Jun 28, 2012

ಮುಖ್ಯವಾಹಿನಿಯ ಜಾಣಗುರುಡು


ಡಾ ಅಶೋಕ್ ಕೆ ಆರ್        
 ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

Jun 13, 2012

ಅಂತ್ಯೋದಯ


ಮೂಲ 
ಡಾ ಅಶೋಕ್. ಕೆ. ಆರ್.
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು. ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ ಅಚ್ಚರಿ ಆಶ್ಚರ್ಯ ಸಂತಸವಿತ್ತು.

Jun 8, 2012

ಬದುಕು ಚಿತ್ರಮಂದಿರ!

-ಹರ್ಷನ್
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ
ನಿತ್ಯ ಇದೇ ಪರಿಪಾಟ.
ಪ್ರದರ್ಶನಕ್ಕಿರುವುದು ನಮ್ಮ ಜೀವನದ 
ಜಂಜಾಟ ಮತ್ತು ಪರದಾಟ.
ಬದುಕು ಚಿತ್ರಮಂದಿರ!
ಅದೇ ಪರದೆ ಅದೇ ಸಿನಿಮಾ.
ಆದರೆ ಕಥೆಯೇ ಬೇರೆ 
ಕಥೆಯಲ್ಲಿನ ವ್ಯಥೆಯೇ ಬೇರೆ.
ಬದುಕು ಚಿತ್ರಮಂದಿರ!
ಕಾಲ್ಪನಿಕ ಕಥೆಗೆ ಜಾಗವಿಲ್ಲ 
ವಾಸ್ತವಿಕತೆಗೆ ಅರ್ಥವಿಲ್ಲ..
ಅರ್ಧವಿರಾಮವಂತೂ ಇಲ್ಲವೇ ಇಲ್ಲ,
ಬದುಕು ಚಿತ್ರಮಂದಿರ!
ಶುರುವಾಗುವುದು ಕೊನೆಯಾಗುವುದು 
ನಾಳಿನ ಆಟಗಳಿಗೆ ಮತ್ತೆ 
ತಯಾರಾಗುವುದು....
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ, ನಿತ್ಯ ಅದೇ ಪರಿಪಾಟ.