ಫೋಟೋ ಮೂಲ - ಡೆಕ್ಕನ್ ಹೆರಾಲ್ಡ್ |
‘Oh
my god’ ನಮ್ಮ ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿಯಾಗಿಬಿಟ್ಟಿದೆ! ಮೆಟ್ರೋ ರೈಲಾಗಲೇ ಚುಕುಬುಕು ಅಂತ
ಓಡಾಡಲಾರಂಭಿಸಿದೆ. ಅಷ್ಟದಿಕ್ಕುಗಳಲ್ಲೂ ಫ್ಲೈಓವರ್ ಮೇಲೆ ಫ್ಲೈಓವರ್ ಕಟ್ಟಲಾಗುತ್ತಿದೆ. ಮಾಲ್ ಗಳು
ಗಲ್ಲಿಗೊಂದರಂತೆ ಪ್ರಾರಂಭವಾಗುತ್ತಿವೆ. ವೋಲ್ವೋ ಬಸ್ಸಿಗೆ ಸೆಡ್ಡು ಹೊಡೆಯಲು ಮರ್ಸಿಡಿಸ್ ಬಸ್ಸುಗಳು
ರಾಜಠೀವಿಯಿಂದ ಸಂಚರಿಸಲಾರಂಭಿಸಿವೆ. ಓಹ್! ಯಾವ ದುಬಾರಿ ಕಾರಾದರೂ ಲಭ್ಯವಿದೆ ನಮ್ಮಲ್ಲಿ! ಇನ್ನೇನು
ಬೇಕು? ಬೆಂಗಳೂರು ಸಿಂಗಪುರವಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವುದಕ್ಕೆ ಇನ್ನು ಕ್ಷಣಗಣನೆ ಆರಂಭಿಸಿಯೇಬಿಡಬಹುದಲ್ಲವೇ?
! ಒಂದ್ನಿಮಿಷ ತಡೀರಿ!