಚ್ಛಾಚಾರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಚರ್ಚೆಗಳಾಗುತ್ತಿವೆ. ಇವೆಲ್ಲವುಗಳ ಮಧ್ಯೆ ಜುಲೈ 31ರಂದು ವಿಧಾನಪರಿಷತ್ತಿನಲ್ಲಿ ಸಚಿವರೊಬ್ಬರು ಅಮೋಘ ಹೇಳಿಕೆಯನ್ನಿತ್ತಿದ್ದಾರೆ! “ಅಸೆಂಬ್ಲಿಯಲ್ಲಿರೋ ಸಚಿವರುಗಳೇ ಮದ್ಯಪಾನ ಮಾಡೋದಿಲ್ಲ. ಇನ್ನು ನಮ್ಮ ಇಲಾಖೆಗೆ ಆದಾಯ ಎಲ್ಲಿಂದ ಬರಬೇಕು. ಹೀಗಾಗಿ ಎಲ್ಲರೂ ಮದ್ಯಪಾನ ಮಾಡತೊಡಗಿದರೆ ರಾಜ್ಯ ಬೊಕ್ಕಸದ ಆದಾಯವೂ ಹೆಚ್ಚುತ್ತದೆ” ಎಂದು ಹೇಳಿದ್ದಾರೆ ಅಬಕಾರಿ ಸಚಿವರಾದ ರೇಣುಕಾಚಾರ್ಯ. ಅಲ್ಲಿಗೆ ಸರಕಾರವೇ ಮದ್ಯಪಾನವನ್ನು ಪ್ರೋತ್ಸಾಹಿಸಿದಂತಾಯಿತಲ್ಲವೇ? ಮದ್ಯದಿಂದ ಕಳೆದ ಐದು ವರುಷಗಳಲ್ಲಿ ಬಂದಿರುವ ಆದಾಯದ ವಿವರಗಳನ್ನು ಸದನಕ್ಕೆ ತಿಳಿಸಿದ್ದಾರೆ. 2007 -08ರ ಸಾಲಿನಲ್ಲಿ 4811.93 ಕೋಟಿಯಷ್ಟಿದ್ದ ಆದಾಯ ದುಪ್ಪಟ್ಟುಗೊಂಡು 2011 -12ರಲ್ಲಿ 9827.89 ಕೋಟಿಯಾಗಿದೆ!

Aug 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ.